Tuesday, August 22, 2023

Chandrayaan-3 
   (ನಮ್ಮ ISRO ನಮ್ಮ ಹೆಮ್ಮೆ)

   ಇಂದು ಅಗಸ್ಟ್ 23 ನಮ್ಮ ದೇಶದ ಇಸ್ರೋ ಸಂಸ್ಥೆ ಉಡಾವಣೆ ಮಾಡಿದ ಪ್ರಗ್ಯಾನ್ ಹಾಗೂ ರೋವರ್ ನೌಕೆಗಳ ಲ್ಯಾಂಡಿಂಗ್ ಆಗುವ ಮಹತ್ವದ ದಿನ.... 

ನಾವು ಜಾತ್ರೇಲಿ ಜಸ್ಟ್ ಹತ್ತು ರುಪಾಯಿ ಕೊಟ್ಟು ತಗೊಂಡ 🎈ಬಲೂನೊಂದನ್ನು ಮನೆಗೆ ತಗೊಂಡು ಹೋಗುವಾಗ್ಲೇ, ಎಲ್ಲಿ ನಡುದಾರೀಲೇ ಒಡೆದು ಹೋಗಿಬಿಡುತ್ತೋ ಅಂತೆಲ್ಲಾ ದಾರಿಯುದ್ದಕ್ಕೂ ಫುಲ್ ಟೆನ್ಷನ್ಆಗ್ತಿರುತ್ತೆ... ಅಂತಾದ್ರಲ್ಲಿ... ನೂರಾರು ವಿಜ್ಞಾನಿಗಳು ತಂತ್ರಜ್ಞರ ತಂಡವೊಂದು,ನಾಲ್ಕು ವರ್ಷಗಳ ಕಾಲ ನೀರು ನಿದ್ರೆಯಿಲ್ಲದೆ...ಒಂದಲ್ಲ ಎರಡಲ್ಲ ಒಟ್ಟು 615+ ಕೋಟಿ ರುಪಾಯಿಗಳನ್ನು ಖರ್ಚು ಮಾಡಿತಯಾರಿಸಿದ ನೌಕೆಯೊಂದನ್ನು, 🚀ಬರೋಬ್ಬರಿ 3.84 ಲಕ್ಷ ಕಿಮೀ ದೂರದ ಮಹಾಯಾತ್ರೆಯೊಂದಕ್ಕೆ ಕಳಿಸಿ,ಕಳೆದ ನಲವತ್ತು ದಿನದಿಂದ ಕಣ್ರೆಪ್ಪೆಯೂ ಮುಚ್ಚದೆ, ಯಾವುದೇ ಸಮಸ್ಯೆ ಆಗದಂತೆ ನೌಕೆಯು ತನ್ನ ಗಮ್ಯ ತಲುಪುವ ಕ್ಷಣಕ್ಕಾಗಿ ಕಾಯುತ್ತಾ ಕುಳಿತಿದ್ದಾರಲ್ಲ.ಅದಿನ್ಯಾವ ರೇಂಜಿನ ಒತ್ತಡ, ಕಾತರ, ಟೆನ್ಷನ್ನು, ಭಯ, ಆತಂಕಗಳೆಲ್ಲಾ ಅವರೊಳಗೆ ಇರಬಹುದು ಜಸ್ಟ್ ಇಮ್ಯಾಜಿನ್...

ಅದೂ ಅಲ್ಲದೆ...
ಎಲ್ಲವೂ ಅಂದುಕೊಂಡಂತೆಯೇ,
ಚಂದ್ರನ ಮೇಲೆ ಸೇಫಾಗಿ ಹೋಗಿ ಲ್ಯಾಂಡ್ ಆದ್ಮೇಲೂ ಕೂಡಾ,ಚಂದ್ರನ ನೆಲದಲ್ಲಿ ಸುತ್ತಾಡೋಕೆ ಸಿಗೋದಾದ್ರೂ ಎಷ್ಟು ಸಮಯ ಗೊತ್ತಾ?ಕೇವಲ ಚಂದ್ರನಲ್ಲಿನ ಒಂದು ಹಗಲು ಅಷ್ಟೇ.. ಒಂದು ಸಲ ಚಂದ್ರನಲ್ಲಿ ಸೂರ್ಯಾಸ್ತವಾಯ್ತೋ, 
ನಮ್ಮ ಪ್ರಗ್ಯಾನ್ ಹಾಗೂ ರೋವರ್ ನೌಕೆಗಳ ಆಟಗಳು ಮುಗಿದುಬಿಡುತ್ತವೆ.
ಯಾಕೆಂದರೆ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಉಷ್ಣಾಂಶ ಮೈನಸ್ -250 ರಿಂದ -300ರ ವರೆಗೂ ಹೋಗೋದ್ರಿಂದಾಗಿ ಈ ವಾತಾವರಣದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಸರ್ವೈವ್ ಆಗೋದೆಲ್ಲಾ ಸೀನೇ ಇಲ್ಲ.

ಖುಷಿಯ ವಿಚಾರ ಏನಂದ್ರೆ...
ಚಂದ್ರನ ಒಂದು ಹಗಲು ಭೂಮಿಯಲ್ಲಿನ 14 ದಿನಗಳು. ಹಾಗಾಗಿ ನಮಗೆ ಹದಿನಾಲ್ಕು ದಿನಗಳ ಕಾಲಾವಕಾಶವಿದೆ ಚಂದ್ರನಲ್ಲಿ ಹುಡುಕಾಟ ನಡೆಸೋಕೆ.
ಇಷ್ಟೊಂದೆಲ್ಲಾ ಖರ್ಚು ಮಾಡಿ,
ಒಂದ್ಸಲ ವಿಫಲವಾದ್ರೂ ಛಲ ಬಿಡದೆ ಪ್ರಯತ್ನ ಮಾಡಿ,ನಲವತ್ತು ದಿನದಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಲ್ಲವೂ ಒಳ್ಳೆಯದಾಗ್ಲಿ ಅಂತ  ಆಕಾಶ ನೋಡ್ತಾ ಕೂತಿದ್ದಾರೆ ಇಸ್ರೋ ವಿಜ್ಞಾನಿಗಳು.

ಇಂದು ಸಂಜೆ 5.20pm ನಿಂದ ನಮ್ಮ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋಕೆ ಶುರುಮಾಡಲಿದೆ
ಇಳಿಯುತ್ತಿದ್ದಂತೆಯೇ,ಜಗತ್ತಿನ ಭೂಪಟದಲ್ಲಿ ನಮ್ಮ ಭಾರತ ಐತಿಹಾಸಿಕ ದಾಖಲೆಯೊಂದನ್ನು ಬರೆದು ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಜಗತ್ತಿನ ಮೊದಲ ದೇಶವಾಗಿ ಎದೆಯುಬ್ಬಿಸಿ ನಿಲ್ಲಲಿದೆ...

ಪ್ರತಿಯೊಬ್ಬ ಭಾರತೀಯರ ಮನೆಯಲ್ಲೂ...ಇಂದಿನ ಪರೀಕ್ಷೆಯಲ್ಲಿ ಇಸ್ರೋ ಗೆದ್ದು ಬೀಗಲಿ ಅಂತ ಶುಭ ಹಾರೈಸೋಣ.
ಒಳ್ಳೇ ಮನಸ್ಸಿಂದ 
ಎಲ್ಲರೂ ಒಕ್ಕೊರಲಿನಿಂದ ಇಸ್ರೋ ಜೊತೆ ನಿಲ್ಲೋಣ.

ನೆನಪಿರಲಿ...
ಇಂದು  ಸಂಜೆ 5.20ಕ್ಕೆ ಸಮಯವೂ ಈ ದೃಶ್ಯವೈಭವವನ್ನು ಕಣ್ಣುತುಂಬೋಕೇ ರಿಸರ್ವ್ ಆಗಿರಲಿ.

               ನಮ್ಮ ದೇಶ
ನಮ್ಮISRO ನಮ್ಮಹೆಮ್ಮೆ.❤
ಒಳಿತಿಗಾಗಿ ಪ್ರಾರ್ಥಿಸೋಣ 🙏

🇮🇳 ಜೈ ಹಿಂದ್ 🇮🇳



ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು