ಕಥೆ-429
ಅಪ್ಪನಿಗೊಂದು ಸಲಾಂ
ಅಪ್ಪ ಅಮ್ಮ ನಮ್ಮ ಎರಡು ಕಣ್ಣುಗಳು, ಪ್ರತ್ಯಕ್ಷ ದೇವರು.
ತಾಯಿಯ ವಾತ್ಸಲ್ಯಕ್ಕೆ ಸಿಗುವ ಮನ್ನಣೆ ಅಪ್ಪನ ತ್ಯಾಗಕ್ಕೆ ಮಾತ್ರ ಸಿಕ್ಕಿಲ್ಲ. ಆದರೆ ಇದ್ಯಾವುದಕ್ಕೂ ತಂದೆ ತಲೆಕೆಡಿಸಿಕೊಳ್ಳುವುದಿಲ್ಲ.
ಅಮ್ಮ ಎನ್ನುವ ದೇವತೆ ಹೊತ್ತು, ಹೆತ್ತು ಹಾಲನ್ನಿತ್ತು ಬೆಳೆಸಿದರೆ, ಅಪ್ಪ ಅನ್ನೋ ಜೀವ ಮಗುವಿಗೆ ಬಲ ತುಂಬುತ್ತದೆ, ರಕ್ಷಣೆ ಒದಗಿಸುತ್ತದೆ. ಮೌನವಾಗಿಯೇ ನಮ್ಮೆಲ್ಲ ಜವಾಬ್ದಾರಿಯನ್ನು ಹೊರುವ ಅಪ್ಪ ಮಳೆ, ಚಳಿ, ಗಾಳಿ ಎನ್ನದೇ ನಮಗಾಗಿ ಬೆವರು ಸುರಿಸುತ್ತಾನೆ. ನಿದ್ದೆಗೆಡುತ್ತಾನೆ. ನಿಮಗಾಗಿ ಬದುಕು ತೆತ್ತೆ ಎನ್ನದ ಅಪ್ಪ ಸದಾ ನಮಗಾಗಿಯೇ ಹೆಣಗಾಡುತ್ತಾನೆ.ಬದುಕು ರೂಪಿಸಿ, ಜೀವನ ಪಾಠ ಕಲಿಸಿ, ಕಿರು ಬೆರಳ ಹಿಡಿದು ಮುನ್ನಡೆಸಿದ ಅಪ್ಪ ಮಮತೆಯ ಆಗಸ... ಪ್ರೀತಿಯ ಪರ್ವತ... ಪ್ರತಿಯೊಬ್ಬರ ಪಾಲಿಗೆ ಅಪ್ಪನೇ ಮೊದಲ ಹೀರೋ...
ಅಣ್ಣ ತಮ್ಮಂದಿರ ಓದು & ಮನೆ ಭವಿಷ್ಯಕ್ಕಾಗಿ ತಮ್ಮ ಓದನ್ನು ಮೊಟಕುಗೊಳಸಿ, ಕಾಯಕವೇ ಕೈಲಾಸವೆಂದು ಒಬ್ಬ ರೈತನಾಗಿ ಹಗಲಿರುಳು ದುಡಿದು, ತಂದೆ-ತಾಯಿ ಮತ್ತು ಅಣ್ಣ ತಮ್ಮಂದಿರ ಸಹಕಾರದಿಂದ ಉತ್ತಮ ಬಾಳ್ವೆ ಮಾಡಿ ನಮ್ಮ ಮನೆತನದ ಹೆಸರು ತಂದು ಕೊಟ್ಟವರು ನಮ್ಮ ತಂದೆ..
ನನ್ನ ಪಾಲಿಗೆ, ತಾಯಿ ಪ್ರೀತಿಯನ್ನು ತಂದೆಯ ಮಮತೆಯನ್ನು ನೀಡಿ ಉತ್ತಮ ಶಿಕ್ಷಣ ಕೊಡಿಸಿ
ಜೀವನ, ಪ್ರೀತಿ, ದಯೆ ಹೀಗೆ ಬದುಕಿನ ಎಲ್ಲಾ ಉತ್ತಮ ಮೌಲ್ಯಗಳನ್ನು ಕಲಿಸಿಕೊಟ್ಟ ನಿಮ್ಮನ್ನು ತಂದೆಯಾಗಿ ಪಡೆದ ನಾನೇ ಧನ್ಯ. ನಿಮ್ಮ ಪ್ರೀತಿ ಹಾಗೂ ಮಾರ್ಗದರ್ಶನ ನನ್ನಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿದೆ.
ನೀವು ಮಾಡಿದ ಎಲ್ಲಾ ತ್ಯಾಗಗಳಿಗೆ ಮತ್ತು ನೀವು ನೀಡಿದ ಸರ್ವ ಪ್ರೀತಿಗೆ ಧನ್ಯವಾದಗಳು..
ನಿಮಗೆ ನಾನು ಚಿರಋಣಿ
Shankargouda Basapur
💐💐💐💐💐