ನಿನ್ನೆ ನಿನ್ನೆಗೆ ನಾಳೆ ನಾಳೆಗೆ…
ಮನುಷ್ಯ ತನ್ನ ಆಲೋಚನೆಗಳನ್ನು ಸಕರಾತ್ಮಕವಾಗಿಟ್ಟುಕೊಂಡರೆ ಖಂಡಿತಾ ಗೆದ್ದೇ ಗೆಲ್ಲುತ್ತಾನೆ. ‘ಅನ್ಯರ ಅನುಚಿತ ನಿಂದನೆಯನ್ನು ವರ್ತನೆಯನ್ನು ಸಹಿಸುವ ವ್ಯಕ್ತಿ ಜಗತ್ತನ್ನು ಗೆಲ್ಲಬಲ್ಲ’ ಎನ್ನುವ ಅನುಭವದ ಮಾತಿದೆ.
ಮನುಷ್ಯ ತನ್ನ ಜೀವನದಲ್ಲಿ ಸಂತಸ ಹಾಗೂ ನೆಮ್ಮದಿಯಿಂದಿರಲು ಬಯಸುತ್ತಾನೆ. ನೈಜವಾದ ಸಂತೋಷದ ಸರಿಯಾಗಿ ಗುರುತಿಸಲಾಗದೇ ಚಡಪಡಿಸುತ್ತಾನೆ. ಬಾಹ್ಯ ವಸ್ತು, ವಿಷಯಗಳು ಮಾತ್ರವೇ ಸಂತಸದ ಮಾರ್ಗಗಳೆಂದು ತಿಳಿದು ಜೀವಿಸುತ್ತಿರುವಾಗ, ಮತ್ತೆ ಏನೋ ಕೊರತೆ ಅವನಿಗೆ ಅನುಭವಕ್ಕೆ ಬರುತ್ತದೆ. ನೆಮ್ಮದಿಯ, ಸಂತೋಷದ ಮೂಲವನ್ನು ಸರಿಯಾಗಿ ಅರಿಯದಿರುವುದೇ ಇದಕ್ಕೆ ಕಾರಣ. ಅದು ಅಂತರಂಗದಿಂದ ಬರುವ ‘ಅದ್ಭುತವಾದ ಸಿರಿ’ ಎಂದು ತಡವಾಗಿ ಅರ್ಥವಾಗುತ್ತದೆ.
“ *The way is to happy is make others happy* " ಎನ್ನುವ ವಾಣಿ ನಮಗೆ ಮಾರ್ಗದರ್ಶಕ. ಇತರ ಜೀವಿಗಳೆಡೆಗೆ ಅನುಕಂಪ, ವಿಶಾಲ ರೂಢಿಸಿಕೊಂಡು, ದೈಹಿಕ ಮತ್ತು ಮಾನಸಿಕ ದೃಢತೆಯಿಂದ ಜೀವನವನ್ನು ಉದಾತ್ತಗೊಳಿಸಬೇಕು. ನಗುವನ್ನು ಸೂಸುತ್ತಾ ಪರೋಪಕಾರಗುಣ, ಸಹಕಾರ ಮನೋಭಾವ ಇವುಗಳನ್ನು ಮೈಗೂಡಿಸಿಕೊಂಡಲ್ಲಿ ಆಂತರಿಕ ಸಾಮರಸ್ಯವು ಕಂಡುಬರುತ್ತದೆ. ಇದರಿಂದ ದೇಹದ ಕೀಲುಗಳ ಬಿಗಿ ಕಣ್ಮರೆಯಾಗಿ, ಜೀರ್ಣರಸಗಳ ಉತ್ಪಾದನೆ ಹೆಚ್ಚಿ, ಚಲನವಲನಗಳಲ್ಲಿ ಹೊಸತನ ಮೂಡುತ್ತದೆ. ಮನುಷ್ಯ ದೈಹಿಕ ಮತ್ತು ಮಾನಸಿಕವಾಗಿ ಗಟ್ಟಿಯಾಗಿ ಎಂತಹ ಕಠಿಣ ಪರಿಸ್ಥಿತಿಯಿಂದ ಪಾರಾಗಿ ಯಶಸ್ಸು ಸಾಧಿಸುತ್ತಾನೆ.
ಮೇರಿ ಎಡ್ಡಿ ಬೇಕರ್ ಎನ್ನುವ ಅಮೇರಿಕಾದ ಮಹಿಳೆಯೊಬ್ಬಳು ತನ್ನ ಗಂಡನನ್ನು ಅಪಘಾತದಲ್ಲಿ ಕಳೆದುಕೊಂಡಳು. ಆಕೆ ಒಂದು ಮಗುವಿನ ತಾಯಿ. ಒಂದೆಡೆ ತೀವ್ರ ಬಡತನ. ಹಾಗೆಯೇ ಜೀವನ ದೂಡುತ್ತಿರುವಾಗ ದಾರಿಯಲ್ಲೊಮ್ಮೆ ಬಿದ್ದು ಬೆನ್ನು ಮೂಳೆ ಮುರಿದು ಆಸ್ಪತ್ರೆ ಸೇರು ತ್ತಾಳೆ. ತನ್ನ ಮಗು ಚೆನ್ನಾಗಿರಲೆಂದು ಅನಿವಾರ್ಯವಾಗಿ ಬೇರೆಯವರಿಗೆ ದತ್ತು ನೀಡು ತ್ತಾಳೆ. ನಂತರ ಆ ನೋವನ್ನು ಮರೆಯಲಾಗದೇ ನಿತ್ರಾಣಳಾಗುತ್ತಾಳೆ.
ವೈದ್ಯರು ಇವಳನ್ನು ಪರೀಕ್ಷಿಸಿ ಈಕೆ ಬದುಕಲಾರಳೆಂದು, ಬದುಕಿದರೂ ನಡೆಯಲಾರಳೆಂದು ಘೋಷಿಸಿಬಿಡುತ್ತಾರೆ. ಸೋಲುಗಳ, ನೋವುಗಳ ಸರಮಾಲೆಗಳಿಂದ ನೊಂದ ಆಕೆ ಒಂದು ಅದ್ಭುತ ವಾಕ್ಯದಿಂದ ಉತ್ತೇಜನಗೊಳ್ಳುತ್ತಾಳೆ. ಅದೇ..
*ಮಾನಸಿಕ ಸ್ಥಿರತೆಯಿದ್ದು, ದೃಢ ಸಂಕಲ್ಪವಿದ್ದರೆ ಪವಾಡ ಸದೃಶವಾದ ಘಟನೆಗಳು ನಡೆದೇ ತೀರುತ್ತವೆ* ಎಂಬ ಮಾತನ್ನು ಓದಿ ಅವಳು ಕೂಡ ಗಟ್ಟಿ ಮನಸ್ಸಿನಲ್ಲಿ ಸಂಕಲ್ಪ ಮಾಡುತ್ತಾಳೆ. ಅವಳ ಮೈಮನದಲ್ಲಿ ಮಿಂಚಿನ ಸಂಚಾರವಾಗಿ ದಿನೇ ದಿನೇ ಚೇತರಿಸಿಕೊಂಡು ಆರೋಗ್ಯ ವಂತಳಾಗಿ ಬಿಡುತ್ತಾಳೆ. ಇದರಿಂದ ಪ್ರೇರಣೆಗೊಂಡ ಆಕೆ ಮುಂದೆ ‘ಕ್ರಿಶ್ಚಿಯನ್ ಸೈನ್ಸ್’ ಎಂಬ ಸಂಸ್ಥೆ ಸ್ಥಾಪಿಸಿ ತನ್ನಂತೆ ನೊಂದ ಮಹಿಳೆಯರಿಗೆ ಧೈರ್ಯ ತುಂಬಿ ವಿಶ್ವ ವಿಖ್ಯಾತಳಾಗಿ, ಆರ್ಥಿಕವಾಗಿಯೂ ಸಮೃದ್ಧಳಾಗುತ್ತಾಳೆ.
ಮನುಷ್ಯ ಆಲೋಚನೆಗಳನ್ನು ಸಕರಾತ್ಮಕವಾಗಿಸಿಕೊಂಡರೆ ಖಂಡಿತಾ ಗೆದ್ದೇ ಗೆಲ್ಲುತ್ತಾನೆ. ‘ಅನ್ಯರ ಅನುಚಿತ ನಿಂದನೆಯನ್ನು ವರ್ತನೆಯನ್ನು ಸೈರಿಸುವ ವ್ಯಕ್ತಿ ಜಗತ್ತನ್ನು ಗೆಲ್ಲಬಲ್ಲ’ ಎನ್ನುವ ಮಾತಿದೆ. ಸುತ್ತಮುತ್ತ ನಡೆದ ಘಟನೆಗಳನ್ನು ಅರ್ಥೈಸಿಕೊಂಡು ಮುನ್ನಡೆಯಬೇಕು.
ಸತತವಾದ ಪ್ರಯತ್ನಗಳಿಂದ ಮನಸ್ಸನ್ನು ಹದಗೊಳಿಸಿದಾಗ ಅರ್ಥಪೂರ್ಣ ಜೀವನ ನಡೆಸಬಹುದು. ‘ಮೋಡ ತೇಲಿ ಬಂದಾಗ ಆ ಸೂರ್ಯನೇ ಕ್ಷಣಕಾಲ ಮರೆಯಾಗುತ್ತಾನೆ.’ ಹಾಗೆಯೇ ಜೀವನದಲ್ಲಿ ಬರುವ ಸಮಸ್ಯೆಗಳು ತಾತ್ಕಾಲಿಕವಾಗಿ ಬಂದು ಹೋಗುತ್ತವೆ.
‘Fortune favours the bold’ ಎನ್ನುವಂತೆ ಧೈರ್ಯದಿಂದ ಮುನ್ನಡೆದರೆ ಆಶೀರ್ವಾದ ಇದೆ.
ದಿನ ನಿತ್ಯವೂ ಹಂತಹಂತವಾಗಿ ಮೇಲಿನ ವಿಷಯಗಳನ್ನೆಲ್ಲಾ ನಮ್ಮದಾಗಿ ಮಾಡಿಕೊಂಡರೆ ಮನಸ್ಸು ಪ್ರಸನ್ನ ವಾಗುತ್ತದೆ. ಯಾವುದೇ ಔಷಧಿ, ಟಾನಿಕ್ಕುಗಳಿಗಿಂತ ಇದು ಹೆಚ್ಚಿನ ಆರೋಗ್ಯ ನೀಡಿ ಜೀವನ ಮಧುರವಾಗುತ್ತದೆ.
ನಗುವೆಂಬ ಎಲೆ ಕಟ್ಟಲಾಗದ ಆಭರಣವನ್ನು ಧರಿಸಿ ‘ನಿನ್ನೆ ನಿನ್ನೆಗೆ ನಾಳೆ ನಾಳೆಗೆ, ಇಂದು ನಮ್ಮದೆ ಚಿಂತೆ ಏತಕೆ’ ಎಂಬ ಹಾಡನ್ನು ಗುನುಗುನಿಸಿ. ಆಗ ಇಂದಿನ ದಿನವೂ ಸುದಿನವಾಗಿ ಮಂಗಳಕರವಾಗುತ್ತದೆ.
ಕೃಪೆ :ದಿವ್ಯಾನಂದ ಮೂರ್ತಿ.