ಕಥೆ-246
Practise, practise and practise
ಗಾಲ್ಫ್ ಆಟಗಾರ ಟೈಗರ್ ವುಡ್ಸ್‌ನಿಗೆ ಒಮ್ಮೆ ಯಾರೋ ಕೇಳಿದರಂತೆ, ‘ನಿಮ್ಮ ಯಶಸ್ಸಿನ ಗುಟ್ಟೇನು?’. ಅದಕ್ಕೆ ಆತ ಹೇಳಿದನಂತೆ ‘ಕೇವಲ ಮೂರು ಶಬ್ದಗಳು, practise, practise and practise.. ಅದನ್ನು ಬಿಟ್ಟು ಬೇರೇನೂ ನನಗೆ ಗೊತ್ತಿಲ್ಲ’. ಹೌದು, ಗಾಲ್ಫ್ ಇರಲಿ, ಕ್ರಿಕೆಟ್ ಇರಲಿ, ಓದು, ಉದ್ಯೋಗ, ಸಂಗೀತ, ನೃತ್ಯ, ಭಕ್ತಿ ಏನೇ ಇರಲಿ ಗೆಲ್ಲಬೇಕೆಂದರೆ ಸತತವಾಗಿ ಪರಿಶ್ರಮ ಪಡಬೇಕು. ಸಾಧಕರ ಪಟ್ಟಿಯನ್ನು ನೋಡಿದಾಗ ಕಂಡು ಬರುವ ಹೆಸರುಗಳೆಲ್ಲ ರಾತ್ರಿ ಬೆಳಗಾಗುವುದರೊಳಗೆ ಸಾಧನೆ ಮಾಡಿದವರಲ್ಲ. ಅದೆಷ್ಟೋ ರಾತ್ರಿಗಳನ್ನು ನಿದ್ದೆಯಿಲ್ಲದೆ ಕಳೆದು, ಬೆವರು ಸುರಿಸಿ ದುಡಿದು, ಸವಾಲುಗಳನ್ನು-ಸೋಲುಗಳನ್ನು ಹಿಮ್ಮೆಟ್ಟಿ ಗೆಲವಿನ ನಗೆ ಬೀರಿದವರು. ಒಂದು ಗೆಲವಿಗೆ, ಪದಕಕ್ಕೆ, ದಾಖಲೆಗೆ ತೃಪ್ತರಾಗದೆ ಮತ್ತೊಂದು ಗೆಲವಿಗೆ ಸದಾ ತುಡಿಯುವವರು. ಅಂಥವರು ಮಾತ್ರ ನಿರಂತರವಾಗಿ ಗೆಲ್ಲಲು ಸಾಧ್ಯ. ಪರಿಶ್ರಮ ಪಡದೆ ಏನೂ ಸಾಧ್ಯವಿಲ್ಲ. ಹಾಗೆಯೇ ಪರಿಶ್ರಮ ಪಡುವವನಿಗೆ ಏನೊಂದೂ ಅಸಾಧ್ಯವಲ್ಲ.
👍👍👍💐💐💐
ಕೃಪೆ :ವಿಶ್ವವಾಣಿ.