Sunday, July 23, 2023

 ಇಲ್ಲಿ ಬಡವನಾರು?*

ಈ ಪ್ರಪಂಚದಲ್ಲಿ ಅನೇಕ ಜನರಿಗೆ ತಮ್ಮ ಬದುಕಿನ ಮಹತ್ವದ ಬಗ್ಗೆ ವಾಸ್ತವಿಕತೆಯ ಪ್ರಜ್ಞೆ ಇರುವುದಿಲ್ಲ. ಮಾನವತೆಯ ಮಹತ್ವದ ಅರಿವಿಲ್ಲದೆ, ಕೇವಲ ಧನ-ಕನಕ-ಆಸ್ತಿ-ಸಂಪತ್ತುಗಳಿಂದಲೇ ಬದುಕಿನ ಮಹತ್ವ ಹೆಚ್ಚಾಗುತ್ತದೆ ಎಂಬ ತಪ್ಪು ಕಲ್ಪನೆಯಲ್ಲಿರುತ್ತಾರೆ. ದ್ರವ್ಯರೂಪದ ಸಂಪತ್ತಿನ ಹಿಂದೆ ಅಲೆದು ನಿಶ್ಚೇತನರಾಗುತ್ತಾರೆ. ಅಂಥವರ ಕಣ್ಣು ತೆರೆಯಿಸುವ ಒಂದು ಮನೋಜ್ಞ ಪ್ರಸಂಗ ಇಲ್ಲಿದೆ.

ಭಾರತದ ಗಣ್ಯ ಧಾರ್ಮಿಕ ನೇತಾರರಾದ ಸ್ವಾಮಿ ವಿವೇಕಾನಂದರು ಒಮ್ಮೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ಬಳಿಗೆ ಬಂದ ಭಿಕ್ಷುಕನೊಬ್ಬನು ಭಿಕ್ಷೆ ಬೇಡತೊಡಗಿದನು. ಆದರೆ ಸ್ವಾಮೀಜಿ ಆತನ ಕಡೆಗೆ ಗಮನ ಹರಿಸಲೇ ಇಲ್ಲ. ಆಗ ಭಿಕ್ಷುಕ ಮತ್ತೊಮ್ಮೆ ವಿನಂತಿಸಿದ. ''ಅಯ್ಯಾ ಸ್ವಾಮಿ, ನಾನು ಭಾರಿ ಬಡವ, ನನ್ನ ಬಳಿ ಏನೂ ಇಲ್ಲ. ತುಸು ದಯೆ ತೋರಿಸಿರಿ. ನನಗೊಂದಿಷ್ಟು ಸಹಾಯ ಮಾಡಿರಿ''. ಅವನ ಅಶ್ರುಪೂರ್ಣ ವಿನಂತಿಯನ್ನು ಕಂಡು ಸ್ವಾಮಿ ವಿವೇಕಾನಂದರ ಕಣ್ಣುಗಳಿಂದಲೂ ಕಂಬನಿ ಹರಿಯತೊಡಗಿತು. ಆಗ ಸಹ ಪ್ರಯಾಣಿಕರೊಬ್ಬರು ಇದನ್ನು ಕಂಡು ''ನೀವೇಕೆ ಅಳುತ್ತಿದ್ದೀರಿ?'' ಎಂದು ಪ್ರಶ್ನಿಸಿದರು.

ಅವರಿಗೆ ಉತ್ತರಿಸುತ್ತ ವಿವೇಕಾನಂದರು ಎಂದರು-'''ಈ ಶ್ರೀಮಂತ ಮನುಷ್ಯನು ಶ್ರೀಮಂತನಿದ್ದೂ ಭಿಕ್ಷೆ ಬೇಡುವುದನ್ನು ಕಂಡಾಗ ನನಗೆ ಕಂಬನಿ ಉಕ್ಕಿ ಬಂತು''. ಆಗ ಸಹ ಪ್ರಯಾಣಿಕರು ನುಡಿದರು- ''ಛೇ! ಏನಂತೀರಾ? ಆತ ನಿಜಕ್ಕೂ ಭಿಕ್ಷುಕನಿದ್ದಾನೆ''. 

ಸ್ವಾಮೀಜಿ ವಿನಮ್ರತೆಯಿಂದ ಭಿಕ್ಷುಕನಿಗೆ ಕೇಳಿದರು- ''ನೀನು ನಿನ್ನ ಎಡಗೈಯನ್ನು ನನಗೆ ಒಂದು ಲಕ್ಷ ರೂಪಾಯಿಗಳಿಗೆ ಮಾರುವಿಯಾ?''

ಭಿಕ್ಷುಕನು ನಕಾರಾತ್ಮಕವಾಗಿ ತಲೆಯಾಡಿಸಿದನು. ಸ್ವಾಮೀಜಿ ಮತ್ತೆ ಕೇಳಿದರು- ''ನಿನ್ನ ಎಡಕಾಲನ್ನು ಒಂದು ಲಕ್ಷ ರೂಪಾಯಿಗಳಿಗೆ ಕೊಡಬಲ್ಲೆಯಾ?'' ಭಿಕ್ಷುಕನು ''ಇಲ್ಲ'' ಎಂದು ತಲೆಯಾಡಿಸಿದನು. ಸ್ವಾಮೀಜಿ ಮತ್ತೆ ಪ್ರಶ್ನಿಸಿದರು- ''ನಿನ್ನ ಒಂದು ಕಣ್ಣನ್ನು ಎರಡು ಲಕ್ಷ ರೂಪಾಯಿಗಳಿಗೆ ಮಾರಬಲ್ಲೆಯಾ?'' ಈಗಲೂ ಭಿಕ್ಷುಕನು ನಕಾರಾತ್ಮಕವಾಗಿ ತಲೆಯಾಡಿಸಿದಾಗ ವಿವೇಕಾನಂದರು ಹೇಳಿದರು- ''ನಿನ್ನ ಶರೀರದಲ್ಲಿ ಲಕ್ಷ ಗಟ್ಟಲೆ ಸಂಪತ್ತಿದ್ದರೂ, ದುಡಿವ ಶಕ್ತಿ ಇದ್ದರು ನಾನು ಬಡವ ಮತ್ತು ನನ್ನಲ್ಲಿ ಏನೂ ಇಲ್ಲ ಎಂದು ಭಿಕ್ಷೆ ಬೇಡುತ್ತಿದ್ದೀಯಲ್ಲಾ?''

ಈಗ ಭಿಕ್ಷುಕ ಸುಮ್ಮನಿದ್ದ. ಕೆಲವು ಕ್ಷಣಗಳ ಬಳಿಕ ಸ್ವಾಮೀಜಿಗೆ ವಂದಿಸುತ್ತಾ ಹೇಳಿದ- ''ಮಹಾ ಸ್ವಾಮೀಜಿ, ನೀವು ನನ್ನ ಕಣ್ಣುಗಳನ್ನು ತೆರೆಯಿಸಿದಿರಿ. ಇನ್ನೆಂದಿಗೂ ಈ ಬದುಕಿನಲ್ಲಿ ಹೀಗೆ ಭಿಕ್ಷೆ ಬೇಡಲಾರೆ,'' ಎಂದು ಹೊರಟೇ ಹೋದನು.

ಇಲ್ಲಿ ಪ್ರಪಂಚಕ್ಕೇ ಒಂದು ಮಹತ್ವದ ಸಂದೇಶವನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ. ನಾವು ನಮ್ಮದೇ ಶ್ರೀಮಂತಿಕೆಯನ್ನು ಅರಿಯುವಲ್ಲಿ ಸೋಲುತ್ತೇವೆ. ಅನ್ಯರ ಭೌತಿಕ ಶ್ರೀಮಂತಿಕೆಯನ್ನು ಕಂಡು ಕರುಬುತ್ತೇವೆ. ಈ ಜಗತ್ತಿನಲ್ಲಿ, ಪ್ರತಿಯೊಬ್ಬನೂ ಇನ್ನೊಬ್ಬನಷ್ಟೇ ಶ್ರೀಮಂತನಾಗಿ ಹುಟ್ಟುತ್ತಾನೆ. ಬೌದ್ಧಿಕವಾಗಿ ಯೋಚಿಸಿ ತನ್ನ ಅಂಗಾಂಗಗಳನ್ನು ಸಫಲವಾಗಿ ತೊಡಗಿಸಬಲ್ಲವನು ದ್ರವ್ಯರೂಪದಲ್ಲಿಯೂ ಶ್ರೀಮಂತಿಕೆ ಹೊಂದುತ್ತಾನೆ. ಬುದ್ಧಿ ವಿವೇಕಗಳನ್ನು ಸರಿಯಾಗಿ ಉಪಯೋಗಿಸಲು ಒಲ್ಲದವನು ತಾನಾಗಿಯೇ ಬಡತನವನ್ನು ಅಪ್ಪಿಕೊಳ್ಳುತ್ತಾನೆ. ನಮ್ಮ ಶರೀರದ ಅಂಗಾಗಗಳ ಸದುಪಯೋಗ ಮಾಡಿದ್ದೇ ಆದಲ್ಲಿ ಪ್ರತಿಯೊಬ್ಬನೂ ಸಮರ್ಥನೂ, ಶ್ರೀಮಂತನೂ ಆಗಬಲ್ಲನೆಂಬುದರಲ್ಲಿ ಸಂದೇಹವೇ ಇಲ್ಲ.

ಕೃಪೆ:ವೀರೇಂದ್ರ ಹೆಗ್ಗಡೆಯವರು.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು