Wednesday, July 26, 2023

 ಶಾಲೆಯಿಂದ ಡ್ರಾಪ್ ಔಟ್ ಆದವನು ವಿದ್ಯುತ್ ಬೆಳಕನ್ನು ಕಂಡು ಹಿಡಿದ!! ಇದು ಜಗತ್ ಪ್ರಸಿದ್ಧ ವಿಜ್ಞಾನಿಯ ಕಥೆ!!*

1947 ಫೆಬ್ರವರಿ 11 ನೇ ತಾರೀಖು ಅಮೇರಿಕಾದ ಮಿಲಾಸ್ ಪಟ್ಟಣದಲ್ಲಿ ಸಾಮ್ಯುಯೆಲ್ ಎಡಿಸನ್ ಮತ್ತು ನ್ಯಾನ್ಸಿ ದಂಪತಿಗಳಿಗೆ ಜನಿಸಿದ ಮಗುವೇ ಥಾಮಸ್ ಆಲ್ವಾ ಎಡಿಸನ್.

ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲೊಬ್ಬನಾದ ಥಾಮಸ್ ಆಲ್ವಾ ಎಡಿಸನ್ ವಿದ್ಯುದ್ದೀಪದ ಜೊತೆಗೆ ಗ್ರಾಮಫೋನ್, ಕೈನಟೋಸ್ಕೋಪ್, ಸಂಚಯನ ವಿದ್ಯುತ್ ಕೋಶ, ಕಬ್ಬಿಣ ಅದಿರು ಬೇರ್ಪಡಿಸುವ ಕಾಂತೀಯ ಸಲಕರಣೆ, ಮೂವೀ ಕ್ಯಾಮರಾ ಸೇರಿದಂತೆ 2,500 ಕ್ಕೂ ಹೆಚ್ಚು ಸಂಶೋಧನೆ ನಡೆಸಿರುವ ಖ್ಯಾತಿ ಇವರದ್ದು.

ಇಂತಹ ಒಬ್ಬ ಜಗತ್ ವಿಖ್ಯಾತಿ ವಿಜ್ಞಾನಿ ಸಣ್ಣವನಿದ್ದಾಗ ಶಾಲೆಯಿಂದ ಇವನನ್ನು ಓಡಿಸಿದ್ದರು ಎಂದರೆ ನಂಬಲಿಕ್ಕಾಗುವುದಿಲ್ಲವಾದರೂ ಅದು ಸತ್ಯ!

ಮಗುವಿನಿಂದಲೂ ಬಹಳ ತುಂಟನಾಗಿದ್ದ ಎಡಿಸನ್ ಶಾಲೆಯಲ್ಲೂ ಅದನ್ನು ಮುಂದುವರಿಸುತ್ತಾನೆ. ಸದಾ ಮೂಡಿಯಾಗಿರುತ್ತಿದ್ದ ಎಡಿಸನ್ ಏನೇನೋ ಪ್ರಶ್ನೆಗಳನ್ನು ಕೇಳಿ ಟೀಚರ್ಗಳಿಗೆ ತಲೆತಿನ್ನುವುದು, ಹೇಳಿದ ಕೆಲಸಗಳನ್ನು ಮಾಡದೇ ತನಗೆ ತೋಚಿದ್ದನ್ನೇ ಮಾಡುವುದು ಹೀಗೆ ಮಿತಿಮೀರಿದ ಇವನ ಅಧಿಕಪ್ರಸಂಗದಿಂದ ಬೇಸತ್ತ ಟೀಚರ್ ಅದೊಂದು ದಿನ ಇವನು ಶಾಲೆಬಿಟ್ಟು ಮನೆಗೆ ಹೋಗುವಾಗ ತಾಯಿಗೆ ಕೊಡುವಂತೆ ಹೇಳಿ ಒಂದು ಪತ್ರಕೊಟ್ಟು ಕಳುಹಿಸುತ್ತಾರೆ.

ತಾಯಿ ಆ ಪತ್ರ ನೋಡಿ ದುಃಖಿತಳಾದರೂ ಅದನ್ನು ತೋರಗೊಡದೆ ಮಗ ಎಡಿಸನ್ ಮುಂದೆ ಪತ್ರವನ್ನು ತಾಯಿ ಹೀಗೆ ಓದುತ್ತಾಳೆ; “ನಿಮ್ಮ ಮಗ ಬಹಳ ಬುದ್ಧಿವಂತನಾಗಿದ್ದು, ನಮ್ಮ ಶಾಲೆ ಅವನ ಬುದ್ಧಿಮತ್ತೆಗಿಂತ ಬಹಳ ಚಿಕ್ಕದಾಗಿರುವುದರಿಂದ ಅವನಿಗೆ ಕಲಿಸುವ ಸಾಮಥ್ಯ೯ ನಮ್ಮ ಯಾವ ಶಿಕ್ಷಕರಿಗೂ ಇಲ್ಲದ ಕಾರಣ, ದಯವಿಟ್ಟು ತಾವೇ ಅವನನ್ನು ಮನೆಯಲ್ಲಿಟ್ಟುಕೊಂಡು ವಿದ್ಯಾಭ್ಯಾಸ ಮಾಡಿಸಬೇಕಾಗಿ ಕೇಳಿಕೊಳ್ಳುತ್ತೇವೆ ಮತ್ತು ನಾಳೆಯಿಂದ ಯಾವುದೇ ಕಾರಣಕ್ಕೂ ಅವನನ್ನು ಶಾಲೆಗೆ ಕಳುಹಿಸಕೂಡದು…”

ಹೀಗೆ ಶಾಲೆಯಿಂದ ಡ್ರಾಪ್ ಔಟ್ ಆದ ಥಾಮಸ್ ಆಲ್ವಾ ಎಡಿಸನ್ಗೆ ಮನೆಯೇ ಶಾಲೆ, ತಾಯಿಯೇ ಶಿಕ್ಷಕಿಯಾಗುತ್ತಾಳೆ. ಸಣ್ಣವಯಸ್ಸಿನಿಂದಲೂ ಪ್ರಯೋಗ ಮುಖಿಯಾದ ಎಡಿಸನ್ ಮನೆಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡು ನಿರಂತರ ಸಂಶೋಧನೆ ಮತ್ತು ಪ್ರಯೋಗಗಳ ಮೂಲಕ ಮಾನವ ಅದುವರೆಗೂ ಕಂಡು ಕೇಳರಿಯದ ಉಪಕರಣಗಳನ್ನು ತಯಾರಿಸಿ ಪ್ರಪಂಚದಲ್ಲೇ ಅತ್ಯುನ್ನತ ಸ್ಥಾನವನ್ನು ಗಿಟ್ಟಿಸಿಕೊಳ್ಳುತ್ತಾನೆ.

ಅದೆಷ್ಟೋ ವರ್ಷಗಳ ನಂತರ ಮನೆಯಲ್ಲಿ ಏನೋ ಹುಡುಕುವಾಗ ಅಂದು ತನ್ನನ್ನು‌ ಶಾಲೆಯಿಂದ ಹೊರಹಾಕಿದ ಪತ್ರ ಮತ್ತೆ ಸಿಗುತ್ತದೆ. ಕುತೂಹಲಕ್ಕೆಂದು ಅದನ್ನು ಓದಿದಾಗ ಅದರಲ್ಲಿ ” ನಿನ್ನ ಮಗ ಒಬ್ಬ ಬುದ್ಧಿಮಾಂದ್ಯ, ಯಾವುದೇ ಕಾರಣಕ್ಕೂ ಇನ್ನು ಮುಂದೆ ಅವನಿಗೆ ಈ ಶಾಲೆಯಲ್ಲಿ ಪ್ರವೇಶವಿಲ್ಲ….” ಎಂದು ಬರೆದಿದ್ದು, ತನ್ನ ಮಗನ ಮನಸ್ಸಿಗೆ ನೋವಾಗಬಾರದೆಂದು ಆ ತಾಯಿ ಅಂದು ಹಾಗೇ ಓದಿರುತ್ತಾಳೆ. ಅದನ್ನು ನೆನೆದ ಎಡಿಸನ್ ಬಿಕ್ಕಿಬಿಕ್ಕಿ ಅಳುತ್ತಾನೆ ಮತ್ತು ತನ್ನ ದಿನಚರಿಯಲ್ಲಿ ಹೀಗೆ ಬರೆಯುತ್ತಾನೆ.

“ಥಾಮಸ್ ಆಲ್ವಾ ಎಡಿಸನ್ ಒಬ್ಬ ಬುದ್ಧಿಮಾಂದ್ಯ ಮಗು, ಆದರೆ ಅವನ ಶ್ರೇಷ್ಠ ಮಾತೆಯ ದೆಸೆಯಿಂದ ಅವನು ಶತಮಾನದ ಬುದ್ಧಿವಂತನಾಗುತ್ತಾನೆ.”

ಇದರ ಅರ್ಥ ಯಾವಾಗ ಯಾರು ಏನಾಗುತ್ತಾರೋ ಗೊತ್ತಾಗುವುದಿಲ್ಲ. ಒಬ್ಬ ಮನುಷ್ಯ ಯಾವುದೋ ಒಂದರಲ್ಲಿ ವೀಕ್ ಇದ್ದಾನೆ ಎಂದರೆ ಅವನನ್ನು ನಿಂದಿಸಿ ಮಾನಸಿಕವಾಗಿ ಕುಗ್ಗಿಸದೇ ಧೈರ್ಯ ಆತ್ಮವಿಶ್ವಾಸ ತುಂಬಿ ಮೇಲೇಳುವಂತೆ ಮಾಡಬೇಕು.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು