Friday, December 29, 2023

 ‘ಓ ನನ್ನ ಚೇತನ ಆಗುವ ನೀ ಅನಿಕೇತನ’ -ಕುವೆಂಪು

ವಿಶ್ವಮಾನವ ದಿನಾಚರಣೆ


ಎಲ್ಲಾದರು ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು’,

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪನವರ ಕಾವ್ಯನಾಮ “ಕುವೆಂಪು

ಕುವೆಂಪುರವರು ೧೯೦೪ ರ ಡಿಸೆಂಬರ್ ೨೯ ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಜನಿಸಿದರು .ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ ೧೯೨೯ ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, ೧೯೫೫ರಲ್ಲಿ ಅದೇ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಂತರ ಉಪಕುಲಪತಿಯಾಗಿ ನಿವೃತ್ತರಾದರು. ವಿಶ್ವವಿದ್ಯಾಲಯವೊಂದರ ಕುಲಪತಿಯಾದ ಮೊದಲ ಕನ್ನಡಿಗ ಕುವೆಂಪುರವರು. ಇವರು ಮೈಸೂರಿನ ಒಂಟಿಕೊಪ್ಪಲುವಿನಲ್ಲಿರುವ “ಉದಯರವಿ”ಯಲ್ಲಿ ವಾಸಿಸುತ್ತಿದ್ದರು. ಇವರ ಹೆಂಡತಿಯ ಹೆಸರು ಹೇಮಾವತಿ ಮತ್ತು ಇವರಿಗೆ ನಾಲ್ಕು ಜನ ಮಕ್ಕಳು (ಪೂರ್ಣಚಂದ್ರ ತೇಜಸ್ವಿ, ಕೋಕೀಲೋದಯ ಚೈತ್ರ, ಇಂದುಕಲಾ, ತಾರಿಣಿ ಚಿದಾನಂದ).

ಎಸ್.ಎಸ್.ಎಲ್.ಸಿ ಓದುವಾಗಲೇ ಕುವೆಂಪುರವರು ಬರೆದಿದ್ದ “ಬಿಗಿನರ್ಸ್ ನ್ಯೂಸ್” ಎಂಬ ಇಂಗ್ಲೀಷ್ ಕವನಸಂಕಲನ ಭಾರತ ಭೇಟಿಗೆ ಬಂದಿದ್ದ ಐರಿಶ್ ಕವಿ ಜೆ.ಎಚ್.ಕಸಿನ್ಸ್ ರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ಅವರ ಸಲಹೆಯಂತೆ ಕನ್ನಡದಲ್ಲಿ ಬರೆಯಲಾರಂಭಿಸಿದ ಕುವೆಂಪು ರವರು ಬರೆದ ಮೊದಲ ಕನ್ನಡ ಕವನ ಸಂಕಲನ “ಅಮಲನಕಥೆ”. ಚಿಕ್ಕಂದಿನಿಂದಲೇ ಮಲೆನಾಡಿನ ಪರಿಸರದಲ್ಲಿ ಬೆಳೆದ ಕುವೆಂಪುರವರಿಗೆ ಅಪಾರವಾದ ಪರಿಸರ ಪ್ರೇಮ. ಅವರ ಪರಿಸರ ಪ್ರೀತಿಯೇ ಅವರ ಕಾವ್ಯದಲ್ಲಿ ಜೀವಂತವಾಗಿ ಮೇಳೈಸಿದೆ.

ಕುವೆಂಪು ಅವರು ಬರೆದ ಎರಡು ಕಾದಂಬರಿಗಳಾದ “ಕಾನೂರು ಸುಬ್ಬಮ್ಮ ಹೆಗ್ಗಡತಿ” ಮತ್ತು “ಮಲೆಗಳಲ್ಲಿ ಮದುಮಗಳು” ಭಾರತೀಯ ಸಾಹಿತ್ಯ ಪ್ರಪಂಚದಲ್ಲೇ ಶ್ರೇಷ್ಠ ಕೃತಿಗಳೆಂಬ ಪ್ರಶಂಸೆಗೆ ಪಾತ್ರವಾಗಿವೆ. ಕನ್ನಡಕ್ಕೆ ಮೊದಲ ಜ್ಞಾನಪೀಠವನ್ನು ತಂದುಕೂಟ್ಟ ಹಿರಿಮೆಯನ್ನು ಹೊಂದಿದ ಇವರ ” ಶ್ರೀ ರಾಮಾಯಣದರ್ಶನಂ” ಮಹಾಕಾವ್ಯ ಸಂಸ್ಕೃತ ಮತ್ತು ಹಿಂದಿ ಭಾಷೆಗೆ ಅನುವಾದಗೊಂಡಿದೆ

ಆಧುನಿಕ ಕನ್ನಡ ಸಾಹಿತ್ಯದ ಪಿತಾಮಹ ಎಂದು ಅವರನ್ನು ಪರಿಗಣಿಸಲಾಗಿದೆ.

ಅವರು 25 ಕವನ ಸಂಕಲನಗಳು, 8 ನಾಟಕಗಳು, 2 ಕಾದಂಬರಿಗಳು, 2 ಮಹಾಕಾವ್ಯಗಳು ಮತ್ತು ಹಲವಾರು ಪ್ರಬಂಧಗಳನ್ನು ಬರೆದಿದ್ದಾರೆ. ಅವರು ಸಮೃದ್ಧ ಬರಹಗಾರರಾಗಿದ್ದರು

ಅವರು ಕರ್ನಾಟಕ ರಾಜ್ಯ ಗೀತೆ ‘ಜಯ ಭಾರತ ಜನನಿಯ ತನುಜಾತೆ’ ಬರೆದ ಕೀರ್ತಿಗೆ ಭಾಜನರಾಗಿದ್ದಾರೆ. ಅವರ ಜೀವನದುದ್ದಕ್ಕೂ ಅವರು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ಪದ್ಮಭೂಷಣ ಮತ್ತು ಪದ್ಮವಿಭೂಷಣ ಸೇರಿದಂತೆ ಹಲವಾರು ಗೌರವಗಳನ್ನು ಪಡೆದರು, ಭಾರತದ ಮೂರನೇ ಮತ್ತು ಎರಡನೇ ಅತ್ಯುನ್ನತ ನಾಗರಿಕ ಗೌರವಗಳು.

ಕರ್ನಾಟಕ ಸರ್ಕಾರವು ಅವರಿಗೆ 1964 ರಲ್ಲಿ “ರಾಷ್ಟ್ರಕವಿ” ಎಂಬ ಬಿರುದನ್ನು ನೀಡಿ ಗೌರವಿಸಿತು ಮತ್ತು 1992 ರಲ್ಲಿ ರಾಜ್ಯದ ಸರ್ವೋತ್ತಮ ಪ್ರಶಸ್ತಿ “ಕರ್ನಾಟಕ ರತ್ನ” ನೀಡಿ ಗೌರವಿಸಿತು. ಇವುಗಳ ಜೊತೆಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1955), ಪಂಪ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳೂ ಅವರಿಗೆ ಸಂದಿವೆ.

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ನವೆಂಬರ್ 11 ರಂದು 1994 ರಲ್ಲಿ ನಿಧನರಾದರು. ಅವರು ಭಾರತೀಯ ಜನರಿಗಾಗಿ ಅನೇಕ ಮಹಾನ್ ಕಾದಂಬರಿಗಳು ಮತ್ತು ನಾಟಕಗಳನ್ನು ಬರೆದರು.

 ಅವರು ವಾಸಿಸುತ್ತಿದ್ದ ಅವರ ಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಯಿತು ಅದೇ ಕವಿಶೈಲ ವಸ್ತು ಸಂಗ್ರಹಾಲಯವಾಗಿ ಮಾರ್ಪಾಡಿಸಿದೆ. ಮನೆಯ ಒಳಗೆ ಕುವೆಂಪುರವರು ಕುಪ್ಪಳಿ ಮತ್ತು ಮೈಸೂರಿನಲ್ಲಿ ಇದ್ದಾಗ ಬಳಸುತ್ತಿದ್ದ ವಸ್ತುಗಳು, ಆಗಿನ ಕಾಲದಲ್ಲಿ ಮಲೆನಾಡಿನಲ್ಲಿ ಬಳಸುತ್ತಿದ್ದ ದೊಡ್ಡ ಗಾತ್ರದ ಅಡಿಗೆ ಮನೆಯ ವಸ್ತುಗಳು, ಅವರ ಸಾಹಿತ್ಯ ಭಂಡಾರ, ಅವರ ಪ್ರಶಸ್ತಿಗಳು ಎಲ್ಲವನ್ನೂ ಅಚ್ಚುಕಟ್ಟಾಗಿ ಪ್ರದರ್ಶಿಸಲಾಗಿದೆ. ಕುವೆಂಪುರವರ ವಿವಾಹದ ಮುದ್ರಿತ ಪತ್ರ ಮತ್ತು ವಿವಾಹ ಮಂಟಪ ಗಮನ ಸೆಳೆಯುವಂತ ವಸ್ತುಗಳಾಗಿವೆ. ಕುವೆಂಪುರವರ ಕೆಲವು ಕಾದಂಬರಿಗಳ ಮೊದಲ ಮುದ್ರಿತ ಪ್ರತಿಗಳನ್ನು ಪ್ರದರ್ಶಿಸಲಾಗಿದೆ. ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ “ಶ್ರೀ ರಾಮಾಯಣದರ್ಶನಂ” ಮಹಾಕಾವ್ಯದ ಮೊದಲ ಹಸ್ತಪ್ರತಿ ಇದರಲ್ಲಿ ಪ್ರಮುಖವಾದದ್ದು. ಕರ್ನಾಟಕ ರತ್ನ, ಪದ್ಮ ವಿಭೂಷಣ, ಜ್ಞಾನಪೀಠ ಪ್ರಶಸ್ತಿ ಪತ್ರಗಳು, ಫಲಕಗಳನ್ನು ಮೊದಲ ಬಾರಿ ಕಂಡ ನನಗೆ, ಒಂದು ಅದ್ಬುತ ಸಾಹಿತ್ಯ ಲೋಕದ ಬಹುದೊಡ್ಡ ಖಜಾನೆಯನ್ನು ಕಂಡ ಉತ್ಸಾಹ ಮೂಡಿತ್ತು. ಈ ಪ್ರಶಸ್ತಿಗಳಿಗೆ ಕಾರಣವಾಗಿದ್ದ ಕುವೆಂಪುರವರ ಮಹಾಕಾವ್ಯಗಳು, ಅವರಿಗೆ ಕನ್ನಡ ಭಾಷೆಯ ಮೇಲಿದ್ದ ಪ್ರೀತಿ ಎಲ್ಲವೂ ಕಣ್ಣಮುಂದೆ ಬಂದು ಹೋದಂತಾಗುತ್ತದೆ.

ಮನುಜ ಮತ ವಿಶ್ವಪಥ ಎಂದು ಸಾರಿದ ಮಹಾತ್ಮನಿಗೆ ವಿಶ್ವಮಾನವ ದಿನಾಚರಣೆಯ ಸಮರ್ಪಣೆ

🙏🙏🙏🙏🙏🙏💐💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು