Saturday, June 8, 2024

ಕಥೆ-421

 ಕಷ್ಟವನ್ನು ಸವಾಲಾಗಿ ಸ್ವೀಕರಿಸಿ..

ಯಾಕಪ್ಪ ಕಷ್ಟ ಬರಿ ನನಗೆ ಬರುತ್ತೆ ಅನ್ನೋರು ಓದಲೇ ಬೇಕಾದ ಕಥೆ  

ಒಂದಾನೊಂದು ಕಾಲದಲ್ಲಿ ಕಳಿಂಗ ದೇಶದ ಪ್ರಜೆ ರಾಮಚಂದ್ರ ಹಾಗೂ ಅವನ ಮಗಳು ಅವಂತಿಕಾ ಒಂದು ಸಾಧಾರಣ ಗುಡಿಸಿಲಿನಲ್ಲಿ ವಾಸ ಮಾಡುತ್ತಿದ್ದರು. ಅವಂತಿಕಾ ರೂಪವತಿ ಹಾಗೂ ಬಹಳ ಬುದ್ಧಿವಂತೆ, ಒಂದು ದಿನ ಅವಂತಿಕಾ ತನ್ನ ತಂದೆಯಾ ಬಳಿ ಹೀಗೆಂದು ತನ್ನ ದುಃಖವನ್ನು ತೋಡಿಕೊಂಡಳು “ಅಪ್ಪ ನಾನು ನನ್ನ ಜೀವನದ ಪಥವನ್ನು ನಡೆಸಲು ಬಹಳ ಕಷ್ಟಪಡುತ್ತಿದ್ದೇನೆ ,ಒಂದಲ್ಲ ಒಂದು ಸಮಸ್ಯೆ ಯಾವಾಗಲು ಇದ್ದೆ ಇರುತ್ತದೆ , ಒಂದು ಸಮಸ್ಯೆಯನ್ನು ಸವೆಸಿ ಹೊರಬಂದ ನಂತರ ಇನ್ನೊಂದು, ನನಗೆ ಸಾಕಾಗಿ ಹೋಗಿದೆ ಇದರಿಂದ ಹೆಣಗಾಡುತ್ತಿದ್ದೇನೆ ” . ಅದಕ್ಕೆ ಬಾಣಿಸಿಗನಾದ ಅಪ್ಪ “ಮಗು ನನ್ನೊಂದಿಗೆ ಅಡುಗೆ ಮನೆಗೆ ಬಾ ” ಎಂದು ಕರೆದೊಯ್ದರು. ಅವರು ನೀರು ತುಂಬಿದ ಮೂರು ಮಡಕೆಗಳು ಇರಿಸಿ ಬೆಂಕಿ ಹಚ್ಚಿದರು. ಒಮ್ಮೆಗೆ ಮೂರು ಮಡಿಕೆಗಳು ಕುದಿಯಲು ಆರಂಭಿಸಿದವು, ಅವರು ಆಲೂಗಡ್ಡೆ ಒಂದು ಮಡಕೆಯಲ್ಲಿ, ಎರಡನೇ ಮಡಕೆಯಲ್ಲಿ ಮೊಟ್ಟೆಗಳು, ಮೂರನೇ ಮಡಕೆಯಲ್ಲಿ ಕಾಫಿ ಬೀಜಗಳನ್ನು ಇರಿಸಿದ್ದರು . ನಂತರ ತಂದೆ ತಮ್ಮ ಮಗಳಿಗೆ ಒಂದು ಮಾತನ್ನು ಆಡದೆ ಸುಮ್ಮನೆ ಕುಳಿತುಕೊಂಡರು ಆದರೆ ಮಗಳು ಮನಸಲ್ಲೇ ತಮ್ಮ ತಂದೆ ಏನು ಮಾಡುತ್ತಿರಬಹುದು ಎಂದು ಲೆಕ್ಕಾಚಾರ ಹಾಕತೊಡಗಿದಳು. 20 ನಿಮಿಷಗಳ ತರುವಾಯ, ಉರಿಯನ್ನು ಆರಿಸಿ ಪಾತ್ರೆಗಳನ್ನು ಕೆಳಗೆ ಇಳಿಸಿದರು, ಬೆಂದ ಆಲೂಗಡ್ಡೆ, ಮೊಟ್ಟೆಯನ್ನು ತಟ್ಟೆಗಳಿಗೆ ಹಾಗೂ ಕಾಫಿಯನ್ನು ಒಂದು ಲೋಟಕ್ಕೆ ಹಾಕಿದರು, ಮಗಳನ್ನು ಹತ್ತಿರ ಕರೆದು ನೀನು ಈಗ ಏನನ್ನು ಕಂಡೆ? ಎಂದು ಪ್ರಶ್ನಿಸಿದರು. ಮಗಳು ಬಹಳ ಆಲಸಿ ಇಂದಲೆ ಆಲೂಗಡ್ಡೆ , ಮೊಟ್ಟೆ ಹಾಗೂ ಕಾಫಿ ಎಂದಳು . ತಂದೆ “ಮತ್ತೊಮ್ಮೆ ಸೂಕ್ಷ್ಮವಾಗಿ ಗಮನಿಸು” ಎಂದರು. 

ಈಗ ನೀನು ಮೊಟ್ಟೆಯನ್ನು ಹೊಡೆಯಲು ಸಾಧ್ಯವೇ ? ಬೆಂದ ಆಲೂಗಡ್ಡೆಯನ್ನು ಗಮನಿಸುತ್ತಾ ಮಗಳು ಕಾಫಿ ಹೀರಲು ಶುರುಮಾಡಿದಳು .“ಅಪ್ಪ ಏನಿದೆಲ್ಲಾ ?” ಎಂದು ಮತ್ತೊಮ್ಮೆ ಅಪ್ಪನನ್ನು ಪ್ರಶ್ನಿಸಿದಳು ಅದಕ್ಕೆ ಉತ್ತರವಾಗಿ ಅಪ್ಪ “ನೋಡು ಮಗು ಆಲೂಗಡ್ಡೆ , ಮೊಟ್ಟೆ, ಕಾಫಿ ಬೀಜಗಳನ್ನು ಸಮಾನ ಉರಿಯಲ್ಲಿ ಬೇಯಿಸಲಾಯ್ತು, ಬಲವಾದ ಆಲೂಗಡ್ಡೆ ಕುದಿಯುವ ನೀರಿನಲ್ಲಿ ಮೃದು ಮತ್ತು ದುರ್ಬಲವಾಯ್ತು, ಮೊಟ್ಟೆ ತೆಳುವಾದ ಹೊರ ಪದರ ಹೊಂದಿದ್ದರು ಕುದಿಯುವ ನೀರಿನಲ್ಲಿ ಅದರ ದ್ರವ ಆಂತರಿಕ ರಕ್ಷಿಸುವಲ್ಲಿ ದುರ್ಬಲವಾಗಿತ್ತು. ಬೆಂದ ನಂತರ ಮೊಟ್ಟೆ ಬಲವಾಯ್ತು, ಆದರೆ ಕಾಫಿ ಬೀಜಗಳು ವಿಶಿಷ್ಟ ಗುಣವನ್ನು ಹೊಂದಿವೆ ಅದು ಕುದಿಯುವ ನೀರಿನಲ್ಲಿ ಹೊಸದೊಂದನ್ನು ನೀಡುವಲ್ಲಿ ಸಫಲವಾಯ್ತು “ “ಈಗ ನೀನು ಹೇಳು ನೀನು ಜೀವನದಲ್ಲಿ ಏನಾಗಲು ಇಷ್ಟ ಪಡುತ್ತೀಯ ? ಆಲೂಗಡ್ಡೆ , ಮೊಟ್ಟೆ, ಕಾಫಿ ಬೀಜವೇ ?” ಬದುಕಲ್ಲಿ ಎಲ್ಲವು ನಡೆಯುತ್ತದೆ ಒಳ್ಳೆಯದು, ಕೆಟ್ಟದ್ದು ನಾವು ಆಂತರಿಕವಾಗಿ ಕುಗ್ಗಿ ಹೋಗದೆ ಹೇಗೆ ಮುನ್ನಡಿಯುತ್ತೇವೆ ಎಂಬುದು ಮುಖ್ಯ, ಕಷ್ಟವನ್ನು ಸವಾಲಾಗಿ ಸ್ವೀಕಾರ ಮಾಡಬೇಕು ಮತ್ತು ಜಯಿಸಬೇಕು ಎಂದರು . ಕೃಪೆ: ವಾಟ್ಸ್ ಆಪ್ ಗ್ರೂಪ್..

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು