Sunday, April 30, 2023

 

"ಸಾಧಕರಿಗೆ ಜೇಡರ ಹುಳು ಒಂದು ಜೀವಂತ ಪಾಠವಾಗಿದೆ"

ಸಹನೆ ಮತ್ತು ಪ್ರಯತ್ನಶೀಲತೆಗೆ ಜೇಡರ ಹುಳು ಒಂದು ಆದರ್ಶ.ಬಲೆ ನಿರ್ಮಿಸುವ ಕೆಲಸದಲ್ಲಿ ಅದು ಹಲವು ಬಾರಿ ಸೋಲುತ್ತದೆ.ನೆಲಕ್ಕೆ ಉರುಳುತ್ತದೆ.ಆದರೂ ಅದು ಸದ್ದಿಲ್ಲದೆ ತನ್ನ ಪ್ರಯತ್ನವನ್ನು ಸಹನೆಯಿಂದ ಮುಂದುವರೆಸುತ್ತದೆ.ಅದು ಕೊನೆಗೂ ಒಂದು ಬಲೆಯನ್ನು ನಿರ್ಮಿಸಿಯೇ ನಿರ್ಮಿಸುತ್ತದೆ.                                                           ಒಬ್ಬ ರಾಜ ಯುದ್ದದಲ್ಲಿ ಹಲವು ಬಾರಿ ವೈರಿಗಳಿಂದ ಸೋತುಹೋದ.ಸೋತ ಆತ ನಿರಾಶನಾದ.ಹಾಗೆ ಕುಳಿತ್ತಿದ್ದಾರೆ ಅವನ ಕಣ್ಣಿಗೆ ಒಂದು ಜೇಡರ ಹುಳು ಕಾಣಿಸಿಕೊಂಡಿತು.ಅದನ್ನು ಆತ ಗಮನವಿರಿಸಿ ನೋಡಿದ!                                      ಜೇಡರ ಹುಳು ತನ್ನ ಬಲೆ ರಚಿಸುವ ಕಾರ್ಯದಲ್ಲಿ ಹಲವು ಸಾರಿ ಸೋತಿತು.ಸೋತು ನೆಲಕ್ಕುರುಳಿತು.ಅದರೂ ಅದು ಸದ್ದು ಮಾಡಲಿಲ್ಲ.ಸಹನೆ ಕಳೆದುಕೊಳ್ಳಲಿಲ್ಲ.ಪ್ರಯತ್ನ ಬಿಡಲಿಲ್ಲ.ಮರಳಿ ಯತ್ನವ ಮಾಡು ಎಂಬಂತೆ ಆ ಜೇಡರ ಹುಳುವು ಎಡಬಿಡದೆ ಪ್ರಯತ್ನಿಸಿ ಕೊನೆಗೆ ಬಲೆಯೊಂದನ್ನು ನೇಯ್ದೇಬಿಟ್ಟಿತು! ಅದು ತನ್ನ ಪ್ರಯತ್ನದಲ್ಲಿ ಸಫಲತೆ ಪಡೆಯುವವರೆಗೂ ಸುಮ್ಮನಾಗಲಿಲ್ಲ.                                                            ಇದನ್ನು ರಾಜ ಕಂಡ, ಜೇಡರ ಹುಳುವೇ ಅವನ ಪಾಲಿಗೆ ಗುರುವಾಯಿತು.ಜೇಡರ ಹುಳು ಅವನಿಗೆ *"ಮರಳಿ ಯತ್ನವ ಮಾಡು,ಜಯ ಪಡೆಯುವವರೆಗೂ ಹೋರಾಡು,ನಿರಾಶನಾಗಬೇಡ"* ಎಂಬ ಪಾಠವನ್ನು ಬೋಧಿಸಿದಂತಾಯಿತು.                                                                                                                                        ಜೇಡರ ಹುಳುವನ್ನು ಅನುಸರಿಸಿ ,ಆ ರಾಜನೂ ಮರಳಿ ಯತ್ನವ ಮಾಡಿದ.ಮತ್ತೆ ವೈರಿಗಳನ್ನೆದುರಿಸಿದ, ಹೋರಾಡಿದ.ಅಂತೂ ಕೊನೆಗೆ ಆತ ಜಯಶಾಲಿಯಾದ.ಜೇಡರ ಹುಳುವಿಗೆ ಆ ರಾಜ ಕೃತಜ್ಞನಾದ.                                                        ಕಲಿಯುವವರಿಗೆ ಎಲ್ಲೆಲ್ಲೂ ಗುರುಗಳಿದ್ದಾರೆ! ಎಲ್ಲೆಲ್ಲೂ ನಮಗೆ ಪಾಠ ಹೇಳುವ ಘಟನೆಗಳು ನಡೆಯುತ್ತವೆ.ಎಡೆಬಿಡದೆ ಪ್ರಯತ್ನವನ್ನು ಸಾಧಿಸಿದರೆ ಸಾಧ್ಯವಾಗದ್ದು ಯಾವುದೂ ಇಲ್ಲ! ಗಾದೆಯೇ ಇದೆಯಲ್ಲ --ಸಾಧಿಸಿದರೆ ಸಬಳ (ಕಬ್ಬಿಣದ ಹಾರೆ) ನುಂಗಬಹುದಂತೆ.                                                                                       *ನೀತಿ: ಸತತ ಪ್ರಯತ್ನವೇ ಗೆಲುವಿನ ಗುಟ್ಟು.*                                                                    ಕೃಪೆ:ಡಾ.ಸೀ.ಹೊಸಬೆಟ್ಟು.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು