Tuesday, June 27, 2023

 "ಜೀವನದಲ್ಲಿ 'ನಮ್ಮವರು ' ಎನ್ನುವ ಸಸಿ ನೆಡುವ ಮೊದಲು ನೆಲ ಪರೀಕ್ಷಿಸಿ... ಏಕೆಂದರೆ ಎಲ್ಲ ಮಣ್ಣಿನಲ್ಲಿ ಬದ್ಧತೆಯ ಗುಣವಿರುವದಿಲ್ಲ..."

🌺🌺 *ಶುಭದಿನ 🌺🌺

                             *ನುಡಿಮುತ್ತು*

ಅದೃಷ್ಠ ಅನ್ನೋದು ಯಾರ ಕೈಯಲ್ಲೂ ಇಲ್ಲ. ಆದರೆ ಪ್ರಯತ್ನ ಮಾಡುವದು ನಮ್ಮ ಕೈಯಲ್ಲಿ ಇದೆ. ಸತತ ಪ್ರಯತ್ನದಿಂದ ನಮ್ಮ ಅದೃಷ್ಠ ಬದಲಾಯಿಸಿಕೊಳ್ಳಬಹುದು. 

                                        *ನುಡಿಮುತ್ತು*

ಅಘಾತವಾದಾಗ ನೋವಿನ ಬಗ್ಗೆಯೇ ಯೋಚಿಸುತ್ತಿದ್ದರೆ ನರಳುತ್ತಾ ಇರಬೇಕು. ಅದರ ಕಾರಣ ತಿಳಿದು, ಕಲಿತ ಪಾಠದ ಬಗ್ಗೆ ಯೋಚಿಸಬೇಕು. ಅದು ಮುಂದೆ ಬೆಳೆಯಲು ಅನುಕೂಲ ಆಗುತ್ತದೆ.



꧂⌒*✰‿✰ *ಸ್ಪೂರ್ತಿ ಕಿರಣ*

*☘“ಯಾರಾದರೂ ಸಾಧನೆ ಮಾಡಿದಾಗ ಎರಡು ಕೈಗಳಿಂದ ಚಪ್ಪಾಳೆ ಹೊಡೆಯುವುದರ ಜೊತೆಗೆ ಯಾರಾದರೂ ಕಷ್ಟದಲ್ಲಿದ್ದಾಗ ಒಂದು ಕೈಯನ್ನು ಚಾಚೋಣ. ಕಷ್ಟ ಕಾಲದಲ್ಲಿ ಯಾರಾದರೂ ನಮ್ಮಿಂದ ಸಹಾಯ ನಿರಿಕ್ಷಿಸಿದರೆ ಅವರನ್ನು ನಿರಾಸೆಗೊಳಿಸದಿರೋಣ...”🌿...✍*

         

*"ಶ್ರೀ ಕೃಷ್ಣ ಪರಮಾತ್ಮ ಮಹಾಭಾರತ ಯುದ್ಧದಲ್ಲಿ ಭೀಷ್ಮನ ವಧೆ ಮಾಡಿಸಲು ಕಾರಣ ಅವನು ಅಧರ್ಮಿ ಅಂತಲ್ಲ, ಅವನು ಅನ್ಯಾಯವನ್ನು ನೋಡುತ್ತಾ ಸುಮ್ಮನೆ ನಿಂತಿದ್ದಕ್ಕೆ..., ಅನ್ಯಾಯವನ್ನು ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುವುದು ಸಹ ಅನ್ಯಾಯದಲ್ಲಿ ಭಾಗಿಯಾದಂತೆ*".

*"The reason why Lord Krishna killed Bhishma by Pandavas in the Mahabharata war was not because he was unrighteous, but because he stood idly by watching injustice..., even sitting idly by watching injustice is a part of injustice"*.

*ಶುಭದಿನ*🙏


*💐ಮುಂಜಾನೆಗೊಂದು ಮಾತು💐*

*ಸಾಮಾನ್ಯ ಜ್ಞಾನ ಅನ್ನೋದು ಅಷ್ಟೊಂದು ಸುಲಭವಲ್ಲ, ಕೆಲವರಿಗೆ ಅದು ಒಂದು ತರಹ ಶಿಕ್ಷೆ ಇದ್ದ ಹಾಗೆ.*

*ಏಕೆಂದರೆ ಜೀವನದಲ್ಲಿ ನೀವು ಸಾಮಾನ್ಯ ಜ್ಞಾನ ಹೊಂದಿಲ್ಲದ ಪ್ರತಿಯೊಬ್ಬರೊಂದಿಗೆ ವ್ಯವಹರಿಸಲೇಬೇಕು.*

*ಶುಭೋದಯ


꧂⌒*✰‿✰ *ಸ್ಪೂರ್ತಿ ಕಿರಣ*

*☘“ಪರಿಪೂರ್ಣವಾದ ಅವಕಾಶಕ್ಕೆ ಕಾಯುತ್ತಾ ಕುಳಿತುಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಯಾಕೆಂದರೆ ಅಂಥ ಅವಕಾಶ ಯಾವತ್ತೂ ಒದಗಿ ಬರುವುದೇ ಇಲ್ಲ. ಕೆಲವು ಸಲ ನಾವೇ ಅಂಥ ಅವಕಾಶವನ್ನು ಸೃಷ್ಟಿಸಿಕೊಳ್ಳಬೇಕಾಗುತ್ತದೆ”🌿...✍*



꧂⌒*✰‿✰ *ಸ್ಪೂರ್ತಿ ಕಿರಣ*

*☘“ನೀವು ಸಹನೆಯನ್ನು ಕಳೆದುಕೊಂಡಿರಿ ಅಂದ್ರೆ ನಿಮ್ಮ ಮುಂದಿನ ಹೋರಾಟ ಅಥವಾ ಸಮರವನ್ನು ಸೋತಿರಿ ಎಂದೇ ಅರ್ಥ. ಬದುಕಿನಲ್ಲಿ ಎಲ್ಲವನ್ನೂ ಕಳೆದುಕೊಂಡು, ಸಹನೆಯೊಂದನ್ನು ಇಟ್ಟುಕೊಂಡಿದ್ದರೆ, ನೀವು ಇನ್ನೂ ಸ್ಪರ್ಧೆಯಲ್ಲಿ ಇದ್ದೀರಿ ಎಂದರ್ಥ. ಸಹನೆ ಯಾವತ್ತೂ ನಿಮ್ಮನ್ನು ಕಾಯುತ್ತದೆ, ಕಾಪಾಡುತ್ತದೆ”🌿...✍*

       

꧂⌒*✰‿✰ *ಸ್ಪೂರ್ತಿ ಕಿರಣ*

*☘“ಸೋಲು ಅಥವಾ ವೈಫಲ್ಯವೆಂಬುದು ಯಶಸ್ಸಿನ ವಿರುದ್ಧ ಪದವಲ್ಲ. ಅದು ಯಶಸ್ಸಿನ ಅವಿಭಾಜ್ಯ ಅಂಗ. ಯಶಸ್ಸು ಯಾವತ್ತೂ ವೈಫಲ್ಯವನ್ನೂ ಒಳಗೊಂಡಿರುತ್ತದೆ. ನೂರಾರು ಅಡೆತಡೆಗಳನ್ನು ದಾಟಿಯೇ ಗುರಿ ತಲುಪಬೇಕಾಗಿರುತ್ತದೆ”🌿...✍*


🌹🌹 *ಬೆರಗಿನ ಸತ್ಯ*🌹🌹

*ಮಿತ್ರರಿಗೂ ಮಿತ್ರರಂತೆ ನಟಿಸುವವರಿಗೂ ಇರುವ ವ್ಯತ್ಯಾಸ ಇಷ್ಟೇ.*

*ಮಿತ್ರರು ಏನೇ ವಿಷಯ ಇದ್ದರೂ ನಮ್ಮಲ್ಲೇ ಹೇಳುತ್ತಾರೆ.*

*ಮಿತ್ರರಂತೆ ನಟಿಸುವವರು ಏನೇ ವಿಷಯ ಇದ್ದರೂ ನಮ್ಮೊಬ್ಬರನ್ನು ಬಿಟ್ಟು ಬೇರೆ ಎಲ್ಲರ ಬಳಿ ಹೇಳುತ್ತಾರೆ.*

🌷🌷🌷🌷

*ಶುಭದಿನ*🙏

*"ಆತ್ಮಸಾಕ್ಷಿಯಿಂದ ಕೆಲಸ ಮಾಡುವವರ ಮನಸ್ಸು ಶುದ್ಧವಾಗಿರುತ್ತದೆ. ಆತ್ಮಸಾಕ್ಷಿಯಿಲ್ಲದಿರುವವರ ಮನಸ್ಸು ಒಳಗೊಂದು ಹೊರಗೊಂದು ನಾಟಕೀಯ ಮನಸ್ಥಿತಿಯಾಗಿರುತ್ತದೆ"*.

*"The mind of a conscientious worker is pure. The mind of a person without conscience is a dramatic state of mind inside and out"*.

*ಶುಭದಿನ*🙏☺️


🌹🌹 *ಬೆರಗಿನ ಸತ್ಯ*🌹🌹

*ಮನಸ್ಸು ಪ್ರಕ್ಷುಬ್ದವಾಗಿರುವಾಗ ತೆಗೆದುಕೊಳ್ಳುವ ನಿರ್ಧಾರಗಳು ತಪ್ಪಾಗುವುದು ಮಾತ್ರವಲ್ಲ, ವ್ಯಕ್ತಿತ್ವವನ್ನೂ ಬುಡಮೇಲು ಮಾಡಬಲ್ಲುದು.*

*ನಿರ್ಧಾರ ತೆಗೆದುಕೊಳ್ಳುವಾಗ ಮನಸ್ಸು ಶಾಂತವಾಗಿರಲಿ, ಸಂಯಮತೆಯಿಂದ ಕೂಡಿರಲಿ.*

🌷🌷🌷🌷

*ಶುಭೋದಯ*🙏


꧂⌒*✰‿✰ *ಸ್ಪೂರ್ತಿ ಕಿರಣ*

*☘“ಮುಂದೊಂದು ದಿನ ನಮ್ಮ ಜೀವನದಲ್ಲಿ ವಿಶೇಷ ಘಳಿಗೆ ಬರಲಿದೆ ಎಂದು ಯೋಚಿಸುತ್ತಾ ಇರಬಾರದು. ಈಗಿನ ಕ್ಷಣಗಳನ್ನೇ ವಿಶೇಷವನ್ನಾಗಿಸುವುದು ಹೇಗೆ ಎಂದು ಯೋಚಿಸಿ ಕಾರ್ಯಪ್ರವೃತ್ತರಾಗಬೇಕು”🌿...✍*


🌹🌹 *ಬೆರಗಿನ ಸತ್ಯ*🌹🌹


*ನೀವು ಒಂದು ಕೆಲಸದ ಜವಾಬ್ದಾರಿ ತೆಗೆದುಕೊಂಡಿದ್ದರೆ ಅದನ್ನು ಮಾಡುತ್ತಾ ಹೋಗಿ.*

*ಎದುರಿಗಿರುವವರು ಮಾಡುತ್ತಿರುವ ಟೀಕೆ ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳಬೇಡಿ.*

*ಅವರು ಟೀಕೆ ಟಿಪ್ಪಣಿ ಮಾಡುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎಂದು ಭಾವಿಸಿ.*

🌷🌷🌷🌷


꧂⌒*✰‿✰ *ಸ್ಪೂರ್ತಿ ಕಿರಣ*  

*☘“ನಾಯಕನೆಂದರೆ ತನ್ನ ಆಲೋಚನೆಗಳನ್ನಷ್ಟೇ ಜಾರಿಗೊಳಿಸಲು ಬೆಂಬಲಿಗರನ್ನು ಬಳಸಿಕೊಳ್ಳುವವನಲ್ಲ. ಎಲ್ಲರ ಆಲೋಚನೆಗಳನ್ನು ಪಡೆದುಕೊಂಡು ಒಂದು ಧ್ಯೇಯ ಸಾಧನೆಗೆ ಬೆಂಬಲಿಗರ ಜೊತೆ ಸೇರಿ ಕೆಲಸ ಮಾಡುವವನು. ಇಂಥಹ ನಾಯಕತ್ವ ಸರ್ವಮಾನ್ಯವಾಗಿರುತ್ತದೆ".🌿...✍*

*ಗಿಡದಲ್ಲಿ ಎಷ್ಟೇ ಮುಳ್ಳುಗಳು ಇದ್ದರೂ ಅದರಲ್ಲಿ ಹೂ ಅರಳಬೇಕು, ಹಾಗೆಯೆ ಮನಸ್ಸಿನಲ್ಲಿ ಎಷ್ಟೇ ನೋವಿದ್ದರೂ ಮುಖದಲ್ಲಿ ನಗು ತುಂಬಿರಬೇಕು…*

*💐🌷ಶುಭೋದಯ🌹🌸*

꧂⌒*✰‿✰ *ಸ್ಪೂರ್ತಿ ಕಿರಣ*     

*☘“ನೀವು ಯಾವಾಗ ಪ್ರಯತ್ನಿಸುವುದನ್ನು ನಿಲ್ಲಿಸುತ್ತೀರೋ, ಆಗ ಸೋಲಿನ ಹತ್ತಿರಕ್ಕೆ ಬಂದಿದ್ದೀರಿ ಎಂದರ್ಥ. ಎಲ್ಲಿ ತನಕ ಪ್ರಯತ್ನವನ್ನು ಮುಂದುವರಿಸುತ್ತೀರೋ ಅಲ್ಲಿ ತನಕ ಸೋಲು ಸುಳಿಯುವುದಿಲ್ಲ. ಪ್ರಯತ್ನ ಚಾಲ್ತಿಯಲ್ಲಿದ್ದರೆ ಸೋತಿಲ್ಲ ಎಂದೇ ಅರ್ಥ”🌿...✍*


🌹🌹 *ಬೆರಗಿನ ಸತ್ಯ*🌹🌹

*ಜ್ಞಾನ ಸಂಪಾದನೆ ಮತ್ತು ಸ್ವಾಭಿಮಾನ ನಮ್ಮ ಸ್ಥಾನವನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ.*

*ಅವೆರಡರ ಬಗ್ಗೆ ಹೆಮ್ಮೆಯಿರಲಿ. ಆದರೆ ಅಹಂಕಾರ ಹೊಂದಿದಲ್ಲಿ ಅದು ನಮ್ಮ ವಿನಾಶಕ್ಕೆ ಕಾರಣವಾಗುತ್ತದೆ.*

*ವಿನಾಶ,ಅಧಪತನ ಪ್ರಾರಂಭವಾಗುವುದು ನಮ್ಮ ನಡತೆಯಿಂದಲೇ ಅನ್ನುವುದು ಕಠೋರಸತ್ಯ.*

🌷🌷🌷🌷

*ಶುಭೋದಯ*🙏


꧂⌒*✰‿✰ *ಸ್ಪೂರ್ತಿ ಕಿರಣ*

*☘“ಸಂವಹನದ ಕೊರತೆ ಯಾವತ್ತೂ ಊಹೆ ಅಥವಾ ಕಲ್ಪನೆಗೆ ಆಸ್ಪದ ನೀಡುತ್ತದೆ. ಅನಗತ್ಯ ಗೊಂದಲ ಮತ್ತು ಸಂಶಯಕ್ಕೆ ಎಡೆ ಮಾಡಿಕೊಡುತ್ತದೆ. ಯಾವ ಕಾರಣಕ್ಕೂ ಸಂವಹನ ಕೊರತೆ ಆಗದಂತೆ ನೋಡಿಕೊಳ್ಳಬೇಕು.”🌿...✍*

      

🌹🌹 *ಬೆರಗಿನ ಸತ್ಯ*🌹🌹

*ಎದುರಾಳಿ ನಾವು ಎಷ್ಟೇ ಟೀಕೆ ಮಾಡಿದರೂ,ಆರ್ಭಟಿಸಿದರೂ ತಾಳ್ಮೆಯಿಂದ ಮೌನವಾಗಿದ್ದಾನೆಂದರೆ ಆತ ದುರ್ಬಲನೆಂದಲ್ಲ.

*ಆತನಲ್ಲಿ ಎಲ್ಲವನ್ನೂ ಎದುರಿಸುವ ಶಕ್ತಿ ಇದೆ ಎಂದರ್ಥ. ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದಾನೆ ಎಂದರ್ಥ.*

*ಸಹನೆಗಿರುವ ಶಕ್ತಿ ಆರ್ಭಟಕ್ಕಿಲ್ಲ.*


꧂⌒*✰‿✰ *ಸ್ಪೂರ್ತಿ ಕಿರಣ* 

*☘“ನಿಮ್ಮ ಸುತ್ತಮುತ್ತ ನಡೆಯುವ ಎಲ್ಲ ಸಂಗತಿಗಳಿಗೂ ನೀವು ಪ್ರತಿಕ್ರಿಯಿಸಬೇಕು ಎಂದಿಲ್ಲ. ಹಾಗೆ ಮಾಡಿದರೆ, ನೀವು ನೆಮ್ಮದಿಯನ್ನು ಕಳೆದುಕೊಳ್ಳುತ್ತೀರಿ. ಎಷ್ಟೋ ಸಲ ಕ್ರಿಯೆಗಿಂತ ಪ್ರತಿಕ್ರಿಯೆಯೇ ಹೆಚ್ಚು ಉಗ್ರವಾಗಿ, ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು”🌿...✍*

         -

*ನೀವು ಕೆಳಗೆ ಬಿದ್ದು ನೋಡಿ,*

*ನಿಮ್ಮನ್ನು ಎತ್ತುವುದಕ್ಕೆ ಯಾರು ಬರುವುದಿಲ್ಲ.*

*ನೀವು ಸ್ವಲ್ಪ ಹಾರುವುದಕ್ಕೆ ಶುರು ಮಾಡಿ,*

*ನಿಮ್ಮನ್ನು ಕೆಳಗೆ ಬಿಳಿಸುವುದಕ್ಕೆ ಎಲ್ಲರೂ ಬರುತ್ತಾರೆ.*

*🌹ಶುಭೋದಯ🌹*


꧂⌒*✰‿✰ *ಸ್ಪೂರ್ತಿ ಕಿರಣ*

           

*☘“ನಾವು ಸಂತೋಷವಾಗಿರಬೇಕೆಂದರೆ, ನಮ್ಮನ್ನು ಬೇರೆಯವರಿಗೆ ಹೋಲಿಸಿಕೊಳ್ಳುವುದನ್ನು ನಿಲ್ಲಿಸಬೇಕು. ಮತ್ತು ಗತಿಸಿಹೋದ ಕೆಟ್ಟ ಘಟನೆಗಳ ಬಗ್ಗೆ ಯೋಚಿಸುವುದನ್ನು ಬಿಡಬೇಕು. ಇವೆರಡೂ ನಮ್ಮ ಮನಸ್ಸಿನಲ್ಲಿ ಮನೆ ಮಾಡಿದರೆ, ನಾವು ಸಂತಸದಿಂದ ಇರಲು ಸಾಧ್ಯವೇ ಇಲ್ಲ!”🌿...✍*

        

🌹🌹 *ಬೆರಗಿನ ಸತ್ಯ*🌹🌹


*ವೃತ್ತಿಯಲ್ಲಿ ಆಯ್ಕೆ ಮಾಡಿಕೊಳ್ಳುವ ಅವಕಾಶವಿದ್ದರೆ ಉತ್ತಮವಾದುದನ್ನೇ ಆಯ್ದುಕೊಳ್ಳೋಣ.*

*ಒಂದು ವೇಳೆ ಆಯ್ಕೆಗೆ ಅವಕಾಶ ಇಲ್ಲದಿದ್ದರೆ ಆಯ್ದುಕೊಂಡದ್ದನ್ನೇ ಉತ್ತಮವಾಗಿಸಿಕೊಳ್ಳೋಣ.*

*ವೃತ್ತಿಜೀವನದ ಯಶಸ್ಸು ಹಿಂದಿರುವ ಬಿರುದು ಬಾವಲಿಗಳಿಂದ ಅಲ್ಲ, ಪ್ರಾಮಾಣಿಕ ಬದ್ಧತೆಯಿಂದ ಮಾತ್ರ ಸಾಧ್ಯ.*

🌷🌷🌷🌷

*ಶುಭೋದಯ*🙏


🌹🌹 *ಬೆರಗಿನ ಸತ್ಯ*🌹🌹

🍁🍀🍁🍀🍁🍀🍁🍀

*ಒಳ್ಳೆಯ ಆಲೋಚನೆಗಳನ್ನು ಕಾರ್ಯರೂಪಕ್ಕೆ ತರಲು ತುಂಬಾ ಪ್ರಯತ್ನ ಪಡಬೇಕು.*

*ಕೆಟ್ಟ ಆಲೋಚನೆಗಳು ಕ್ಷಣಮಾತ್ರದಲ್ಲಿ ಕಾರ್ಯರೂಪಕ್ಕೆ ಬರುತ್ತದೆ.*

*ಅಂಗಳದಲ್ಲಿ ತುಳಸಿಗಿಡಕ್ಕಿಂತ ವೇಗವಾಗಿ ಕಳೆಗಿಡಗಳು ಬೆಳೆಯುತ್ತವೆ.*

🌷🌷🌷🌷



*"ಮನಸ್ಸೇ ಮಾನವನ ಬಯಕೆಗಳ ಜನ್ಮಭೂಮಿ. ಬಯಕೆಗಳನ್ನು ಅಳಿಯದ ಹೊರತು ಮುಕ್ತಿ ಸಿಗದು. ಪರಿಶುದ್ಧವಾದ ಮನಸ್ಸೆ ಯಶಸ್ಸಿನ ಸಾಧನ"*.

*"Mind is the birthplace of human desires. Liberation cannot be achieved unless desires are extinguished. A pure mind is the means of success"*.

                           *ಸ್ವಾಮಿ ವಿವೇಕಾನಂದರು*

*ಶುಭದಿನ*

*ಶುಭದಿನ*🙏🌹

*ಸತ್ಯನಿಷ್ಠೆ, ಪವಿತ್ರತೆ ಮತ್ತು ನಿಸ್ವಾರ್ಥತೆ ಈ ಮೂರು ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ.*

- - *ಸ್ವಾಮಿ ವಿವೇಕಾನಂದ*

💐🌷 *ಶುಭದಿನ* 🌸🌹


꧂⌒*✰‿✰ *ಸ್ಪೂರ್ತಿ ಕಿರಣ*

*☘“ಸಮುದ್ರ ಎಂದೂ ನೀರಿಗಾಗಿ ಯೋಚಿಸುವುದಿಲ್ಲ. ತಾನಾಗಿಯೇ ನೀರು ಅಲ್ಲಿಗೆ ಹರಿದುಬರುತ್ತದೆ. ಯಶಸ್ಸು ಮತ್ತು ಕೀರ್ತಿಗಳು ಹಾಗೆ. ಒಮ್ಮೆ ಅದಕ್ಕೆ ಬೇಕಾದ ಯೋಗ್ಯತೆ ಗಳಿಸಿದ್ದಲ್ಲಿ ನಮ್ಮನ್ನು ಹಿಂಬಾಲಿಸಿ ಬರುತ್ತವೆ”🌿...✍*


*"ನೀವು ನಾಳೆ ಏನಾಗುತ್ತೀರಿ ಎಂಬುದು ಇಂದು ಏನು ಮಾಡುತ್ತಿದ್ದೀರಿ ಎಂಬುದನ್ನು ಅವಲಂಬಿಸಿರುತ್ತದೆ".*

*"ಇಂದು ಉತ್ತಮ ಕೆಲಸ ಮಾಡದೇ ನಾಳೆ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವಿಲ್ಲ...!!!"*

 *🌹🌹ಶುಭ ದಿನ🌹🌹*


🌹🌹 *ಬೆರಗಿನ ಸತ್ಯ*🌹🌹

*ಗೊನೆ ಬಿಟ್ಟ ಬಾಳೆ ಬಾಗುತ್ತದೆ. ತೆನೆ ಬಿಟ್ಟ ಪೈರು ಬಾಗುತ್ತದೆ. ಫಲ ಬಿಟ್ಟ ಮರವೂ ಬಾಗುತ್ತದೆ.*

*ಆದರೇ ಪ್ರಕೃತಿಯಿಂದ ಎಲ್ಲಾ ಪಡೆದು ಪ್ರಕೃತಿಗೆ ಏನನ್ನೂ ನೀಡದ ಮನುಷ್ಯ ಮಾತ್ರ ಬೀಗುತ್ತಾನೆ.*

*ಮಾಗಿದವರು ಬಾಗುತ್ತಾರೆ. ಮಾಗದವರು ಬೀಗುತ್ತಾರೆ. ಬೀಗುವುದು ಗುಣವಲ್ಲ. ಬಾಗುವುದು ಸದ್ಗುಣ.*

🌷🌷🌷🌷

*ಶುಭದಿನ*🙏


         🌹🌹 *ಬೆರಗಿನ ಸತ್ಯ*🌹🌹


*ಜಗತ್ತನ್ನೇ ಗೆಲ್ಲುವ ಪರಾಕ್ರಮ ನಮಗೆ ಬೇಕಾಗಿಲ್ಲ.*

*ನಮ್ಮನ್ನು ಯಾರೂ ಸೋಲಿಸದಂತಹ ಪರಾಕ್ರಮ ಇದ್ದರೆ ಸಾಕು.*

*ಪರಾಕ್ರಮ ಅನ್ನುವುದು ಅಹಂಕಾರವಲ್ಲ, ಆತ್ಮರಕ್ಷಣೆ.*

🌷🌷🌷🌷

*ಶುಭದಿನ*🙏

*ಸಾಧಕರ ಸಹವಾಸ ಮಾಡದ್ದಿದ್ದರೂ ಪರವಾಗಿಲ್ಲ,,,,,,*

*ಸಮಯ ಸಾಧಕರ ಸಹವಾಸ ಮಾಡಲೇಬಾರದು...*

🌷💐 *ಶುಭದಿನ*🌹🌸

*"ಹೂವುಗಳಿಗೊಸ್ಕರ ಕೆಲವೊಮ್ಮೆ ಮುಳ್ಳುಗಳಿಗೂ ನೀರೆರೆಯಬೇಕಾಗುತ್ತದೆ"*.

*Sometimes even the thorns also need to be watered for the flowers to bloom"*.

                                                            *ಶ್ರೀಕೃಷ್ಣ*

*ಶುಭದಿನ*🙏☺️


🕉🙏 *ಸುಪ್ರಭಾತ* 🙏🕉          

         ▬▬▬ஜ۩۞۩ஜ▬▬▬                            


 🌺 🍁 ꧂⌒*✰‿✰

꧂⌒*✰‿✰ *ಸ್ಪೂರ್ತಿ ಕಿರಣ*

           

*☘“ಬೇರೆಯವರು ಮಾತಾಡುವಾಗ ಗಮನವಿಟ್ಟು ಕೇಳಬೇಕು. ಮತ್ತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಪ್ರಶ್ನೆ ಕೇಳುವುದಕ್ಕಾಗಿ ಕೇಳಬಾರದು. ಉತ್ತರ ನೀಡುವುದಕ್ಕಾಗಿಯೂ ಕೇಳಬಾರದು. ಕೇಳುತ್ತಿದ್ದೇನೆ ಎಂದು ತೋರಿಸಿಕೊಳ್ಳಲೂ ಕೇಳಬಾರದು. ಕೇಳುವುದೆಂದರೆ ಕಿವಿಗಳ ಮೂಲಕ ಓದಿದಂತೆ”🌿...✍*

         ----------------~--------------

        *ಧರ್ಮೋ ರಕ್ಷತಿ ರಕ್ಷಿತಃ* 


 _🍵ಶುಭೋದಯ ☕_

   

*॥ಸರ್ವೆಜನಃ ಸುಖಿನೋಭವಂತು॥*

 ▬▬▬▬▬ஜ۩۞۩ஜ▬▬▬▬▬


“🌱ನೆರಳಿಗಾಗಿ ಗಿಡ ನೆಡಿ - 

ಶುದ್ಧವಾದ ಗಾಳಿಗಾಗಿ ಮರ ರಕ್ಷಿಸಿ!!!🌳”


🌹🌹🌻🌻🌺🌺🏵️🏵️


👉 *ಜೀವನದಲ್ಲಿ ಚೆನ್ನಾಗಿ ಬಾಳಬೇಕೆಂದರೆ ಕೆಲವು ವಿಷಯಗಳನ್ನು ಮತ್ತು ವ್ಯಕ್ತಿಗಳನ್ನು ಅರಿತು ಬಾಳಬೇಕು.* 

*ಹಾಗೆಯೇ ಕೆಲವೊಂದು ವಿಷಯಗಳನ್ನು ಮತ್ತು ವ್ಯಕ್ತಿಗಳನ್ನು ಮರೆತು ಬಾಳಬೇಕು...*

*ಸುಂದರವಾದ ಹೂವುಗಳು ಸ್ಪರ್ಧೆಗೆ ಇಳಿಯುವುದಿಲ್ಲ.*

*ಅರಳುವುದಷ್ಟೇ ಅವುಗಳ ಕೆಲಸ. ಹಾಗೆಯೇ ನಮ್ಮ ಜೀವನದಲ್ಲಿ ನಾವು ನಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾ ಹೋದಾಗ ನಮ್ಮ ಜೀವನವು ಸುಂದರವಾಗುತ್ತದೆ.*


🌹🌻🌺🏵️

 *ಶುಭೋದಯ*🌹🌻🌺🏵️🙏🙏🙏🙏🙏🙏


▬▬▬ஜ۩۞۩ஜ▬▬▬                            


 🌺 🍁 ꧂⌒*✰‿✰

꧂⌒*✰‿✰ *ಸ್ಪೂರ್ತಿ ಕಿರಣ*

           

*☘“ನಮ್ಮಲ್ಲಿ ಜಾಣ್ಮೆಯಿದೆ, ಸಾಮರ್ಥ್ಯವಿದೆ ಎಂದಾದರೆ ಅವುಗಳನ್ನು ಉಪಯೋಗಿಸಿಕೊಂಡು ಮುಹೂರ್ತಕ್ಕಾಗಿ ಕಾಯದೇ ಹೊಸ ಹಾದಿಯೊಂದರ ಶೋಧನೆಗೆ ತೊಡಗಬೇಕು”...✍*

        

 _*🍵ಶುಭೋದಯ ☕*_

   

▬▬▬▬▬ஜ۩۞۩ஜ▬▬▬▬▬


🌺🍁ಜೈ ☘️⌒*✰‿✰

🍀⌒*✰‿✰ *ಚಿಂತನ ಮಂಥನ*


....✍🏼


ನಮ್ಮ ಬದುಕು ಬದಲಾಯಿಸುವವರನ್ನ ಬಯಸಬೇಕೇ ಹೊರತು, ನಮ್ಮ ಬದುಕಿನಿಂದ ತಮ್ಮ ಬೇಳೆ ಬೇಯಿಸಿಕೊಳ್ಳುವವರನ್ನ ಎಂದೂ ಬಯಸಬಾರದು...


ನಂಬಿಕಸ್ತರಿಗೆ ಮಾತ್ರ ಮನಸಿನೊಳಗೆ ಜಾಗ ಕೊಡಿ ಕಂಗೆಡಿಸುವವರನ್ನ ಕನಸಿನಿಂದಲೂ ದೂರವಿಡಿ...


ನುಂಗಲಾರದಷ್ಟು ಕಷ್ಟ ಬಂದರೂ ಸರಿ ಕೊಟ್ಟು ಹಂಗಿಸುವವರಿಂದ ಪುಕ್ಕಟೆ ಸಿಕ್ಕರೂ ಪಡೆಯದಿರಿ...


  ಶುಭೋದಯ ☕️


🌞 *ಶುಭದಿನ* 🌞


*👉 ಇಂದಿನ ಹಿತನುಡಿ 👈* 


       *ಉತ್ತಮ ಜನರೆಂದರೆ ದಾರಿಯ ಎರಡೂ ಪಕ್ಕಗಳಲ್ಲಿರುವ ದೀಪದ ಕಂಬಗಳಿದ್ದಂತೆ. ಅವರು ದಾರಿಯ ಅಂತರವನ್ನು ಕಮ್ಮಿ ಮಾಡುವುದಿಲ್ಲ. ಆದರೆ ಅವರು ದಾರಿಯುದ್ದಕ್ಕೂ ಬೆಳಕು ತೋರಿ, ಪ್ರಯಾಣವನ್ನು ಸುಗಮವಾಗಿಸುತ್ತಾರೆ.*


   💐💐 ಶುಭೋದಯ - ಶುಭದಿನ 💐💐


*ನುಡಿಮುತ್ತು*.

ಕಾಗೇ ಕಪ್ಪು, ಆದರು ಅದಕ್ಕೆ ಹಂಚಿ ತಿನ್ನುವ ಗುಣವಿದೇ.ಕೋಗಿಲೆ ಯೂ ಕಪ್ಪು ಆದರೂ ಅದಕ್ಕೆ ಸುಮಧುರವಾದ ಕಂಠ ಇದೆ, ಬದುಕೋದಕ್ಕೆ ಬೇಕಾಗಿರೋದು ಬಣ್ಣ ಅಲ್ಲ, ಬಣ್ಣ ಬದಲಾಯಿಸದೇ ಇರುವ ಗುಣ.🌹💐


ನಲ್ಬೆಳಗು

೧೮/೬/೨೦೨೨

*ನುಡಿಮುತ್ತು*.

"ನಿನ್ನೆ" ಏಕಿದೆಯೆಂದರೆ ನೆನಪುಗಳು ಜೀವಂತವಾಗಿರುವುಡಕ್ಕೆ;

"ನಾಳೆ" ಏಕಿದೆಯೆಂದರೆ ಭರವಸೆಗಳು ಜೀವಂತವಾಗಿರುವುದಕ್ಕೆ.💐🌹


" *ನಮ್ಮ ಹೆಸರಿನಿಂದ ವ್ಯಕ್ತಿತ್ವ ಬೆಳೆಯುವುದಿಲ್ಲ, ನಮ್ಮ ವ್ಯಕ್ತಿತ್ವದಿಂದ ಹೆಸರು ಬೆಳೆಯುತ್ತದೆ*".


" *Personality does not grow by our name. The name grows out of our personality*".


*ಶುಭದಿನ*🙏☺️


" *ಕೆಟ್ಟ ಮನಸ್ಸಿನ ವ್ಯಕ್ತಿ ಎಷ್ಟೇ ಸಿಹಿಯಾಗಿ ಮಾತನಾಡಿದರೂ ಅವನು ನಿಮಗೆ ರೋಗವಾಗಿಯೇ ಕಾಡುತ್ತಾನೆ. ಆದರೆ ಒಳ್ಳೆಯ ಮನಸ್ಸಿನ ವ್ಯಕ್ತಿ ಎಷ್ಟೇ ಕಹಿಯಾಗಿ ಮಾತನಾಡಿದರೂ ಔಷಧಿಯಂತೆ ಪರಿಣಮಿಸುತ್ತಾನೆ*".


" *No matter how sweet words he speaks a bad-hearted person may be, he will haunt you as desease. But A good-hearted person, no matter he speaks bitter words he may sound, he affects as medicine*".


*ಶುಭದಿನ*🙏☺️


*🙏🌞ಮುಂಜಾನೆಯ ಮಾತು🌞🙏*

*** 🌷 ಬೆಲೆ ಕಟ್ಟಲಾಗದ ಆಸ್ತಿ ಅಂತಾ ಭೂಮಿಯ ಮೇಲೆ ಇರುವುದು ಎಂದರೆ ಅದು ನಮ್ಮ ಒಳ್ಳೆಯತನ. ಇದೊಂದೇ ನಾವು ಉಳಿಸಿಟ್ಟು ಹೋಗುವ ಬೆಲೆ ಕಟ್ಟಲಾಗದ ಆಸ್ತಿ🌷🌷****

*🙏💐 ಶುಭದಿನ💐🙏*


🌺 🍁 ꧂⌒*✰‿✰

꧂⌒*✰‿✰ *ಸ್ಪೂರ್ತಿ ಕಿರಣ*


*" ಅತಿ ದೊಡ್ಡ ಸಮಸ್ಯೆ ಎಂದರೆ ಇನ್ನೂ ಸಮಯವಿದೆ ಅಂದುಕೊಳ್ಳುವುದು."*

                *-ಗೌತಮ ಬುದ್ಧ*


    🍵 *ಶುಭದಿನ*☕


" *ತಿಳುವಳಿಕೆ ಇಲ್ಲದವನನ್ನು ಒಪ್ಪಿಸುವುದು ಸುಲಭ. ಹೆಚ್ಚು ತಿಳಿದವನನ್ನು ಒಪ್ಪಿಸುವುದು ಇನ್ನೂ ಸುಲಭ. ಆದರೆ ಸ್ವಲ್ಪ ತಿಳಿದುಕೊಂಡು, ಅಹಂಕಾರ ಪಡುವ ಮನುಷ್ಯನನ್ನು ದೇವರಿಂದ ಕೂಡಾ ಒಪ್ಪಿಸಲು ಸಾಧ್ಯವಿಲ್ಲ*".


ತಿಳುವಳಿಕೆಗಿಂತ ನಡುವಳಿಕೆಯೇ

ಶ್ರೇಷ್ಠ

ಏಕೆಂದರೆ ಕೆಲವೊಮ್ಮೆ ತಿಳುವಳಿಕೆ

ಸೋಲಬಹುದು.

ಆದರೆ ಉತ್ತಮ ನಡುವಳಿಕೆ 

ಎಂದೂ ಸೋಲುವುದಿಲ್ಲ.

ಶುಭ ಮುಂಜಾನೆ

" *It is easy to commit to the who doesn't know anything. It is even easier to commit to someone who knows more. But who know a little, arrogant man cannot even be handed over by God*".


*ಶುಭೋದಯ*🙏☺️


*ಗುಣವಂತನಿಗಿಂತ ಅತಿದೊಡ್ಡ ಸಿರಿವಂತ ಈ ಭೂಮಿಯ ಮೇಲೆ ಇರಲು ಸಾಧ್ಯವೇ ಇಲ್ಲ*


*ಶುಭೋದಯ*


" *ಸತ್ಯ ಮತ್ತು ಸುಳ್ಳಿನ ನಡುವೆ ವ್ಯತ್ಯಾಸ ಏನೆಂದರೆ.... ನೀವು ಹೇಳಿದ ಸುಳ್ಳನ್ನು & ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಬೇಕು. ಆದರೆ ಸತ್ಯ ಏನೆಂದರೆ ನಿಮ್ಮನ್ನು ಶಾಶ್ವತವಾಗಿ ರಕ್ಷಿಸುತ್ತದೆ*".


" *The difference between a lie and a truth is that you have to defend lies and yourself from the lies you told. But the truth is that will save you forever*".


*ಶುಭದಿನ*☺️🙏


🌺 🍁 ꧂⌒*✰‿✰

꧂⌒*✰‿✰ *ಸ್ಪೂರ್ತಿ ಕಿರಣ*


*ಹೊರಗಿನ ಅಲಂಕಾರಕ್ಕಿಂತ ಒಳಗಿನ ಗುಣ ಮುಖ್ಯ, ವಿಷ ತುಂಬಿದ ಚಿನ್ನದ ಪಾತ್ರೆಗಿಂತ, ಜೇನು ತುಂಬಿದ ಮಣ್ಣಿನ ಮಡಿಕೆ ಶ್ರೇಷ್ಠ ವಾದದ್ದು....!*


    🍵 *ಶುಭೋದಯ ಸ್ನೇಹಿತರೆ*☕



" *ಯಾರು ಜೀವನದಲ್ಲಿ ಸೋತಿರುತ್ತಾರೋ; ಅವರಿಗೆ ನವಚೇತನ ನೀಡುವುದೇ ಅವರ ಆತ್ಮವಿಶ್ವಾಸ*".


" *Their confidence is to rejuvenate those who are lost in life*".


*ಶುಭದಿನ*☺️🙏





































































ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು