ಮುಧೋಳ ತ್ರಿಲಿಂಗೇಶ್ವರ ಜಾತ್ರೆ ಸಂತಸ..🙏🙏🙏
ಜಾತ್ರೆ ಎಂದ ತಕ್ಷಣ ಒಂದೊಂದು ವಾರ ನನ್ನ ದೋಟಿಹಾಳದ ಸುಖಮುನಿ ಜಾತ್ರೆ ನನ್ನ ತಲೆಯಲ್ಲಿ ಸುಳಿದಾಡಿದಂತಾಗುತ್ತದೆ.. ಒಂದು ವಾರ ಸ್ವಾಮಿಯ ಪಲ್ಲಕ್ಕಿಯ ಮೆರವಣಿಗೆ ನನಗೆ ಸದಾ ನೆನಪಿಗೆ ಬರುತ್ತದೆ.
ಸ್ವಾಮಿಯ ಆಗಮನಕ್ಕೆ ಕೇಸೂರು ದೋಟಿಹಾಳ ಅವಳಿ ಗ್ರಾಮಗಳು ಮತ್ತು ಸುತ್ತಲಿನ ಹಳ್ಳಿಗಳು ಸ್ವಚ್ಛಗೊಂಡು ನೀರೊಡೆದ ಅಂಗಳ ರಂಗೋಲಿಯಿಂದ ಸ್ವಾಮಿಯ ಪಲ್ಲಕ್ಕಿ ಆಗಮನಕ್ಕೆ ಕಾಯುತ್ತಿದ್ದ ದೃಶ್ಯ ನೆನಪಿಗೆ ಬರುತ್ತದೆ.
ಏಳು ದಿವಸದ ಪಲ್ಲಕ್ಕಿ ಉತ್ಸವದ ನಂತರ ಶಿವರಾತ್ರಿ ಅಮಾವಾಸ್ಯೆಯ ದಿನ ರಥೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುವುದು ಕಣ್ಮನ ಸೆಳೆಯುತ್ತಿತ್ತು..
ಅನೇಕ ಜೋಕಾಲಿ, ಆಟೋಟಗಳ ಅಂಗಡಿಗಳು ಆಟಿಕೆಗಳ ಅಂಗಡಿಗಳು ಚಿಕ್ಕವರಾದ ನಮಗೆ ಆಕರ್ಷಕ ಕೇಂದ್ರಗಳಾಗಿರುತ್ತಿದ್ದವು..
ಕೇಸೂರು ದೋಟಿಹಾಳ ಅವಳಿ ಗ್ರಾಮಗಳು ಮತ್ತು ಸುತ್ತಮುತ್ತಲಿನ ಹಳ್ಳಿಗಳ ಜನರಲ್ಲಿ ಯಾವ ರೀತಿಯ ಮನೋಭಾವ ಇತ್ತೆಂದರೆ ಅವರು ಎಲ್ಲಿಗೆ ಹೋಗಿರಲಿ ಜಾತ್ರೆಗೆ ಮಾತ್ರ ಹಾಜರಿರಬೇಕು ಎನ್ನುವಂತಹ ಮನೋಭಾವ ಎದ್ದು ಕಾಣುತ್ತಿತ್ತು.
ಹಳ್ಳಿಗಳಿಂದ ಜನರು ಎತ್ತು ಬಂಡೆಗಳ ಮೂಲಕ ಝಲಕ್ ಎನ್ನುವ ಎತ್ತುಗಳ ಗೆಜ್ಜೆಗಳ ಸದ್ದು ಇಂಪನ್ನು ನೀಡುತ್ತಿತ್ತು
ಈಗಲೂ ಪ್ರತಿ ವರ್ಷ ಜಾತ್ರೆಗೆ ಹೋಗಿ ನನಗೆ ನಾನೇ ರಿಫ್ರೆಶ್ ಆಗಿ ಬರುತ್ತೇನೆ..
