ಕಥೆ-415
ನಮಗೆ ಎರಡನೇ ಅವಕಾಶ ಸಿಗದಿರಬಹುದು.
ಬೆಳಗ್ಗಿನ ಜಾವ,ಆಫೀಸಿಗೆ ಹೊರಡಬೇಕಾಗಿದೆ ನಾನು!
ದಿನಪತ್ರಿಕೆಯನ್ನು ಎತ್ತಿ ನೋಡುತ್ತಿರುವೆನು,ಪುಟದ ಭಾವಪೂರ್ಣ ಶ್ರದ್ಧಾಂಜಲಿಯಲ್ಲಿ ನನ್ನ ಪೋಟೋ!
ಅಯ್ಯೋ...
ಏನಾಯಿತು ನನಗೆ?
ನಾನು ಸೌಖ್ಯವಾಗಿ ತಾನೆ ಇರುವೆನು?
ಒಂದು ನಿಮಿಷ ಯೋಚಿಸಿದೆನು!
ನಿನ್ನೆಯ ರಾತ್ರಿ ಮಲಗುವಾಗ ಎದೆಯಲ್ಲಿ ಕಠಿಣವಾದ ನೋವುಂಟಾಯಿತು,ತದನಂತರ ಏನು ತೋಚಲಿಲ್ಲಾ,ನನಗೆ ಗಾಢವಾದ ನಿದ್ರೆ ಎಂದ ಭಾವಿಸಿದೆನು!
ಕಾಫಿ ಬೇಕಲ್ಲಾ,ನನ್ನ ಮಡದಿ ಎಲ್ಲಿ?ಸಮಯ ಹತ್ತಾಯಿತು!
ಅದ್ಯಾರಲ್ಲಿ? ಮಂಚದಲಿ ಕಣ್ಣಮುಚ್ಚಿ ಆಯಾಸದಿಂದ?
ಅಯ್ಯೋ...ನಾನೇ,
ಆಗಾದರೇ ನಾನು ಸತ್ತುಹೋದೆನಾ? ಕಿರುಚಿದೆನು!
ನನ್ನ ಕೋಣೆಯ ಹೊರಗೆ ಗುಂಪು ಗುಂಪಾಗಿ ಜನರ ಸಮೂಹ,ಸಂಬಂಧಿಕರು, ಸ್ನೇಹಿತ ವೃಂದದವರು ನೆರೆದಿದ್ದರು!
ಹೆಂಗಸರೆಲ್ಲಾ ಅಳುತ್ತಿದ್ದರು,ಗಂಡಸರೆಲ್ಲಾ ಮೌನಾಚರಣೆಯಿಂದ ಮೂಕವಾಗಿ ನಿಂತಿರುವರು!
ಬೀದಿ ಜನರೆಲ್ಲಾ ನನ್ನ ದೇಹವ ನೋಡಿ ಹೋಗುತ್ತಿರುವರು,ನನ್ನ ಹೆಂಡತಿಗೆ ಕೆಲವರು ಸಮಾಧಾನ ಪಡಿಸುತ್ತಿರುವರು,ನನ್ನ ಮಗನನ್ನು ಅಪ್ಪಿಕೊಂಡು ಅಳುತ್ತಿರುವರು!
ನಾನು ಸತ್ತಿಲ್ಲಾ,ಇಲ್ಲೇ ಇರುವೆನು ಎಂದು ಕಿರುಚಿದೆನು!
ಆದರೆ ನನ್ನ ಧ್ವನಿ ಯಾರಿಗೂ ಕೇಳಿಸಲಿಲ್ಲಾ,
ನನ್ನ ದೇಹ ಸನಿಹದಲ್ಲಿ ನಿಂತಿರುವುದು ಕೂಡ ಯಾರಿಗೂ ಕಾಣಿಸುತ್ತಿಲ್ಲಾ!
ಅಯ್ಯೋ, ಏನು ಮಾಡಲಿ ನಾನು?
ಹೇಗೆ ಅವರಿಗೆ ಕಾಣಲ್ಪಡುವೆನು ನಾನು?
ನಾನು ಮತ್ತೊಮ್ಮೆ ನನ್ನ ಕೋಣೆಗೆ ನಡೆದೆ,"ನಾನು ಸತ್ತು ಹೋದೆನಾ"? ನಾನು ನನ್ನೇ ಕೇಳಿದೆ,ಸಾವು ಹೀಗೆ ಇರುವುದಾ?
ನನ್ನ ಮಡದಿಯೂ,ಅಮ್ಮ,ಅಪ್ಪನೂ ಮತ್ತೊಂದು ಕೋಣೆಯಲ್ಲಿ ಅಳುತ್ತಿರುವರು, ನನ್ನ ಮಗನಿಗೆ ಏನಾಯಿತೆಂದು ಕೂಡ ತಿಳಿಯಲಿಲ್ಲಾ, ಮನೆಯವರೆಲ್ಲಾ ಅಳುತ್ತಿರುವುದನ್ನು ಕಂಡು ಅವನೂ ಕೂಡ ಅಳುತ್ತಿರುವನು.!
ನಾನು ಅವನನ್ನು ತುಂಬಾ ಪ್ರೀತಿಸುವೆನು,ಅವನನ್ನು ಬಿಟ್ಟು ನಾ ಎಂದಿಗೂ ಇರಲಾರೆ,ನನ್ನ ಮಡದಿ ನನ್ನ ಮೇಲೆ ಅತಿಯಾದ ಪ್ರೀತಿಯೂ,ಸಹನೆಯೂ ಉಳ್ಳವಳು! ನಾನು 'ತಲೆನೋವು' ಎಂದರೆ ಸಾಕು ಅವಳು ಅತ್ತೇ ಬಿಡುವಳು!ಅವಳನ್ನು ಬಿಟ್ಟು ಬಂದೆನೆಂದು ಮನದಲ್ಲಿ ಕೂಡ ನೆನೆಯಲಾಗುತ್ತಿಲ್ಲಾ,!
ಅಮ್ಮಾ,ನಾನು ಒಂದು ಮಗುವಿಗೆ ಅಪ್ಪನಾಗಿದ್ದರೂ ಕೂಡ ನನ್ನನ್ನು ಮಗುವಾಗಿಯೇ ಕಾಣುತ್ತಿದ್ದವಳು ನನ್ನವ್ವ! ಅಪ್ಪ ಗಂಭೀರವಾಗಿದ್ದರೂ ಕೂಡ,ಅವರಾಡೋ ಒಂದೊಂದು ಮಾತು ಸಹನೆಯಿಂದ ಕೂಡಿರುತ್ತಿದ್ದವು!
ಇದೋ,ಒಂದು ಮೂಲೆಯಲ್ಲಿ ನಿಂತು ಅಳುತ್ತಿರುವನು
ಅಯ್ಯೋ,...ನನ್ನ ಸ್ನೇಹಿತ! ಸೇಡನ್ನು ಮರೆತು ಬಂದಿರುವನೇ? ಕೆಲ ಕಾದಾಟಗಳು ನಮ್ಮನ್ನು ಒಂದಾಗಿರಲು ಬಿಡಲಿಲ್ಲಾ, ಇಬ್ಬರು ಮಾತನಾಡಿ ಎರಡು ವರ್ಷಕ್ಕಿಂತ ಮೇಲಾಯಿತು!ಅವನಲ್ಲಿ ಕ್ಷಮಾಪಣೆ ಕೇಳಲು ತೋಚಿತು,!
ಪಕ್ಕದಲ್ಲಿ ಹೋಗಿ ಅವನನ್ನು ಕರೆದೆನು, ಆದರೆ ನನ್ನ ಧ್ವನಿ ಅವನಿಗೆ ಕೇಳಿಸಲಿಲ್ಲಾ, ನನ್ನ ದೇಹವ ನೋಡಿ ಬಿಕ್ಕಿ ಬಿಕ್ಕಿ ಅಳುತ್ತಿರುವನು,!
ಹೌದು, ನಾನು ಸತ್ತು ಹೋದೆನೆ?
ಓ ಕಾಲ ಗಡಿಯಾರವೇ,ನನಗೆ ಇನ್ನೂ ಕೆಲವು ದಿನಗಳು ಕೊಡು! ನಾನು ನನ್ನ ಮಡದಿ,ಹೆತ್ತವರು,ಸ್ನೇಹಿತರಲ್ಲಿ ಎಷ್ಟು ಪ್ರೀತಿ ಇಟ್ಟಿರುವೆನೆಂದು ತೋರಿಸಬೇಕು.
ನನ್ನ ಮಡದಿ ಇರುವ ಕೋಣೆಗೆ ನಡೆದೆ,ನೀ ಬಹಳ ಸುಂದರವಾಗಿರುವೆ ಎಂದು ಕಿರುಚಿದೆನು,ಅವಳಿಗೆ ನನ್ನ ಮಾತಗಳು ಕೇಳಿಸಲೇ ಇಲ್ಲಾ!ನಿಜ ಜೀವನದಲ್ಲಿ ನನ್ನ ಹೆಂಡತಿಯನ್ನು ಒಂದು ಸಲವೂ ಹಾಗೇ ಹೇಳೇ ಇರಲಿಲ್ಲಾ! ಅಯ್ಯೋ
ಎಂದು ಕಿರುಚಿದೆನು, ಜೋರಾಗಿ ಅತ್ತೆನು, ದಯವಿಟ್ಟು ಮತ್ತೊಂದು ಅವಕಾಶ,ನನ್ನ ಮಗನ ಅಪ್ಪಿಕೊಳ್ಳಲು,ನನ್ನ ತಾಯಿಯ ಮುಖದಲ್ಲಿ ಮತ್ತೆ ಸಂತೋಷವ ತರಲೂ,ನನ್ನ ಸ್ನೇಹಿತನಲ್ಲಿ ಕ್ಷಮೆಯ ಕೇಳಲು,ಈಗ ನಾನು ಅತ್ತೆನು!
ದಿಢೀರೆಂದು ನನ್ನ ದೇಹವ ಎಬ್ಬಿಸುವಂತೆ ಭಾಸವಾಯಿತು,ರೀ ಕಣ್ಣಾ ಬಿಡ್ರೀ,ನಿದ್ದೆಯಲ್ಲಿ ಏನದು ಗೊಣಗಲು?,ಕನಸ್ಸು ಏನಾದರೂ ಕಂಡೀರಾ?ಎಂದಳು ಹೆಂಡತಿ!
ಹೌದು...ಬರೀ ಕನಸ್ಸು...ನೆಮ್ಮದಿಯಾದೆ!
ನನ್ನ ಮಡದಿಯಲ್ಲಿ ನಾನು ಮಾತನಾಡುವುದನ್ನು ಈಗ ಕೇಳಬಹುದು,ನನ್ನೀ ಜೀವನದಲ್ಲಿ ಮರೆಯಲಾಗದ ಸಂಧರ್ಭ!
ಬೆವತಿದ್ದ ನನ್ನ ಮುಖವ,ಬಟ್ಟೆಯೊಂದನ್ನೆತ್ತಿ ಒರೆಸುತ್ತಿರುವಳು ನನ್ನವಳು!ಹಾಗೆಯೇ ಅವಳನ್ನು ಅಪ್ಪಿಕೊಂಡು ನೀನೆ ಈ ಪ್ರಪಂಚದಲ್ಲಿಯೇ ಸೌಂದರ್ಯವತಿ,ಎಂದೆನು ಮೊಟ್ಟ ಮೊದಲ ಬಾರಿಗೆ!
ಮೊದಲಿಗೆ ಅರಿವಾಗದೆ ಕಣ್ಣುಬಿಟ್ಟ ಅವಳು ನನ್ನನ್ನು ಬಿಗಿಯಾಗಿ ಅಪ್ಪಿಕೊಂಡಳು,ಅವಳ ಕಣ್ಣಂಚಿನಲ್ಲಿ ಕಂಬನಿ ಹೊರಬರುತ್ತಿತ್ತು,ಅರಿವಾಯಿತು ನನಗೆ ಆನಂದ ಕಣ್ಣೀರೆಂದು...!
ಈ ಎರಡನೇ ಅವಕಾಶ ಕೊಟ್ಟ ಕಾಲ ಗಡಿಯಾರಕ್ಕೆ ಧನ್ಯವಾದಗಳು!
ಇನ್ನೂ ನಮಗೆ ಸಮಯವಿದೆ,ನಮ್ಮ ಈಗೋವನ್ನು ಕಿತ್ತು ಬಿಸಾಡಿ,ನಮ್ಮ ಅಂತರಾಳದಲ್ಲಿರುವ ಪ್ರೀತಿಯನ್ನೂ,ಸಹನೆಯನ್ನೂ ಇತರರಲ್ಲಿ ಹಂಚಿಕೊಳ್ಳೋಣ.
ಯಾಕೆಂದರೆ ಪ್ರೀತಿ ಮತ್ತು ಸಹನೆಯನ್ನು ಹಂಚಿಕೊಳ್ಳಲು ನಮಗೆ ಎರಡನೇ ಅವಕಾಶ ಸಿಗದಿರಬಹುದು...! ಕೃಪೆ:ಮುಖ ಪುಸ್ತಕ.