Friday, July 21, 2023

 ಒಬ್ಬಳು ಮಂಗಳಮುಖಿ ಭಿಕ್ಷೆ ಬೇಡಲೆಂದು ಶ್ರೀಮಂತ ವ್ಯಕ್ತಿಯ ಮನೆಗೆ ಹೋದಳು.

ಅಲ್ಲಿ ಒಳಗಡೆ ಆಗಷ್ಟೇ ಮದುವೆಯಾದ ದಂಪತಿಗಳಿಬ್ಬರು ಈ ಜಗಳವಾಡುತ್ತಿದ್ದರು.ಹೆಂಡತಿ ತನ್ನ ಗಂಡನಿಗೆ ಅತ್ತೆ ಮಾವನವರನ್ನು ಇದೆ ವಾರಾಂತ್ಯದೊಳಗೆ ವೃದ್ದಾಶ್ರಮ ಸೇರಿಸಿ ನನಗೆ ಮುಕ್ತಿ ಕೊಡಿ ಅಂತಾ ಬೇಡಿಕೊಳ್ಳುತ್ತಿದ್ದಾಗ ಗಂಡ ಈ ವಾರಾಂತ್ಯದೊಳಗೆ ಆಗದ ಮಾತು ಆದರೆ ತಿಂಗಳಾಂತ್ಯದೊಳಗೆ ವೃದ್ದಾಶ್ರಮಕ್ಕೆ ಕಳುಹಿಸುವೆ ಅನ್ನುತ್ತಾ ಹೆಂಡತಿಯನ್ನ ಪ್ರೀತಿಯಿಂದ ಓಲೈಸುತ್ತಾನೆ....

ಈ ವಾದ ವಿವಾದ ಮುಗಿದು ಮನೆಗೆ ಬಂದ ಮಂಗಳಮುಖಿಗೆ ಕೈ ತುಂಬಾ ಹಣ ನೀಡುತ್ತಾ ತಮ್ಮ ಅದ್ಭುತ ಜೀವನಕ್ಕೆ ಆಶೀರ್ವಾದ ಮಾಡು ಎಂದು ನಗುನಗುತ್ತಾ ಕೋರಿಕೆಯನ್ನ ಮುಂದಿಡುತ್ತಾರೆ.....

ಆಗ ಆ ಮಂಗಳಮುಖಿ ನಗುತ್ತಾ ಹೇಳುವಳು ತಂದೆ ತಾಯಿಯನ್ನು ಪ್ರೀತಿಸದ ಜೀವಕ್ಕೆ ಆ ದೇವರು ಸಹ ಆಶೀರ್ವಾದ ನೀಡಲು ಹಿಂಜರಿಯುವನು...ಆದರೂ ಅರ್ಧನಾರೀಶ್ವರನ ಅವತಾರ ತಾಳಿದ ನಾನು ನಿಮಗೆ ಮನಸೋ ಇಚ್ಛೆ ಹರಸುವೆನು ಎಂದಾಗ ಆ ದಂಪತಿಗಳಿಬ್ಬರು ತಮ್ಮ ಶಿರಭಾಗಿ ಅವಳ ಮುಂದೆ ನಿಲ್ಲುತ್ತಾರೆ....

ಆಗ ಅವಳು ಹೇಳಿದ ಮಾತು ಏನು ಗೊತ್ತಾ......

ಮುಂದಿನ ಜನ್ಮದಲ್ಲಿ ನನಗಿಂತಲೂ ಸುಂದರವಾದ ಮಂಗಳಮುಖಿ ಆಗಿ ಇದೆ ಭೂಮಿಯಲ್ಲಿ ಜನಿಸಿರಿ ಆಗ ನಿಮ್ಮವರನ್ನು ದೂರ ಸರಿಸೋ ಪ್ರಮೇಯವೇ ಬರೋದಿಲ್ಲ

ಪ್ರಪಂಚವೇ ನಿಮ್ಮನ್ನ ದೂರ ಸರಿಸುತ್ತದೆ....

ಈ ಜನ್ಮದಲ್ಲಿ ತಂದೆ ತಾಯಿಯರನ್ನು ವೃದ್ದಾಶ್ರಮಕ್ಕೆ ತಳ್ಳುವ ನಿಮಗೆ ಮುಂದಿನ ಜನ್ಮದಲ್ಲಿ ಅವರು ತಮ್ಮ ಮಕ್ಕಳೆಂಬ ಕರುಣೆ ಮರೆತು ನಿಮ್ಮನ್ನ ಯಾರು ವಾಸಿಸಲು ಯೋಗ್ಯವಲ್ಲದ ಜಾಗದಲ್ಲಿ ಬಿಟ್ಟು ಹೋಗುವರು... ನಿಮಗೆ ಶುಭವಾಗಲಿ ಅನ್ನುತ್ತಾ ಅವಳು ಅಲ್ಳಿಂದ ಸಾಗುವಳು.

ತಂದೆ ತಾಯಿಯರನ್ನು ದೂರ ಮಾಡೋ ಪ್ರತಿ ವ್ಯಕ್ತಿಗೂ ಈ ಸಣ್ಣ ಕಥೆ ಸಮರ್ಪಣೆ...

ಕೃಪೆ: ವಾಟ್ಸ್ ಆಪ್ ಗ್ರೂಪ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು