Sunday, March 24, 2024

 ಕಥೆ-345..

ಪರೀಕ್ಷೆ ಟಿಪ್ಸ್ ಸರಣಿ-2

(ಪರೀಕ್ಷಾ ದಿನದಂದು)

10ನೇ ತರಗತಿ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟ ಮೊದಲ ಬಾರಿ ಬೋರ್ಡ್ ಪರೀಕ್ಷೆ ಬರೆಯುತ್ತಿರುವ ಮಕ್ಕಳೇ Well begun is half done.. ಒಳ್ಳೆಯ ಆರಂಭ ಅರ್ಧ ಯಶಸ್ಸನ್ನು ತಂದಂತೆ. ಪರೀಕ್ಷಾ ದಿನ ನೀವು ಮಾಡಬೇಕಾದದ್ದು...

1.ಬೆಳಿಗ್ಗೆ ಬೇಗನೆ ಎದ್ದು ವಿಷಯದ ಪುನರಾವರ್ತನೆ ಮಾಡಿರಿ..

2.ಪರೀಕ್ಷೆಗೆ ಹೋಗಲು ತಯಾರಾಗಿರಿ.. ಮತ್ತು ಪರೀಕ್ಷೆಗೆ ಬೇಕಾದ ಎಲ್ಲಾ ಸಾಮಾನುಗಳನ್ನು ತೆಗೆದುಕೊಳ್ಳಿ..( ಕ್ಲಿಪ್ಯಾಡ್, ಹಾಲ್ ಟಿಕೆಟ್, 2 ಪೆನ್ನು, ಪೆನ್ಸಿಲ್, ವಾಚ್ ಇತ್ಯಾದಿ)

3.ಮಿತ ಆಹಾರ ಸೇವನೆ ಮಾಡಿರಿ..

ಚಿಕ್ಕ ಬಾಟಲ್ ನೀರು ಜೊತೆಗಿರಲಿ...

4.ಪರೀಕ್ಷಾ ಕೇಂದ್ರದಲ್ಲಿ 45 ನಿಮಿಷ ಮುಂಚೆ ನೀವು ಇರಬೇಕು.. ಹಾಗಾಗಿ ಬೇಗನೆ ಮನೆಯಿಂದ ಹೊರಡಿ ಮನೆಯಿಂದ ಹೊರಡುವಾಗ ಹಿರಿಯರ ಆಶೀರ್ವಾದ ಪಡೆಯಿರಿ..

5.ಮೊದಲ ದಿನ ನಿಮ್ಮ ಪರೀಕ್ಷಾ ಬ್ಲಾಕ್ ಮತ್ತು ರೂಮ್ ನ್ನು ಖಚಿತಪಡಿಸಿಕೊಳ್ಳಿ..

6.ಪರೀಕ್ಷೆ ವಿಷಯದ ಅನಗತ್ಯ ಚರ್ಚೆ ವಾದಗಳನ್ನು ಮಾಡಬೇಡಿ..

7.ಕೊಠಡಿಯೊಳಗೆ ವಿಶ್ರಾಂತಿ ಪಡೆದು ದೀರ್ಘ ಉಸಿರು ತೆಗೆದುಕೊಂಡು ದೀರ್ಘ ಉಸಿರನ್ನು ಬಿಟ್ಟು ರಿಲ್ಯಾಕ್ಸ್ ಆಗಿ..ಐದು ನಿಮಿಷ ಧ್ಯಾನ ಮಾಡಿರಿ.

ನಿಮ್ಮ ಮನಸ್ಸು ಎಷ್ಟು ಶಾಂತವಾಗಿರುತ್ತದೋ ಅಷ್ಟೇ ಉತ್ತರಗಳು ಸ್ಪಷ್ಟವಾಗಿರುತ್ತವೆ..

(ಕದಡಿದ ನೀರಿನ ನೆಲ ಕಾಣುವುದಿಲ್ಲ, ಅದೇ ಶಾಂತವಾಗಿದ್ದರೆ ನೆಲ ಕಾಣುತ್ತದೆ, ಹಾಗೆ ನಿಮ್ಮ ಉತ್ತರಗಳು ಕೂಡ)

8.ಮೊದಲು ಒಂದು ಬಾರಿ ಪೂರ್ತಿ ಪ್ರಶ್ನೆಪತ್ರಿಕೆ ಚೆನ್ನಾಗಿ ಓದಿರಿ.ಗೊತ್ತಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಬರೆಯಿರಿ , ನಂತರ ತಿಳಿಯದ ಪ್ರಶ್ನೆಗಳ ಉತ್ತರವನ್ನು ಯೋಚಿಸಿ ಉತ್ತರ ಬರೆಯಿರಿ, ಪ್ರಶ್ನೆ ಸಂಖ್ಯೆಗಳನ್ನು ಸ್ಪಷ್ಟವಾಗಿ ಬರೆಯಿರಿ, ನಿಮ್ಮ ಉತ್ತರಗಳು ಶುದ್ದ, ಸ್ಪಷ್ಟ ನಿಖರವಾಗಿರಲಿ..

9.ಸಮಯದ ನಿರ್ವಹಣೆಗಾಗಿ ಗಡಿಯಾರ ಗಮನಿಸಿ, ಉತ್ತರಿಸಲು ಸ್ವಲ್ಪ ಸಮಯ ತೆಗೆದುಕೊಳ್ಳುವ ಪ್ರಶ್ನೆಗಳನ್ನು ಕೊನೆಗೆ ಇಟ್ಟು ಬಿಡಿ.

ವಿಷಯ ಚೆನ್ನಾಗಿ ಗೊತ್ತೆಂದು ಮಿತಿಮೀರಿ ಬರೆಯದಿರಿ. 

10.ಪ್ಯಾರಾ ರೀತಿ ಬರೆಯುವುದಕ್ಕಿಂತ ಪಾಯಿಂಟ್ಸ್ ರೂಪದಲ್ಲಿ ಉತ್ತರ ಬರೆಯಿರಿ. 

11.ನಿಮ್ಮ ಪಕ್ಕದವರು ಎಷ್ಟು ಹೆಚ್ಚುವರಿ ಪುಟಗಳನ್ನು (ಅಡಿಷನಲ್ ಶೀಟ್) ಕಟ್ಟುತ್ತಾರೆಂದು ಲೆಕ್ಕಾಚಾರ ಮಾಡುತ್ತಾ ಕೂಡಬೇಡಿ. ಎಷ್ಟು ಪುಟ ಬರೆದಿರುವಿರಿ ಎಂಬುದು ಮುಖ್ಯವಲ್ಲ, ಎಷ್ಟು ವಿಷಯ ಬರೆದಿದ್ದೀರಿ ಎಂಬುದೇ ಮುಖ್ಯ. 

12.ನೆನಪಿರಲಿ- ಕೊನೆಗೆ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವ ಪ್ರಯತ್ನ ನಿಮ್ಮದಾಗಿರಲಿ..

Your knowledge is your power, Your brain is in your hands to show your strength...

Be calm face it..

    ನಿಮ್ಮ ಆತ್ಮವಿಶ್ವಾಸವೇ ಪರೀಕ್ಷೆಯೆಂಬ ಸಾಗರವನ್ನು ಈಜಲು ನೆರವಾಗುವ ದೋಣಿ ಎಂಬುದನ್ನು ಮರೆಯದಿರಿ..

ನಿಮಗೆ ಶುಭವಾಗಲಿ ಎಲ್ಲರಿಗೂ

All the best 👍💐💐💐💐 💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು