Thursday, May 11, 2023

 

ಒಂದು ಸ್ಥಳದಲ್ಲಿ ಪೋಲೀಸರು ಒಂದು ಫಲಕವನ್ನು ಸ್ಥಾಪಿಸಿದರು-

"ನೋ ಪಾರ್ಕಿಂಗ್ ಜೋನ್ ಪೆನಾಲ್ಟಿ 250 ರೂಪಾಯಿ ಗಳು (No Parking Zone. Penalty Rs. 250)

ಪ್ರಸ್ತುತ ಆಜ್ಞೆಯನ್ನು ಯಾರೂ ಕೂಡ ಪಾಲನೆ ಮಾಡುತ್ತಿರಲಿಲ್ಲ. ಜನರು ಫಲಕದ ಕೆಳಗಡೆಯೇ ವಾಹನಗಳನ್ನು ನಿಲ್ಲಿಸುತ್ತಿದ್ದರು.

ಕೆಲವು ದಿನಗಳ ನಂತರ ಅಧ್ಯಾಪಕರೊಬ್ಬರು ಆ ದಾರಿಯ ಮೂಲಕ ಹಾದು ಹೋಗುತ್ತಿದ್ದರು. ಅವರು ಆ ಫಲಕ ಮತ್ತು ಪರಿಸರವನ್ನು ಸೂಕ್ಷ್ಮವಾಗಿ ವೀಕ್ಷಿಸಿದ ಬಳಿಕ ಫಲಕದಲ್ಲಿ ಸಣ್ಣ ಬದಲಾವಣೆಯನ್ನು ಮಾಡಿದರು.

ಫಲಕದಿಂದ "ನೋ" ಮತ್ತು "ಪೆನಾಲ್ಟಿ" ಇವೆರಡನ್ನು ಉಜ್ಜಿ ತೆಗೆದರು. ಈಗ ಅದು ಹೀಗಾಯಿತು : 

"ಪಾರ್ಕಿಂಗ್ ಜೋನ್ 250 ರೂಪಾಯಿಗಳು".

ಆ ನಂತರ ಅಲ್ಲಿ ಯಾರೂ ಕೂಡ ವಾಹನಗಳನ್ನು ನಿಲ್ಲಿಸುತ್ತಿರಲಿಲ್ಲ.!!!

ಪೋಲೀಸರು ಈಗ ಆ ಅಧ್ಯಾಪಕರನ್ನು ಹುಡುಕುತ್ತಿದ್ದಾರೆ, ಅವರಿಂದ ಹೆಚ್ಚು ತಂತ್ರ (trick)ಗಳನ್ನು ಕಲಿಯುವುದಕ್ಕಾಗಿ.....

ಶಿಕ್ಷೆಯಿಂದ ಎಲ್ಲರನ್ನೂ ಸರಿದಾರಿಗೆ ತರಲು ಸಾಧ್ಯವಿಲ್ಲ. ಇದನ್ನು ಸರಿಯಾಗಿ ಬಲ್ಲವರು ನಿಜವಾದ ಅಧ್ಯಾಪಕರಾಗುತ್ತಾರೆ. ಇಲ್ಲಿ ಆಗಿದ್ದೂ ಕೂಡ ಅದೇ. 

ಕೃಪೆ: ವಾಟ್ಸ್ ಆ್ಯಪ್ ಗ್ರೂಪ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು