Happy Christmas
ಹಿಂಸಿಸಿದರೂ ಒಳಿತನ್ನೇ ಬಯಸಿದ ಯೇಸು
ಪ್ರತೀ ವರ್ಷ ಡಿಸೆಂಬರ್ 25ರಂದು ಕ್ರಿಸ್ಮಸ್ ಆಚರಣೆ ಮಾಡಲಾಗುತ್ತದೆ. ಈ ದಿನ ಯೇಸುಕ್ರಿಸ್ತ್ ಜನಿಸಿದ ದಿನ. ಕೆಟ್ಟದನ್ನು ತೊಡೆದು ಹಾಕಲು ಯೇಸುಕ್ರಿಸ್ತ್ ಜನಿಸಿದ ಎಂದು ಈ ದಿನವನ್ನು ಕ್ರೈಸ್ತ ಬಾಂಧವರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.
ಕ್ರಿಸ್ಮಸ್ ಅನ್ನು ಪ್ರಪಂಚದಾದ್ಯಂತ ವಿಶೇಷವಾಗಿ ಕ್ರಿಶ್ಚಿಯನ್ನರು ಸಂತೋಷ ಮತ್ತು ಸಂತೋಷದಿಂದ ಆಚರಿಸುತ್ತಾರೆ. ಸ್ನೇಹಿತರು ಮತ್ತು ಕುಟುಂಬದವರು ಒಟ್ಟಿಗೆ ಸೇರಿ ಸಂತೋಷದಿಂದ ಆಚರಿಸುವ ಮತ್ತು ಪರಸ್ಪರ ಸಂತೋಷವನ್ನು ಹರಡುವ ವರ್ಷದ ಸಮಯ ಇದು. ಪ್ರತಿಯೊಬ್ಬರೂ ತಾವು ಎಷ್ಟು ಕೃತಜ್ಞರಾಗಿರುತ್ತೀರಿ ಎಂಬುದನ್ನು ನೆನಪಿಸಿಕೊಳ್ಳುವ ವರ್ಷದ ಸಮಯ ಇದು ಮತ್ತು ಬಡ ಜನರಿಗೆ ಸಹಾಯ ಮಾಡಲು ಸ್ವಯಂಪ್ರೇರಿತ ಕೆಲಸ ಮಾಡಲು ಸಹಾಯ ಮಾಡುತ್ತದೆ.
ಇಸ್ರೇಲಿಯಾದ ಬೆತ್ಲೆಹೆಮ್ ನಗರದಲ್ಲಿ ಕ್ರಿ.ಪೂ 4ರಲ್ಲಿ ಯೇಸು ಜನಿಸಿದ ಎಂದು ಹೇಳಲಾಗುತ್ತದೆ.
ಜೋಸೆಫ್ ಮತ್ತು ಮೇರಿ ಯೇಸುಕ್ರಿಸ್ತನ ತಂದೆ ತಾಯಿ. ಯೇಸು ತಂದೆ ಜೋಸೆಫ್ ವೃತ್ತಿಯಲ್ಲಿ ಬಡಿಗನಾಗಿದ್ದರು. ಆದರೆ ತಂದೆ ಕೆಲಸದಲ್ಲಿ ಸಹಾಯ ಮಾಡುವ ಮೂಲಕ ಯೇಸು ಸಮಾಜ ಕಲ್ಯಾಣವನ್ನೂ ಮಾಡುತ್ತಿದ್ದರು. ಯಹೂದಿ ಧರ್ಮಕ್ಕೆ ಸೇರಿದ ಯೇಸು ಜನರಿಗೆ ಉತ್ತಮ ಮೌಲ್ಯಗಳನ್ನು ಭೋದಿಸುವುದು ಯಹೂದಿಗಳ ಮೂಲಭೂತವಾದಿಗಳಿಗೆ ಇಷ್ಟವಿರಲಿಲ್ಲ. ಹೀಗಾಗಿ ಯೇಸುವಿನ ವಿರುದ್ಧ ಯಹೂದಿಗಳು ದ್ವೇಷ ಸಾಧಿಸುತ್ತಿದ್ದರು.
ಆದರೂ ವಿರೋಧವನ್ನು ನಿರ್ಲಕ್ಷಿಸಿ ಯೇಸು ಸ್ಥಳದಿಂದ ಸ್ಥಳಕ್ಕೆ ಹೋಗಿ ಜನರಿಗೆ ಬೋಧನೆ ಮಾಡುತ್ತಿದ್ದರು. ಇದು ಯಹೂದಿಗಳ ಮೂಲಭೂತವಾದಿಗಳಿಗೆ ಸಹಿಸಲಾಗಲಿಲ್ಲ. ಹೀಗಾಗಿ ಯೇಸುವನ್ನು ಸಾಯಿಸಲು ನಿರ್ಧರಿಸಿದರು. ಯೇಸುವನ್ನು ರೋಮನ್ ಗವರ್ನರ್ ಮುಂದೆ ಹಾಜರುಪಡಿಸಿದರು. ಬಳಿಕ ಯೇಸುವನ್ನು ಶಿಲುಬೆಗೇರಿಸುವ ಮೂಲಕ ಶಿಕ್ಷೆ ನೀಡಿದರು. ಯೇಸುವನ್ನು ಎಷ್ಟೇ ಹಿಂಸಿಸಿ ಕೊಂದರೂ ಯೇಸು ಜನರಿಗೆ ಒಳಿತನ್ನೇ ಬಯಸಿದರು. ಸಮಾಜದ ಒಳಿತಿಗಾಗಿ ಕೆಟ್ಟದರ ನಾಶಕ್ಕಾಗಿ ಯೇಸು ಜನ್ಮ ತಾಳಿದ ಎಂದು ಕ್ರಿಸ್ತಿಯನ್ ರ ನಂಬಿಕೆ
ಮೊದಲ ಬಾರಿಗೆ ಕ್ರಿಸ್ತ ಶಕ 336ರಲ್ಲಿ ರೋಮ್‌ನಲ್ಲಿ ಕ್ರಿಸ್ಮಸ್ ಆಚರಿಸಲಾಯಿತು. ಬಳಿಕ ಪೋಪ್ ಜೂಲಿಯಸ್ ಯೇಸುಕ್ರಿಸ್ತನ ಜನ್ಮದಿನವನ್ನು ಡಿಸೆಂಬರ್ 25ರಂದು ಆಚರಸಿದಲು ಅಧಿಕೃತವಾಗಿ ಘೋಷಣೆ ಮಾಡಿದರು.
ತನ್ನನ್ನು ಶಿಲುಬೆಗೇರಿಸಿದವರನ್ನೇ “ಹೇ ಪ್ರಭು ತಾವೇನು ಮಾಡುತ್ತಿದ್ದೇವೆ ಎಂದು ಇವರಿಗೆ ತಿಳಿಯದು. ಇವರನ್ನು ಕ್ಷಮಿಸು” ಎಂದು ಹೇಳಿದ ದಯಾಸಾಗರ ಯೇಸು ಕ್ರಿಸ್ತ.
ಈ ಜಗತ್ತಿನಲ್ಲಿ ಯೇಸು ಬಾಳಿ ಬದುಕಿದ್ದು 33 ವರುಷವಾದರೂ ಆತನು ಬಿಟ್ಟು ಹೋದ ಉಪದೇಶದ ಬಳುವಳಿ ಇಂದಿಗೂ ಪ್ರಸ್ತುತ. ಆತ ಅಂದು ಪ್ರತಿಪಾದಿಸಿದ ವಿಚಾರಧಾರೆ, ಮಾನವ ಪ್ರೇಮದಿಂದಾಗಿ ಆತ ಬೋಧಿಸಿದ ತತ್ವಗಳು ವಿಶ್ವಮಾನ್ಯವಾಗಿವೆ.
ಬಡಗಿಯಾಗಿದ್ದ ಮೂವತ್ತು ವಯಸ್ಸಿನ ಯುವಕನೊಬ್ಬ, ತನ್ನ ಬಡಗಿ ಕಾರ್ಯದ ಜೊತೆಗೆ ಚರಿತ್ರೆಯನ್ನು ಪ್ರವೇಶಿಸಿದ. ಅತ್ಯಂತ ಸಂಪ್ರದಾಯಬದ್ಧ ನಾಡೊಂದರಲ್ಲಿ ಹುಟ್ಟಿ, ಎಲ್ಲಾ ಸಂಪ್ರದಾಯಗಳಲ್ಲೂ ಸುಪ್ತವಾಗಿದ್ದು ಬದುಕನ್ನು ಹಾಳುಗೆಡಹುವ ಹುಳುಕುಗಳನ್ನು ತೆರೆದು ತೋರಿಸಿದ ಕಾರಣ ಕ್ರಾಂತಿಕಾರಿಯಾದ
ಮಾನವಚರಿತ್ರೆಯ ಕೇಂದ್ರ ಬಿಂದುವಾದ ಇವನ ಜನನ ಕಾಲವನ್ನೇ ಕಾಲ ಮಾಪನವಾಗಿಟ್ಟುಕೊಂಡು ಕ್ರಿಸ್ತ ಪೂರ್ವ- ಕ್ರಿಸ್ತ ಶಕ ಎಂಬ ಕಾಲ ವಿಭಜನಾ ಕ್ರಮ ಪ್ರಾರಂಭವಾಯಿತು.
( ಕ್ರಿಸ್ತ ಹುಟ್ಟುವ ಮುಂಚೆ ದಿನಗಳನ್ನು ಕ್ರಿಸ್ತಪೂರ್ವ BC ಎಂದು ಕ್ರಿಸ್ತ ಹುಟ್ಟಿದ ನಂತರದ ದಿನಗಳನ್ನು ಕ್ರಿಸ್ತಶಕ AD ಎಂದು ಎಂದು ಎಂದು ಪರಿಗಣಿಸಿ ಕಾಲಮಾಪನವನ್ನು ಮಾಡಲಾಯಿತು) ಮಾನವ ಕಾಲಕ್ಕೆ ಮಾಪನ ದೊರೆತಂತಾಯಿತು.
ಅವನ ಬದುಕು ಬೋಧನೆಗಳನ್ನು ಕಂಡು ಕೇಳಿದ ಜನ, ಇವನಂತೂ ಸಾಮಾನ್ಯ ವ್ಯಕ್ತಿಯಲ್ಲ ಎಂದು ಕೊಂಡರು.ಇವನು ಮರಣ ಹೊಂದಿದ ನೂರು ವರ್ಷಗೊಳಗೆ, ಇವನು ಬರೀ ವ್ಯಕ್ತಿಯಲ್ಲ, ಒಂದು ಮಾನವಾತೀತ ಶಕ್ತಿ, ದೇವಸುತ ಎಂಬ ದೃಢನಂಬಿಕೆ ಬೆಳೆದು ಹರಡಿತು
ನಂತರದ ವರ್ಷಗಳಲ್ಲಿ ಇವನು ಮರಣವನ್ನಪ್ಪಿದ ಶಿಲುಬೆಯು ಮಾನವಮುಕ್ತಿಯ ಸಾರ್ವತ್ರಿಕ ಸಂಕೇತವಾಯಿತು. ಇಂದು ಸುಮಾರು ಎರಡು ಸಾವಿರ ವರ್ಷಗಳ ನಂತರ ಜಗತ್ತಿನ ಕೋಟ್ಯಂತರ ಮಂದಿ ಈ ವ್ಯಕ್ತಿಯನ್ನು ಆರಾಧಿಸುತ್ತಾರೆ, ಮಾನವನ ಸರ್ವತೋಮುಖ ಮುಕ್ತಿ ಅವನ ಮೂಲಕವೆಂದು ನಂಬಿದ್ದಾರೆ. ಜಗತ್ತಿನ ಬಹು ಮಂದಿಗೆ ಅವನು ಪರಮಾತ್ಮನ ಪ್ರತಿರೂಪ, ಆಗ್ರಾಹ್ಯ ಪ್ರೇಮ ಶಕ್ತಿಯ ಮಾನವರೂಪಿ ಅನುವಾದ, ಮಾನವ ಸಂಸ್ಕೃತಿಯನ್ನು ಪ್ರವೇಶಿಸಿದ ದೈವಚೇತನ, ಮಾನವನ ಏಕೈಕ ಉನ್ನತ ಆದರ್ಶ. ತನ್ನ ಬದುಕು- ಬೋಧನೆ- ಬವಣೆಗಳಿಂದ ಚರಿತ್ರೆಯ ದಿಕ್ಕನ್ನು ಬದಲಾಯಿಸಿ, ತನ್ನ ಪ್ರಭಾವದ ಮೂಲಕ ಮಾನವ ಚರಿತೆಗೆ ಈಗಲೂ ಹೊಸತಿರುವುಗಳನ್ನು
ಕೊಡುತ್ತಿದ್ದಾನೆ ಈ ವ್ಯಕ್ತಿ. ಇಂಥ ಪವಾಡಸದೃಶ ವ್ಯಕ್ತಿಯೇ ಯೇಸುಕ್ರಿಸ್ತ.
ಮಾನವನಾಗಿ ಹುಟ್ಟಿ ಮಾನವನನ್ನು ಮಾನವೀಯಗೊಳಿಸಿದ..
ಕೊಲ್ಲು- ಗೆಲ್ಲು, ಹೊಡಿ-ಬಡಿಗಳನ್ನೇ ಗುನುಗುನುಸುತ್ತಿರುವ ಮಾನವನಲ್ಲಿ ತಾಯ್ತನವನ್ನೂ ಹೆಂಗರುಳನ್ನು ಕಸಿ ಮಾಡಿದ ಸಂಭ್ರಮದ ನೆನಪೇ ಕ್ರಿಸ್ಮಸ್. ಮಲ್ಲಿಗೆ ಮನಸ್ಸಿನ ಮಮತೆಯ ಹಬ್ಬ ಕ್ರಿಸ್‌ಮಸ್
ದಯೆಯಿಂದ ಇರುವವರು ಧನ್ಯರು. ದೇವರ ಲೋಕ ಅವರದ್ದಾಗಿರುತ್ತದೆ ತಪ್ಪಿಗಾಗಿ ದುಃಖಿಸುವವರು ಧನ್ಯರು. ಅವರಿಗೆ ಸಮಾಧಾನ ದೊರೆಯುತ್ತದೆ ವಿನೀತರು ಧನ್ಯರು ಈ ಭೂಮಿ ಅವರದ್ದಾಗಿರುತ್ತದೆ..|ಯೇಸು|
ಶತ್ರುಗಳನ್ನು ಪ್ರೀತಿಸಿ ನಿಮ್ಮನ್ನು ಹಿಂಸಿಸುವವರಿಗಾಗಿ ಪ್ರಾರ್ಥಿಸಿ
ನಿಮಗೆ ಕೆಟ್ಟದ್ದನ್ನು ಮಾಡಿದವರನ್ನು ಕ್ಷಮಿಸಿ
ಎಲ್ಲರನ್ನು ಪ್ರೀತಿಯಿಂದ ಕಾಣಿ..
|ಯೇಸು|
