ಯಾರೂ ನಮ್ಮ ಕೆಲಸವನ್ನು ಒಪ್ಪಲಿ ಬಿಡಲಿ ನಾವು ಒಳ್ಳೊಳ್ಳೆ ಕೆಲಸ ಮಾಡೋಣ
*ಒಂದು ಊರಿನಲ್ಲಿ ಶ್ರದ್ಧಾ ಎಂಬ ಮಹಿಳೆ ಇರುತ್ತಾಳೆ. ಪ್ರತಿನಿತ್ಯ ಅವಳು ಅಡುಗೆ ಮಾಡುವಾಗ ಒಂದು ರೋಟ್ಟಿ ಜಾಸ್ತಿ ಮಾಡಿ ಮನೆಯ ಹೊರಗಿನ ಕಿಟಕಿಯಲ್ಲಿಡುತ್ತಿದ್ದಳು.ಅದನ್ನ ಒಬ್ಬ ಭಿಕ್ಷುಕ ಬಂದು ತೆಗೆದುಕೊಂಡು ಹೋಗುತ್ತಿದ್ದನು. ಹೀಗೆ ದಿನ ಕಳೆಯುತ್ತಿತ್ತು.ಆ ಭಿಕ್ಷುಕ ಹೋಗುವಾಗ ಎರಡು ಮಾತನ್ನು ಹೇಳಿ ಹೋಗುತ್ತಿದ್ದ. ಅದೇನೆಂದರೆ ★ನೀನು ಮಾಡಿದ ಕೆಡಕು ರೀತಿಗಳು ನಿನ್ನಲ್ಲೇ ಇರುತ್ತದೆ, ಮತ್ತು ನಿನ್ನ ಒಳ್ಳೆಯ ರೀತಿಗಳು ವಾಪಸ್ ನಿನ್ನ ಬಳಿಗೆ ಬರುತ್ತದೆ★ ಎಂದಾಗಿತ್ತು. ಪ್ರತಿದಿನ ಇದನ್ನ ಕೇಳಿ ಕೇಳಿ ಆ ಶ್ರದ್ಧಾಳಿಗೆ ಬಹಳನೇ ಬೇಜಾರಾಗುತ್ತಿತ್ತು. ಎಷ್ಟು ದಿವಸದಿಂದ ತಿನ್ನುತ್ತಿದ್ದಾನೆ ಒಂದೇ ಒಂದು ಸಲ ಧನ್ಯವಾದ ಕೂಡ ಹೇಳಿಲ್ಲ. ಎಂದು ಬಹಳ ಇರಿಟೇಶನ್ ಆಗಿ ಕೊನೆ ಕೊನೆಗೆ ಅವನಿಂದ ಮುಕ್ತಿ ಪಡೆಯಲು, ಒಂದು ದಿವಸ ಅವಳು ಆ ಭಿಕ್ಷುಕನಿಗೆ ಕೊಡುವ ರೊಟ್ಟಿಯಲ್ಲಿ ವಿಷ ಬೆರಸಿ ಇಡುತ್ತಾಳೆ.*
*ಸ್ವಲ್ಪ ಹೊತ್ತಿನ ಬಳಿಕ ಅವಳಿಗೆ ಎನೋ ಆಗಿ ಅವಳ ಅಂತರಾತ್ಮನಿಂದ ಬಂದ ಕರೆಗೆ ಓಗೊಟ್ಟು ಛೆ ಇದೇನು ಕೆಲಸ ಮಾಡಿ ಬಿಟ್ಟೆ ಎಂದು ಓಡಿಹೋಗಿ ಆ ರೊಟ್ಟಿಯನ್ನು ತೆಗೆದುಕೊಂಡು ಬಂದು ಒಳ್ಳೆಯ ರೊಟ್ಟಿಯನ್ನು ಇಡುತ್ತಾಳೆ. ಸ್ವಲ್ಪ ಸಮಯದ ನಂತರ ಎಂದಿನಂತೆ ಆ ಭಿಕ್ಷುಕ ಬಂದು ಅದನ್ನು ತೆಗೆದುಕೊಂಡು ಅವನ ಹಿತ ಪದವನ್ನು ಹೇಳಿ ಹೋಗುತ್ತಾನೆ. ★ ನೀನು ಮಾಡಿದ ಕೆಡಕು ರೀತಿಗಳು ನಿನ್ನಲ್ಲಿ ಇರುತ್ತದೆ ನಿನ್ನ ಒಳ್ಳೆಯ ರೀತಿಗಳು ವಾಪಸ್ ನಿನ್ನ ಬಳಿಗೆ ಬರುತ್ತದೆ.★ ಬಹಳ ದಿನಗಳಿಂದ ಕಾಣೆಯಾಗಿದ್ದ ಅವಳ ಒಬ್ಬನೇ ಒಬ್ಬ ಮಗನ ಚಿಂತೆಯು ಕಾಡುತ್ತಿರುತ್ತದೆ. ಅದೇ ಚಿಂತೆಯಲ್ಲಿ ಹಾಗೆ ನಿದ್ರೆ ಹೋಗುತ್ತಾಳೆ. ಹೊತ್ತು ರಾತ್ರಿಯಲ್ಲಿ ಮನೆ ಬಾಗಿಲ ಬೆಲ್ ಆಗುತ್ತದೆ. ಬಾಗಿಲು ತೆಗೆದು ನೋಡಿದರೆ ಅವನೆ ಶ್ರದ್ಧಾಳ ಏಕೈಕ ಪುತ್ರ.*
*ಅವನು ಬಹಳ ದಣಿದಿದ್ದನು. ಎನೋ ಯಾಕೋ ಹೀಗಾಗಿದೆ ನಿನ್ನ ಅವಸ್ಥೆ ಎಂದು ಕೇಳುತ್ತಾಳೆ.ಅದಕ್ಕೆ ಅವನು ನಾನು ಯಾವ ದೇಶದಲ್ಲಿದ್ದೆನೊ ಅಲ್ಲಿ ಯುದ್ಧವು ಶುರುವಾಗಿ ನಮ್ಮನ್ನೆಲ್ಲ ಹಿಡಿದು ಜೈಲಿಗೆ ಹಾಕಿದ್ದರು. ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಬಂದೆ.೪-೫ದಿವಸದಿಂದ ಹೊಟ್ಟೆಗು ಎನು ತಿಂದಿಲ್ಲ ಬಹಳ ಸಂಕಟವಾಗುತ್ತಿದೆ ಎಂದ. ಹಾಗೆ ದಾರಿಯಲ್ಲಿ ಬರುವಾಗ ಒಬ್ಬ ಮುದುಕ ಸಿಕ್ಕಿ ಕನಿಕರದಿಂದ ಒಂದು ರೊಟ್ಟಿ ಕೊಟ್ಟು ಕಳಿಸಿದ. ಆದರೆ , ಅಮ್ಮ ಅವನೊಂದು ಸುಂದರ ಮಾತು ಹೇಳುತ್ತಿದ್ದ ಎಂದು ಆ ಮಾತನ್ನು ತಾಯಿಗೆ ತಿಳಿಸುತ್ತಾನೆ ಹೀಗೆ,★ನೀನು ಮಾಡಿದ ಕೆಡಕು ರೀತಿಗಳು ನಿನ್ನಲ್ಲೆ ಇರುತ್ತದೆ, ನಿನ್ನ ಒಳ್ಳೆಯ ರೀತಿಗಳು ವಾಪಸ್ ನಿನ್ನ ಬಳಿಗೆ ಬರುತ್ತವೆ...★ ಈ ಮಾತನ್ನು ಕೇಳಿ ಅವಳ ಎದೆ ಒಮ್ಮೆಲೆ ಝಲ್ ಎಂದಿತು. ಒಂದು ವೇಳೆ ಆ ವಿಷದ ರೊಟ್ಟಿಯನ್ನು ಇಟ್ಟಿದ್ದಿದ್ದರೆ ಈಗ ಈ ಮಗನ ಜಾಗದಲ್ಲಿ ಅವನ ಶವವನ್ನು ನೋಡಬೇಕಿತ್ತಲ್ಲ ಎಂದು ಒಂದು ಸಲ ಅವಳ ಮೈ ನಡುಗುತ್ತದೆ.*
*ಎಷ್ಟೋ ಸಲ ನಾವು ಮಾಡಿದ ಎಷ್ಟೋ ಒಳ್ಳೆಯ ಕೆಲಸನ ಯಾರು ಗಮನಿಸದಿದ್ದರೆ, ನೋಡದಿದ್ದರೆ ನಮಗೆ ಬೇಜಾರು ಆಗಿಬಿಡುತ್ತದೆ. ಯಾರಿಗೂ ಯಾವ ಒಳ್ಳೆಯ ಕೆಲಸವನ್ನೆ ಮಾಡಿಕೊಡದಿರುವುದೇ ಸರಿ ಎಂಬ ತೀರ್ಮಾನಕ್ಕೆ ಬರುತ್ತೇವೆ.. ಯಾರು ನಮ್ಮ ಕೆಲಸವನ್ನು Appreciate ಮಾಡುವುದಿಲ್ಲವೆಂದು*
*ಸುಮ್ಮನೆ ಕೂರ ಬಾರದು.* *ಯಾರೂ ನಮ್ಮ ಕೆಲಸವನ್ನು ಒಪ್ಪಲಿ ಬಿಡಲಿ ನಾವು ಒಳ್ಳೊಳ್ಳೆ ಕೆಲಸ ಮಾಡುತ್ತಿದ್ದರೆ ನಾವು ಮಾಡಿದ ಒಳ್ಳೆಯ ಕೆಲಸಗಳು ಯಾವುದೋ ರೀತಿಯಲ್ಲಿ ವಾಪಸ್ ನಮ್ಮ ಬಳಿಗೆ ಬರುವುದು. ಮಾತ್ರ ಇದರ ನಂಬಿಕೆ ಇರಬೇಕು ಅಷ್ಟೆ.ಅಧೀರರಾಗಬಾರದು..*
*ನೆನಪಿಡಿ....ಅನುದಿನ...*
*.ಅನುಕ್ಷಣ*
ಕೃಪೆ:ವಾಟ್ಸಾಪ್ ಗ್ರೂಪ್.