ಚಂದ್ರಯಾನ - 3 ಗ್ರಾಂಡ್ ಸಕ್ಸಸ್, ಬಾಹ್ಯಾಕಾಶ ಕ್ಷೇತ್ರದ ಎಲೈಟ್ ಕ್ಲಬ್‌ಗೆ ಭಾರತ
Chandrayaan 3 : ಚಂದ್ರನ ಮೇಲೆ ಇಳಿದ ಭಾರತ ; 4 ದೇಶಗಳ ಅಗ್ರ ಸ್ಪೇಸ್ ಕ್ಲಬ್‌ಗೆ ISRO ಗ್ರಾಂಡ್ ಎಂಟ್ರಿ!
ಬುಧವಾರ ಸಂಜೆ 6.04 ನಿಮಿಷಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ತುದಿಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ 140 ಕೋಟಿ ಭಾರತೀಯರ ಕನಸನ್ನು ನನಸು ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದ ಟಾಪ್ - 4 ದೇಶಗಳ ಪಟ್ಟಿಗೆ ಭಾರತ ಗ್ರಾಂಡ್ ಎಂಟ್ರಿ ನೀಡಿದೆ. ಇದುವರೆಗೂ ಯಾವುದೇ ದೇಶ ಸ್ಪರ್ಶಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ತನ್ನ ನೌಕೆಯನ್ನು ಇಳಿಸಿರುವ ಇಸ್ರೋ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ಸಾರಿ ಸಾರಿ ಹೇಳಿದೆ.
ಚಂದ್ರಯಾನ - 3 ಗ್ರಾಂಡ್ ಸಕ್ಸಸ್, ಬಾಹ್ಯಾಕಾಶ ಕ್ಷೇತ್ರದ ಎಲೈಟ್ ಕ್ಲಬ್‌ಗೆ ಭಾರತ
ಕೇವಲ ಎರಡೇ ಪ್ರಯತ್ನದಲ್ಲಿ ಚಂದ್ರನ ದಕ್ಷಿಣ ತುದಿಯಲ್ಲಿ ನೌಕೆ ಇಳಿಸಿದ ಇಸ್ರೋ
ರಷ್ಯಾ, ಅಮೆರಿಕ, ಚೀನಾ ಬಳಿಕ ಚಂದ್ರನ ಮೇಲೆ ಭಾರತದ ವಿಕ್ರಮ್ ನೌಕೆ ಭಾರತದ ಮಹತ್ವಾಕಾಂಕ್ಷೆ ಬಾಹ್ಯಾಕಾಶ ಯೋಜನೆ ಚಂದ್ರಯಾನ - 3 ಯಶಸ್ವಿಯಾಗಿದ್ದು, ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಬುಧವಾರ ಯಶಸ್ವಿಯಾಗಿ ಇಳಿದಿದೆ. ಅದರಲ್ಲೂ ಯಾವುದೇ ದೇಶ ಇದುವರೆಗೂ ಸ್ಪರ್ಶಿಸದ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸುವ ಮೂಲಕ ಇಸ್ರೋ ತ್ರಿವಿಕ್ರಮ ಸಾಧನೆ ಮಾಡಿದೆ. ಈ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಸೂಪರ್ ಪವರ್ ರಾಷ್ಟ್ರವಾಗಿ ಹೊರಹೊಮ್ಮಿದೆ.
ಚಂದ್ರನ ಮೇಲೆ ಇದುವರೆಗೂ ರಷ್ಯಾ, ಅಮೆರಿಕ ಮತ್ತು ಚೀನಾ ಮಾತ್ರ ತಮ್ಮ ನೌಕೆಗಳನ್ನು ಯಶಸ್ವಿಯಾಗಿ ಇಳಿಸಿದ್ದವು. ಈ ಮೂರು ದೇಶಗಳು ಹಲವು ಪ್ರಯತ್ನಗಳನ್ನು ನಡೆಸಿದ್ದರೆ, ಭಾರತ ಕೇವಲ ಮೂರೇ ಪ್ರಯತ್ನಗಳಲ್ಲಿ ಚಂದ್ರನ ಮೇಲೆ ನೌಕೆಯನ್ನು ಇಳಿಸುವ ಮೂಲಕ ವಿಶ್ವದ ಹುಬ್ಬೇರುವಂತೆ ಮಾಡಿದೆ. ಇನ್ನು, ಅನೇಕ ದೇಶಗಳು ಸತತ ಪ್ರಯತ್ನ ಮಾಡುತ್ತಿದ್ದರೂ ಚಂದ್ರನ ಮೇಲೆ ನೌಕೆಯನ್ನು ಇಳಿಸಲು ಸಾಧ್ಯವಾಗಿಲ್ಲ. ಬುಧವಾರ ಸಂಜೆ 6.04ಕ್ಕೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯುವ ಮೂಲಕ ಚಂದ್ರಯಾನ - 3 ಯೋಜನೆ ಸಕ್ಸಸ್ ಆಗಿದ್ದು, ವಿಕ್ರಮ್ ಲ್ಯಾಂಡರ್‌ನಲ್ಲಿರುವ ಪ್ರಜ್ಯಾನ್ ರೋವರ್ ಚಂದ್ರನ ಮೇಲೆ ಅಧ್ಯಯನ ನಡೆಸಲಿದೆ. ಮುಂದಿನ 14 ದಿನಗಳ ಕಾಲ ಪ್ರಜ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿ ವಿವಿಧ ಅಂಶಗಳನ್ನು ಅಧ್ಯಯನ ನಡೆಸಲಿದೆ. ಸೂರ್ಯನ ಬೆಳಕೇ ಕಾಣದ ಜಾಗದಲ್ಲಿ ಪ್ರಜ್ಯಾನ್ ರೋವರ್ ಸಂಚರಿಸಲಿದ್ದು, ಇಸ್ರೋ ಹಾಗೂ ನಾಲ್ಕು ಸಿಂಹಗಳ ಅಶೋಕ ಸ್ಥಂಭದ ಲಾಂಛನವನ್ನು ಚಂದ್ರನ ಮೇಲೆ ಮೂಡಿಸಲಿದೆ...
ಕೆಲವೇ ದಿನಗಳ ಹಿಂದೆ ಭಾರತಕ್ಕೂ ಮುನ್ನ ದಕ್ಷಿಣ ಧ್ರುವದಲ್ಲಿ ಇಳಿಯಲು ಹೋದ ರಷ್ಯಾದ ಲೂನಾ 25 ನೌಕೆ ಛಿದ್ರವಾಗಿದೆ. ಈಗ ಅದೇ ಜಾಗದಲ್ಲಿ ಭಾರತ ತನ್ನ ವಿಕ್ರಮ್ ಲ್ಯಾಂಡರ್ ನ್ನು ಯಶಸ್ವಿಯಾಗಿ ಇಳಿಸಿರುವುದು ಇಸ್ರೋದ ತಾಂತ್ರಿಕ ಹಾಗೂ ವೈಜ್ಞಾನಿಕ ನೈಪುಣ್ಯತೆಯನ್ನು ವಿಶ್ವಕ್ಕೆ ಸಾರಿದಂತಾಗಿದೆ..
2008ರ ಚಂದ್ರಯಾನ - 1 ಕೇವಲ ಆರ್ಬಿಟರ್ ಮಿಷನ್ ಆಗಿದ್ದು, ಶೇ.80ರಷ್ಟು ಗುರಿ ತಲುಪಿ ಯಶ ಕಂಡಿತ್ತು. 2019ರಲ್ಲಿ ಚಂದ್ರಯಾನ - 2 ಯೋಜನೆಯಲ್ಲಿ ಸಾಫ್ಟ್ ಲ್ಯಾಂಡಿಂಗ್ ವೇಳೆ ವಿಕ್ರಮ್ ಲ್ಯಾಂಡರ್ ಸಂಪರ್ಕ ಕಡಿತಗೊಂಡಿತ್ತು. ಆದರೂ ಯೋಜನೆ ಭಾಗಶಃ ಯಶಸ್ವಿಯಾಗಿತ್ತು. ಆದರೆ, ಈ ಬಾರಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಿದ್ದು, ಭಾರತ ಕೇವಲ ಮೂರೇ ಪ್ರಯತ್ನದಲ್ಲಿ ಅತ್ಯದ್ಭುತ ಸಾಧನೆ ಮಾಡಿದೆ.
ಪ್ರಗ್ಯಾನ್ ರೋವರ್‌ನ ಕೆಲಸ ಏನು?
ಚಂದ್ರನ ಮೇಲೆ ವಿಕ್ರಂ ಲ್ಯಾಂಡರ್ ಇಳಿದ ಮೇಲೆ ಪ್ರಗ್ಯಾನ್ ರೋವರ್ ಹೊರಗೆ ಬರಲಿದೆ. ಇದರ ಜೀವಿತಾವಧಿ 14 ದಿನ ಮಾತ್ರ. ಈ ರೋವರ್ ಒಳಗೆ ಲೇಸರ್ ಸ್ಪೆಕ್ಟ್ರೋ ಮೀಟರ್ ಇರುತ್ತೆ. ಈ ಉಪಕರಣವು ಚಂದ್ರನ ಮೇಲೆ ಇರುವ ಖನಿಜಗಳು ಮತ್ತು ರಾಸಾಯನಿಕ ವಸ್ತುಗಳ ಸಂಯೋಜನೆಗಳನ್ನು ಅಧ್ಯಯನ ಮಾಡಲಿದೆ. ಈ ಮೂಲಕ ಚಂದ್ರನ ಮೇಲ್ಮೈ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಅನುಕೂಲ ಆಗಲಿದೆ. ಇನ್ನು ಈ ರೋವರ್‌ನಲ್ಲಿ ಎಕ್ಸ್ ರೇ ಸ್ಪೆಕ್ಟ್ರೋ ಮೀಟರ್ ಕೂಡಾ ಇದೆ. ಈ ಉಪಕರಣವು ಚಂದ್ರನಲ್ಲಿ ಇರುವ ಕಲ್ಲು ಮತ್ತು ಮಣ್ಣಿನಲ್ಲಿ ಇರುವ ಮೆಗ್ನೀಶಿಯಂ, ಅಲ್ಯುಮಿನಿಯಂ, ಸಿಲಿಕಾನ್, ಕಬ್ಭಿಣ ಸೇರಿದಂತೆ ಹಲವು ಖನಿಜಗಳ ಕುರಿತಾಗಿ, ಲೋಹಗಳ ಕುರಿತಾಗಿ ಮಾಹಿತಿ ಸಂಗ್ರಹ ಮಾಡಲಿದೆ
ಚಂದ್ರಯಾನ ಯೋಜನೆಯಿಂದ ದೇಶಕ್ಕೇನು ಲಾಭ?
630 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಸಿದ್ದವಾಗಿದೆ. ಚಂದ್ರಯಾನ 3 ಯೋಜನೆ ಯಶಸ್ವಿಯಾದರೆ ಚಂದ್ರನ ಮೇಲೆ ನೌಕೆ ಇಳಿಸಿದ 4ನೇ ದೇಶ ಅನ್ನೋ ಹೆಗ್ಗಳಿಕೆ ಭಾರತಕ್ಕೆ ಸಿಗಲಿದೆ. ಇವರೆಗೆ ಅಮೆರಿಕ, ರಷ್ಯಾ ಹಾಗೂ ಚೀನಾ ದೇಶಗಳು ಮಾತ್ರ ಚಂದ್ರನ ಮೇಲೆ ನೌಕೆ ಇಳಿಸಿವೆ. ಇನ್ನು ಈ ಯೋಜನೆ ಯಶಸ್ವಿಯಾದರೆ, ಭಾರತದ ಆಂತರಿಕ್ಷ ವಿಜ್ಞಾನ ವಲಯಕ್ಕೆ ಬೂಸ್ಟ್ ಸಿಗುತ್ತದೆ. ಉಪಗ್ರಹ ಉಡಾವಣೆ ಸೇರಿದಂತೆ ಹಲವು ವಿಚಾರಗಳಿಗೆ ವಿಶ್ವದ ಹಲವು ರಾಷ್ಟ್ರಗಳು ಭಾರತವನ್ನೇ ಅವಲಂಬಿಸಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಹೂಡಿಕೆ ಇನ್ನಷ್ಟು ಹೆಚ್ಚಾಗಲಿದೆ. ಎಲ್ಲಕ್ಕಿಂತಾ ಮುಖ್ಯವಾಗಿ ಇಸ್ರೋ ಮೇಲಿನ ನಂಬಿಕೆ ಇನ್ನಷ್ಟು ಹೆಚ್ಚಾಗಲಿದೆ...
ನಮ್ಮ ದೇಶ ನಮ್ಮ ISRO..
ನಮ್ಮ ಹೆಮ್ಮೆ
ಜೈಹಿಂದ...