ಕಥೆ-209 ಒಂದು ಸಹಿಗೋಸ್ಕರ ಐಎಎಸ್ ಆದ ಮಗಳು
ತಂದೆ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ
ಅಲೆದಾಡುವುದನ್ನು ಕಂಡು ಐಎಎಸ್ ಆದ ಮಗಳು
ಬಹಳ ವರ್ಷಗಳ ಹಿಂದೆ
ಮಹಾರಾಷ್ಟ್ರ ರಾಜ್ಯದ
ಸೋಲಾಪುರ ಜಿಲ್ಲೆಯ ಒಬ್ಬ ರೈತನು ಹೊಲದ ದಾಖಲೆಗಳಲ್ಲಿ
ಸಹಿ ಮಾಡಿಸಿಕೊಳ್ಳವುದಕ್ಕೆ ಜಿಲ್ಲಾಧಿಕಾರಿ ಕಛೇರಿಯನ್ನು , ರಾತ್ರಿ , ಹಗಲು , ಮಳೆ , ಚಳಿ , ಬಿಸಿಲು ಅನ್ನದೆ ಸುತ್ತುತ್ತಿದ್ದನು..
ತಂದೆಯು ಅಲೆದಾಡುವುದನ್ನು ನೋಡಿದ ಮಗಳು ಅಪ್ಪ ಯಾಕೇ ಅಷ್ಟೊಂದು ಸುತ್ತಾಡುತ್ತಿರ , ಯಾವಾಗಲೂ ನೀವು ಮನೆಯಲ್ಲಿ ಇರುವುದಿಲ್ಲ..
ಈ ಕೆಲಸವನ್ನು ಯಾರು ಮಾಡಬೇಕು ಎಂದೆಲ್ಲಾ ಕೇಳುತ್ತಿದ್ದಳು ಅದಕ್ಕೆ ತಂದೆ ಒಂದೆ ಉತ್ತರವನ್ನು ಹೇಳುತ್ತಿದ್ದನು ನಮ್ಮ ಕೆಲಸವನ್ನು ಕಲೆಕ್ಟರ್ ಮಾಡಬೇಕು ಎಂದು...
ಆ ಸಮಯದಲ್ಲಿ ಕಲೆಕ್ಟರ್ ಅನ್ನುವ ಶಬ್ದ ಅ ಒಂಬತ್ತು ವರ್ಷದ ಮಗುವಿನ ತಲೆಯಲ್ಲಿ
ಕುಳಿತುಕೊಂಡು ಬಿಟ್ಟಿತು..
ಅ ಸಮಯದಲ್ಲಿ ಅ ಬಾಲಕಿ ರೋಹಿಣಿಯ ವಯಸ್ಸು 09 ವರ್ಷ
ಅಗಿನ ಸರಕಾರ ರೈತರಿಗೆ ಕೆಲವು ಘೋಷಣೆಗಳನ್ನು , ಘೋಷಿಸಿತು..
ಅದರ ಲಾಭ ಪಡೆಯಲು ಆ ರೈತನು ಹಗಲು ರಾತ್ರಿ ಅಲೆದಾಡುತ್ತಿದ್ದನು.
ತಂದೆಯ ಸ್ಥಿತಿಯನ್ನು ನೋಡಿದ ಮಗಳು ತಾನು ಕಲೆಕ್ಟರ್ ಅಗಿ ಜನರಿಗೆ ಸೇವೆ ಮಾಡಬೇಕು ಅನ್ನುವ ಧೃಡ ನಿರ್ಧಾರ ಮಾಡಿದಳು..
ರೋಹಿಣಿಯ ತಂದೆ 65 ವರ್ಷಗಳಿಂದ ಸ್ವಯಂ ಸೇವಕರು ಅಗಿ ಕೆಲಸ ಮಾಡುತ್ತಿದ್ದರು..
ಅಗ ತಂದೆಗೆ ರೋಹಿಣಿ ಒಂದೆ ಮಾತು ಹೇಳಿದಳು ಅಪ್ಪ ನಾನು ಕಲೆಕ್ಟರ್ ಅಗುತ್ತೇನೆ ಎಂದು..
ಅದಕ್ಕೆ ಅಪ್ಪನು ಕಲೆಕ್ಟರ್ ಅಗು ತಾಯಿ , ಅದರೆ ಬಡವರಿಗೆ ಹೆಚ್ಚಾಗಿ ಸಹಾಯ ಮಾಡು ಎಂದು ಹೇಳಿದ್ದನು..
ಅ ಘಟನೆ ನಡೆದ 23 ವರ್ಷಗಳ ನಂತರ ರೋಹಿಣಿ ತನ್ನ ಕಲೆಕ್ಟರ್ ಕನಸನ್ನು ನನಸು ಮಾಡಿಕೊಂಡಿದ್ದಳು..
ತಂದೆಯ ಅಶಯದಂತೆ
ತನಗೆ ಇಷ್ಟವಾದ ಕಲೆಕ್ಟರ್ ನೌಕರಿ ಮಾಡಲು ಶುರು ಮಾಡಿದಳು , ಕಲೆಕ್ಟರ್ ಕಛೇರಿ ಇಂದ ಅಗುವ ಕೆಲಸಗಳನ್ನು ಬೇಗನೆ ಮಾಡುವಂತೆ ಕಛೇರಿಯ ಇತರ ಅಧಿಕಾರಿಗಳಿಗೆ ಪ್ರೇರಣೆ ಕೊಡುತ್ತಿದ್ದಳು..
ಈಗ ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿರುವ ರೋಹಿಣಿ ಅವರು ಅಲ್ಲಿಯ ಸ್ಥಳೀಯ ಜನರಿಗೆ ತೊಂದರೆ ಅಗಬಾರದು ಎಂದು ತಮಿಳು ಕಲೆತು , ಅಲ್ಲಿನ ಜನರ ಸಮಸ್ಯೆಗಳನ್ನು ಅರಿತುಕೊಂಡ ಅವರಿಗೆ ಸಹಾಯ ಮಾಡುತ್ತಾಳೆ..
ರೋಹಿಣಿ ಅವರ ಕಾರ್ಯ ಶೈಲಿ
ಸೇಲಂ ಜಿಲ್ಲಾ ಜನತೆಗೆ ಬಹಳ ಇಷ್ಟವಾಗಿದೆ..
ತನ್ನ ಜವಾಬ್ದಾರಿಗಳನ್ನು ಅರಿತುಕೊಂಡು ಜಿಲ್ಲೆಯ ಪ್ರಥಮ ಮಹಿಳೆ ಐಎಎಸ್ ಅಧಿಕಾರಿಯಾಗಿ , ಮಹಿಳಾ ಸಶಕ್ತಿಕರಣ ವಿಷಯವಾಗಿ ನಿರಂತರ ಕೆಲಸ ಮಾಡುತ್ತಿದ್ದಾಳೆ..
ಇಂದಿನ ದಿನಗಳಲ್ಲಿ ಸೇಲಂ ಜಿಲ್ಲೆಯಲ್ಲಿ ಸ್ವಚ್ಚತಾ ವಿಷಯ ಬಗ್ಗೆ ಜನರಲ್ಲಿ ಜಾಗುರುಕತೆ ಮೂಡಿಸುತ್ತಿದ್ದಾಳೆ..
ರೋಹಿಣಿ ತರಹ ಅಧಿಕಾರಿಗಳು ಈ ಸಮಾಜಕ್ಕೆ ಬಹಳ ಅವಶ್ಯಕತೆ ಇದೆ.
ಒಬ್ಬ ವ್ಯಕ್ತಿ ಧೃಡ ನಿರ್ಧಾರ ಮಾಡಿ ಅದರಂತೆ ಕಾರ್ಯಪ್ರವೃತ್ತರಾದರೆ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಅದೇ ರೀತಿ ಸರಕಾರಿ ನೌಕರಿ ಜನ ಸೇವೆಗೆ ಸಿಕ್ಕ ಅವಕಾಶವೆಂದು ಕಾರ್ಯ ನಿರ್ವಹಿಸಿದರೆ ಸಮಾಜದ ಸುಧಾರಣೆ ಬದಲಾವಣೆ ಖಂಡಿತ ಸಾಧ್ಯ...
ಕೃಪೆ :ಕನ್ನಡವೆ ಸತ್ಯ ಕನ್ನಡವೆ ನಿತ್ಯ.