ಇರುವ ಭಾಗ್ಯವ ನೆನೆದು..
ಭಿಕ್ಷುಕನೋರ್ವˌ ಒಂದು ಮನೆಗೆ ಯಾಚಿಸುತ್ತಾ ಹೋಗುತ್ತಾನೆ...
ಆತ ಆ ಮನೆಯನ್ನು ನೋಡುತ್ತಾನೆ ಅದು ಮನೆ ಅಲ್ಲˌ ಅರಮನೆ....!!!.
ನೋಡಿ ಮುಗಿಸಲು ಎರಡು ಕಣ್ಣು ಸಾಲದು......!!!
ಹೊರಗಡೆ ಐಶರಾಮಿ ಕಾರುಗಳು ಸಾಲುಗಟ್ಟಿ ನಿಂತಿವೆ....!!!
ಹೊರಾಂಗಣದಲ್ಲಿ ಅರಮನೆಯ ಒಡೆಯ ಕಪ್ಪು ಕೂಲಿಂಗ್ ಗ್ಲಾಸೊಂದನ್ನ ಹಾಕಿ ಐಶಾರಾಮಿ ಕುರ್ಚಿಯಲ್ಲಿ ಕುಳಿತಿದ್ದಾನೆ....
ಅವನ ಪಕ್ಕದಲ್ಲಿ ಸುಂದರಿಯಾದಂತಹ ಪತ್ನಿಯೂ ಇದ್ದಾಳೆ......
ತಂದೆ—ತಾಯಿಯ ಸೇವೆಗೆ ಸದಾ ಸಿಧ್ಢರಾಗೋ ಮಕ್ಕಳೂ ಇದ್ದಾರೆ.......
ಇದನ್ನೆಲ್ಲಾ ಗಮನಿಸಿದ ಭಿಕ್ಷುಕ ಹೇಳಿದˌ "ಓ ಯಜಮಾನರೇ.... ಓ ಯಜಮಾನರೇ...... ನೀವೆಷ್ಟು ಭಾಗ್ಯವಂತರುˌ ನಿಮಗೆ ಎಷ್ಟು ಅನುಗ್ರಹ ಇದೆ. ನಿಜಕ್ಕೂ ನೀವು ಭಾಗ್ಯವಂತ...
ನೀವು ಅರಮನೆ ಹೊಂದಿರುವಿರಲ್ಲವೇ..? ನನಗೆ ಒಂದಿಂಚು ಭೂಮಿಯೂ ಇಲ್ಲ.
ನೀವು ಐಶಾರಾಮಿ ಕಾರು ಹೊಂದಿರುವಿರಲ್ಲವೇ...?ನನಗೆ ಸರಿಯಾದ ಚಪ್ಪಲಿಯೂ ಇಲ್ಲ...
ನಿಮಗೆ ಸುಂದರಿಯಾದ ಪತ್ನಿಯೂ ಇದ್ದಾಳೆˌ ನನಗೆ ಯಾರು ಹೆಣ್ಣು ಕೊಡುವವರು, ಆದ್ದರಿಂದ ಮಕ್ಕಳೂ ಇಲ್ಲ.
ನಿಜಕ್ಕೂ ನೀವು ಭಾಗ್ಯವಂತರು...
ಇದನ್ನ ಕೇಳಿದ ಯಜಮಾನ ಭಿಕ್ಷುಕನೊಂದಿಗೆ ಹೇಳಿದ - *"ಹೌದು ನನಗೆ ನೀಡದಂತಹ ಒಂದು ದೊಡ್ಡ ಅನುಗ್ರಹ ನಿನಗೆ ಇದೆ"*
ಭಿಕ್ಷುಕ ಅಚ್ಚರಿಯೊಂದಿಗೆˌ ಅದೇನೆಂದು ಕೇಳುತ್ತಾನೆ.
ಯಜಮಾನˌ ತನ್ನ ಕನ್ನಡಕವನ್ನ ತೆಗೆದು ಹೇಳುತ್ತಾನೆˌ *" ನನಗೆ ಎರಡೂ ಕಣ್ಣಿಲ್ಲ ನಾನು ಕುರುಡ"...ˌ ನನ್ನ ಎಲ್ಲಾ ಅನುಗ್ರಹವನ್ನ ನಿನಗೆ ನೀಡುವೆ. ನಿನ್ನ ಎರಡೂ ಕಣ್ಣುಗಳನ್ನು ನನಗೆ ನೀಡುವೆಯಾ...?*
ಭಿಕ್ಷುಕ ಏನೂ ಮಾತನಾಡದೇ ಅಲ್ಲಿಂದ ಹೊರಬಂದ...
ಆ ಯಜಮಾನನಿಗೆ ನೀಡಿದಂತಹ ಅನುಗ್ರಹ ನನ್ನ ಎರಡು ಕಣ್ಣಿಗೆ ಸಮಾನವಲ್ಲ ಎಂಬ ವಾಸ್ತವವನ್ನು ಭಿಕ್ಷುಕ ಮನದಟ್ಟು ಮಾಡಿಕೊಂಡ...
*ಮನುಷ್ಯ ಎಲ್ಲದಕ್ಕೂ ಬೆಲೆಕಟ್ಟುತ್ತಾನೆ... ಆದರೆ ನಮಗೆ ಪುಕ್ಕಟೆಯಾದ ಎಂದೂ ಬೆಲೆಕಟ್ಟಲಾಗದ ನಮ್ಮ ದೇಹದ ಒಂದೊಂದು ಅಂಗಾಂಗದ ಬಗೆಗೆ ನಮಗೆ ಎಚ್ಚರವೇ ಇರೋಲ್ಲ...
KSRTC ಬಸ್ ಲ್ಲಿ ಬರೆದಿರುವ ಲೇಖನ ಎಷ್ಟು ಚಂದ...
*"ಇರುವ ಭಾಗ್ಯವ ನೆನೆದು ಬಾರೆನೆಂಬುವುದನು ಬಿಡು*