ಕಥೆ-202 : ದೇಶದ ಮೊದಲ ಮಂಗಳಮುಖಿ ಜಡ್ಜ್
ಪಶ್ಚಿಮ ಬಂಗಾಳದಲ್ಲಿ ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಜನಿಸಿದ ಜೊಯೀತ ಮೊಂಡಲ್ ಅವರು ತಾರತಮ್ಯದಿಂದಾಗಿ ಸಾಕಷ್ಟು ನೋವನ್ನು ಅನುಭವಿಸಿದರು. ಹುಡುಗನಾಗಿ ಹುಟ್ಟಿ ಹುಡುಗಿಯಾಗಿ ಬದಲಾದ ಈಕೆ ತನ್ನ ಚಿಕ್ಕ ವಯಸಿನಲ್ಲಿ ಶಾಲೆಯಿಂದ ಹೊರಬಂದು ಬಸ್ ಸ್ಟಾಪ್ ನಲ್ಲಿ ನಿದ್ದೆ ಮಾಡುತ್ತಿದ್ದರು, ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಆದರೆ ಅವುಗಳನ್ನೆಲ್ಲಾ ಮೆಟ್ಟಿನಿಂತು ಇಂದು ದೇಶದ ಮೊದಲ ಮಂಗಳಮುಖಿ ಜಡ್ಜ್ ಆಗಿ ಹೊರಹೊಮ್ಮಿದ್ದಾರೆ..
ಜೋಯಿತಾ ಕೋಲ್ಕತಾದಲ್ಲಿ ಜನಿಸಿದರು. ಅವರಿಗೆ ಅವರ ಮೇಲೆ ಹೇರಿದ ಲಿಂಗ ರೂಢಿಗಳನ್ನು ಅನುಸರಿಸಲು ಸಾಧ್ಯವಾಗಲಿಲ್ಲ ಲಿಂಗ ಬದಲಾವಣೆಗೊಂಡ ಈಕೆಯನ್ನ ಸಮಾಜದಲ್ಲಿ ತಿರಸ್ಕಾರ ಮನೋಭಾವದಿಂದ ನೋಡುತ್ತಿದ್ದರಂತೆ. ಸ್ವತಃ ಇವರ ಮನೆಯವರೇ ಇವರನ್ನು 2009ರಲ್ಲಿ ಮನೆಯಿಂದ ಹೊರಹಾಕಿದ್ದರು. ಮನೆಯಿಂದ ಹೊರಬಂದ ಜೊಯೀತ ಬಾಂಗ್ಲಾದೇಶದ ಗಡಿಭಾಗವಾದ ಉತ್ತರ ದಿನಜ್ ಪುರ್ ಜಿಲ್ಲೆಯ ಇಸ್ಲಾಂಪುರ್ ನಲ್ಲಿ ನೆಲೆಸುತ್ತಾರೆ. ಅಲ್ಲಿ ಅವರಿಗೆ ಎದುರಾದ ನೋವು ಕಷ್ಟಗಳು ಅವರನ್ನು ಗಟ್ಟಿಗೊಳಿಸಿ ಅವರಲ್ಲಿ ಛಲವನ್ನು ತುಂಬುತ್ತದೆ..
ಅಲ್ಲಿಂದ ಏಳು ವರ್ಷಗಳವರೆಗೆ ಆ ಪ್ರದೇಶದಲ್ಲಿ ದಿನಜ್ ಪುರ್ ನೊಟುನ್ ಅಲೊ ಎಂಬ ಸಂಘಟನೆಯನ್ನು ಕಟ್ಟಿದರು.ಆ ಸಂಘಟನೆಯಲ್ಲಿ ಸುಮಾರು 2,200 ಮಂದಿ ತೃತೀಯಲಿಂಗಿಗಳಿದ್ದಾರೆ. ಅವರು ಖಾಸಗಿಯಾಗಿ ಓದಿಕೊಂಡು ತನ್ನ ಅಧ್ಯಯನಗಳನ್ನು ಪೂರ್ಣಗೊಳಿಸಿ ಕಾನೂನಿನಲ್ಲಿ ಪದವಿ ಪಡೆದರು.2010 ರಲ್ಲಿ, ಅವರು ಮತದಾರರ ID ಯನ್ನು ಪಡೆದುಕೊಳ್ಳಲು ತನ್ನ ಜಿಲ್ಲೆಯ ಮೊದಲ ತೃತೀಯ ಲಿಂಗಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಅವರೂ ಒಮ್ಮೆ ಹೋಟೆಲ್ ಗೆ ಹೋಗಿ ರೂಮ್ ಕೇಳಿದಾಗ ಹೋಟೆಲ್ ನಲ್ಲಿ ರೂಮ್ ಕೊಡದೆ ಅವರನ್ನು ಅವಮಾನ ಮಾಡಲಾಗಿತ್ತು
ಅನೇಕಷಸಾರಿ ಅವರು ರಾತ್ರಿ ಕಳೆಯಲು ಬಳಸಿದ ಬಸ್ ನಿಲ್ದಾಣ ಆವರ ನ್ಯಾಯಾಲಯದ ಕೆಲವೇ ಹೆಜ್ಜೆಗಳ ದೂರದಲ್ಲಿದೆ ಎಂದು ಅವರು ಹೇಳುತ್ತಾರೆ..ಕಳೆದ ಜುಲೈ 8ರಂದು ಇಸ್ಲಾಂಪುರ್ ನ ಲೋಕ ಅದಾಲತ್ ನ ನ್ಯಾಯಾಧೀಶೆಯಾಗಿ ಜೊಯಿತಾ ನೇಮಕಗೊಂಡಾಗ ತೃತೀಯಲಿಂಗಿಗಳ ಸಮುದಾಯದಲ್ಲಿ ನಿಜಕ್ಕೂ ಹರ್ಷದ ವಾತಾವರಣ ಕಂಡಿತು..
ಸಮಾಜದ ಅವಮಾನ ಎಲ್ಲರಿಗೂ ಸಹಜ, ಆದರೆ ತೃತೀಯ ಲಿಂಗಿಗಳನ್ನು ಸಮಾಜ ನೋಡುವ ದೃಷ್ಟಿಯೇ ಬೇರೆ. ಅವರಿಗಾಗುವ ಅವಮಾನ ಅಷ್ಟಿಷ್ಟಲ್ಲ. ಪ್ರೋತ್ಸಾಹ ನೀಡದ ಸ್ಥಿತಿ ಇದ್ದಾಗಲೂ ದಿಟ್ಟವಾಗಿ ಪ್ರಯತ್ನ ಮಾಡಿ ಅಧ್ಯಯನ ಮಾಡಿ, ಈ ದೇಶದ ಮೊದಲ ಮಂಗಳಮುಖಿ ಜಡ್ಜ್ ಆಗಿ ಹೊರಹೊಮ್ಮಿರುವುದು..ದೊಡ್ಡ ಸಾಧನೆ..
ನಮಗೆ ತಂದೆ ತಾಯಿಗಳ ಗುರುಗಳ ಹಿರಿಯರ ಪ್ರೋತ್ಸಾಹ ಇದ್ದರೂ ನಮ್ಮ ಪ್ರಯತ್ನ ಮಾತ್ರ ಕಡಿಮೆ.. ಛಲ ಬಿಡದೆ ನಾನು ಸಾಧಿಸಬೇಕೆಂದು ಹಠ ತೊಟ್ಟರೆ ಏನು ಬೇಕಾದರೂ ಸಾಧಿಸಬಹುದು...👍💐💐