Sunday, June 11, 2023

 ಅಂದು ಕಡಿದಾಳು ಮಂಜಪ್ಪನವರು ತಿರಸ್ಕರಿಸಿದ ಪ್ಯಾಲೇಸ್ ಗ್ರೌಂಡಿನ ಆ ಒಂದು ಎಕರೆ ಭೂಮಿ ಬೆಲೆ ಇಂದು ನೂರಾರು ಕೋಟಿ. 

*ಮುಖ್ಯಮಂತ್ರಿಯಂತಹ ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನದಿಂದ ಹೊರ ಬಂದಿರುತ್ತಾರೆ.ವೈಭವೋಪೇತ ಬಂಗಲೆಯಿಂದ ಬೆಂಗಳೂರಿನ ಆಂಡ್ರಿ ರಸ್ತೆಯಲ್ಲಿರುವ ಬಾಡಿಗೆ ಮನೆಗೆ ಬಂದಿದ್ದ ಸಮಯ.ತಮ್ಮ ಜೀವನೋಪಾಯಕ್ಕಾಗಿ ಮತ್ತೆ ಕರಿಕೋಟು ಹಾಕಿ ಹೈಕೋರ್ಟಿನ ಲಾಯರ್ ಆಗಿ ಹೋಗುತ್ತಿರುತ್ತಾರೆ.ಸಮರ್ಥ ಲಾಯರ್ ಆಗುವಲ್ಲಿ ದಾಪುಗಾಲಿಡುತ್ತಾ ಮುಂದುವರಿಯುತ್ತಿರುವಾಗ ಮುಖ್ಯಮಂತ್ರಿಯಂತಹ ಅತ್ಯುನ್ನತ ಹುದ್ದೆ ಹೊಂದಿದವರು ಮತ್ತೆ ಲಾಯರ್ ಗಿರಿ ಮಾಡುವ ಬಗ್ಗೆ ಇವರ ಹಿತೈಷಿಗಳನೇಕರು ಅಪಸ್ವರ ಎತ್ತಿದರೂ ಜೀವನೋಫಾಯಕ್ಕಾಗಿ ಮನೆ ಆಸ್ತಿ ಮಾಡಿಕೊಳ್ಳದೆ ಕೇವಲ ಪ್ರಾಮಾಣಿಕತೆಯನ್ನೇ ಮೈತುಂಬಾ ಹೊದ್ದುಕೊಂಡಿದ್ದ ಈ ಪ್ರವಾದಿಗೆ ಲಾಯರಾಗಿ ಪ್ರಾಕ್ಟೀಸ್ ಮಾಡುವುದು ಅವಮಾನವೆನಿಸಲಿಲ್ಲ.

ಮುಖ್ಯಮಂತ್ರಿ ಆದವರು ಮತ್ತೆ ತನ್ನ ಹಿಂದಿನ ವೃತ್ತಿಗೆ ಮರಳಿದ ಘಟನೆ ಭಾರತದಂತಹ ದೇಶದಲ್ಲಿ ಬಹು ಅಪರೂಪವೇ ಸರಿ*.

