ಸಣ್ಣ ವಿಷಯ ,ಮನಸು ಹಗುರ......
ಅಂದು ಮದ್ಯಾಹ್ನ ಶಾಲೆಯ ಮುಖ್ಯೋಪಾಧ್ಯಾಯರು ತಮ್ಮ ಕೊಠಡಿಯಲ್ಲಿ ಕುಳಿತು ಶಾಲೆಯ ದಾಖಲೆ,ಮಾಹಿತಿಗಳನ್ನು ಬರೆಯುತ್ತಾ ಕುಳಿತಿದ್ದರು ತುಂಬಾ ಸೋತಿದ್ದಂತಿದ್ದ ಒಬ್ಬ ಹೆಂಗಸು,HM ಕೊಠಡಿಯ ಒಳಕ್ಕೆ ಬಂದು ನಮಸ್ಕಾರ ಸರ್ ಅಂದರು. ತಾಯಿಯ ವಯಸ್ಸಿನವರು,ನೋಡಲು ತಾಯಿಯಂತೆ ಇದ್ದರು ,ಅವರು ಸರ್ ಅಂದಾಗಲೇ ಅಷ್ಟು ಹಿರಿಯ ಜೀವದ ಬಾಯಿಂದ ಸೋತ ದ್ವನಿಯಲ್ಲಿ ಸರ್ ಎನ್ನುವ ಮಾತು ಕೇಳಲು ಯಾಕೊ ಸಂಕೊಚ ,ಮುಜುಗರವು ಆಯಿತು ,ಬನ್ನಿ ಅಮ್ಮ ಕುಳಿತುಕೊಳ್ಳಿ ಏನಾಗಬೇಕು ಅಂದರು.. ಪಾಪ ಬಿಸಲ ಜಗಳದಲ್ಲಿ ಬೆವೆತಿದ್ದ ಮುಖವನ್ನು ತಾನು ತೊಟ್ಟಿದ್ದ ಹಳೆಯ ಸೀರೆಯೊಂದರ ಸೆರಗಿನಿಂದ ಒರೆಸಿಕೊಳ್ಳುತ್ತಾ ,ಈ ಕರೋನಾ ಹರಡುತ್ತಿರುವ ಸಮಯದಲ್ಲಿಯೂ ನೆಡದೂ ನೆಡೆದು ಸೋತಂತೆ ಬಾಯಿಗೆ ಹಾಕಿದ್ದ ಮಾಸ್ಕ್ ಸರಿಸಿ .....,ನಾನು ಈ ಶಾಲೆಯಲ್ಲಿ ಒಂದನೆ ಕ್ದಾಸಿಗೆ ಸೇರಿ ,ಎರಡನೇ ಕ್ಲಾಸಿನವರೆಗೆ ಶಾಲೆಗೆ ಬಂದಿದ್ದೆ ,ನನಗೆ ಈಗ 63-64 ವರ್ಷ ವಯಸ್ಸು ,ಆದರೆ ಆಧಾರ್ ಕಾರ್ಡ್ ನಲ್ಲಿ ವಯಸ್ಸು ತಪ್ಪಾಗಿ ,ನನಗಿನ್ನು ಅರವತ್ತು ತುಂಬಿಲ್ಲ,ಅದಕ್ಕಾಗಿ,ವೃದ್ದಾಪ್ಯ ವೇತನ ಮಾಡಿಸಲು ಆಗುತ್ತಿಲ್ಲ, ಎಲ್ಲಾ ಕಡೆ ಅಲೆದಾಡುತ್ತಿದ್ದೇನೆ ನನಗೆ ನೋಡಿಕೊಳ್ಳುವವರು ಯಾರು ಇಲ್ಲ, ಕೂಲಿ ಮಾಡಿ ಸೋತು ಸೊರಗಿದ್ದೇನೆ ದಯಮಾಡಿ ನಾನು ಶಾಲೆಗೆ ಸೇರಿದ ವರ್ಷದಲ್ಲಿ ಹುಟ್ಟಿದ ದಿನಾಂಕ ಕೊಟ್ಟರೆ ,ಆಧಾರ್ ಕಾರ್ಡ್ ತಿದ್ದುಪಡಿ ಮಾಡಿಕೊಡುತ್ತಾರಂತೆ ದಯಮಾಡಿ ಬರೆದು ಕೊಡಿ ಅಂದರು...ಅವರ ಮಾತಿನ ಸೋತ ದನಿಯೇ ಕಣ್ಣೀರು ಬರುವಂತಿತ್ತು....,
ಆಯ್ತಮ್ಮ ನೀವು ಎಷ್ಟನೇ ಇಸವಿಯಲ್ಲಿ ಹುಟ್ಟಿದ್ದೀರಾ?ನೆನಪಿದೆಯೇ ಎಂದು ಕೇಳಿದರು.ಸ್ಪಷ್ಡವಾಗಿಯೇ 1957 ಅಂದಿತು ಅವರ ಗದ್ಗದಿತ ದ್ವನಿ,,,,ಆ ಇಸವಿಯ ಆಧಾರದ ಮೇಲೆ ಲೆಕ್ಕೆ ಹಾಕಿ ಹಳೇಯ ಅರ್ಧಂಬರ್ದ ಹರಿದ ಧಾಖಲೆ ಪುಸ್ತಕ ಹುಡುಕಿ ,ಅದರಿಂದ ಅವರ ಹೆಸರು ಹುಡುಕಿ ಶಾಲೆಯಲ್ಲಿಯೇ ಇದ್ದ ದೃಢೀಕರಣ ಪತ್ರಕ್ಕೆ ಜನ್ಮದಿನಾಂಕ ,ಶಾಲೆಗೆ ಸೇರಿದ ದಿನ ,ಇತ್ಯಾದಿ ವಿವರ ಬರೆದು ಸೀಲ್ ಹಾಕಿ ,ರುಜು ಮಾಡಿ ಅವರ ಕೈಗಿಟ್ಡು ,ತಗೋಳಿ ಅಂದರು..ಅಷ್ಡು ಹಳೆಯದು ಸಿಕ್ಕಿದ್ದು ನೋಡಿ HMಗೂ ಖುಷಿ,ಅವರ ನೋವಿನ ಮುಖದಲ್ಲು ,ಒಂದು ನಗು ಕಂಡದ್ದು ,ಅವರಿಗನ್ನೂ ಖುಷಿ..
ಕೊನೆಗೆ ಆ ಅಮ್ಮ ಕೆಲವು ದಾಖಲೆಗಳನ್ನು ಹಾಕಿಕೊಂಡು ಬಂದಿದ್ದ ಚೀಲದೊಳಗೆ ಕೈ ಹಾಕುತ್ತಾ ,ದುಡ್ಡು ಎಷ್ಟು ಕೊಡಲಿ ಅಂದರು ,ಈಗ ನಗುವಿದ್ದ HM ಮುಖದಲ್ಲಿಯೂ ಕಣ್ಣೀರು ಬರುವಂತಾಯಿತು ,,ಅವರು ಬರೆದು ಕೊಟ್ಟಾಗ ಎಷ್ಟು ಹಣ ?ಎಂದು ಕೇಳುವಾಗ ಪಾಪ ಆ ಅಮ್ಮ ಯಾವ ಯಾವ ಕಛೇರಿಗಳಿಗೆ ಹೋಗಿತ್ತೊ ,ಎಂತೆಂತಹ ಎಂಜಲು ತಿನ್ನುವ ಲಂಚಬಾಕರು ಎಷ್ಟೆಷ್ಡು ಪಡೆದಿದ್ದಾರೋ ನಾ ಕಣೇ ,
ಆದರೆ ಆ ಜೀವಕ್ಕೆ ಸರ್ಕಾರಿ ಕಛೇರಿಗಳಲ್ಲಿ ಏನಾದರು ಬರೆದು ಕೊಟ್ಟರೆ ಹಣ ಕೊಡಬೇಕು ಅನ್ನುವಷ್ಟರ ಮಟ್ಟಿಗೆ ,ಇಂತಹ ಹಿರಿಯ ವಯಸ್ಕ ಜೀವಗಳ ಮನಸ್ಸನ್ನು ತಂದಿಟ್ಟಿರುವಂತಹ ಸರ್ಕಾರಿ ನೌಕರ ಹಾಗು ಕಛೇರಿಗಳ ಬಗ್ಗೆ ಹೇಸಿಗೆಯಂತು ಬಂತು.
ಹಣ ಬೇಡಮ್ಮ ,ನೀವು ಎಲ್ಲಿಯೂ ಹಣ ಎಷ್ಡು? ,ಎಂದು ಕೇಳಬೇಡಿ ,ಮತ್ತೇನಾದರೂ ಬೇಕಿದ್ದರೆ ಬನ್ನಿ ಬರೆದು ಕೊಡುತ್ತೇನೆ ಅಂದರು ಆ ಅಮ್ಮನ ಮುಖದಲ್ಲಿನ ನಗು ,ಕೋಟಿ ಲಂಚವೂ ಕೇವಲದಂತಿತ್ತು......
ಕೊನೆಗೊಂದು ಮಾತು ಇಂತಹ ಹಿರಿಯ ಜೀವಗಳು ಸರ್ಕಾರಿ ಕಛೇರಿ ,ಶಾಲೆ ಅಥವಾ ಇನ್ನೆಲ್ಲಿಯೋ ಪಾಪ ಕೆಲವು ಕೆಲಸಗಳನ್ನು ಹೇಗೆ ಮಾಡಿಸಬೇಕೆಂದು ತಿಳಿಯದೆ ಅಲ್ಲಿಂದಿಲ್ಲಿಗೆ ,ಇಲ್ಲಿಂದಲ್ಲಿಗೆ ಅಲೆಯುತ್ತಿರುತ್ತಾರೆ,ಇಂತವರಿಗಾಗಿ ಕೆಲಸದ ಒತ್ತಡದ ನಡುವೆಯೂ ಸಮಯ ಮೀಸಲಿಟ್ಟುಬಿಡಿ ,ನೀವು ಮತ್ತೆ ಬಯಸಿದರೂ ನಿಮ್ಮ ಬಳಿಗೆ ಬರುವಷ್ಡು ಶಕ್ತಿ ಅವರಲ್ಲಿ ಉಳಿದಿರುತ್ತದೋ ಇಲ್ಲವೋ.....
ಕಡೇ ಪಕ್ಷ ನಮ್ಮ ಶಾಲೆಗೆ ಬರುವ ಇಂತಹ ಅಪರೂಪದ ಅತಿಥಿಗಳನ್ನು ಒಳ್ಳೆಯ ಮಾತಿನಿಂದ ಕೆಲಸ ಮಾಡಿಕೊಟ್ಟು ಸತ್ಕರಿಸೋಣ...
💐💐💐💐💐🙏