Monday, April 24, 2023

         DC and AEE Registration 



  🙏*ನಮಸ್ಕಾರದ ಪ್ರಾಮುಖ್ಯತೆ*🙏

   ಮಹಾಭಾರತದ ಯುದ್ಧ ನಡೆಯುತ್ತಿತ್ತು -

     ಒಂದು ದಿನ, ದುರ್ಯೋಧನನ ವ್ಯಂಗ್ಯ ವಿಡಂಬನೆಯಿಂದ ನೊಂದ ಭೀಷ್ಮ ಪಿತಾಮಹ ಹೀಗೆ ಘೋಷಿಸುತ್ತಾನೆ .

       *"ನಾನು ನಾಳೆ ಪಾಂಡವರನ್ನು ಕೊಲ್ಲುತ್ತೇನೆ"*

        ಅವರ ಘೋಷಣೆ ಬಂದ ಕೂಡಲೇ ಪಾಂಡವರ ಶಿಬಿರದಲ್ಲಿ ಆತಂಕ ಹೆಚ್ಚಾಯಿತು -

    ಭೀಷ್ಮನ ಸಾಮರ್ಥ್ಯಗಳ ಬಗ್ಗೆ ಎಲ್ಲರಿಗೂ ತಿಳಿದಿತ್ತು, ಆದ್ದರಿಂದ ಪ್ರತಿಯೊಬ್ಬರೂ ಕೆಟ್ಟದ್ದರ ಸಾಧ್ಯತೆಯ ಬಗ್ಗೆ ಚಿಂತೆ ಮಾಡಿದರು. ನಂತರ -

  ಶ್ರೀ ಕೃಷ್ಣ ದ್ರೌಪದಿ ಗೆ, ಈಗ ನನ್ನೊಂದಿಗೆ ಬಾ -

ಶ್ರೀಕೃಷ್ಣನು ದ್ರೌಪದಿಯೊಂದಿಗೆ ನೇರವಾಗಿ ಭೀಷ್ಮ ಪಿತಾಮಹನ ಶಿಬಿರವನ್ನು ತಲಿಪಿದನು -

  ಶಿಬಿರದ ಹೊರಗೆ ನಿಂತು ದ್ರೌಪದಿ ಗೆ – *“ಒಳಗೆ ಹೋಗಿ, ಅಜ್ಜನಿಗೆ ನಮಸ್ಕರಿಸು.”* ಎಂದು ಹೇಳಿದರು

      ದ್ರೌಪದಿ ಒಳಗೆ ಹೋಗಿ ಪಿತಾಮಹ ಭೀಷ್ಮನಿಗೆ ನಮಸ್ಕರಿಸಿದಾಗ - *"ಅಖಂಡ ಸೌಭಾಗ್ಯವತಿ ಭವ"* ಎಂದು ಆಶೀರ್ವದಿಸಿದ ಅವರು ನಂತರ ದ್ರೌಪದಿಯನ್ನು ಕೇಳಿದರು !!

   *"ಮಗಳೇ, ಇಂತಹ ರಾತ್ರಿಯಲ್ಲಿ ನೀನು ಏಕಾಂಗಿಯಾಗಿ ಇಲ್ಲಿಗೆ ಹೇಗೆ ಬಂದಿದ್ದೀ, ಶ್ರೀ ಕೃಷ್ಣ ಅವರು ನಿನ್ನನ್ನು ಇಲ್ಲಿಗೆ ಕರೆತಂದಿದ್ದಾರಾ"?*

ಆಗ ದ್ರೌಪದಿ ಹೀಗೆ ಹೇಳಿದಳು -

     *"ಹೌದು,ಅವರು ಕೋಣೆಯ ಹೊರಗೆ ನಿಂತಿದ್ದಾರೆ"* ನಂತರ ಭೀಷ್ಮನು ಸಹ ಕೋಣೆಯಿಂದ ಹೊರಬಂದನು ಮತ್ತು ಇಬ್ಬರೂ ಪರಸ್ಪರ ನಮಸ್ಕರಿಸಿದರು. *"ನನ್ನ ಒಂದು ವಚನವನ್ನು ನನ್ನ ಇನ್ನೊಂದು ವಚನದಿಂದ ಮುರಿದು ಹಾಕಲು ಶ್ರೀ ಕೃಷ್ಣನಿಂದ ಮಾತ್ರ ಸಾಧ್ಯ"* ಭೀಷ್ಮ ಪಿತಾಮಹ ಹೀಗೆ ಹೇಳಿದನು.

   ಶಿಬಿರದಿಂದ ಹಿಂದಿರುಗುವಾಗ, ಶ್ರೀ ಕೃಷ್ಣನು ದ್ರೌಪದಿಗೆ ಹೀಗೆ ಹೇಳಿದನು -

     "ಒಮ್ಮೆ ನೀನು ಹೋಗಿ ಅಜ್ಜನಿಗೆ ಗೌರವ ಸಲ್ಲಿಸಿದ್ದಕ್ಕೇ, ನಿನ್ನ ಪತಿಯಂದಿರಿಗೆ ಜೀವನ ಸಿಕ್ಕಿದೆ".

  *"ಇನ್ನು ನೀನು ಭೀಷ್ಮ, ಧೃತರಾಷ್ಟ್ರ, ದ್ರೋಣಾಚಾರ್ಯ ಇತ್ಯಾದಿ ಹಿರಿಯರಿಗೆ ಪ್ರತಿದಿನ ನಮಸ್ಕಾರ ಮಾಡುತ್ತಿದ್ದರೆ, ಮತ್ತು ದುರ್ಯೋಧನ - ದುಷ್ಯಾಸನಾದಿಗಳ ಪತ್ನಿಯರು ಸಹ ಪಾಂಡವರಿಗೆ ನಮಸ್ಕಾರ ಮಾಡುತ್ತಿದ್ದರೆ, ಬಹುಶಃ ಈ ಯುದ್ಧವು ಆಗುತ್ತಿರಲಿಲ್ಲ"*

 ಅಂದರೆ ,

ಪ್ರಸ್ತುತ ನಮ್ಮ ಮನೆಗಳಲ್ಲಿ ಅನೇಕ ಸಮಸ್ಯೆಗಳಿಗೆ ಮೂಲ ಕಾರಣವೆಂದರೆ -

    *"ತಿಳಿಯದೆ ಆಗಾಗ್ಗೆ ಮನೆಯ ಹಿರಿಯರನ್ನು ಕಡೆಗಣಿಸಲಾಗುತ್ತದೆ"*

    *"ಮನೆಯ ಮಕ್ಕಳು ಮತ್ತು ಸೊಸೆಯಂದಿರು ಪ್ರತಿದಿನ ಮನೆಯ ಎಲ್ಲಾ ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದವನ್ನು ತೆಗೆದುಕೊಂಡರೆ, ಯಾವುದೇ ಮನೆಯಲ್ಲಿ ಎಂದಿಗೂ ಕ್ಲೇಶಗಳು ಉಂಟಾಗುವುದಿಲ್ಲ"*

     ಹಿರಿಯರು ನೀಡಿದ ಆಶೀರ್ವಾದಗಳು ರಕ್ಷಾಕವಚವಾಗಿ ಕಾರ್ಯನಿರ್ವಹಿಸುತ್ತವೆ; *ಈ ರಕ್ಷಾಕವಚವನ್ನು ಯಾವುದೇ "ಆಯುಧ" ಭೇದಿಸಲು ಸಾಧ್ಯವಿಲ್ಲ*.

    "ವಿನಯದಿಂದ ಪ್ರತಿಯೊಬ್ಬರೂ ಈ ಸಂಸ್ಕೃತಿಯನ್ನು ಪಾಲಿಸಿದರೆ, ನಿಯಮ ಬದ್ಧವಾಗಿ ಮಾಡಿದರೆ ಆ ಮನೆ ಸ್ವರ್ಗವಾಗುತ್ತದೆ."

   ಏಕೆಂದರೆ ,

  *ನಮಸ್ಕಾರ ಪ್ರೀತಿ,*

   *ನಮಸ್ಕಾರ ಶಿಸ್ತು,*

   *ನಮಸ್ಕಾರ ಶೀತಲತೆ.*

   *ನಮಸ್ಕಾರ ಗೌರವವನ್ನು*  

          *ಕಲಿಸುತ್ತವೆ.*

    *ನಮಸ್ಕಾರದಿಂದ ಸುವಿಚಾರ*    

                *ಬರುತ್ತದೆ.*

     *ನಮಸ್ಕಾರ ಬಾಗುವುದನ್ನು*      

                  *ಕಲಿಸುತ್ತದೆ.*

      *ನಮಸ್ಕಾರ ಕೋಪವನ್ನು*

                   *ಅಳಿಸುತ್ತದೆ.*

      *ನಮಸ್ಕಾರ ಅಹಂ ಅನ್ನು* 

                   *ಅಳಿಸುತ್ತದೆ.*

                *ನಮಸ್ಕಾರ ನಮ್ಮ*

                      *ಸಂಸ್ಕೃತಿ*

                *ನಮಸ್ಕಾರ ನಮ್ಮ* ‌ ‌ *ಸಂಸ್ಕಾರವನ್ನು ತಿಳಿಸುತ್ತದೆ*...

*ಅಬ್ಬಬ್ಬಾ ಎಂತಹ ಸಮೃದ್ಧವಾಗಿದೆ ನಮ್ಮ ಹೆಮ್ಮೆಯ ಸನಾತನ ಧರ್ಮ*

ಕೃಪೆ: ಪ್ರಗತಿಪರ ಶಿಕ್ಷಕರ ವೇದಿಕೆ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು