Monday, November 20, 2023

ಕಥೆ-219 

ಡಿಎಸ್ಪಿ ಆದ ಹುಡುಗಿ ಕಥೆ           


       

ಅವರೇ ಅನಿತಾ ಪ್ರಭಾ ಶರ್ಮಾ.. ಅವರ ಜೀವನದ ಸಾಧನೆ ಪ್ರತಿಯೊಬ್ಬರನ್ನು ಪ್ರೇರೇಪಿಸುತ್ತದೆ 

   ಅನಿತಾ ಪ್ರಭಾ ಶರ್ಮಾ ಮಧ್ಯಪ್ರದೇಶದ ಅನುಪ್ಪುರ್ ಜಿಲ್ಲೆಯ ಕೋಟ್ಮಾ ಹಳ್ಳಿಯಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು ,ಬಾಲ್ಯದಿಂದ ಭರವಸೆಯ ವಿದ್ಯಾರ್ಥಿಯಾಗಿದ್ದಳು ಮತ್ತು 10 ನೇ ತರಗತಿಯ ಪರೀಕ್ಷೆಯಲ್ಲಿ 92% ಅಂಕಗಳನ್ನು ಪಡೆದರು. ಜೀವನದಲ್ಲಿ ಮಹತ್ತರವಾದದನ್ನು ಮಾಡುವ ದೊಡ್ಡ ಕನಸುಗಳನ್ನು ಹೊಂದಿದ್ದಳು ಆದರೆ ಹದಿಹರೆಯದ ವಯಸ್ಸಿನಲ್ಲಿ ಹುಡುಗಿಯರು ಮದುವೆಯಾಗ ಬೇಕೆಂಬುದು ಆ ಹಳ್ಳಿಯ ಸಂಪ್ರದಾಯವಾಗಿತ್ತು. ಪೋಷಕರು ಮದುವೆ ಮಾಡಿಕೊಳ್ಳಲು ಒತ್ತಾಯಿಸಿದರು ಅನಿತಾ ಆರಂಭದಲ್ಲಿ ಬಿಟ್ಟುಕೊಡಲಿಲ್ಲ ಹೇಗಾದರೂ ಓದಲೇಬೇಕೆಂದು ಗ್ವಾಲಿಯರ್ ನಲ್ಲಿರುವ ತನ್ನ ಸಹೋದರನ ಮನೆಗೆ ಹೋಗಿ ಅಲ್ಲಿ ಓದು ಮುಂದುವರಿಸಿದರು. 12 ತರಗತಿಯ ಪರೀಕ್ಷೆ ಬರೆದು ಬಂದ ತಕ್ಷಣ ಎಷ್ಟೇ ಮೊಂಡಾಟ ಮಾಡಿದರು ಪೋಷಕರ ಒತ್ತಡಕ್ಕೊಳಗಾಗಿ 17 ನೇ ವಯಸ್ಸಿನಲ್ಲಿ 27 ವರ್ಷ ವಯಸ್ಸಿನ ವ್ಯಕ್ತಿಯನ್ನು ಮದುವೆಯಾದರು, ಜೀವನ ಇನ್ನೇನು ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ ಓದಿ ಏನಾದರೂ ಮಾಡಲೇ ಬೇಕೆಂದು ಮನಸು ಮಾಡಿದರು .               

ಮದುವೆ ಮಾಡಿಕೊಂಡು ಅತ್ತೆ ಮನೆಗೆ ಮರಳಿದ ಮೇಲು ಆಕೆ ಓದುತ್ತಾ ತನ್ನ ಗುರಿಯನ್ನು ತಲುಪುವ ಕಡೆಗೆ ನಡೆದಳು , ಡಿಗ್ರಿ ಯ ಕೊನೆಯ ವರ್ಷದಲ್ಲಿರುವಾಗ ಆಕೆಯ ಗಂಡನಿಗೆ ಅಫಘಾತ ವಾಯಿತು , ಇದರಿಂದ ಮನೆಯ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಕುಸಿಯಿತು , ಎಲ್ಲ ಜವಾಬ್ದಾರಿಗಳು ಅನಿತಾ ಮೇಲೆ ಬಿದ್ದವು ನಂತರ ಅನಿತಾ ಒಂದು ಬ್ಯೂಟಿ ಪಾರ್ಲರ್ ನಲ್ಲಿ ಕೆಲ್ಸಸಕ್ಕೆ ಸೇರಿ ಅಲ್ಲಿಂದ ಬಂದ ದುಡ್ಡನ್ನು ಕುಟುಂಬ ನಡೆಸಲು ಬಳಸುತ್ತಿದ್ದಳು . ಸರ್ಕಾರಿ ಕೆಲಸವನ್ನು ಹುಡುಕಿ ಜೀವನವನ್ನು ಹೇಗಾದರೂ ಸರಿ ಮಾಡಿಕೊಳ್ಳಬೇಕೆಂದು ಬಯಸಿ 2013 ರಲ್ಲಿ, ಅರಣ್ಯ ಕಾವಲು ಪರೀಕ್ಷೆಗಾಗಿ ಅರ್ಜಿ ಹಾಕಿದರು ಆಕೆಯ ಹೋರಾಟವು ಅಂತಿಮವಾಗಿ ಫಲ ಕೊಟ್ಟಿತು ,ಉತ್ತಮ ಶ್ರೇಣಿಯೊಂದಿಗೆ ತೇರ್ಗಡೆ ಹೊಂದಿ ಬಾಲಘಾಟ್ ಜಿಲ್ಲೆಯಲ್ಲಿ ಕೆಲಸಕ್ಕೆ ಸೇರಿದರು . ಅವರು ಮತ್ತೊಮ್ಮೆ ಸಬ್-ಇನ್ಸ್ಪೆಕ್ಟರ್ (PSI) ಹುದ್ದೆಗೆ ಪರೀಕ್ಷೆಗಾಗಿ ಸ್ಪರ್ಧಿಸಲು ನಿರ್ಧರಿಸಿದರು.ದೈಹಿಕ ಪರೀಕ್ಷೆಯ ಸುತ್ತಿನಲ್ಲಿ ವಿಫಲರಾದರು.ಅದನ್ನು ಒಂದು ಸವಾಲಾಗಿ ತೆಗೆದುಕೊಂಡು ತನ್ನ ಮುಂದಿನ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಪಾಸ್ ಮಾಡಿದರು . ಪರೀಕ್ಷೆಯ ಎರಡು ತಿಂಗಳ ಮುಂಚೆ ಅಂಡಾಶಯದ ಗೆಡ್ಡೆಗಳಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು .ನಂತರ ಅವರು ಬರೆದ ಡಿಎಸ್ಪಿ ಪರೀಕ್ಷೆಯಲ್ಲಿ ಮಹಿಳೆಯರ ವಿಭಾಗದಲ್ಲಿ 17ನೇ Rank ಪಡೆದರು ಮತ್ತು ಎಲ್ಲಾ ವಿಭಾಗಗಳಲ್ಲಿ 47 ನೇ ಸ್ಥಾನವನ್ನು ಪಡೆದರು ,ಈ ಸಾಹಸಗಳನ್ನು ಸಾಧಿಸಿದಾಗ ಅನಿತಾ ಕೇವಲ 25 ವರ್ಷ ವಯಸ್ಸಿನವನಾಗಿದ್ದರು... 


ಸಾಧಿಸುವ ಛಲ ಇದ್ದವರು ಎಲ್ಲ ಪರಿಸ್ಥಿತಿಗಳಲ್ಲಿ ಏಕಾಂಗಿಯಾಗಿ ಹೋರಾಡುತ್ತಲೇ ತನ್ನ ಕನಸನ್ನು ನನಸು ಮಾಡಿಕೊಳ್ಳುತ್ತಾ ಯಶಸ್ಸನ್ನು ಪಡೆಯುತ್ತಾರೆ..

ಇದಕ್ಕೆ ನೈಜ ಉದಾಹರಣೆ ಅನಿತಾ ಪ್ರಭಾ ಶರ್ಮಾರವರು ತಮ್ಮ ಜೀವನದ ಮಹಾ ನರಕದಿಂದ ಪಾರಾಗಿ ಬಂದು ಒಬ್ಬ ದೊಡ್ಡ ಪೊಲೀಸ್ ಅಧಿಕಾರಿಯಾಗಿ ಸಮಾಜ ಸೇವೆಗೆ ನಿಂತಿದ್ದಾರೆ. ಅವರು ಅನೇಕ ನೋವುಗಳನ್ನು, ಪ್ರತಿ ತಡೆಗೋಡೆಗಳನ್ನು ಮೀರಿ ಇಂದು ಬೆಳೆದು ನಿಂತಿದ್ದಾರೆ.. ಅವರ ಜೀವನದ ಯಶೋಗಾಥೆ ಈಗಿನ ವಿದ್ಯಾರ್ಥಿಗಳಿಗೆ ಮಾದರಿ ...

💐💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು