Saturday, March 23, 2024

 ಕಥೆ-344

ಬಯ್ಯಿರಿ ! ಬಯ್ಯುವುದಕ್ಕೆ ಮುಂಚೆ ಕೊಂಚ ಯೋಚಿಸಿರಿ !

ಜಗತ್ತಿನ ಅತ್ಯಂತ ಸುಲಭದ ಎರಡು ಕೆಲಸಗಳು ಯಾವುವೆಂದು ಕೇಳಿದರೆ, ಉತ್ತರ ಕೊಡಲು ಕೊಂಚವೂ ಯೋಚಿಸಬೇಕಿಲ್ಲ! ಏಕೆಂದರೆ ಬೇರೆಯವರ ತಪ್ಪನ್ನು ಕಂಡು ಹಿಡಿಯುವುದು ಮತ್ತು ತಪ್ಪು ಮಾಡಿದುದಕ್ಕಾಗಿ ಅವರನ್ನು ಬಾಯಿಗೆ ಬಂದಂತೆ ಬಯ್ಯುವುದು!

ಹಾಗೆಯೇ ಜಗತ್ತಿನ ಅತ್ಯಂತ ಕಷ್ಟದ ಕೆಲಸಗಳು ಯಾವುವೆಂದು ಕೇಳಿದರೆ, ಅದಕ್ಕೂ ಸಿದ್ಧವಾದ ಉತ್ತರವಿದೆ! ಅದೇನೆಂದರೆ ಬೇರೆಯವರು ಮಾಡಿರುವ ಒಳ್ಳೆಯ ಕೆಲಸವನ್ನು ಗುರುತಿಸುವುದು ಮತ್ತು ಅವರಿಗೆ ಒಂದೆರಡು ಮೆಚ್ಚುಗೆಯ ಅಥವಾ ಕೃತಜ್ಞತೆಯ ಮಾತುಗಳನ್ನು ಹೇಳುವುದು ಅತ್ಯಂತ ಕಷ್ಟದ ಕೆಲಸಗಳು! ಜಗತ್ತಿನ ಬಹುತೇಕ ಜನರು ಸುಲಭದ ಕೆಲಸಗಳನ್ನು ಮಾಡುವ ಗುಂಪಿಗೆ ಸೇರಿರುತ್ತಾರೆ ಮತ್ತು ಅತಿ ಕಡಿಮೆ ಜನರು ಕಷ್ಟದ ಕೆಲಸವನ್ನು ಮಾಡುವ ಗುಂಪಿಗೆ ಸೇರಿರುತ್ತಾರೆ ಎಂದು ಹೇಳಬಹುದು..

ಅದಿರಲಿ, ಮೊದಲು ಮೊದಲನೆಯ ಗುಂಪಿಗೆ ಸೇರಿದ್ದ ಮಹಾನುಭಾವರೊಬ್ಬರ ನಿಜಜೀವನದ ಪ್ರಸಂಗವೊಂದು ಇಲ್ಲಿದೆ. ಆ ಮಹಾನುಭಾವರು ಸಾಹಿತ್ಯ ವಿಭಾಗದಲ್ಲಿ ಭಾರತಕ್ಕೆ ಮೊಟ್ಟ ಮೊದಲ ನೋಬೆಲ್ ಪ್ರಶಸ್ತಿ ತಂದುಕೊಟ್ಟ ಜಗದ್ವಿಖ್ಯಾತ ಮಹಾನ್ ಕವಿ ರವೀಂದ್ರನಾಥ ಟಾಗೋರರು! (1861-1941)ಅವರು ಬದಲಾಗಲು ಕಾರಣವಾದ ಘಟನೆ ಹೀಗಿದೆ. ಟಾಗೋರರ ಬಳಿ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ನಂಬಿಕಸ್ಥ ಕೆಲಸಗಾರ ಒಬ್ಬರಿದ್ದ. ಟಾಗೋರರು ಉಡಬೇಕಾದ ಉಡುಪುಗಳನ್ನು ಸಿದ್ಧಪಡಿಸುವುದರಿಂದ ಹಿಡಿದು, ಊಟೋಪಚಾರಗಳ, ಮುಂಜಾವಿನಿಂದ ಹಿಡಿದು ಅವರು ಮಲಗುವವರೆಗಿನ ದಿನನಿತ್ಯದ ಕಾರ್ಯಗಳ ವ್ಯವಸ್ಥೆಯನ್ನು ಆ ಕೆಲಸಗಾರ ನೋಡಿಕೊಳ್ಳುತ್ತಿದ್ದರು. ಆತ ಇಲ್ಲದಿದ್ದರೆ ಟಾಗೋರರ ಯಾವ ಕೆಲಸಗಳು ನಿಯಮಿತವಾಗಿ ನಡೆಯುತ್ತಿರಲಿಲ್ಲ. ಆತನ ಮೇಲೆ ಟಾಗೋರರ ಅವಲಂಬನೆ ಅಷ್ಟೊಂದಿತ್ತು.

ಒಂದು ದಿನ ಮುಂಜಾನೆ ಟಾಗೋರರು ಮಲಗುವ ಕೋಣೆಯಿಂದ ಎದ್ದು ಬಂದಾಗ ಆ ಕೆಲಸಗಾರ ಕಾಣಲಿಲ್ಲ. ಅವರ ಸ್ನಾನಕ್ಕೆ ಬಿಸಿ ನೀರಿನ ಸಿದ್ಧತೆಯಾಗಿರಲಿಲ್ಲ. ಅವರ ಉಡುಪುಗಳನ್ನು ಜೋಡಿಸಿಟ್ಟಿರಲಿಲ್ಲ. ಮುಂಜಾನೆಯ ಉಪಾಹಾರವೂ ಸಿದ್ಧವಾಗಿರಲಿಲ್ಲ. ಎಲ್ಲಿ ಹುಡುಕಿದರೂ, ಎಷ್ಟು ಕೂಗಿದರೂ ಆತ ಕಾಣಲಿಲ್ಲ. ಟಾಗೋರರು ಬಹಳ ಬೇಸರ ಪಟ್ಟುಕೊಂಡರು. ಮಧ್ಯಾಹ್ನದವರೆಗೂ ಕಾದರೂ ಆತ ಕಾಣಿಸಿಕೊಳ್ಳಲಿಲ್ಲ. ಮಧ್ಯಾಹ್ನ ಊಟದ ವ್ಯವಸ್ಥೆಯೂ ಆಗಿರಲಿಲ್ಲ. ಹಾಗೂ ಹೀಗೂ, ಸಂಜೆಯವರೆಗೂ ಟಾಗೋರರು ದಿನ ದೂಡಿದರು. ಸಂಜೆಯಾಗುವ ಹೊತ್ತಿಗೆ ಆ ಕೆಲಸಗಾರನ ಮೇಲಿನ ಸಿಟ್ಟು ತಾರಕಕ್ಕೇರಿತ್ತು. ಆತನನ್ನು ಕೆಲಸದಿಂದ ತೆಗೆದಾಕಬೇಕೆಂದು ತೀರ್ಮಾನಿಸಿಬಿಟ್ಟರು.

ರಾತ್ರಿ ಕತ್ತಲಾಗುವಾಗ ಆ ಕೆಲಸಗಾರ ಬಂದ. ಟಾಗೋರರು ಆತನನ್ನು ಬಾಯಿಗೆ ಬಂದಂತೆ ಬೈದರು. ನಿಂದಿಸಿದರು. ದೂಷಿಸಿದರು. ಆದರೆ ಆತ ಏನೂ ಮಾತನಾಡಲಿಲ್ಲ. ಕೈಕಟ್ಟಿಕೊಂಡು, ತಲೆ ತಗ್ಗಿಸಿಕೊಂಡು ನಿಂತಿದ್ದರು. ಆತನ ಮೌನ ಟಾಗೋರರ ಸಿಟ್ಟನ್ನು ಇನ್ನೂ ಹೆಚ್ಚಿಸಿತು. ಬೈದು ಬೈದು ಬಸವಳಿದ ಟಾಗೋರರು ಕೊನೆಗೆ ‘ಮೂಕಬೊಂಬೆಯಂತೆ ಬೈಸಿಕೊಳ್ಳುತ್ತಾ ನಿಂತಿದ್ದೀಯಲ್ಲಾ? ನಿನಗೆ ಮಾನ-ಮರ್ಯಾದೆಗಳು ಇಲ್ಲವೇ? ನಿನ್ನನ್ನು ಕೆಲಸದಿಂದ ಕಿತ್ತು ಹಾಕಿದ್ದೇನೆ. ಹೋಗುವ ಮುಂಚೆ ನಿನಗೆ ಏನು ದೊಡ್ಡರೋಗ ಬಂದಿತ್ತೆಂದು ಹೇಳಿ ಹೋಗು’ ಎಂದು ಗದರಿಸಿದರು.

ಆತ ಮೆಲುದನಿಯಲ್ಲಿ ‘ನಿನ್ನೆ ನೀವು ಮಲಗಲು ಹೋದ ಮೇಲೆ ನನ್ನ ಐದು ವರ್ಷ ವಯಸ್ಸಿನ ಒಬ್ಬಳೇ ಮಗಳು ತೀರಿಕೊಂಡಳೆಂಬ ವರ್ತಮಾನ ಬಂದಿತು. ಮಲಗಿಸುವ ನಿಮಗೆ ತೊಂದರೆ ಕೊಡಲು ಮನಸ್ಸು ಬರಲಿಲ್ಲ. ನೇರವಾಗಿ ನಮ್ಮೂರಿಗೆ ಹೋದೆ. ಆ ಮಗುವಿನ ಅಂತ್ಯಕ್ರಿಯೆಗಳನ್ನೆಲ್ಲಾ ಮಾಡಿ, ಆಕೆಯನ್ನು ಮಣ್ಣು ಮಾಡಿ ಈಗ ಬಂದೆ’ ಎಂದು ಹೇಳಿದರು. ಬಿಕ್ಕಳಿಸಿ ಅಳಲಾರಂಭಿಸಿದರು. ಆಗ ಟಾಗೋರರ ಎದೆಗೆ ಯಾರೋ ಗುದ್ದಿದಂತಾಯಿತು. ಹೃದಯವಂತರಾದ ಅವರಿಗೂ ಅಳು ಬಂದಿತು. ಅವರೂ ಅಳುತ್ತಳುತ್ತಲೇ ಆತನಿಗೆ ಸಾಂತ್ವನ ಹೇಳಿದರು. ಆತನ ಕ್ಷಮೆ ಬೇಡಿದರು. ಟಾಗೋರರು ತಾಳ್ಮೆ ಕಳೆದುಕೊಂಡು ಯಾರನ್ನಾದರೂ ಬೈದದ್ದು ಅದೇ ಕೊನೆಯ ಬಾರಿಯಂತೆ! ಅದಿರಲಿ, ನಾವು ಯಾವ ಗುಂಪಿಗೆ ಸೇರಬೇಕು ಅದು ನಮ್ಮ ಕೈಯಲ್ಲಿದೆ....

👍💐 ಕೃಪೆ:ವಿಶ್ವ ವಾಣಿ.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು