Friday, June 16, 2023

 *ತಮಿಳುನಾಡಿನ "ದಿಂಡಿಗಲ್"* ಎಂಬ ಒಂದು ಪ್ರದೇಶ. ಅಲ್ಲಿ 14 ವರ್ಷದ ಒಬ್ಬ ಹುಡುಗಿ, ಆ ವಯಸ್ಸಿನಲ್ಲೇ ಅವಳಿಗೆ ಮದುವೆಯಾಗುತ್ತದೆ.ಮುಂದೆ ಅವಳಿಗೆ 18 ವರ್ಷ ತುಂಬುವಾಗ ಅವಳು ಎರಡು ಮಕ್ಕಳ ತಾಯಿಯಾಗಿರುತ್ತಾಳೆ.ಆ ಮಕ್ಕಳ ಹೆಸರು *ಅಳಿಗಣನ್, ಮತ್ತು ನಿಹಾರಿಕಾ* ಎಂದು ಈ ಮಕ್ಕಳ ಹೆತ್ತ ತಾಯಿಯ ಹೆಸರು *ಅಂಬಿಕಾ.*

ಇವಳ ಗಂಡ ಒಬ್ಬ ಸಾಮಾನ್ಯ *ಪೋಲಿಸ್ ಪೇದೆ.* ಒಂದು ದಿನ ಪೋಲಿಸ್ ಇಲಾಖೆಯ ಪರೇಡ್ ನಡೆಯುತ್ತಿರುತ್ತದೆ. ಪ್ರತಿ ದಿನ ಗಂಡ ತಿಂಡಿಗೆ ಬರುವ ಹೊತ್ತಾದರೂ ಆ ದಿನ ಬರುವುದಿಲ್ಲ. ಯಾಕೋ ಗಂಡ ಮನೆಗೆ ಬಂದಿಲ್ಲವೆಂದು *ಅಂಬಿಕಾ* ತನ್ನೆರಡು ಮಕ್ಕಳನ್ನು ಕರೆದುಕೊಂಡು ಗಂಡ ಇರುವ *ಪೋಲಿಸ್ ಠಾಣೆಗೆ* ಬರುತ್ತಾಳೆ.

ಅಲ್ಲಿ *ಪೋಲಿಸ್ ಪರೇಡ್* ನಡೆಯುತ್ತಿರುವಾಗ ತನ್ನ ಗಂಡನೂ ಸೇರಿದಂತೆ ನೂರಾರು ಪೋಲಿಸರು ಪರೇಡ್ ಮಾಡುತ್ತಿರುತ್ತಾರೆ. ಮೇಲೆ ಒಬ್ಬ ಅಧಿಕಾರಿ ನಿಂತಿರುತ್ತಾನೆ. ಎಲ್ಲಾ ಪೋಲಿಸರು ಆ ಅಧಿಕಾರಿಗೆ *ಸೆಲ್ಯೂಟ್* ಮಾಡುವುದನ್ನು ಅಂಬಿಕಾ ಗಮನಿಸುತ್ತಾಳೆ.

ಗಂಡ ಮನೆಗೆ ಬಂದಾಗ ಕೇಳುತ್ತಾಳೆ.

ಯಾರು ಅವರು ? ನೀವೆಲ್ಲಾ ಅವರಿಗ್ಯಾಕೆ ಸೆಲ್ಯೂಟ್ ಮಾಡುತ್ತೀರಿ ಎಂದು ಕೇಳುತ್ತಾಳೆ.ಆಗ ಆ ಪೋಲೀಸ ಪೇದೆ ಅವರು ನಮ್ಮ *ಐ.ಜಿ.* ಅವರೇ ನಮ್ಮ ಇಲಾಖೆಯ ದೊಡ್ಡ ಅಧಿಕಾರಿ. *I.P.S.* ಮಾಡಿದ್ದಾರೆ ಎಂದು ಹೇಳುತ್ತಾನೆ.

ಈ ಮಾತನ್ನು ಕೇಳಿದ ಅಂಬಿಕಾಗೆ ರಾತ್ರಿ ಪೂರ್ತಿ ನಿದ್ದೆ ಬರುವುದಿಲ್ಲ.ಬೆಳಿಗ್ಗೆ ಎದ್ದ ತಕ್ಷಣ ತನ್ನ ಗಂಡನಿಗೆ ಹೇಳುತ್ತಾಳೆ ನಾನು ಕೂಡಾ *I.P.S.* ಆಗಭೇಕು ಎಂದು. ಅವಳ ಆಸೆಗೆ ಗಂಡ ಪೋಲೀಸ್ ಪೇದೆ ಪ್ರೋತ್ಸಾಹಿಸುತ್ತಾನೆ.

ಮುಂದೆ ಅವಳು *ಎಸ್ ಎಸ್ ಎಲ್ ಸಿ, ಪಿ.ಯು.ಸಿ, ಡಿಗ್ರಿ* ಎಲ್ಲವನ್ನು ಎಕ್ಸಟ್ರನಲ್ ಕಟ್ಟಿ ತಮಿಳು ಭಾಷೆಯಲ್ಲಿ ಪಾಸಾಗುತ್ತಾಳೆ. ಮುಂದೆ ಮನೆಯಲ್ಲಿದ್ದರೆ ತನಗೆ ಓದುವುದಾಗುವುದಿಲ್ಲವೆಂದು ಗಂಡನಿಗೆ ನಾನು *ಚೆನೈ* ಗೆ ಹೋಗಿ ಓದುತ್ತೇನೆ ಎನ್ನುತ್ತಾಳೆ. ಆಗ ಆ ಪೋಲೀಸ್ ಪೇದೆ ಚೆನೈನಲ್ಲಿ ಒಂದು *ಪಿ.ಜಿ.* ವ್ಯವಸ್ಥೆ ಮಾಡಿ ಓದಲು ಕಳಿಸುತ್ತಾನೆ.

1 ವರ್ಷ, 2 ವರ್ಷ, 3 ವರ್ಷ....ಕಳೆದರೂ ಆಕೆ *I.P.S.* ನಲ್ಲಿ ಪಾಸಾಗುವುದಿಲ್ಲ. ಆಗ ಗಂಡ ಹೇಳುತ್ತಾನೆ. " ಮಕ್ಕಳು ದೊಡ್ಡವರಾಗುತ್ತಿದ್ದಾರೆ ನಾನು ಅವರನ್ನು ನೋಡಿಕೊಂಡು ಕೆಲಸಕ್ಕೆ ಹೋಗಲು ಆಗುತ್ತಿಲ್ಲ ಮನೆಗೆ ಬಂದು ಬಿಡು ನಿನಗೆ ಕಷ್ಟ ಆಗುತ್ತದೆ" ಎನ್ನುತ್ತಾನೆ.

ಆಗ ಅಂಬಿಕಾ ಇದೊಂದು ವರ್ಷ ನನಗೆ ಅವಕಾಶ ಕೊಡಿ ಈ ಬಾರಿ *I.P.S* ಪರೀಕ್ಷೆ ಪಾಸ ಆಗದೇ ಹೋದರೆ ಮನೆಗೆ ಬಂದು ಸಂಸಾರ ಮಾಡಿಕೊಂಡು ಇರುತ್ತೇನೆ ಎಂದು ಕೇಳುತ್ತಾಳೆ.

ಆಗ ಆ ಪೇದೆ ಆಯ್ತು ಎಂದು ಮತ್ತೊಂದು ವರ್ಷ ಓದುವುದಕ್ಕೆ ಬಿಡುತ್ತಾನೆ. ಕೊನೆಯ ಪ್ರಯತ್ನವೆಂಬಂತೆ ಕೊನೆಗೆ ತನ್ನ ನಾಲ್ಕನೇ ಪ್ರಯತ್ನದಲ್ಲಿ ಅಂಬಿಕಾ *I.P.S.* ಪಾಸು ಮಾಡುತ್ತಾಳೆ.

*I.P.S.* ಪಾಸು ಮಾಡಿದ ಅಂಬಿಕಾ ಈಗ *ನಾರ್ಥ್ ಮುಂಬೈನಲ್ಲಿ* *S.P.* ಯಾಗಿ ಕೆಲಸ ಮಾಡುತ್ತಿದ್ದಾಳೆ.

ಇಂದು *ಭಾರತದ* ಅತ್ಯುನ್ನತ ಹುದ್ದೆಗಳಲ್ಲಿ ಒಂದಾದ *I.P.S.* ಅಧಿಕಾರಿಯಾಗಿ ಕೆಲಸ ಮಾಡುತ್ತಿರುವುದು ನಮಗೆಲ್ಲಾ ಹೆಮ್ಮೆಯ ವಿಷಯವಲ್ಲವೇ..

*ಸಾಧನೆ ಮಾಡುವವರಿಗೆ ಇದೊಂದು ನಿದರ್ಶನ.*

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು