Sunday, August 6, 2023

 ಗುರುವೇ ಮೇಲು

ಹತ್ತೊಂಭತ್ತನೆಯ ಶತಮಾನದ ಕಥೆ. ಕೇರಳದ ತಿರುವಾಂಕೂರಿನ ದೊರೆ ಒಂದು ಸಲ ಆನೆಯ ಮೇಲೇರಿಕೊಂಡು ವಿಹಾರಕ್ಕೆ ಹೊರಟಿದ್ದ. ದಾರಿಯಲ್ಲಿ ಒಂದು ಮರದ ನೆರಳಿನಲ್ಲಿ ಪಾಠಶಾಲೆಯೊಂದು ನಡೆದಿತ್ತು. ಅಲ್ಲಿ ಗುರುಗಳೊಬ್ಬರು ಅನೇಕ ಮಂದಿ ಮಕ್ಕಳಿಗೆ ವಿದ್ಯೆ ಕಲಿಸುತ್ತ ಇದ್ದರು. ಮಕ್ಕಳು ಸನಿಹದಲ್ಲೇ ದೊರೆ ಬರುವುದನ್ನು ಕಂಡರು. ಅವರು 'ಆನೆ, ಆನೆ' ಎಂದು ಕುಣಿದಾಡತೊಡಗಿದರು. ಆದರೆ ಗುರುಗಳು, 'ಪಾಠದ ಮೇಲೆ ಗಮನ ಹರಿಸಿ. ಪಾಠ ಮುಗಿಯುವ ಮೊದಲು ಯಾರೂ ಅತ್ತ ಕಡೆ ನೋಡಬಾರದು' ಎಂದು ಗದರಿಸಿದರು.

ದೊರೆ ಪಾಠ ನಡೆಯುವ ಸ್ಥಳಕ್ಕೆ ಬಂದು ಆನೆಯಿಂದ ಕೆಳಗಿಳಿದ. ಗುರುಗಳು ಓಡೋಡಿ ಬಂದು ತನ್ನನ್ನು ಸ್ವಾಗತಿಸುತ್ತಾರೆಂದು ಅವನು ಭಾವಿಸಿದ್ದರೆ ಆ ನಂಬಿಕೆ ಸುಳ್ಳಾಯಿತು. ಅವರು ತನ್ನ ಪಾಡಿಗೆ ಪಾಠ ಮಾಡುತ್ತಲೇ ಇದ್ದರು. ಆ ಕಡೆಗೆ ತಿರುಗಿಯೂ ನೋಡಲಿಲ್ಲ. ದೊರೆ ಸೇವಕನೊಬ್ಬನನ್ನು ಗುರುಗಳ ಬಳಿಗೆ ಕಳುಹಿಸಿ ದೊರೆಯ ಸವಾರಿ ಚಿತ್ತೈಸಿದೆ ಎಂಬ ಸುದ್ದಿ ಮುಟ್ಟಿಸಿದ. 'ನನಗೆ ಅರಿವಾಗಿದೆ. ಸ್ವಲ್ಪ ಹೊತ್ತಿನಲ್ಲಿ ಪಾಠ ಮುಗಿಯುತ್ತದೆ. ಆಮೇಲೆ ಅವರ ಸ್ವಾಗತಕ್ಕೆ ಬರುತ್ತೇನೆ' ಎಂದರು ಗುರುಗಳು.

ಅರ್ಧ ತಾಸಿನ ಬಳಿಕ ಗುರುಗಳು ದೊರೆಯ ಸನಿಹ ಬಂದು ಸಾಷ್ಟಾಂಗ ವಂದಿಸಿ ಸ್ವಾಗತ ಕೋರಿದರು. ದೊರೆಯ ಹುಬ್ಬು ಗಂಟಿಕ್ಕಿತು. ಕಣ್ಣುಗಳಲ್ಲಿ ಕೆಂಡದ ಮಳೆಯಿತ್ತು. 'ಏನು, ಸರಕಾರದ ಸಂಬಳದಿಂದ ಬದುಕುತ್ತಿರುವ ನಿಮಗೆ ಇಷ್ಟೊಂದು ಪೊಗರೆ? ನಾವು ಚಿತ್ತೈಸಿದ ಸಂಗತಿ ತಿಳಿದೂ ಅಲಕ್ಷಿಸಿದಿರಲ್ಲವೆ?' ಎಂದು ಕೇಳಿದ.


'ಮನ್ನಿಸಬೇಕು ದೊರೆಗಳೇ. ಸವಾರಿ ಚಿತ್ತೈಸಿದ ಅರಿವಾಗಿದೆ. ಆದರೆ ಅರ್ಧದಲ್ಲಿ ಪಾಠವನ್ನು ನಿಲ್ಲಿಸಿ ಎದ್ದು ಬರಲಿಲ್ಲ' ಎಂದರು ಗುರುಗಳು ವಿನಯದಿಂದ.


'ಯಾಕೆ ಬರಲಾಗಲಿಲ್ಲ? ದೊರೆಗೆ ಅವಮಾನಿಸಬೇಕೆಂಬುದು ನಿಮ್ಮ ಉದ್ದೇಶವಾಗಿತ್ತಲ್ಲವೆ?' ದೊರೆ ಗರ್ಜಿಸಿದ.


'ದೊರೆಗಳು ನನಗೆ ಅನ್ನ ಕೊಡುವ ಧಣಿ. ನನಗಿಂತ ಮೇಲಿನವರು. ತಂದೆಗೆ ಸಮಾನರಾದ ತಮ್ಮನ್ನು ಅವಮಾನಿಸುವುದೆ? ಆದರೆ...' ಗುರುಗಳು ಶಾಂತವಾಗಿ ಹೇಳಿದರು.

'ಆದರೆ? ಇನ್ನೇನು?' ದೊರೆ ಇನ್ನೂ ಕೋಪಗೊಂಡ.

'ನಾನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿದ್ಯೆ ನೀಡುವ ಗುರು, ದೇವರ ಸಮಾನ. ತಂದೆಗಿಂತ, ತಾಯಿಗಿಂತ, ಆಳುವ ದೊರೆಗಿಂತ ಬದುಕಿನಲ್ಲಿ ಬೆಳಕು ನೀಡುವ ಗುರುವೇ ಶ್ರೇಷ್ಠನೆಂಬ ಭಾವನೆ ಬಿಂಬಿಸಿದ್ದೆ. ತಾವು ಬಂದ ಕೂಡಲೇ ನಾನು ಎದ್ದು ಬಂದಿದ್ದರೆ ಮಕ್ಕಳ ಮನಸ್ಸಿನಲ್ಲಿರುವ ಆ ಭಾವನೆ ತೊಲಗುತ್ತಿತ್ತು. ಮುಂದೆ ವಿದ್ಯೆ ಕಲಿಯಲು ಅಗತ್ಯವಾದ ವಿಧೇಯತೆಯಾಗಲೀ ಗುರುವಿನಲ್ಲಿ ಪೂಜ್ಯತೆಯಾಗಲೀ ಅವರಲ್ಲಿಲ್ಲದೆ ವಿದ್ಯಾಭ್ಯಾಸಕ್ಕೆ ಧಕ್ಕೆಯಾಗುತ್ತಿತ್ತು. ನನ್ನ ಈ ಭಾವನೆ ತಪ್ಪೆನಿಸಿದರೆ ಮನಬಂದಂತೆ ನನಗೆ ಶಿಕ್ಷೆ ವಿಧಿಧಿಸಿ' ಎಂದು ಹೇಳಿದರು ಗುರುಗಳು.

ದೊರೆಯ ಕಣ್ಣು ಮಂಜಾಯಿತು. ಗುರುಗಳನ್ನು ಬಿಗಿದಪ್ಪಿಕೊಂಡ. 'ನಿಮ್ಮಂಥ ಆದರ್ಶ ಅಧ್ಯಾಪಕರಿದ್ದರೆ ದೇಶ ಸುಜ್ಞಾನದ ಹಾದಿಯಲ್ಲಿ ಖಂಡಿತ ಸಾಗುತ್ತದೆ. ಮಗುವನ್ನು ಮನುಷ್ಯನಾಗಿ ಮಾಡುವ ಅಧ್ಯಾಪಕ ದೊರೆಗಿಂತ, ದೇವರಿಗಿಂತ ಮೇಲು ಎಂಬುದು ನನಗಿಂದು ಅರಿವಾಯಿತು' ಎಂದು ಗುರುಗಳನ್ನು ಅಭಿನಂದಿಸಿದ. ಗುರುಗಳ ವಿನೀತ ಭಾವದೆದುರು ತಲೆಬಾಗಿದ. ಕೃಪೆ: ಸಣ್ಣ ಕಥೆ ವಾಟ್ಸ್ ಆಪ್ ಗ್ರೂಪ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು