Thursday, September 14, 2023

 ಅಗತ್ಯ ಸಮಯದಲ್ಲಿ ಮಾಡುವ ಸಣ್ಣ-ಪುಟ್ಟ ಸಹಾಯಗಳು ಪರಮ ಶ್ರೇಷ್ಠವಾಗುತ್ತವೆ



ತುಂಬು ಗರ್ಭಿಣಿಯೊಬ್ಬಳು ಹೆರಿಗೆ ನೋವಿಂದ ರಸ್ತೆಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿರುತ್ತಾಳೆ. ಕಾರಿನಲ್ಲಿ ಬಂದ ಯುವಕನೊಬ್ಬ ನೋಡಿಯೂ ನೋಡದಂತೆ ಕಾರನ್ನು ಮುಂದೆ ಚಲಾಯಿಸುತ್ತಾನೆ. ಅವನ ಕಾರಿನ ಹಿಂದೆ *ಮಾತೃ ದೇವೋಭವ* ಎಂದು ಬರೆದಿರುತ್ತದೆ.

ಮತ್ತೆ ಅದೇ ರಸ್ತೆಯಲ್ಲಿ ಆಟೋ ಒಂದು ಬರುತ್ತದೆ, ಸಹಾಯಕ್ಕಾಗಿ ಆ ಹೆಣ್ಣು ಮಗಳು ಅಂಗಲಾಚುತ್ತಾಳೆ. ಆಕೆಯೊಂದಿಗೆ ಯಾರೂ ಇಲ್ಲವೆಂದು ಗಮನಿಸಿ ನನಗ್ಯಾಕೀ ಉಸಾಬರಿ ಎಂಬಂತೆ ಆಟೋ ಡ್ರೈವರ್ ಹೊರಟು ಹೋಗುತ್ತಾನೆ. *ಗರ್ಭಿಣಿಯರಿಗೆ ಉಚಿತ ಸೇವೆ* ಆಟೋ ಹಿಂದೆ ಹೀಗೆಂದು ಬರೆದಿತ್ತು. ಹೀಗೇ ಹಲವರು ನೋಡಿಯೂ ನೋಡದಂತೆ ಹೊರಟು ಹೋಗುತ್ತಾರೆ. ಒಬ್ಬೊಬ್ಬರ ವಾಹನಗಳ ಹಿಂದೆಯೂ ದೊಡ್ಡ ದೊಡ್ಡ ಸಾಲುಗಳು, *ತಾಯಿಯೇ ದೇವರು*, *ತಾಯಿಗಿಂತ ದೇವರಿಲ್ಲ*, *ಹೆಣ್ಣನ್ನು ರಕ್ಷಿಸಿ;ಹೆಣ್ಣನ್ನು ಗೌರವಿಸಿ*, *ಹೆಣ್ಣೇ ಸಂಸಾರದ ಕಣ್ಣು*, ಇತ್ಯಾದಿ ಬೋಧನೆಗಳು.

ಸ್ವಲ್ಪ ಹೊತ್ತಿನ ನಂತರ ನಾಲ್ಕೈದು ಯುವಕರು ಬೈಕುಗಳಲ್ಲಿ ಗುಂಪಾಗಿ ಕೂಗಾಡುತ್ತಾ ಬರುತ್ತಾರೆ. ಆ ಗರ್ಭಿಣಿ ಹೆಣ್ಣು ಸಹಾಯಕ್ಕಾಗಿ ಒದ್ದಾಡುತ್ತಿರುವುದು ಕಂಡ ಯುವಕರು ಆಕೆಯನ್ನು ಹೇಗೋ ಆಸ್ಪತ್ರೆ ತಲುಪಿಸುತ್ತಾರೆ. ಆಗ ಆಕೆ ಆ ಯುವಕರಿಗೆ ಕೃತಜ್ಞತೆಯಿಂದ ಕೈ ಮುಗಿಯುತ್ತಾಳೆ. ತಮಾಷೆ ಅಂದ್ರೆ ಆ ಯುವಕರ ಬೈಕುಗಳ ಹಿಂದೆ *ಬ್ಯಾಡ್ ಬಾಯ್ಸ್* ಎಂದು ಬರೆದಿತ್ತು.

ಕಥೆಯ ನೀತಿ ಇಷ್ಟೇ ದೊಡ್ಡ ದೊಡ್ಡ ಮಾತುಗಳನ್ನಾಡುವುದರಿಂದ, ಬೋಧಿಸುವುದರಿಂದ ದೊಡ್ಡ ವ್ಯಕ್ತಿಗಳಾಗೋದಿಲ್ಲ, ಒಳ್ಳೊಳ್ಳೇ ಸಂದೇಶಗಳು ವಾಹನಗಳ ಮೇಲೆ ಬರೆಸಿದ ಮಾತ್ರಕ್ಕೆ ಒಳ್ಳೆಯವರಾಗಲ್ಲ. ಅವಶ್ಯಕತೆಯಿರುವವರಿಗೆ ಅಗತ್ಯ ಸಮಯದಲ್ಲಿ ಮಾಡುವ ಸಣ್ಣ-ಪುಟ್ಟ ಸಹಾಯಗಳು ಪರಮ ಶ್ರೇಷ್ಠವಾಗುತ್ತವೆ. ಕೃಪೆ ಅಂತರ್ಜಾಲ

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು