Sunday, June 25, 2023

ಸ್ವಲ್ಪ ಚಿಂತನೆ (ಮೂರು ಸಣ್ಣ ಕಥೆಗಳು)

...... .................................

ಒಬ್ಬಳು ತನ್ನ ಸ್ನೇಹಿತೆಯ ಬಳಿ ಕೇಳಿದಳು,

"ನಿಮ್ಮ ಗಂಡ ಮಗು ಹುಟ್ಟಿದ ಸಂತೋಷದಲ್ಲಿ ನಿಮಗೆ ಏನು ಉಡುಗೊರೆ ಕೊಟ್ರು?

"ಗೆಳತಿ ನುಡಿದಳು,

"ಏನೂ ಕೊಟ್ಟಿಲ್ಲ.."

ಆಶ್ಚರ್ಯಕರವಾಗಿ, ಗೆಳತಿ ಹೇಳಿದಳು

ಅವನೊಬ್ಬ ಎಂಥ ಮನುಷ್ಯ? ಇಷ್ಟೆಲ್ಲಾ ಕಷ್ಟಪಟ್ಟು ಹೆತ್ತ ಬಗ್ಗೆ ಅವನ ದೃಷ್ಠಿ ಯಲ್ಲಿ ಒಂದು ಮೌಲ್ಯವೇ ಇಲ್ಲ ?

ಗೆಳತಿ ಹೋದ ನಂತರ

ಸ್ನೇಹಿತೆ ಹೇಳಿದ್ದನ್ನು ಅವಳು ಆಲೋಚಿಸುತ್ತಿದ್ದಳು.

ಪತಿ ಬಂದಾಗ, ಉಡುಗೊರೆ ನೀಡದ ಬಗ್ಗೆ ಅವರೆಡೆ ಯಲ್ಲಿ ಚರ್ಚೆ ಜಗಳ ಉಂಟಾಗಿ ಕೊನೆಗೆ ವಿಚ್ಛೇದನದೊಂದಿಗೆ ಕೊನೆಯಾಯಿತು

.... ............................. ................... ..

ವರ್ಷಗಳ ನಂತರ, ಅಬ್ದುಲ್ಲಾ ನ ಜೊತೆ

ಒಬ್ಬ ಸ್ನೇಹಿತ ಕೇಳಿದಾಗ,

"ನೀವು ಎಲ್ಲಿ ಕೆಲಸ ಮಾಡುತ್ತಿದ್ದೀರಿ?

ತಾನು ಕೆಲಸ ಮಾಡುವ ಕಂಪನಿಯ ಹೆಸರನ್ನು ಅಬ್ದುಲ್ಲಾ ಹೇಳಿದ,

ಸ್ನೇಹಿತ ಕೇಳಿದ,

"ನಿಮ್ಮ ವೇತನ ಎಷ್ಟು?"

ಅಬ್ದುಲ್ಲಾ ಉತ್ತರಿಸುತ್ತಾ, "9000"

ಸ್ನೇಹಿತ ಕೇಳಿದ,

"ಕೇವಲ 9000 ರೂಪಾಯಿ!

ಈ ಸಂಬಳದೊಂದಿಗೆ ನೀವು ಹೇಗೆ ಜೀವಿಸುತ್ತೀರಿ? "

ಅಬ್ದುಲ್ಲಾ ಹೇಳಿದ,

"ಏನು ಮಾಡುವುದು?

ಅಷ್ಟೇ ಸಿಗುವುದು. "

ಮಾತನಾಡಿ ಪ್ರಯೋಜನವಿಲ್ಲ.

ಅದರ ನಂತರ, ಅಬ್ದುಲ್ಲಾ ಬಹಳಷ್ಟು ಕೆಲಸವನ್ನು ಮಾಡಲು ಪ್ರಾರಂಭಿಸಿದ.

ಅಬ್ದುಲ್ಲಾ ಸಂಬಳದ ಬಗ್ಗೆ ಚಿಂತಿಸತೊಡಗಿದ, ಮಾಲೀಕನಲ್ಲಿ ಮಾತಾಡಿದ, ಆದರೆ ಮಾಲೀಕ ಅದಕ್ಕೆ ಒಪ್ಪಲಿಲ್ಲ,,

ಅಬ್ದುಲ್ಲಾ ಆ ಕೆಲಸವನ್ನು ಕಳೆದುಕೊಂಡ,

ಈಗ ಕೆಲಸವಿಲ್ಲದೆ ಅಲೆದಾಡುತ್ತಿದ್ದಾನೆ !!

... ................................................. .........

ಒಬ್ಬ ವ್ಯಕ್ತಿಯು ಅಲ್ಲಿಯೇ ವಾಸಿಸುತ್ತಿದ್ದ ಹಿರಿಯ ವ್ಯಕ್ತಿಯೊಂದಿಗೆ;

"ನಿಮ್ಮಮಗನು ನಿಮ್ಮನ್ನು ನೋಡಲು ಬರುವುದಿಲ್ಲವೇ?"

"ಹೌದು, ತಿಂಗಳಲ್ಲಿ ಒಮ್ಮೆ ಬಂದು ನನಗೆ ಬೇಕಾಗಿರುವ ಖರ್ಚನ್ನು ಹಾಗೂ ಕಾರ್ಮಿಕರ ವೇತನವನ್ನುಕೊಟ್ಟು ಹೋಗುತ್ತಾನೆ ,

ಆವಾಗ ಆ ವ್ಯಕ್ತಿಯ ಪ್ರತಿಕ್ರಿಯೆ

"ನೀವು ಯಾವ ರೀತಿಯ ಮಗನನ್ನು ಹೊಂದಿದ್ದೀರಿ?

ಒಂದು ತಿಂಗಳು ಬಂದರೆ ಎಷ್ಟು ಸಾಕು? ತನ್ನ ಸ್ವಂತ ತಂದೆಯೊಂದಿಗೆ ಇಷ್ಟೇ ಪ್ರೀತಿಯಾ?

ತಂದೆ ಹೇಳಿದರು, "ಅವನ ಕೆಲಸದೆಡೆಯಲ್ಲಿ ಸಮಯ ಸಿಗುವುದಿಲ್ಲ ಅಷ್ಟು ಮಾತ್ರವಲ್ಲ ಅವನ ಹೆಂಡತಿ ಮಕ್ಕಳು ಅಲ್ಲಿಯೇ ಇದ್ದಾರೆ

ಅವರ ಬಗ್ಗೆ ಯು ಅವನು ಚಿಂತಿಸಬೇಡವೇ"?

ಆ ವ್ಯಕ್ತಿ ಹೇಳಿದ

"ಒಳ್ಳೆಯ ವಿಷಯ ನೀವು ಅವನನ್ನು ಕಲಿಸಿ ಇಷ್ಟು ದೊಡ್ಡ ಮನುಷ್ಯನಾಗಿ ಮಾಡಿದ್ದೀರಾ ? ಅವನು ನಿಮ್ಮ ಹತ್ತಿರ ಹೀಗೆ ವರ್ತಿಸುವುದಾ?

ನನಗೇನು ನೀವೇ ಚಿಂತಿಸಿ,

ಆ ವ್ಯಕ್ತಿ ಹೊರಟ ನಂತರ ಈ ತಂದೆ ಬಹಳ ಚಿಂತಾಮಗ್ನನಾದ, ಪದೇ ಪದೇ ತನ್ನ ಮಗನ ಬಗ್ಗೆ ಚಿಂತಿಸ ತೊಡಗಿದ,

ಅಂತಿಮವಾಗಿ, ತಂದೆ ಮಾನಸಿಕ ಅಸ್ವಸ್ಥ ರೋಗಿಯಾಗಿ ಹಾಸಿಗೆ ಹಿಡಿದ,

... ................................................. ...........

ನೆನಪಿಡಿ, ನಮ್ಮ ನಾಲಿಗೆಯಿಂದ ಹೊರಬರುವ ಪದಗಳು ಇತರರ ಸ್ವಾಸ್ತ್ಯವನ್ನು ಕೆಡಿಸಬಹುದು,.

ಸ್ನೇಹಿತರು ಹಾಗು ಕುಟುಂಬದವರ ಜೀವನಗಳಲ್ಲಿ ಉಂಟಾದ ಗಲಭೆ ಘರ್ಷಣೆಯ ಬಗ್ಗೆ ಅನ್ವೇಷಿಸಿ ಹೊರಟರೆ ಬೇರೊಬ್ಬರ ಕಾಣದ ಕೈ ಪ್ರವರ್ತಿಸಿರಬಹುದು,

ನಮ್ಮ ನಾಲಿಗೆಯಿಂದ ಹೊರಬರುವ ಪದಗಳು ಕೆಲವೊಮ್ಮೆ ಇತರರ ಜೀವನವನ್ನೇ ಹಾಳುಗೆಡವುತ್ತದೆ, ನಮ್ಮ ಮಾತು ಹಾಗೂ ವರ್ತನೆಗಳು ಬೇರೊಬ್ಬರ ಸಂಬಂಧವನ್ನು ಗಟ್ಟಿಯಾಗಿಸುವಲ್ಲಿ ಪ್ರತ್ಯೇಕ ಕಾಳಜಿವಹಿಸಬೇಕೆ ವಿನಹ, ಹಾಳು ಮಾಡುವಂತಿರಬಾರದು

🎯ಮೂಲ ಮಲಯಾಳಂ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು