Sunday, March 24, 2024

 ಕಥೆ-345

ಪರೀಕ್ಷೆ ಟಿಪ್ಸ್, ಸರಣಿ-1

(ಹಿಂದಿನ ದಿನ)

ಪರೀಕ್ಷೆ ಅಂದರೆ ಭಯಬೇಡ, ಅದೊಂದು ಹಬ್ಬ/ ಪಿಕ್ನಿಕ್ ನಂತೆ ಅನ್ನೋ ಮನಸ್ಥಿತಿ ಇರಲಿ

ಪ್ರತಿಯೊಬ್ಬ ತಂದೆ ತಾಯಿಗಳು ಮಕ್ಕಳ ಜೀವನದ ಬಗ್ಗೆ ಯೋಚಿಸುತ್ತಾರೆ. ಮಕ್ಕಳು ಚೆನ್ನಾಗಿ ಓದಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲಿ ಎನ್ನುವುದು ಪ್ರತಿಯೊಬ್ಬ ತಂದೆ ತಾಯಿಯ ಆಸೆ. ಇದು ಶಿಕ್ಷಕರ ಆಶಯ ಕೂಡ.ಹೀಗಾಗಿ ಮಕ್ಕಳ ಆಗುಹೋಗುಗಳ ಜೊತೆಗೆ ವಿದ್ಯಾಭ್ಯಾಸವನ್ನು ನೀಡಲು ಕೈ ಮೀರಿ ಪ್ರಯತ್ನಿಸುತ್ತಾರೆ. ಮಕ್ಕಳ ಪರೀಕ್ಷೆಯ ಸಮಯ ಹತ್ತಿರ ಬಂತೆಂದರೆ ತಂದೆ ತಾಯಿಗಳ ಟೆನ್ಶನ್ ನೋಡಲು ಆಗುವುದಿಲ್ಲ. ನಿಮ್ಮ ಟೆನ್ಶನ್ ಅನ್ನು ಮಕ್ಕಳ ಮೇಲೆ ಹೇರಬೇಡಿ..

ಪ್ರೀತಿಯ ವಿದ್ಯಾರ್ಥಿಗಳೇ

ಪರೀಕ್ಷೆ ಎಂದರೆ ಭಯವಲ್ಲ ಅದೊಂದು ಹಬ್ಬ ಅಥವಾ ಪಿಕ್ನಿಕ್ ನಂತೆ ಭಾವಿಸಿದಾಗ ನಮ್ಮಲ್ಲಿ ಸಂಭ್ರಮದ ಮನೋಭಾವನೆ ಮೂಡುತ್ತದೆ. ಆಗ ಮೆದುಳು ಉತ್ತಮವಾಗಿ ಕೆಲಸ ಮಾಡುತ್ತದೆ ಮತ್ತು ನಾವು ಉತ್ತಮ ಅಂಕ ಪಡೆಯಲು ಸಹಾಯಕವಾಗುತ್ತದೆ..

 ಪರೀಕ್ಷೆಯ ಬಗ್ಗೆ ಸಕರಾತ್ಮಕವಾಗಿ ಆಲೋಚಿಸಿ. ನೀವು ಪರೀಕ್ಷೆಗೆ ಬೇಕಾದ ಎಲ್ಲಾ ಸಿದ್ದತೆಗಳನ್ನು ನೀವು ಮಾಡಿಕೊಂಡಿದ್ದೀರಿ, ಚೆನ್ನಾಗಿಯೇ ಬರೆಯುತ್ತೀರಿ ಅಂತ ದೃಢವಾದ ನಂಬಿಕೆ ಇರಲಿ. ಇದು ಕೇವಲ ಒಂದು ತರಗತಿಗೆ ಸಂಬಂಧಪಟ್ಟ ಪರೀಕ್ಷೆ ಮತ್ತು ಇದು ಪ್ರಪಂಚದ ಅಂತ್ಯವಲ್ಲ ಎಂಬುದನ್ನು ನೆನಪಿಡಿ. ಸಕಾರಾತ್ಮಕ ಮನೋಭಾವವು ನೀವು ಪರೀಕ್ಷೆಯಲ್ಲಿ ಚೆನ್ನಾಗಿ ಬರೆಯುವಂತೆ ಸಹಾಯ ಮಾಡುತ್ತದೆ.

1.ಆರೋಗ್ಯಕರ ಆಹಾರ ಸೇವಿಸಿ

2.ವಿಷಯವನ್ನು ಪೂರ್ತಿಯಾಗಿ ಓದುವುದಕ್ಕಿಂತ ಪ್ರತಿ ಅಧ್ಯಾಯದ ಸಾರಾಂಶಗಳನ್ನು ಮುಖ್ಯಾಂಶಗಳನ್ನು (Bullet points) ಓದುವುದು/ ಬರೆಯುವುದು ಒಳ್ಳೆಯದು..

3.ನಿಯಮಿತವಾಗಿ ವಿರಾಮ ತೆಗೆದುಕೊಳ್ಳಿ

4.ಬೆಳಿಗ್ಗೆ ಪರೀಕ್ಷೆಗೆ ಬೇಕಾದ ಎಲ್ಲವನ್ನು ರಾತ್ರಿಯ ಜೋಡಿಸಿಟ್ಟುಕೊಳ್ಳಿ ( ಕ್ಲಿಪ್ಯಾಡ್, ಹಾಲ್ ಟಿಕೆಟ್, ಪೆನ್, ಪೆನ್ಸಿಲ್ ಇತ್ಯಾದಿ)..

5.ಬೇಗ ಮಲಗಿ ಬೇಗ ಏಳಲು ತಯಾರಾಗಿರಿ..

ಪರೀಕ್ಷೆ ಬಂದೆ ಬಿಟ್ಟಿದೆ ಅಂತ ತಡ ರಾತ್ರಿಯವರೆಗೆ ಪುಸ್ತಕಗಳನ್ನು ಓದುತ್ತಾ ಕುಳಿತು ಕೊನೆಗೆ ಅದರ ಮೇಲೆಯೇ ನಿದ್ರಿಸಬೇಡಿ...

👍💐💐💐

By:Shankargouda Basapur...

ಪರೀಕ್ಷೆ ಟಿಪ್ಸ್, ಸರಣಿ-2

( ಪರೀಕ್ಷಾ ದಿನ)..... ಮುಂದುವರಿಯುವುದು

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು