ಕಥೆ-338
ಪ್ರಾಮಾಣಿಕ & ಅಪ್ರಾಮಾಣಿಕ
ಪ್ರಾಮಾಣಿಕ ಮನುಷ್ಯನನ್ನು ಸಮಾಜವು ಯಾವಾಗಲೂ ಗೌರವಿಸುತ್ತದೆ. ಅಪ್ರಾಮಾಣಿಕ ಮನುಷ್ಯನನ್ನು ಸಮಾಜವು ಎಂದೂ ಗೌರವಿಸುವುದಿಲ್ಲ. ಒಂದುವೇಳೆ ಎದುರಿನಲ್ಲಿ ಗೌರವಿಸಿದರೂ ಆ ಮನುಷ್ಯನ ಬೆನ್ನು ಹಿಂದೆಯಾದರೂ ಸಮಾಜವು ಅವನ ಅಪ್ರಾಮಾಣಿಕತೆಯನ್ನು ಆಡಿಕೊಂಡು ಅವಮಾನ ಮಾಡುತ್ತದೆ. ಒಬ್ಬ ಅಜ್ಜನಿಗೆ ಮೊಮ್ಮಗನ ಮದುವೆಯಲ್ಲಿ ಬಂಧು-ಬಳಗದವರು ರೇಷ್ಮೆ ರುಮಾಲು ಆಹೇರಿ ಮಾಡಿದ್ದರು. ಅದನ್ನು ಆತ ಧರಿಸಿಕೊಂಡು ಟೀ(ಠಿ)ವಿಯಿಂದ ಊರಲ್ಲಿ ಅಡ್ಡಾಡಿದ. ‘ಇದು ಯಾರದು?’ ಎಂದು ಕೇಳಿದವಿರಿಗೆಲ್ಲ ‘ನನ್ನದೇ ಎಂದು ಹೇಳಿದ. ಅವನ ಎದುರಿಗೆ ಅವರೆಲ್ಲರು ‘ಎಷ್ಟು ಚೆನ್ನಾಗಿದೆ ಈ ರುಮಾಲು!’ ಎನ್ನುತ್ತಿದ್ದರು. ಅಲ್ಲಿಂದ ಆ ಅಜ್ಜನು ಹಿಂದಿರುಗುವುದೇ ತಡ ‘ಯಾರದೋ ಏನೋ ಈ ರುಮಾಲು, ತನ್ನದೆನ್ನುತ್ತಾನೆ’ ಎಂದು ಅವರೆಲ್ಲ ಗೇಲಿ ಮಾಡುತ್ತಿದ್ದರು..