ಶೈಕ್ಷಣಿಕ ವರ್ಷದ ಮಧ್ಯೆ ದಸರಾ ರಜೆ ಬಂದೇ ಬಿಟ್ಟಿತು..
ಈ ಅವಧಿಯಲ್ಲಿ ಪಠ್ಯ ಬಿಟ್ಟು ಇನ್ನುಳಿದ ಚಟುವಟಿಕೆಗಳಲ್ಲಿ ಮಕ್ಕಳು ಉಲ್ಲಾಸದಿಂದ ತೊಡಗಿಸಿಕೂಳ್ಳುವರು.
ಸಾಮಾನ್ಯವಾಗಿ ಮಕ್ಕಳಿಗೆ ರಜೆ ಎಂದರೆ ಖುಷಿಯೋ ಖುಷಿ.
ಈ ಹಬ್ಬಗಳೊಂದಿಗೆ ರಜೆ ಬಂದರೆ ಖುಷಿಯ ಸಂಭ್ರಮ ಇನ್ನೂ ಹೆಚ್ಚು...
ಇಡೀ ದಿನ ಓದು, ಬರಹದ ಒತ್ತಡದಲ್ಲಿ ನಲುಗುವ ಮಕ್ಕಳಿಗೆ ರಜಾ ಕಾಲದ ಬಿಡುವು ಒಂದು ರೀತಿಯಲ್ಲಿ ಸ್ವಾತಂತ್ರ್ಯ ಸಿಕ್ಕ ಅನುಭವ.
ಪಠ್ಯದ ಗುಂಗಿನಲ್ಲಿಯೇ ಇರುತ್ತಿದ್ದವರು, ಸ್ವಲ್ವ ವಿಭಿನ್ನವಾಗಿ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಉತ್ತಮ ಅವಕಾಶ.
ಸಾಮಾನ್ಯವಾಗಿ ರಜೆ ಬಾಧವ್ಯ ಬೆಸುಗೆಯ ಕಾಲವದು. ಇಂದಿನ ತಾಂತ್ರಿಕ ಯುಗದಲ್ಲಿ ಕೆಲ ಮಕ್ಕಳಿಗೆ ತಮ್ಮ ಸಂಬಂಧಿಗಳ ಪರಿಚಯ, ಒಡನಾಟ ಎಲ್ಲವೂ ಮರೆಯಾಗುತ್ತಿದೆ. ರಜಾ ಕಾಲ ಇದನ್ನು ಕೆಲಮಟ್ಟಿಗೆ ದೂರವಾಗಿಸಿದೆ.
ಈ ಅವಧಿಯಲ್ಲಿ ಅನೇಕ ಮಕ್ಕಳು ಪರಸ್ಪರ ತಮ್ಮ ಸಂಬಂಧಿಗಳ ಮನೆಗೆ ತೆರಳುವರು. ಪ್ರಮುಖವಾಗಿ ಅಜ್ಜ ಅಜ್ಜಿಯರ ಮನೆಗೆ...
ಪ್ರೇಕ್ಷಣಿಯ ಸ್ಥಳಗಳ ಪ್ರವಾಸದ enjoy mood ನ್ನು ಪಡೆಯುವರು.
ರಜೆಯ ದಿನಗಳಲ್ಲೂ ಕೆಲ ಮಕ್ಕಳು ಭರತನಾಟ್ಯ, ಸಂಗೀತ, ಹಾಡು, ಪ್ರಬಂಧ, ಭಾಷಣ, ಚಿತ್ರಕಲಾ, ಕ್ರೀಡೆ, ಸಾಂಸ್ಕೃತಿಕ ವೈಜ್ಞಾನಿಕ ಚಟುವಟಿಕೆಗಳಲ್ಲಿ ಹೀಗೆ ವಿವಿಧ ಆಸಕ್ತಿ ಹೊಂದಿರುವ ರಂಗದಲ್ಲಿ ತೊಡಗಿಸಿಕೊಳ್ಳುವವರು ತಮ್ಮ ಪ್ರತಿಭೆ ಜ್ಞಾನ, ಕ್ರಿಯಾಶೀಲತೆ ಹೊಸ ಆವಿಸ್ಕಾರ,ಹೊಸ ಆಲೋಚನೆ ಹೆಚ್ಚಿಸಿಕೊಳ್ಳುವರು...
ಕೆಲವು ವಿದ್ಯಾರ್ಥಿಗಳು ರಜಾ ಅವಧಿಯನ್ನು ಕಂಪ್ಯೂಟರ್, ಇಂಟರ್‌ನೆಟ್, ಟಿವಿ ವೀಕ್ಷಣೆಗಷ್ಟೇ ಸೀಮಿತ ಮಾಡಿಕೊಳ್ಳುವರು.
ಕೆಲವು ವಿದ್ಯಾರ್ಥಿಗಳು ದೇಶಿ ಕ್ರೀಡೆ ಜೊತೆ ಕ್ರಿಕೆಟ್, ಬ್ಯಾಡ್ಮಿಂಟನ್, ಕೇರಂ, ಚೆಸ್ ಆಟಗಳಲ್ಲಿ ತೊಡಗಿಸಿಕೊಳ್ಳುವರು
ರಜಾ ಅವಧಿಯಲ್ಲಿ ಕೆಲವು ಮಕ್ಕಳು ಮಾತ್ರ ಶಾಲೆಯ ತಮ್ಮ ಪಠ್ಯ, ಪುಸ್ತಕ ಒಳಗೊಂಡ ಚೀಲದೊಂದಿಗೆ ನಂಟು ಹೊಂದಿರುತ್ತಾರೆ
ಇನ್ನು ಕೆಲವರು ಈ ಸಂದರ್ಭದಲ್ಲಿ ಇದರ ಉಸಾಬರಿಯೇ ಬೇಡವೆಂದು ಶಾಲೆ ಚೀಲ ಎಲ್ಲೋ ಇಟ್ಟು ಹಾಯಾಗಿರುವವರು ಇರುತ್ತಾರೆ. ಶಾಲೆ ಆರಂಭವಾಗುವ ವೇಳೆ ಶಾಲೆ ಚೀಲ ಎಲ್ಲಿದೆ ಎಂದು ಹುಡುಕುವವರು ಇರುತ್ತಾರೆ.
ಇನ್ನು ಕೆಲವರು ಮಳೆ ಲೆಕ್ಕಿಸದೇ ತೊಯ್ದು ತೊಪ್ಪೆಯಾಗುತ್ತಾ ಆಟ ಆಡಿ ಖುಷಿ ಪಡುವರು. ಕೆಲವರು ಮನೆಗಳಲ್ಲಿಯೇ ಕೇರಂ , ಚೆಸ್‌ಗಳನ್ನು ಆಡಿ, ಕಥೆ ಪುಸ್ತಕಗಳನ್ನು ಓದುತ್ತಾ ಸಂತಸದಿಂದ ಕಾಲ ಕಳೆವರು.
ದಸರಾ ರಜೆಯನ್ನು ಖುಷಿಯಿಂದ ಕಳೆಯಬೇಕು. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಮಯವನ್ನು ರಜಾ ಕಾಲದಲ್ಲಿ ವಿನಿಯೋಗ ಮಾಡಿಕೊಳ್ಳಬೇಕು.. ಸಂಬಂಧಿಗಳ ಮನೆಗಳಿಗೆ ಒಡಾಡುವ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು..
ಜೊತೆಗೆ ನಿಮ್ಮಲ್ಲಿರುವ ಆಸಕ್ತಿ ರಂಗದ ಪ್ರತಿಭೆಯನ್ನು ಗಟ್ಟಿಗೊಳಿಸಲು ನಿಮಗೆ ಸಿಕ್ಕ ಉತ್ತಮ ಸಮಯ ಎಂದು ಅಂದುಕೊಂಡು ಸದ್ಬಳಕೆ ಮಾಡಿಕೊಳ್ಳಬೇಕು...
ರಜೆ ಅವಧಿಯ ಸದ್ಬಳಕೆಗಾಗಿ ಕೆಲವು ಟಿಪ್ಸ್ ಗಳು
1.ನಿತ್ಯ ಓದಲು ಸ್ವಲ್ಪ ಸಮಯ ಮೀಸಲಿಡಿ
2. ದೇಹಕ್ಕೆ ವ್ಯಾಯಾಮ ನೀಡುವ ಆಟ ಆಡಿರಿ
3.ಹೊಸ ಭಾಷೆಯನ್ನು (Eng/Hin) ಮಾತನಾಡುವ ಪ್ರಯತ್ನ ಮಾಡಿರಿ
2.ಉತ್ತಮ ಹವ್ಯಾಸಗಳನ್ನು ರೂಡಿಸಿಕೊಳ್ಳಿ.. ಹೊಸ ಆಲೋಚನೆಗಳನ್ನು ಹೆಚ್ಚಿಸಿಕೊಳ್ಳಿ..
3.ವ್ಯಾಪಾರದ ಕೌಶಲ್ಯಗಳನ್ನು ಕಲಿಯಿರಿ
4.ಮಿದುಳಿಗೆ ವ್ಯಾಯಾಮ ನೀಡಿರಿ
5.ನೀತಿ ಕಥೆಗಳನ್ನು ಓದಿರಿ
6.ನಿಮ್ಮ ಆಸಕ್ತಿ ರಂಗದಲ್ಲಿ ತೊಡಗಿಸಿಕೊಳ್ಳಿ
7. ತಂದೆ ತಾಯಿಯರ ಕ್ಷೇತ್ರದಲ್ಲಿ/ ಕೆಲಸದಲ್ಲಿ ಸಹಾಯ ಮಾಡಿರಿ...
ಈ 17 ದಿನಗಳ ರಜೆ ನಿಮಗೆ ಸಜೆಯಾಗದೆ ಮಜಾ ನೀಡುವುದರ ಜೊತೆಗೆ ಅರ್ಥಪೂರ್ಣವಾಗಿ ಸದ್ಬಳಕೆ ಮಾಡಿಕೊಂಡು "Mind refresh" ಆಗಿ ಶಾಲೆಗೆ ಬರುವಂತಾಗಬೇಕು ಆಗ ರಜೆಯ ಉದ್ದೇಶ ಸಾರ್ಥಕವಾಗುತ್ತದೆ..
ಶ್ರೀ ಶಂಕರಗೌಡ ಬಸಾಪೂರ