*ಒಂದು ಸಂಜೆ ಒಳಕೋಣೆಯ ಬಾಗಿಲು ಹಾಕಿಕೊಂಡು ತಮ್ಮ ಕಕ್ಷಿಗಾರರೊಂದಿಗೆ ಚರ್ಚೆಮಾಡುತ್ತಿದ್ದಾರೆ.ಹೊರಗಡೆ ಆಡುತ್ತಿದ್ದ ಇವರ ಮಕ್ಕಳಿಬ್ಬರು ಓಡೋಡಿ ಒಳಗಡೆ ಬಂದು ಯಾರೋ ವಿಶ್ವೇಶರಯ್ಯ ಎಂಬುವರು ನಿಮ್ಮನ್ನು ನೋಡಲು ಬಂದಿದ್ದಾರೆ ಎಂದಾಗ ಇವರ ಪರಿಚಿತರಾಗಿದ್ದ ತಾಲೂಕು ಮ್ಯಾಜಿಸ್ಟ್ರೇಟ್ ಆಗಿದ್ದ ವಿಶ್ವೇಶ್ವರಯ್ಯ ಇರಬೇಕೆಂದು ತಿಳಿದು ಅರ್ಧ ಗಂಟೆ ಕಾಯಲು ಹೇಳುತ್ತಾರೆ.ಒಳಗಡೆ ಬಂದ ಮಕ್ಕಳು ಹಾಗೇ ಹೊರಗಿದ್ದ ವ್ಯಕ್ತಿಗೆ ಹೇಳುತ್ತಾರೆ.ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದು ಮಂಜಪ್ಪನವರು ನೋಡುತ್ತಾರೆ! ನೋಡುವುದೆಂತ?ಸರ್ .ಎಂ ವಿಶ್ವೇಶ್ವರಯ್ಯನವರೇ ಬಂದಿದ್ದಾರೆ.ಇವರನ್ನು ಇಷ್ಟು ಹೊತ್ತು ಕಾಯಿಸಿದ್ದರ ಬಗ್ಗೆ ಸಂಪೂರ್ಣ ಕುಗ್ಗಿ ಹೋಗುತ್ತಾರೆ.ಅತೀವ ನಾಚಿಕೆಯಿಂದ ವಿಶ್ವೇಶ್ವರಯ್ಯನವರ ಕ್ಷಮೆಯಾಚಿಸುತ್ತಾರೆ. ಆಗ ವಿಶ್ವೇಶ್ವರಯ್ಯನವರು ''ನಾನೊಬ್ಬ ನಿವೃತ್ತ ವ್ಯಕ್ತಿ.ನನಗೇನೂ ಕೆಲಸವಿಲ್ಲ.ನಿಮ್ಮನ್ನು ನೋಡುವುದಕ್ಕಾಗಿಯೇ ಬಂದಿದ್ದೇನೆ.ನಿಮ್ಮ ಸಮಯಕ್ಕಾಗಿ ಕಾಯುವುದು ನನ್ನ ಕರ್ತವ್ಯ" ಎನ್ನುತ್ತಾರೆ*

*ತಿಂಗಳಿಗೊಮ್ಮೆಯಾದರೂ ಇವರಿರುವ ಆಂಡ್ರಿ ರಸ್ತೆಯ ಮನೆಗೆ ವಿಶ್ವೇಶ್ವರಯ್ಯನವರು ಹುಡುಕಿಕೊಂಡು ಬರುತ್ತಿದ್ದರು.ಹೀಗೆ ಬರುವ ಶ್ರಮ* *ತೆಗೆದುಕೊಳ್ಳಬಾರದೆಂದೂ, ಫೋನ್ ಮಾಡಿದರೆ ತಾನೇ ನೀವಿರುವಲ್ಲಿಗೆ ಬಂದು ನಿಮ್ಮನ್ನು ನೋಡುತ್ತೇನೆಂದು ವಿಶ್ವೇರಯ್ಯನವರಲ್ಲಿ ಕೇಳಿಕೊಳ್ಳುತ್ತಾರೆ. . ಆಗ ವಿಶ್ವೇಶ್ವರಯ್ಯನವರು ಹೇಳುವ ಮಾತು ಕೇಳಿದರೆ ಕಡಿದಾಳು ಮಂಜಪ್ಪನವರ* *ಪ್ರಾಮಾಣಿಕತೆಯ ಕಾಠಿಣ್ಯ ಎಷ್ಟು ಜಗತ್ತ್ಪಸಿದ್ದ ಎಂಬ ಅರಿವು ಮೂಡಿಸುತ್ತದೆ.''ಬಹಳ ವರ್ಷಗಳ ನಂತರ ಮೈಸೂರು ರಾಜ್ಯದಲ್ಲಿ ನಾನೊಬ್ಬ ಒಳ್ಳೆಯ ಪ್ರಾಮಾಣಿಕ ವ್ಯಕ್ತಿಯನ್ನು ಗುರುತಿಸಿದ್ದೇನೆ.ಅದಕ್ಕಾಗಿ ನಿಮ್ಮ ಮನೆಗೆ ಸ್ಪೂರ್ತಿಪಡೆಯಲು ಬರುತ್ತೇನೆ"ಎನ್ನುತ್ತಾರೆ*

*೧೯೫೭ ರ ಕೊನೆಯ ದಿನಗಳಲ್ಲಿ ನಡೆದ ಮತ್ತೊಂದು ಘಟನೆ.ಅಂದಿನ ರಾಜ್ಯಪಾಲರಾಗಿದ್ದವರು ಮಹಾರಾಜರಾದ ಜಯಚಾಮ ರಾಜ ಒಡೆಯರ್ ರವರು. ಅವರು ಮೈಸೂರಿನಿಂದ ಬೆಂಗಳೂರಿಗೆ ಬಂದವರು ಬೆಂಗಳೂರು ಅರಮನೆಯಲ್ಲಿ ಉಳಿದುಕೊಂಡಿದ್ದಾಗ ಅವರನ್ನು ನೋಡಲು ಮಂಜಪ್ಪನವರು ಬೆಂಗಳೂರು ಪ್ಯಾಲೇಸ್ ಗೆ ಹೋಗುತ್ತಾರೆ.ಕುಶಲೋಪರಿಗಳನ್ನು ಮುಗಿಸಿ ಹೊರಬರುವಾಗ ಅವರ ಹಿಂದಯೇ ಮಹರಾಜರ ಕಾರ್ಯದರ್ಶಿಯಾಗಿದ್ದ ಮಹದೇವಯ್ಯನವರು ಬಂದು ಬೆಂಗಳೂರು ಅರಮನೆಗೆ ಸೇರಿರುವ ಪ್ಯಾಲೇಸ್ ಆರ್ಕಿಡ್ಸ್ ನ ಒಂದು ಎಕರೆ ಭೂಮಿಯನ್ನು ನಿಮ್ಮ ಹೆಸರಿಗೆ ಮಾಡಿಕೊಡಲು ಮಹರಾಜರು ಬಯಸಿದ್ದಾರೆ. ನೀವು ಇದನ್ನು ತೆಗೆದುಕೊಂಡರೆ ಮುಂದಿನ ದಿನಗಳಲ್ಲಿ ತಮಗೆ ಅನುಕೂಲವಾಗುತ್ತದೆ ಎಂಬ ಸಂದೇಶವನ್ನು ಕಡಿದಾಳರಿಗೆ ಕೊಡುತ್ತಾರೆ. ಆದರೆ ಅದಕ್ಕುತ್ತರವಾಗಿ ಮಹಾರಾಜ ಔದಾರ್ಯಕ್ಕೆ ಕೃತಜ್ಷತೆಗಳನ್ನೂ ಹೇಳಿ ಮಹರಾಜರ ದಾರಾಳತನವನ್ನು ದುರುಪಯೋಗ ಪಡಿಸಿಕೊಳ್ಳಬಾರದೆಂಬ ಉದ್ದೇಶದಿಂದ ಭೂಮಿಯ ಅಗತ್ಯ ತನಗಿಲ್ಲ ಎಂದು ಹೇಳಿ ಮಹರಾಜರ ಔದಾರ್ಯವನ್ನು ತಿರಸ್ಕರಿಸುತ್ತಾರೆ. ಆಗ ಮಾಜಿ ಮುಖ್ಯ ಮಂತ್ರಿ ಮಂಜಪ್ಪನವರ ಹತ್ತಿರ ಒಂದು ಸೈಟೂ ಸಹಾ ಇರದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಆ ಒಂದು ಎಕರೆ ಭೂಮಿಯ ಬೆಲೆ ಈಗ ನೂರಾರು ಕೋಟಿಗಟಿಗಳಾಗಿರಬಹುದು ಎಂಬುದನ್ನು ಪ್ರತ್ಯೇಕವಾಗಿ ಹೇಳ ಬೇಕಿಲ್ಲ

ಸತ್ಯ ಮತ್ತು ಪ್ರಾಮಾಣಿಕತೆಯ ಪ್ರವಾದಿ ಕಡಿದಾಳು ಮಂಜಪ್ಪನವರು


ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು