ಬೆಂಕಿಯಾಗಿ ಇರುವುದು ಮತ್ತು ನೀರಿನಂತಿರುವುದು ನಿಮ್ಮ ಆಯ್ಕೆ
ಒಂದು ಕಾರ್ಖಾನೆಯಲ್ಲಿ ಧಗಧಗಿಸಿ ಉರಿಯುತ್ತಿದ್ದ ಬೆಂಕಿಯನ್ನು ನಂದಿಸಲು ಫೈರ್ ಇಂಜಿನ್ ಬಂದಿತು, ಆಗ ಉರಿಯುತ್ತಿದ್ದ ಬೆಂಕಿ ಚಿಮ್ಮುವ ನೀರನ್ನು ಉದ್ದೇಶಿಸಿ ಕೇಳಿತು*.
*"ನೀನು ಎಷ್ಟೊಂದು ಮೃದು ಮತ್ತು ನಿನ್ನಲ್ಲಿಗೆ ಬಂದು ಮಕ್ಕಳಿಂದ ಹಿಡಿದು ಮುದುಕರವರೆಗೂ ಇಷ್ಟಪಟ್ಟು ಆಟವಾಡುತ್ತಾರೆ, ಆದರೆ ನನ್ನ ಬಳಿ ಯಾರೂ ಬಾರರು, ನನ್ನನ್ನು ಕಂಡೊಡನೆ ಎಲ್ಲರೂ ದಿಕ್ಕಾಪಾಲಾಗಿ ಓಡುತ್ತಾರೆ ಮತ್ತು ನನ್ನನ್ನು ಎಲ್ಲರೂ ಭಸ್ಮಾಸುರನೆಂದು ಬೈಯುತ್ತಾರೆ*.
*ನಿನ್ನಂತೆ ನನ್ನನ್ನೂ ಪ್ರೀತಿಸಲು ಈ ಜನಕ್ಕೆ ಸಾಧ್ಯವಿಲ್ಲವೇ?*" ಎಂದಾಗ
ಇದಕ್ಕೆ ಪ್ರತಿಯಾಗಿ ನೀರು ಹೇಳಿತು "
*ಹೇ ಕೆಂಪು ಜ್ವಾಲೆಯೇ ಮೊದಲಿಗೆ ನಿನ್ನನ್ನು ನೀನು ತಿಳಿದುಕೊಳ್ಳಲು ಪ್ರಯತ್ನಿಸುತ್ತಿರುವುದೇ ಬಲು ಶ್ರೇಷ್ಠವಾದ ವಿಚಾರ, ಆದರೂ ಕುತೂಹಲಕ್ಕಾಗಿ ಒಂದು ಪ್ರಶ್ನೆ ಕೇಳುತ್ತೇನೆ, ನೀನು ಒಂದು ಕಿಡಿಯಾಗಿ ಬಂದವನು ಅದು ಹೇಗೆ ಬೃಹತ್ ಸ್ವರೂಪವಾಗಿ ವ್ಯಾಪಿಸಿಬಿಡುವೆ?"*
ಈ ಮಾತನ್ನು ಕೇಳಿ ಬೆಂಕಿ ಹೆಮ್ಮೆಯಿಂದ ಹೇಳಿತು
*" ಅದೇ ನನ್ನಲ್ಲಿರುವ ಶಕ್ತಿ/ತಾಖತ್ತು" ಎಂದಿತು.* ಮುಂದುವರೆದು ನೀರು
*"ಮತ್ತೆ ದೇವಸ್ಥಾನದಲ್ಲಿ ಸಾಮಾನ್ಯ ಜ್ವಾಲೆಯಾಗಿ ಯಾಕಿರುತ್ತೀಯಾ, ಅಲ್ಲೂ ನಿನ್ನ ಶಕ್ತಿ ತೋರಬಹುದಲ್ಲ?"* ಎಂದಿತು.
ಅದಕ್ಕೆ ಬೆಂಕಿ "
*ದೇವರ ಎದುರು ನಾನು ಸಣ್ಣವನು, ತಲೆ ತಗ್ಗಿಸಿಯೇ ಇರಬೇಕು" ಎಂದುತ್ತರಿಸಿತು*. ಆಗ ನೀರು
*ನೋಡಿದೆಯಾ, ಉತ್ತರ ನಿನ್ನಲ್ಲಿಯೇ ಇಟ್ಟುಕೊಂಡು ಪರಿತಪಿಸುತ್ತಿರುವೆ, ನಿನ್ನ ಶಕ್ತಿ ಎಲ್ಲರಿಗೂ ತಿಳಿದ ವಿಚಾರವೆ, ಆದರೆ ಅದನ್ನ ಮತ್ತೆ ಮತ್ತೆ ಸಾಬೀತು ಪಡಿಸುವ ಅವಶ್ಯಕತೆ ನಿನಗೆ ಇರುವುದಿಲ್ಲ, ನೀನು ದೇವಸ್ಥಾನದಲ್ಲಿ ತಲೆ ತಗ್ಗಿಸಿ ನಿಂತಾಗ ದೇವರಿಗೆ ದೀಪವೂ, ಆರತಿಯೂ ಆಗುತ್ತೀಯಾ. ಆದ್ದರಿಂದ ಜನ ಅಲ್ಲಿ ನಿನ್ನನ್ನು ಮುಟ್ಟಿ ನಮಸ್ಕರಿಸುತ್ತಾರೆ*
ಮತ್ತು ಪೂಜಿಸುತ್ತಾರೆ.
*ನಮ್ಮಲ್ಲಿ ಎಷ್ಟೇ ಶಕ್ತಿ/ತಾಖತ್ತುಗಳಿದ್ದರೂ ನಾವು ಎಲ್ಲಿ ಸಾಮಾನ್ಯರಂತೆ ಇರುತ್ತೇವೊ ಅಲ್ಲಿ ನಮಗೆ ಸಕಲ ಮರ್ಯಾದೆಗಳೂ ಸ್ಥಾನ-ಮಾನಗಳು ಸಿಕ್ಕೇ ತೀರುತ್ತವೆ*.
*ನಮಗೆ ಶಕ್ತಿ ಇದೆ ಎಂದು ಬಲ ಪ್ರದರ್ಶನ ಮಾಡಲು ಹೋದರೆ ಜನ ಹೆದರಿಸಬಹುದೇ ವಿನಃ ನಮ್ಮ ಯೋಗ್ಯ ಸ್ಥಾನ-ಮಾನಗಳು ಕಳೆದುಕೊಳ್ಳುತ್ತೇವೆ. ಹೆದರಿಸಿ ಪಡೆಯುವ ಗೌರವವು ಗೌರವವೇ ಅಲ್ಲ*. *ಅಗತ್ಯಕ್ಕಿಂತ ಹೆಚ್ಚಾದರೆ ಅಮೃತವೂ ವಿಷವಾಗುವಾಗ ನಮ್ಮಲ್ಲಿನ ದ್ವೇಷ, ಅಸೂಯೆ, ಪ್ರತಿಷ್ಠೆಗಳೂ ನಮ್ಮ ಹಿರಿಮೆಯನ್ನ ಸ್ಥಾನ-ಮಾನಗಳನ್ನ ನಾಶ ಮಾಡುತ್ತವೆ." ಎಂದು ಹೇಳಿದಾಗ*
*ಬೆಂಕಿಯು ತನ್ನಲ್ಲಿನ ತಪ್ಪನ್ನು ಕಂಡುಕೊಂಡು ದೀಪವಾಗಿ ಇರಲು ಬಯಸುತ್ತದೆ*
ಗೆಳೆಯರೆ ಇಲ್ಲಿ ಬೆಂಕಿಯನ್ನು ಕೋಪಕ್ಕೂ ನೀರನ್ನು ತಾಳ್ಮೆಗೂ ಹೋಲಿಸಿ ನೋಡಿ, ತಾಳ್ಮೆಯ ತೂಕ ಅಗಾಧವಾದದ್ದು ಅಲ್ಲವೇ,
*ಇನ್ನು ಬೆಂಕಿಯಾಗಿ ಇರುವುದು ಮತ್ತು ನೀರಿನಂತಿರುವುದು ನಿಮ್ಮ ಆಯ್ಕೆಗೆ ಬಿಟ್ಟದ್ದು*.