Friday, May 31, 2024

Bridge course 2024-25

 ಕಥೆ-413 

 ಜೀವನ ಒಂದು ಚಕ್ರದ ಹಾಗೆ

ಒಂದು ಊರಲ್ಲಿ ಒಬ್ಬ ಕುಂಬಾರ ಅವನ ತಾಯಿ,ಹೆಂಡತಿ ಮತ್ತು ಮಗನ ಜೊತೆ ಜೀವನ ನಡೆಸುತ್ತ ಬಂದನು. ಕುಂಬಾರನ ಹೆಂಡತಿಗೆ ಕುಂಬಾರನ ತಾಯಿಯನ್ನ ಕಂಡರೆ ಆಗುತ್ತಿರಲಿಲ್ಲ ಅತ್ತೆಯನ್ನ ಮನೆಯಿಂದ ಹೊರಗಡೆ ಮನೆಮಾಡಿ ಇಡಿ ಎಂದು ತನ್ನ ಗಂಡನನ್ನ ಹಿಂಸಿಸುತಿದ್ದಳು ಆದರೆ ಆ ಕುಂಬಾರ ತುಂಬ ದಿನಗಳು ಹೆಂಡತಿಯ ಮಾತುಗಳನ್ನ ಕಿವಿಯಲ್ಲಿ ಹಾಕಿಕೊಳ್ಳುತಿರಲಿಲ್ಲ. ಹೆಂಡತಿ ಬೇರೆ ಮನೆಯನ್ನ ಮಾಡಿ ಅಕ್ಕಿ ಬೇಳೆಗೆ ತೊಂದರೆ ಆಗದೆ ನೋಡಿಕೊಳ್ಳೋಣ ಎಂದು ಬಿಡದೆ ಹಿಂಸಿಸಿದಳು

ಹೆಂಡತಿ ಹಿಂಸೆಯನ್ನ ತಡೆಯಲು ಆಗದೆ ಒಂದು ದಿನ ಆ ಕುಂಬಾರ ಇಪ್ಪತ್ತು ಅಡಿ ದೂರ ಇರುವ ಒಂದು ಬಾಡಿಗೆ ಮನೆಯನ್ನ ನೋಡಿ ಅವನ ತಾಯಿಯನ್ನ ಇರಿಸುತ್ತಾನೆ. ಕುಂಬಾರನ ಹೆಂಡತಿ ಕುಂಬಾರ ಮಾಡಿದ ತಟ್ಟೆ ಒಂದನ್ನ ಕೊಟ್ಟು ದಿನವು ಈ ತಟ್ಟೆ ತಂದರೆ ಇದರ ತುಂಬ ಊಟ ಇಟ್ಟು ಕೊಡುತ್ತೇನೆ ನಂತರ ನೀವು ಮನೆಗೆ ಹೋಗಿ ಸಂತೋಷವಾಗಿ ಊಟ ಮಾಡಬಹುದು ಎಂದು ಹೇಳಿದಳು

ಕುಂಬಾರನ ತಾಯಿಗೆ ಇದು ಅವಮಾನವಾಗಿ ಎನಿಸಿದರು ತನ್ನ ಮಗನಿಗೋಸ್ಕರ ಸೊಸೆ ಮಾತಿನಂತೆ ಬದುಕುತಿದ್ದಳು. ಅಜ್ಜಿ ಮನೆ ಬಿಟ್ಟು ಹೋಗಿದ್ದು ಮೊಮ್ಮಗನಿಗೂ ಇಷ್ಟ ಇರಲಿಲ್ಲ ಸಮಯ ಸಿಕ್ಕಾಗಲೆಲ್ಲ ಅಮ್ಮನಿಗೆ ತಿಳಿಯದ ಹಾಗೆ ಅಜ್ಜಿ ಮನೆಗೆ ಹೋಗಿ ಆಟವಾಡಿ ಬರುತಿದ್ದ

ಕುಂಬಾರನ ಮಗ ಬೆಳಿತ ಬೆಳಿತ ಅಪ್ಪ ಮಾಡುವ ಕೆಲಸವನ್ನ ಸೂಕ್ಷ್ಮವಾಗಿ ಗಮನಿಸುತ್ತ ಬಂದನು ಅಪ್ಪ ಹೋರಗೆ ಹೋದಾಗ ಆ ಯಂತ್ರವನ್ನ ಚಲಾಯಿಸಿ ಮಡಿಕೆ ಮಾಡಲು ಪ್ರಯತ್ನಿಸುತಿದ್ದ ಹೀಗೆ ಕೆಲವು ದಿನಗಳ ನಂತರ ಅವನು ಅಪ್ಪನ ಹಾಗೆಯೇ ಮಡಿಕೆ ಮಾಡಲು ಬಂದಿತು

ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಅವನ ಅಪ್ಪ ಹಾಗೆ ಮಡಿಕೆ ಮಾಡಲು ಕಲಿತು ಬಿಟ್ಟ. ಮೊದ ಮೊದಲು ಅವನು ಒಂದು ತಟ್ಟೆಯನ್ನ ತಯಾರಿಸಿ ಅವನ ತಾಯಿಯ ಕೈಯಲ್ಲಿ ಕೊಟ್ಟನು ಆ ತಟ್ಟೆಯನ್ನ ನೋಡಿ ತಾಯಿಗೆ ಹೆಮ್ಮೆ ಎನಿಸಿತು. ಮೊದ ಮೊದಲು ತನ್ನ ಮಗ ಒಂದು ವಸ್ತುವನ್ನ ಕೈಯಲ್ಲಿ ಕೊಟ್ಟಿರುವುದನ್ನು ಕಂಡು ಎಲ್ಲಿಲ್ಲದ ಸಂತೋಷ ಅದೇ ಸಂತೋಷದಲ್ಲಿ ಕೇಳಿದಳು ಮಗು ಮಾಡುವುದಕ್ಕೆ ಎಷ್ಟೋ ಮಡಿಕೆಗಳಿರುವಾಗ ಏಕೆ ಈ ಒಂದು ತಟ್ಟೆಯನ್ನ ಮಾತ್ರ ಮಾಡಲು ನಿನಗೆ ಆಲೋಚನೆ ಬಂತು

ಅದಕ್ಕೆ ಮಗ ಹೇಳಿದ 

ಅಮ್ಮ ನಾಳೆ ನನಗೆ ಮದುವೆ ಆದರೆ ನನ್ನ ಹೆಂಡತಿ ಈ ಮನೆಯಲ್ಲಿ ಇರುತ್ತಾಳೆ ನೀವು ಈಗ ಅಜ್ಜಿ ಇರುವ ಮನೆಯಲ್ಲಿ ಇರುತ್ತೀರ ನಾಳೆ ನನ್ನ ಹೆಂಡತಿ ಊಟ ಕೊಡುವಾಗ ಒಂದು ತಟ್ಟೆ ಬೇಕಲ್ಲ ಅದಕ್ಕೆ..

ನೀತಿ : ಇದೇ ಜೀವನ ಚಕ್ರ ಇಂದು ನಾವು ಮಾಡುವ ಉಪಕಾರವಾಗಲಿ ಅಪಕಾರವಾಗಲಿ ನಾಳೆ ಇದೇ ರೀತಿ ನಮಗೂ ನಡೆಯುತ್ತದೆ ಎಂಬುದನ್ನ ನೆನಪಿಟ್ಟುಕೊಳ್ಳ ಬೇಕು.......

💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು