ದುರಾಸೆಯ ಫಲ
ಒಂದು ಊರಿನಲ್ಲಿ ಈರಣ್ಣನೆಂಬ ವ್ಯಕ್ತಿ ಇದ್ದ. ಅವನು ಮಹಾ ಜಿಪುಣನೆಂದು ಹೆಸರುವಾಸಿಯಾಗಿದ್ದ. ಯಾವುದೇ ಸಾಮಾನು ತರಲಿಕ್ಕೆ ಪೇಟೆಗೆ ಹೋದರೆ ಚೌಕಾಸಿ ಮಾಡದೆ ಕೊಳ್ಳುತ್ತಿರಲಿಲ್ಲ. ಒಮ್ಮೆ ಅವನ ತಾಯಿ 20 ರೂಪಾಯಿ ಕೊಟ್ಟು ತೆಂಗಿನಕಾಯಿ ತೆಗೆದುಕೊಂಡು ಬಾ ಎಂದು ಹೇಳಿದಳು. ಈರಣ್ಣ ಸಮೀಪದ ಅಂಗಡಿಗೆ ಹೋಗಿ, "ತೆಂಗಿನ ಕಾಯಿ ಹೇಗಪ್ಪಾ?" ಎಂದು ಕೇಳಿದ.
"20 ರೂಪಾಯಿಗೊಂದು ಸ್ವಾಮಿ" ಎಂದ ಆಗಂಡಿಯಾತ.
"20 ರೂಪಾಯಿ ತುಂಬಾ ಹೆಚ್ಚಾಯಿತು. 10 ರೂಪಾಯಿ ಮಾಡಿಕೊಡು" ಎಂದ ಈರಣ್ಣ.
"ಆಗಲ್ಲರಿ, ನಾವು ಪೇಟೆಯಿಂದ ತಂದು ಮಾರುತ್ತೇವೆ. ನಾವು ಕೊಳ್ಳುವ ಬೆಲೆಯೇ 15 ರೂಪಾಯಿ" ಎಂದ ಅಂಗಡಿಯವ.
"ಅಂದರೆ ಪೇಟೆಯಲ್ಲಿ 15 ರೂಪಾಯಿಗೆ ಒಂದು ತೆಂಗಿನ ಕಾಯಿ ಸಿಕ್ಕುತ್ತದೆಯೇ?" ಎಂದು ಕೇಳಿದ ಈರಣ್ಣ.
"ಇನ್ನೂ ಕಡಿಮೆ ಬೆಲೆಗೆ ಸಿಕ್ಕರೂ ಸಿಗಬಹುದು" ಎಂದ ಅಂಗಡಿಯವ.
"ಪೇಟೆಗೆ ಹೋಗಿ ಏಕೆ ತರಬಾರದು?" ಎಂದುಕೊಂಡ ಈರಣ್ಣ ಪೇಟೆಯ ದಾರಿ ಹಿಡಿದೆ ಬಿಟ್ಟ. ಪೇಟೆಯಲ್ಲಿಯ ಒಂದು ದೊಡ್ಡ ಅಂಗಡಿಯ ಮುಂದೆ ನಿಂತು "ತೆಂಗಿನಕಾಯಿ ಹೇಗೆ?" ಎಂದಾಗ "10 ರುಪಾಯಿಗೆ ಒಂದು" ಎಂದ ಅಂಗಡಿಯಾತ.
"10 ರೂಪಾಯಿ ತುಂಬಾ ಹೆಚ್ಚಾಯಿತು. 5 ರೂಪಾಯಿ ಕೊಡೋದಿಲ್ಲವೇ?" ಎಂದ ಈರಣ್ಣ.
"ಇಲ್ಲಾರಿ, ತೆಂಗಿನ ತೋಟದ ಮಾಲೀಕರಿಂದಲೇ ನಾವು 8 ರೂಪಾಯಿಗೆ ಕೊಳ್ಳುತ್ತೇವೆ. ನೀವು ತೋಟಕ್ಕೆ ಹೋದರೆ 8 ರೂಪಾಯಿಗೆ ಕಾಯಿ ಸಿಕ್ಕಿತು" ಎಂದ.
ಈರಣ್ಣ ತೆಂಗಿನ ತೋಟದತ್ತ ನಡೆದೇ ಬಿಟ್ಟ. ತೆಂಗಿನಕಾಯಿಯ ರಾಶಿಯ ಮುಂದೆ ನಿಂತಿದ್ದ ತೋಟದ ಮಾಲೀಕ ಈರಣ್ಣನನ್ನು ತೋಟಕ್ಕೆ ಸ್ವಾಗತಿಸಿದ.
"ತಿಂಗಿನಕಾಯಿ ಹೇಗೆ ಕೊಡುತ್ತೀರಾ? ಎಂದ ಈರಣ್ಣ.
8 ರೂಪಾಯಿಗೊಂದು" ಎಂದ ತೋಟದ ಯಜಮಾನ.
"ತುಂಬಾ ಹೆಚ್ಚಾಯಿತು. 5 ರೂಪಾಯಿಗೆ ಕೊಡಿ" ಎಂದ.
"ಮರದಿಂದ ಕಾಯಿ ಕೀಳುವ ಆಳಿಗೆ ನಾವು ಪ್ರತಿ ಕಾಯಿಗೆ 3ರೂ ಕೊಡುತ್ತೇವೆ. ಬೇಕಾದರೆ ನೀವೇ ಮರ ಹತ್ತಿ ಕಾಯಿ ಕಿತ್ತುಕೊಳ್ಳಿ. ಆಗ 5ರೂಪಾಯಿ ಕೊಡಿ" ಎಂದ ಯಜಮಾನ.
ಮರ ಹತ್ತಿದರೆ 3ರೂ ಉಳಿಯುತ್ತದೆಯೆಂದು ಯೋಚಿಸಿದ ಈರಣ್ಣ ಬಾವಿಯ ಕಡೆ ವಾಲಿ ನಿಂತಿದ್ದ ದೊಡ್ಡ ಮರವನ್ನು ಸರ ಸರ ಏರಿ ಒಂದು ಕಾಯಿ ಹರಿದು ಕೆಳಗೆ ಹಾಕಿದ. ಇನ್ನೇನು ಇಳಿಯಬೇಕೆನ್ನುವಷ್ಟರಲ್ಲಿ ಕಾಲು ಜಾರಿತು. ಆದರೆ ಕೈಯಿಂದ ತಿಂಗಿನ ಗರಿಯನ್ನು ಹಿಡಿದಿದ್ದರಿಂದ ಅದನ್ನು ಹಿಡಿದು
ಜೋಲಿ ಸಾಲದೆ ಕೆಳಗೆ ಬಿದ್ದು ಕಾಲು ಮುರಿದುಕೊಂಡ...
*ನೀತಿ :*
ದುರಾಸೆಯೇ ಜೀವಕ್ಕೆ ಅಪಾಯ