Friday, June 9, 2023

 ಟೀಚರೊಬ್ಬರು ಬೋರ್ಡಿನ ಮೇಲೆ ಐದರ ಮಗ್ಗಿಯನ್ನು ಬರೆಯುತ್ತಿದ್ದರು

5X1 = 3

5X2 = 10

5X3 = 15

5X4 = 20

5X5 = 25

5X6 = 30

5X7 = 35

5X8 = 40

5X9 = 45

5X10 = 50

ಬರೆದ ನಂತರ ವಿದ್ಯಾರ್ಥಿಗಳ ಕಡೆ ತಿರುಗಿ ನೋಡುವಾಗ ಎಲ್ಲಾ ವಿದ್ಯಾರ್ಥಿಗಳೂ ನಗುತ್ತಿದ್ದರು.

ಟೀಚರ್ ವಿದ್ಯಾರ್ಥಿಗಳತ್ರ - ನೀವು ನಗೋದಕ್ಕೆ ಇರುವ ಕಾರಣವಾದರೂ ಏನು? ಅಂತ ವಿಚಾರಿಸಿದಾಗ ವಿದ್ಯಾರ್ಥಿಗಳು ಹೇಳುತ್ತಾರೆ - ಮಗ್ಗಿಯ ಮೊದಲನೆ ಸಾಲು ತಪ್ಪಾಗಿದೆ ಮೂರರ ಬದಲಿಗೆ ಐದು ಆಗಬೇಕಿತ್ತು....

ಟೀಚರ್ ಮುಗುಳ್ನಗುತ್ತಾ - " ನಾನು ನಿಮಗೊಂದು ಇಂಪೋರ್ಟೆಂಟ್ ಆದ ವಿಷಯವನ್ನು ಕಲಿಸುವುದಕ್ಕಾಗಿ ಹಾಗೆ ಬರೆದೆ.... ನಿಮ್ಮ ನಿಜ ಜೀವನದಲ್ಲಿ ನೀವು ಅರಿತುಕೊಳ್ಳಬೇಕಾದ ವಿಷಯವೇ ಆಗಿದೆ....

ನಾನು ಸರಿಯಾದ 9 ಸಾಲುಗಳನ್ನು ಬರೆದೆ... ಆದರೆ, ಯಾರೂ ಆ ಸಾಲುಗಳು ಸರಿಯಾಗಿ ಬರೆದುದ್ದಕ್ಕಾಗಿ ನನ್ನನ್ನು ಅಬಿನಂದಿಸಿಲ್ಲ... ಆದರೆ, ಒಂದು ಸಾಲನ್ನು ತಪ್ಪಾಗಿ ಬರೆದಾಗ ಎಲ್ಲರೂ ನನ್ನನ್ನು ಬೆರಳು ತೋರಿಸಿ ಬೊಟ್ಟು ಮಾಡಿದರು... ಒಂದು ಕಪ್ಪು ಚುಕ್ಕೆಯಂತೆ... ಆ ತಪ್ಪಿಗೆ ಹೆಚ್ಚು ಬೆಲೆ ಕೊಟ್ಟರು...

ನೀವು ಮಾಡುವ ಎಲ್ಲಾ ಒಳ್ಳೆಯ ಕೆಲಸಗಳಿಗೂ ಜಗತ್ತು ಬೆಲೆ ಕೊಡಲ್ಲ. ಆದರೆ ಒಂದು ತಪ್ಪಾದ ಪ್ರವರ್ತಿಗೆ ವಿಮರ್ಶೆಗಳು ಇದ್ದೇ ಇರುತ್ತದೆ...

ಆದ್ದರಿಂದ ಯಾರಾದರೂ ನಿಮ್ಮನ್ನು ವಿಮರ್ಶಿಸಿದರೆ, ಯಾವತ್ತೂ ಬೇಸರಪಟ್ಟುಕೊಳ್ಳಬಾರದು.

ಎಲ್ಲಾ ವಿಮರ್ಶನೆಗಳನ್ನೂ ಒಳ್ಳೆಯ ರೀತಿಯಲ್ಲಿ ಎತ್ತಿ ಹಿಡಿಯಿರಿ... ಮತ್ತು ಆ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳಿ... ಆಗ ಬದುಕು ಸುಂದರವಾಗುವುದು....

ಕೃಪೆ:ವಾಟ್ಸಾಪ್ ಗ್ರೂಪ್.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು