ಸರ್ವೇ ಜನ ಸುಖಿನೋ ಭವಂತು
ಇಬ್ಬರು ವಯಸ್ಕರು ಹೊಲದ ಹತ್ತಿರ ನಿಂತು ಮಾತನಾಡುತ್ತಾ ಇರುತ್ತಾರೆ.
ಮೊದಲನೆಯವ :ನನಗೆ ಒಬ್ಬಳು ಮೊಮ್ಮಗಳಿದ್ದಾಳೆ B.E ಓದಿದ್ದಾಳೆ, ನೌಕರಿ ಮಾಡ್ತಾ ಇದ್ದಾಳೆ ನೋಡಲು ಸುಂದರವಾಗಿದ್ದಾಳೆ, ಯಾವುದಾದರೂ ಹುಡುಗ ಇದ್ದರೆ ಹೇಳಿ..
ಎರಡನೆಯವ : ನಿಮ್ಮ ಮೊಮ್ಮಗಳಿಗೆ ಯಾವ ರೀತಿಯ ಪರಿವಾರದ ಹುಡುಗ ಬೇಕು ?
ಮೊದಲನೆಯವ : ದೊಡ್ಡ ಪರಿವಾರವೇನು ಬೇಡಬಿಡಿ ಹುಡುಗ M.E /M.Tech ಓದಿರಬೇಕು, ಸ್ವಂತ ಮನೆ ಇರ್ಬೇಕು, ಕಾರು ಮತ್ತೆ ತೋಟ ಹಾಗೂ ಒಳ್ಳೆ ನೌಕರಿ ಇರಬೇಕು ಜೊತೆಗೆ ಒಳ್ಳೆ ಸಂಬಳ 1ಲಕ್ಷ ತನಕ ಇದ್ದರೆ ಸಾಕು.
ಎರಡನೆಯವ : ಮತ್ತೆನ್ನಾದ್ರೂ ? ? ?
ಮೊದಲೆಯವ : ಹಾ.... ಮತ್ತೊಂದು ವಿಷಯ ಹುಡುಗ ಒಬ್ಬನೇ ಇರಬೇಕು ಅಪ್ಪಾ, ಅಮ್ಮ, ಅಣ್ಣ, ತಮ್ಮ ತಂಗಿ ಇರಬಾರದು , ಅದು ಯಾಕೆಂದರೆ ಕುಟುಂಬದಲ್ಲಿ ಸುಮ್ನೆ ಜಗಳ ಆಗುತ್ತೆ ನೋಡಿ ಅದಕ್ಕೆ .
ಎರಡೆಯವನ ಕಣ್ಣಲ್ಲಿ ನೀರು ಬಂತು, ಕಣ್ಣನ್ನು ಒರಿಸುತ್ತಾ ಹೇಳಿದ : ಹಾ ... ನನ್ನ ಒಬ್ಬ ಗೆಳೆಯನ ಮಗಾ ಇದ್ದಾನೆ ಅವನ ಕುಟುಂಬವನ್ನು ಒಂದು ಆಕ್ಕ್ಸಿಡೆಂಟ್ ನಲ್ಲಿ ಕಳೆದು ಕೊಂಡಿದ್ದಾನೆ, ಒಳ್ಳೆ ಓದಿದ್ದಾನೆ ಕಾರು, ಬಂಗಲೆ , ಮನೆ ಆಳು, ಎಲ್ಲವೂ ಇದೆ ತಿಂಗಳಿಗೆ ರೂ 1.5 ಲಕ್ಷ ದುಡಿಯುತ್ತಾನೆ. ನಿಮ್ಮ ಹುಡುಗಿಯನ್ನು ಸುಖವಾಗಿ ಇಡುತ್ತಾನೆ..
ಮೊದಲೆಯವ : ಸರಿ ಹಾಗಾದ್ರೆ ಸಂಬದ ಜೋಡಿಸೋಣ.
ಎರಡನೆಯವ : ಹಾ ಆದ್ರೆ ಹುಡುಗನ ಒಂದು ಷರತ್ತು ಇದೆ ಅದೇನಪ್ಪಾ ಅಂದ್ರೆ ಹುಡುಗಿಯ ಯಾವುದೇ ಸಂಬಂಧಿಕರು ಇರಬಾರದು, ಕುಟುಂಬದವರು ಸಹ ಇರಬಾರದು, ಹುಡುಗಿ ಬಿಟ್ಟು ನಿಮ್ಮ ಕುಟುಂಬ ಆತ್ಮಹತ್ಯೆ ಮಾಡಿ ಕೊಂಡರೆ ಸಂಬಂದ ಕೂಡಿ ಬರಬಹುದು ಎಂದರು.
ಮೊದಲೇನೆಯವ : ಇದೇನು ಹುಚ್ಚರ ರೀತಿ ಮಾತನಾಡುತ್ತೀರಾ ? ನಮ್ಮ ಕುಟುಂಬದವರು ಯಾಕೆ ಆತ್ಮಹತ್ಯೆ ಮಾಡಬೇಕು ನಾಳೆ ಏನಾದ್ರು ಹುಡುಗಿಗೆ ಹೆಚ್ಚು ಕಡಿಮೆ ಆಗಿ ಕಷ್ಟದಲ್ಲಿ ಸಿಲುಕಿದರೆ ಯಾರು ಇರುತ್ತಾರೆ ಅವಳ ಹತ್ತಿರ ?
ಎರಡನೆಯವ : ವ್ಹಾ ರೇ ವ್ಹಾ.... ಗೆಳೆಯ ತನ್ನ ಕುಟುಂಬ ಮಾತ್ರ ಪರಿವಾರ...
ಪರರ ಕುಟುಂಬ ಅಂದ್ರೆ ಏನು ಅಲ್ಲ ಅಲ್ವಾ ? ಓ.... ಗೆಳೆಯ ಮಕ್ಕಳಿಗೆ ಪರಿವಾರದ ಮಹತ್ವವನ್ನು ಹೇಳಿಕೊಡು, ಮನೆಯ ದೊಡ್ಡವರು, ಚಿಕ್ಕವರು ಎಲ್ಲರೂ ನಮಗೆ ಬೇಕಾದವರು, ಇಲ್ಲಾ ಅಂದರೆ ಮನುಷ್ಯ ಸುಖ -ದುಃಖದ ಮಹತ್ವವನ್ನೇ ಅರಿಯುವುದಿಲ್ಲ, ಜೀವನಪೂರ್ತಿ ಅರ್ಥ ಇಲ್ಲದ ಬದುಕು ಆಗಿ ಬಿಡುತ್ತೆ....
ಮೊದಲನೆಯವ ಈ ಮಾತುಗಳನ್ನು ಕೇಳಿ ನಾಚಿಕೆಯಾಗಿ ಬಾಯಿಂದ ಒಂದು ಮಾತು ಸಹ ಬರದೆ ಮುಖನಾಗಿ ನಿಂತು ಬಿಟ್ಟ.
ಪ್ರಿಯ ಗೆಳೆಯರೇ ಕುಟುಂಬ ಇದ್ದರೆ ಮಾತ್ರ ಸಂತಸದ ಬೆಲೆಯನ್ನು ಸವಿಯಬಹುದು, ಇಲ್ಲ ಅಂದರೆ ಯಾರೊಟ್ಟಿಗೆ ತಮ್ಮ ಸುಖ- ದುಃಖವನ್ನು ಹಂಚಿಕೊಳ್ಳುವಿರಾ ? ಆದರಿಂದ ಸದಾ ನಗು- ನಗುತ್ತಾ ಪರಿವಾರದಲ್ಲಿ ಜೀವನ ನಡೆಸಿರಿ, ಪರಿವಾರ ಅಂದಮೇಲೆ ಒಂದು ಮಾತು ಬರುತ್ತೆ ಹೋಗುತ್ತೆ, ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ವೈರತ್ವವನ್ನು ಸಾದಿಸಬೇಡಿ. ಕೃಪೆ :ವಾಟ್ಸ್ ಆ್ಯಪ್ ಗ್ರೂಪ್.