Tuesday, March 26, 2024

 ಕಥೆ-347

ಪರೀಕ್ಷೆ ಟಿಪ್ಸ್, ಸರಣಿ-4

ಪ್ರಿಯ ಪಾಲಕರೇ ಹೋಲಿಕೆ ಮಾಡದಿರಿ

ಮಕ್ಕಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಲು ಪೂರಕವಾಗಿ ನೀವು ಮಾಡಲೇಬಾರದ ಕೆಲಸವೆಂದರೆ – ಹೋಲಿಕೆ. ಮಕ್ಕಳು ಆಯಾ ದಿನದ ಪರೀಕ್ಷೆ ಬರೆದು ಮನೆಗೆ ಬಂದಾಗ ಅವರನ್ನು “ನೀನು ಹೇಗೆ ಬರೆದಿದ್ದೀಯ” ಎಂದು ವಿಚಾರಿಸುವುದು ಸರಿ. ಆದರೆ ಅದರ ಜೊತೆಗೆ ಮಕ್ಕಳ ಸಹಪಾಠಿಗಳ ಹೆಸರುಗಳನ್ನು ಉಲ್ಲೇಖಿಸಿ “ಅವರು ಹೇಗೆ ಮಾಡಿದ್ದಾರೆ, ಇವರು ಹೇಗೆ ಮಾಡಿದ್ದಾರೆ…” ಎಂದೆಲ್ಲ ವಿಚಾರಿಸುವುದರಿಂದ ಮಕ್ಕಳು ಒತ್ತಡಕ್ಕೆ ಒಳಗಾಗುತ್ತಾರೆ. ಮಕ್ಕಳು ಪರೀಕ್ಷೆ ಬರೆಯುವುದು ತಮ್ಮ ಪ್ರಗತಿಗಾಗಿ ಹೊರತು ಮತ್ತೊಬ್ಬರ ಜೊತೆ ಸ್ಪರ್ಧಿಸಲಿಕ್ಕಲ್ಲ ಅನ್ನುವುದನ್ನು ಪೋಷಕರಾದ ನಾವು ಅರ್ಥ ಮಾಡಿಕೊಳ್ಳಬೇಕು. ಮತ್ತು ಬೇರೆಯವರ ಜೊತೆ ಹೋಲಿಸುತ್ತಾ ಮಕ್ಕಳ ಮೇಲೆ ಒತ್ತಡ ಹೇರಲು ಹೋಗಬಾರದು.

ಇಷ್ಟು ಮಾಡುವುದು ಬಹಳ ಸುಲಭ ಅಲ್ಲವೆ? ಇವಿಷ್ಟರ ಜೊತೆ ಪೋಷಕರು ಹೆಚ್ಚುವರಿಯಾಗಿ ಇನ್ನೂ ಒಂದು ಕೆಲಸ ನಾವು ಮಾಡಬಹುದು. ಮಲಗುವ ಮುನ್ನ ಐದರಿಂದ ಹತ್ತು ನಿಮಿಷಗಳ ಕಾಲ ಕಣ್ಣುಮುಚ್ಚಿ ಸಮಾಧಾನದಿಂದ ಕುಳಿತುಕೊಳ್ಳಿ. ನಿಮ್ಮ ಆತಂಕವನ್ನೂ ಒತ್ತಡವನ್ನೂ ತಹಬಂದಿಗೆ ತಂದುಕೊಳ್ಳಿ. ಧ್ಯಾನದಿಂದ ಮನಸ್ಸನ್ನು ಶಾಂತಗೊಳಿಸಿಕೊಳ್ಳಿ. ಅನಂತರ ಮಕ್ಕಳ ಜೊತೆ ಸಂತೋಷದಿಂದ, ಪ್ರೀತಿಯಿಂದ ನಾಲ್ಕು ಮಾತುಗಳನ್ನಾಡಿ, ಅವರ ಜೊತೆ ನೀವಿದ್ದೀರೆಂಬ ಭರವಸೆ ತುಂಬಿ ಮಲಗಿಸಿ. ಮಕ್ಕಳಿಗೆ ನನ್ನ ಹಿಂದೆ ಪಾಲಕರಿದ್ದಾರೆ ಎನ್ನುವ ಒಂದು ಧೈರ್ಯ ದೊಡ್ಡದು, ನೀವು ತೋರುವ ಈ ಪ್ರೀತಿ ಎದುರು ಮಕ್ಕಳು ಶಾಲೆಯ ಪರೀಕ್ಷೆಗಳೇನು, ಬದುಕಿನ ಪರೀಕ್ಷೆಯನ್ನೇ ನಗುನಗುತ್ತ ಗೆದ್ದು ಬರುವುದು ಖಚಿತ!

👍💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು