ಕಥೆ-346
ಪರೀಕ್ಷೆ ಟಿಪ್ಸ್, ಸರಣಿ-3
ಮೊದಲ ದಿನದ ಪರೀಕ್ಷೆ ಚೆನ್ನಾಗಿ ಬರೆದಿರುತ್ತೀರಿ, ಮೊದಲ ದಿನದಲ್ಲಿ ಏನು ತಪ್ಪುಗಳನ್ನು ಮಾಡಿರುತ್ತೀರಿ ಮುಂದಿನ ಪೇಪರಲ್ಲಿ ಆ ತಪ್ಪುಗಳನ್ನು ತಿದ್ದಿಕೊಳ್ಳುವಂತ ಕೆಲಸ ಆಗಬೇಕು..
ಒಂದು ವಿಷಯದ ಪರೀಕ್ಷೆ ಮುಗಿದ ಮೇಲೆ ಅದರ ಬಗ್ಗೆ ಯೋಚಿಸುತ್ತಾ ಕೂಡಬೇಡಿ. ಆಗಿದ್ದು ಆಗಿ ಹೋಯಿತು ಮುಂದಿನ ವಿಷಯ ನಿಮ್ಮ ಕೈಯಲ್ಲಿದೆ. ಅದರ ಬಗ್ಗೆ ಗಮನ ಕೊಡಿ. ಇವತ್ತು ಮತ್ತು ನಾಳೆ ಎರಡು ದಿನಗಳು ಸಮಾಜ ವಿಜ್ಞಾನ ವಿಷಯ ಓದಲು ನಿಮಗೆ ಅವಕಾಶವಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಿರಿ.. ಬೇಕಾದರೆ ಎಲ್ಲ ಪರೀಕ್ಷೆಗಳೂ ಮುಗಿದ ನಂತರ ಪ್ರಶ್ನೆಪತ್ರಿಕೆ ತೆಗೆದು ಅಂಕ ಹಾಕಿ ನೋಡಿ, ನಿಮ್ಮ ಫಲಿತಾಂಶ ನಿಮ್ಮ ಮುಂದಿರುತ್ತದೆ.
👍💐💐💐