ಕಥೆ-425
ಶಾಲಾ ದೇಗುಲಕ್ಕೆ ದೇಣಿಗೆ ಭಕ್ತಿ,
ಭವಿಷ್ಯಕ್ಕೆ ಮಹಾ ಶಕ್ತಿ... 💐💐
ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಉತ್ತಮ, ನೋಡಿ ಕಲಿಯುವುದಕ್ಕಿಂತ ಮಾಡಿ ಕಲಿಯುವುದು ಇನ್ನೂ ಉತ್ತಮ ಎಂಬ ಮಾತು ಪ್ರಾಯೋಗಿಕ ಕಲಿಕೆಯನ್ನು ಒತ್ತಿ ಹೇಳುತ್ತದೆ..
ವಿಜ್ಞಾನದ ಕ್ಲಿಷ್ಟಕರ ಪರಿಕಲ್ಪನೆಗಳನ್ನು
ಸೈದ್ಧಾಂತಿಕವಾಗಿ ಅರ್ಥೈಸಿಕೊಳ್ಳದಿದ್ದಾಗ, ಪ್ರಾಯೋಗಿಕ ಕಲಿಕೆ ಅನಿವಾರ್ಯವಾಗುತ್ತದೆ.
ಇದಕ್ಕೆ ಒಂದು ಸುಸಜ್ಜಿತ ಪ್ರಯೋಗಾಲಯ ಅವಶ್ಯವಾಗುತ್ತದೆ.. ನಮ್ಮ ಮಕ್ಕಳು ಕಾಲೇಜು ಹಂತದಲ್ಲಿ ವಿಜ್ಞಾನದ ಸಾಧನೆಗಳಿಗೆ ಪ್ರೋತ್ಸಾಹಿಸಲು ಪ್ರೌಢ ಹಂತದಲ್ಲಿಯೇ ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕಿದೆ.. ಇಲ್ಲದಿದ್ದರೆ ವಿಜ್ಞಾನ ವಿಷಯ ಕ್ಲಿಷ್ಟಕರ ಎನ್ನುವಂತಾಗುತ್ತದೆ.. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಪ್ರಯೋಗಗಳನ್ನು ಮಾಡುವ ಕೌಶಲ ವೃದ್ಧಿಸಲು ಈ ಪ್ರಯೋಗಾಲಯಗಳು ನೆರವಾಗುತ್ತವೆ.
ನಮ್ಮ ಹಿರೇಮ್ಯಾಗೇರಿ ಪ್ರೌಢಶಾಲೆಯಲ್ಲಿ, ಒಂದು ಮಾದರಿ ವಿಜ್ಞಾನ ಪ್ರಯೋಗಾಲಯ ಮಾಡಬೇಕೆಂಬುದು ಒಂದು ಕನಸು.... ಅದಕ್ಕೆ ಪೂರಕವಾಗಿ ಮುಖ್ಯೋಪಾಧ್ಯಾಯರು ಮತ್ತು ಸಿಬ್ಬಂದಿ, ಹಳೆ ವಿದ್ಯಾರ್ಥಿಗಳು, ಶಿಕ್ಷಣ ಪ್ರೇಮಿಗಳು, ಜನಪ್ರತಿನಿಧಿಗಳ ಸಹಕಾರದಿಂದ ಪ್ರಯೋಗಾಲಯ ವಾತಾವರಣ ನಿರ್ಮಾಣವಾಗುತ್ತಿದ್ದು.. ಸಂತಸದ ವಿಷಯ.. ಅದು ಆದಷ್ಟು ಬೇಗನೆ ಆಗಲಿ, ಅನ್ನುವುದು ಕಲಿಯುವ ವಿದ್ಯಾರ್ಥಿಗಳ ಆಶಯ...
ಪ್ರಯೋಗಗಳು ಕಲಿಕೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡುತ್ತವೆ. ವಿಜ್ಞಾನದ ವಿಷಯಗಳಲ್ಲಿ ಬರುವ ಹಲವಾರು ಸಿದ್ಧಾಂತಗಳನ್ನು ಪ್ರಯೋಗಗಳ ಸಹಾಯದಿಂದ ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಅದರಲ್ಲಿಯೂ ಭೌತವಿಜ್ಞಾನ, ರಸಾಯನ ವಿಜ್ಞಾನ, ಗಾರ್ಡನ್ ಪರಿಸರದೊಂದಿಗೆ ಜೀವವಿಜ್ಞಾನ ಮುಂತಾದ ವಿಷಯಗಳ ಕಲಿಕೆಯಲ್ಲಿ ಪ್ರಯೋಗಗಳ ಪಾತ್ರ ಹಿರಿದು.
ಹಾಗೆಯೇ ಮಾದರಿ ಪ್ರಯೋಗಾಲಯ ಸ್ಥಾಪಿಸಬೇಕಾದರೆ ದಾನಿಗಳ ಪಾತ್ರ ದೊಡ್ಡದು..
ಈ ಪ್ರಯೋಗಾಲಯ ಸ್ಥಾಪನೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ಸಹಕಾರ ನೀಡುತ್ತಿರುವ ದಾನಿಗಳಿಗೆ ಹೃದಯಪೂರ್ವಕ ಧನ್ಯವಾದಗಳು...
ದೇಶದ ಭವಿಷ್ಯ ಇರುವುದು ಮತ್ತು ನಿರ್ಮಾಣವಾಗುವುದು ಶಾಲೆಗಳಲ್ಲಿ.. ಶಾಲೆ ಸಮಾಜದ ಪ್ರತಿಬಿಂಬ.. ಶಾಲೆ ಸೇವೆ ಸಮಾಜ ಸೇವೆಯೇ ಆಗಿರುತ್ತದೆ.
ಶಾಲಾ ದೇಗುಲಕ್ಕೆ ದೇಣಿಗೆ ಭಕ್ತಿ,
ಭವಿಷ್ಯಕ್ಕೆ ಮಹಾ ಶಕ್ತಿ..
ನನ್ನ ಮೊದಲ Batch.. 10th 2013-14 ವಿದ್ಯಾರ್ಥಿಗಳು ಹಿರೇಮ್ಯಾಗೇರಿ ಪ್ರೌಢಶಾಲೆ ವಿಜ್ಞಾನ ಪ್ರಯೋಗಾಲಯ ಅಭಿವೃದ್ಧಿಗೆ ಗುಪ್ತ ಕಾಣಿಕೆ ದೇಣಿಗೆ ನೀಡಿದ್ದಾರೆ, ಅವರಿಗೆ ಹೃದಯಪೂರ್ವಕ ಧನ್ಯವಾದಗಳು..
💐💐💐💐💐💐💐
By:Shankargouda Basapur
AM GHS Hiremyageri