(ಕಥೆ-193) ಬನ್ನಿ ಮಕ್ಕಳೇ ಶಾಲೆಗೆ ರಜೆ ಮುಗಿದಿದೆ.
*ಬನ್ನಿ ಮಕ್ಕಳೇ, ರಜೆ ಮುಗಿಸಿ ಹಳೆಯ ನೆನಪುಗಳ ಜೊತೆಗೆ ಹೊಸ ಭರವಸೆಯೊಂದಿಗೆ ಶಾಲೆಗೆ ಬನ್ನಿ*
ರಜೆ ಮುಗಿಯಿತು ಅಂತೂ ಇಂತೂ ರೆಫ್ರೆಶ್ ಆಗಿರುವಿರಿ.
ಚೀಲ ಎಲ್ಲೋ ಇಟ್ಟು ಹಾಯಾಗಿರುವವರು ನಿಮ್ಮ ಚೀಲ ಎಲ್ಲಿದೆ ಎಂದು ಹುಡುಕಿಕೊಳ್ಳಿರಿ..
ಶಾಲೆ ಯುನಿಫಾರ್ಮ್ ತೆಗೆದಿಟ್ಟುಕೊಳ್ಳಿ.. ಪ್ರಾರಂಭದ ದಿನ ಬುಧವಾರವಾದ್ದರಿಂದ ಸಿವಿಲ್ ಡ್ರೆಸ್ ನಡೆಯುತ್ತದೆ..
ಹಾಗಂತ ಅಹಿತಕರ ಅಸಹ್ಯ ವಾಗುವಂತಹ ಡ್ರೆಸ್ ಹಾಕಿಕೊಂಡು ಬರಬೇಡಿ..
ಎಂದಿನಂತೆ ಹಾಜರಿ ಪಾಠ,ತರಗತಿಯಲ್ಲಿ ...
ಹುಡುಗರೇ,ಇಲ್ಲಿ ಕೇಳಿ ಆ ತಲೆಗೂದಲನ್ನು ಮೊದಲು ಸರಿಯಾಗಿ ಕತ್ತರಿಸಿಕೊಳ್ಳಿ ಮೂಡಿದ ಕಾಪಿ ಗೆರೆ, ವೆಜ್ ಕಟ್ ಹೆಬ್ಬುಲಿ ಕಟ್ ಗಳನ್ನೆಲ್ಲಾ ಅಳಿಸಿಕೊಳ್ಳಿ..ಟೀಚರ್ ಗಳೆಲ್ಲಾ ಹಸಿದ ಹೆಬ್ಬುಲಿಗಳಂತೆ ಕಾಯುತ್ತಿದ್ದಾರೆ ನೆನಪಿಟ್ಟುಕೊಳ್ಳಿ..!
ಅಂಟಿಕೊಂಡ ಮೇಲೇರಿಸಿದ ಪ್ಯಾಂಟನ್ನು ಲೈಟಾಗಿಯಾದರೂ ಸರಿಪಡಿಸಿಕೊಳ್ಳಿ
ಹುಡುಗಿಯರೇ,ನೀವೂ ಅಷ್ಟೇ ಎಷ್ಟು ಜಡೆ ಹಾಕಬೇಕೆಂದು
ಮತ್ತೆ ಮತ್ತೆ ಹೇಳಿಸಿಕೊಳ್ಳುವುದನ್ನು ಮಾಡಬೇಡಿ
ಹೊರಗಿನ ಬೋರ್ಡಲ್ಲಿ ದಿನದ ಚಿತ್ರ ಬರೆಯುವವರು
ಬೇಗ ಬಂದು ಬರೆಯಿರಿ.. ಉಳಿದ ವಿಷಯಗಳನ್ನು ಬರೆಯುವುದನ್ನು ಮರೆಯದಿರಿ..
ಪ್ರೇಯರ್ ನ ಕೋಗಿಲೆಗಳೇ ಹಳೆಯ ಲಯವನ್ನು ಕಂಡುಕೊಳ್ಳಲು ಮನೆಯಲ್ಲೇ ಟ್ರಯಲ್ ಮಾಡಿಕೊಳ್ಳಿ ನಾಡ ಹಬ್ಬ ಮುಗಿಯಿತು ರಾಷ್ಟ್ರ ಗೀತೆ ಮೊಳಗಲಿ..ಕೊಟ್ಟ ವಿಜ್ಞಾನ ಚಟುವಟಿಕೆ ವರ್ಕ್ ನೆಟ್ಟಗೆ ಮುಗಿಸಿದಿರಾ.. ಗಮನಿಸಿ..
ಅರ್ಧ ವರ್ಷ ಮುಗಿಯಿತು ಇನ್ನು ಮೇಲೆ ಹೆಚ್ಚು ಓದಿನ ಕಡೆ ಗಮನ ಕೊಡಬೇಕು....
ಸಂಬಂಧಿಗಳ ಪರಿಚಯ, ಒಡನಾಟದ ಸವಿನೆನಪೊಂದಿಗೆ..
ಪ್ರವಾಸದ enjoy mood ನೊಂದಿಗೆ.. ವಿವಿಧ ಆಸಕ್ತಿ ಹೊಂದಿರುವ ರಂಗದಲ್ಲಿ ತೊಡಗಿಸಿಕೊಂಡ ಖುಷಿಯೊಂದಿಗೆ... ಪಠ್ಯ..ಪುಸ್ತಕ.. ಒಳಗೊಂಡ ಚೀಲದ ನಂಟಿನೊಂದಿಗೆ..
Mind refresh" ಆಗಿ ಬನ್ನಿ ಮಕ್ಕಳೇ ಶಾಲೆಗೆ ಹಳೆಯ ಸವಿ ನೆನಪಿನೊಂದಿಗೆ
ನಮ್ಮ ಭವ್ಯ ಶಾಲಾ ಬಂಗಲೆ, ಆಟದ ಮೈದಾನ, ತೋಟ ನಮ್ಮ ಶಾಲಾ ಸಿಬ್ಬಂದಿ ನಿಮ್ಮ ಆಗಮನ ಬಯಸುತ್ತಿದೆ..
ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ ವರ್ಗ
ಸ.ಪ.ಪೂ.ಕಾ (ಪ್ರೌಢಶಾಲಾ ವಿಭಾಗ) ಹಿರಿಮ್ಯಾಗೇರಿ..
ತಾ:ಯಲಬುರ್ಗಾ