ಹಿರೇಮ್ಯಾಗೇರಿಯ ಪ್ರೌಢಶಾಲೆಗೆ ಬಂದ ನಂತರ ನನ್ನ ವಾಸ್ತವ್ಯ ಪಕ್ಕದ ಮುಧೋಳ ಗ್ರಾಮದಲ್ಲಿ ಆಗಿರುವುದರಿಂದ ಇಲ್ಲಿಯೂ ಸಹ ಪ್ರತಿ ವರ್ಷ ಡಿಸೆಂಬರ್ - ಜನವರಿ ತಿಂಗಳಲ್ಲಿ ಬರುವ ಮುಧೋಳದ ಆರಾಧ್ಯ ದೈವ ಶ್ರೀ ತ್ರಿಲಿಂಗೇಶ್ವರ ಜಾತ್ರೆಯನ್ನು ತಪ್ಪಿಸಿಕೊಳ್ಳುವುದಿಲ್ಲ..
ಪ್ರತಿ ವರ್ಷನೂ ನನ್ನ ಬಾಂಧವರು ಜೊತೆ ಸೇರಿ ಈ ಜಾತ್ರೆಯಲ್ಲಿ ಭಾಗಿಯಾಗಿರುತ್ತಾರೆ..
ಈ ವರ್ಷ ನನ್ನ ಸಹೋದರ ಮತ್ತು ಅವರ ಶ್ರೀಮತಿಯವರು ಅವರ ಮಕ್ಕಳು ಅಲ್ಲದೆ ನನ್ನ ಅಳಿಯ ಅವರ ಶ್ರೀಮತಿ ಅವರ ಮಕ್ಕಳು, ಹಾಗೆಯೇ ನಮ್ಮ ಮಾವ ಅವರ ಶ್ರೀಮತಿ ಮತ್ತು ಅವರ ಮಕ್ಕಳು, ಅಲ್ಲದೆ ನನ್ನ ಗೆಳೆಯರ ಶ್ರೀಮತಿಯವರು( ಸಹೋದರಿ) ಅವರ ಮಗ, ಭಾಗಿಯಾಗಿದ್ದರು ಅಲ್ಲದೆ ನನ್ನ ಅನೇಕ ಶಿಷ್ಯ ಬಳಗವೂ ಸಹ ಭಾಗಿಯಾಗಿದ್ದರು..
ಈ ಜಾತ್ರೆ ನನ್ನ ಸಹೋದರ ಸಂಬಂಧವನ್ನು ಮತ್ತು ಬೀಗರ ಸಂಬಂಧವನ್ನು ಗಟ್ಟಿಗೊಳಿಸುವ ಬೆಸುಗೆ ಸಂಭ್ರಮವಾಗಿತ್ತು..
ಇದು ಕೇವಲ ನಮ್ಮ ಸಂಬಂಧಿಗಳಷ್ಟೇ ಅಲ್ಲದೆ ಇತರೆ ಜನರ ಜೊತೆಗೆ ವಿವಿಧ ಧರ್ಮದವರ ಜೊತೆಗೆ ಸಹ ಉತ್ತಮ ಬಾಂಧವ್ಯದ ಒಂದು ಮೇಳ ಎನ್ನಬಹುದು..
ದಾರಿಯಲ್ಲಿ ಕಾಣುವ ಬಲೂನಗಳು ನಮ್ಮ ಬಾಲ್ಯವನ್ನು ನೆನಪಿಸುತ್ತಿದ್ದವು..
ಜಾತ್ರೆಯಲ್ಲಿನ ಪೀಪಿಗಳು ಬಾಲ್ಯದ ಸಂಗೀತವನ್ನು ನೆನಪಿಸುತ್ತಿದ್ದವು..
ಮುಧೋಳದ ಜಾತ್ರೆಯಲ್ಲಿ ಜಾಗದ ಕೊರತೆ ಇದೆ ಎನಿಸಿದರು ಜಾತ್ರೆಗಾಗಿ ಬಂದಂತಹ ಜನರನ್ನು ಸ್ವಾಗತಿಸುವ ಪರಿ ನಿಜಕ್ಕೂ ಮೆಚ್ಚುವಂತದ್ದು.. ಇವತ್ತಿನ ತ್ರಿಲಿಂಗೇಶ್ವರ ಜಾತ್ರೆಗೆ ನಮ್ಮ ಪರಿವಾರ ಸಮೇತ ಹೋದಾಗ ಒಂದು ಮನೆಯ ಮುಂದೆ ನಿಂತಾಗ ಅವರ ನಮ್ಮನ್ನು ಇನ್ನಿಲ್ಲದ ರೀತಿಯಲ್ಲಿ ಸ್ವಾಗತಿಸಿ ತಮ್ಮ ಮನೆಯವರಂತೆ ಕಂಡು ನಮ್ಮ ಜಾತ್ರೆಯ ಸಂಭ್ರಮಕ್ಕೆ ಮೆರಗನ್ನು ಕೊಟ್ಟರು..
ಜಾತ್ರೆಯಲ್ಲಿ ಜನರ ಹರ್ಷ ಸಂಭ್ರಮ ಮಕ್ಕಳ ಉತ್ಸಾಹ ಎಳೆಯರಿಂದ ಹಿಡಿದು ವಯಸ್ಸಾದವರಲ್ಲಿ ಇದ್ದ ಸಂಭ್ರಮ ಸಡಗರಕ್ಕೆ ಮೌಲ್ಯ ಕಟ್ಟಲಾಗದು.
ನಮ್ಮ ಅಳಿಯ ಮಕ್ಕಳಿಗೆ ಪಿಪಿ ಮತ್ತು ಬಲುನಗಳನ್ನು ಕೊಡಿಸಿದರು.. ಮಕ್ಕಳು ಅವುಗಳನ್ನು ಸಂಭ್ರಮಿಸಿದ್ದನ್ನು ನೋಡಿ ನಾವು ಸಹ ನಮ್ಮ ಬಾಲ್ಯದ ಸಂಭ್ರಮವನ್ನು ಮಕ್ಕಳ ಸಂಭ್ರಮದಲ್ಲಿ ಖುಷಿ ಪಟ್ಟೆವು..
ಜಾತ್ರೆ ಮುಗಿಸಿ ಬಂದಾಗ ಬಿಸಿ ಬಜಿಗಳ ಸಾಮೂಹಿಕ ಸವಿಯು ಆಹ್ಲಾಧಕರ.
ನಮ್ಮ ಶ್ರೀಮತಿಯವರು ಈ ಜಾತ್ರೆಗೆ ಬರುವ ಮನೆ ಅತಿಥಿಗಳಿಗೆ ಊಟೋಚಾರದ ಕಾರ್ಯಭಾರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಖುಷಿ ನೀಡಿತು. ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡಿದ್ದರು.
ಸಾರ್ವಜನಿಕ ಉದ್ದೇಶಕ್ಕಾಗಿ ಒಂದುಗೂಡುವಿಕೆಯನ್ನು ಜಾತ್ರೆ ಎಂದು ಪರಿಗಣಿಸಲಾಗುತ್ತದೆ
ಜಾತ್ರೆಯು ಜನರಿಗೆ ಅತ್ಯಂತ ಆಕರ್ಷಕ ಮತ್ತು ಆನಂದದಾಯಕ ಸಂಭ್ರಮವಾಗಿದೆ.
ಜಾತ್ರೆಗೆ ಭೇಟಿ ನೀಡುವುದು ಇನ್ನಿಲ್ಲದ ಅನುಭವ, ನಮ್ಮ ಚಿಂತೆಗಳನ್ನು ಮರೆತುಬಿಡಲು ಮತ್ತು ಜೀವನದ ಸರಳ ಸಂತೋಷಗಳನ್ನು ಆನಂದಿಸಲು ಒಂದು ಅವಕಾಶ. ಜಾತ್ರೆಯ ದೃಶ್ಯಗಳು, ಶಬ್ದಗಳು ಮತ್ತು ವಾಸನೆಗಳು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಅನುಭವಿಸಬೇಕಾದ ಸಂಗತಿಯಾಗಿದೆ.
ಭಾವೈಕ್ಯತೆಗಳ ಸಮಾಗಮ ಏಕತೆಯನ್ನು ಸಾರುವ ದೊಡ್ಡ ಸಡಗರ. ಸಂಬಂಧಿಗಳ ನಡುವೆ ಉಂಟಾಗಿರುವ ಸಣ್ಣಪುಟ್ಟ ವೈಮನಸುಗಳನ್ನು ಸಹ ಮರೆಸುವಂತಹ ಒಂದು ಸಂದರ್ಭವನ್ನು ಜಾತ್ರೆ ನಮಗೆ ನೀಡುತ್ತದೆ.
ಹಿರಿಯರ ದೊಡ್ಡ ಬಳುವಳಿ
ಹಿರಿಯರಿಗೆ ನಮ್ಮದೊಂದು ದೊಡ್ಡ ಸಲಾಂ
- ಶಂಕರಗೌಡ ಬಸಾಪುರ
🙏🙏🙏🙏🙏