Wednesday, June 19, 2024

 ಕಥೆ-431

ಬಾಲ್ಯದ ಗೆಳೆಯರು 

ಆ ಊರಿನ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ 4 ಮಕ್ಕಳು ಬಾಲ್ಯದಿಂದಲೇ ಗೆಳೆಯರು. ಆ ಮಕ್ಕಳು ತಂದಿರುವ ಎಲ್ಲಾ ಡಬ್ಬಿಯ ತಿಂಡಿಯನ್ನು ಒಟ್ಟಿಗೆ ಕುಳಿತು ತಿನ್ನುವುದರಿಂದ, ಆಟ, ಪಾಠ, ತಿರುಗಾಟ ಎಲ್ಲದರಲ್ಲೂ ಒಂದಾಗಿ ಕಲಿಯುತ್ತಾ ಬೆಳೆದು ಪಿ,ಯು,ಸಿ,ಯಲ್ಲಿ ಉತ್ತಮ ಶ್ರೇಣಿ ಯಲ್ಲಿ ಪಾಸಾದರು. ಆ ಸಂತೋಷ

ಒಟ್ಟಿಗೆ ಸವಿಯಲು ಒಂದು ಹೋಟೆಲ್ನಲ್ಲಿ ಸೇರಿದರು. ಖುಷಿಯಾಗಿ ಕಳೆದರು. ಮಾತಾಡುತ್ತಾ ಈಗ ನಾವು ಮೆಜಾರಿಟಿ ಬಂದಿದ್ದೇವೆ. ಮುಂದಿನ ವ್ಯಾಸಂಗಕ್ಕೆ ಬೇರೆ ಕಡೆ ಹೋಗುತ್ತೇವೆ. ನಂತರ ಉದ್ಯೋಗ, ಮನೆ ಜವಾಬ್ದಾರಿ, ಹೆತ್ತವರನ್ನು ನೋಡಿ ಕೊಳ್ಳುವುದು, ವಿವಾಹ, ಮಕ್ಕಳು, ಸಂಸಾರ, ಸಮಾಜಮುಖಿ ಕಾರ್ಯ ಇವು

ಭವಿಷ್ಯಕ್ಕೆ ಅಗತ್ಯವಾಗಿದೆ. ಹೀಗಾಗಿ ನಾವೆಲ್ಲ ಅನಿವಾರ್ಯವಾಗಿ ಬೇರೆ ಬೇರೆ ಕಡೆ ಹೋಗಬೇಕು ಎಂದು ಮಾತಾಡಿಕೊಂಡರು. 

ಆಗ ಒಬ್ಬ ಗೆಳೆಯ ಹೇಳಿದ, ನಮ್ಮ ಟಾರ್ಗೆಟ್ ರೀಚ್ ಆಗಲು ಬಹಳ ವರ್ಷಗಳು ಬೇಕು. ಅಷ್ಟು ಹೊತ್ತಿಗೆ ನಾವೆಲ್ಲ 50 ರ ಆಜು ಬಾಜಿ ನಲ್ಲಿ ಇರುತ್ತೇವೆ. ಅಲ್ಲಿ ತನಕ  

ನಾವು ನಾಲ್ವರೂ ಒಂದೇ ಕಡೆ ಒಂದೇ ಸಮಯ ಸೇರಲು ಆಗುವುದಿಲ್ಲ. ನಮ್ಮಲ್ಲಿ ಯಾರು ಎಲ್ಲೇ ಇರಲಿ ನಮ್ಮ 40ನೇ ವರ್ಷದಲ್ಲಿ ,ಜನವರಿ ಮೊದಲ ದಿನ ಒಂದನೇ ತಾರೀಕು ಇದೇ ಹೋಟೆಲ್ನಲ್ಲಿ ಸೇರೋಣ. ಸೇರಿದ ಮೇಲೆ ಕೊನೆಯಲ್ಲಿ ಯಾರು ಬರುತ್ತಾರೋ, ಅವರೇ ಆ ದಿನದ ಬಿಲ್ ಕಟ್ಟಬೇಕು ಎಂದು ಮಾತಾಡಿ ಒಬ್ಬರಿ ಗೊಬ್ಬರು, ಕೈ ಮೇಲೆ ಕೈ ಒಟ್ಟಿಗೆ ಸೇರಿಸಿ ಯಾರೂ ಮರೆಯಬಾರದು ಎಂದು ಷರತ್ತು ಹಾಕಿಕೊಂಡರು. ಈ ಮಾತುಗಳನ್ನು ಅಲ್ಲಿ ನಿಂತಿದ್ದ ಸರ್ವರ್ ಕೇಳಿಸಿ ಕೊಂಡನು. ಇವರ ಗೆಳೆತನ ನೋಡಿ, ಗೆಳೆಯರು ಅಂದರೆ ಹೀಗಿರಬೇಕು. ಇವರ ಗೆಳೆತನ ಹೀಗೆ ಇರಲಿ, ಇವರ ಆಸೆಗಳೆಲ್ಲ ನೆರವೇರಲಿ. ಅವರು ಅಂದುಕೊಂಡ ಸುಂದರ ಘಳಿಗೆಯನ್ನು ನಾನು ನೋಡಬೇಕು ಅಂದುಕೊಂಡ.


ಆ ಯುವಕರೆಲ್ಲ ಬೇರೆ ಬೇರೆ ಕಡೆ ಓದಿ ಕೆಲಸಕ್ಕೆ ಸೇರಿ ನೆಲೆ ನಿಂತು, ಸಂಸಾರದ

ಜವಾಬ್ದಾರಿ ಮುಗಿಸಿ, ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ, ಈಗ ಎಲ್ಲರಿಗೂ 

40 ವರ್ಷ ಆಗಿತ್ತು. ಅಂದುಕೊಂಡಂತೆ ಊರಿಗೆ ಬಂದರು. ಆಗಿದ್ದ ಊರು ಈಗ ಸಿಟಿ ಆಗಿತ್ತು. ಹೊಸ ಮಾಲ್ಗಳು, ದೊಡ್ಡ ಹಾಗೂ ಫೈವ್ ಸ್ಟಾರ್ ಹೋಟೆಲ್, ಹೊಸ ಲೇಔಟ್ ಗಳು, ದೇವಸ್ಥಾನಗಳು, ಎಲ್‌ಎಲ್‌ಬಿ, ಇಂಜಿನಿಯರಿಂಗ್ ಸೇರಿದಂತೆ ಡಿಗ್ರಿ, ಡಿಪ್ಲೋಮೋ ಕಾಲೇಜುಗಳು ತಲೆಯೆತ್ತಿದ್ದವು. ಹೊರದೇಶದಲ್ಲಿ ಸಾಫ್ಟ್ವೇರ್ ಆಗಿದ್ದ ಮೊದಲ ಗೆಳೆಯ ಬಂದು,ತಾವು ಸೇರಿದ್ದ ಹೋಟಲ್ ಕಡೆ ನೋಡಿದ. ಈಗ ಸ್ಟಾರ್ ಹೋಟಲ್ ಆಗಿತ್ತು. ಅಂದು ಸರ್ವರ್ ಆಗಿದ್ದ ಹುಡುಗ ಹೋಟೆಲ್ ಓನರ್ ಆಗಿದ್ದ, ಹಿಂದಿನ ಮಾಲೀಕರು ಹೋಟೆಲನ್ನು ಮಾರಿ ಹುಟ್ಟೂರಿಗೆ ಹೋದರು. ಸರ್ವರ್ ಅದನ್ನು ಖರೀದಿಸಿ ಕೆಲವು ವರ್ಷ ನಡೆಸಿ, ಈಗ ಸ್ಟಾರ್ ಹೋಟೆಲ್ಲಾಗಿ ಮಾರ್ಪಡಿಸಿದ್ದ. ಇಬ್ಬರಿಗೂ ಗುರುತು ಸಿಕ್ಕಿತು. ಸರ್ವರ್ ಸಾಧನೆ ನೋಡಿ ಇಂಜಿನಿಯರ್ ಖುಷಿಪಟ್ಟು ಉಳಿದ ಗೆಳೆಯರ ಬರುವಿಕೆಗಾಗಿ ಕಾಯುತ್ತಾ ಅಲ್ಲೇ ಕುಳಿತ. ದೊಡ್ಡ ಲಾಯರ್ ಆಗಿ ಹೆಸರು ಮಾಡಿದ್ದ ಎರಡನೇ ಗೆಳೆಯ ಬಂದು ಜೊತೆ ಸೇರಿ ಸಂತೋಷದ ನಗೆ ಬೀರಿದನು. ಸ್ವಲ್ಪ ಹೊತ್ತಿಗೆ ಬೇರೆ ರಾಜ್ಯದ ಯುನಿವರ್ಸಿಟಿ ಪ್ರೊಫೆಸರ್ ಆಗಿದ್ದ ಮೂರನೇ ಗೆಳೆಯನು ಬಂದನು. ಎಲ್ಲರ ಮುಖದಲ್ಲೂ ಹರ್ಷ ತುಂಬಿತ್ತು ಒಬ್ಬರಿಗೊಬ್ಬರು ಆಲಂಗಿಸಿ, ತಮ್ಮ ಜೀವನದ ಎಲ್ಲಾ ವಿಚಾರ ಹಂಚಿಕೊಂಡರು.


ನಾಲ್ಕನೇ ಸ್ನೇಹಿತನ ಬರುವಿಕೆಗಾಗಿ ಕಾಯುತ್ತಾ ಕುಳಿತರು. ಎರಡ್ಮೂರು ಗಂಟೆ ಕಳೆದರೂ ಆತ ಬರಲೇ ಇಲ್ಲ. ಅಷ್ಟು ಹೊತ್ತಿಗೆ ಒಬ್ಬ ಗೆಳೆಯನಿಗೆ ಕಾಲ್ ಬಂದಿತು.

ನೀವು ಯಾರು ಕಾಯಬೇಡಿ ನಾನು ಬರುವುದು ಸ್ವಲ್ಪ ಲೇಟ್ ಆಗುತ್ತೆ. ನೀವೆಲ್ಲರೂ

ಡಿನ್ನರ್ ಸ್ಟಾರ್ಟ್ ಮಾಡಿ. ನಾನು ಬಂದು ಜಾಯಿನ್ ಆಗುವೆ, ಎಂಬ ಗೆಳೆಯನ ಮಾತಿನಂತೆ ಎಲ್ಲರೂ ಊಟಕ್ಕೆ ಆರ್ಡರ್ ಮಾಡಿ, ಖುಷಿಯಾಗಿ ಊಟ ಮಾಡುತ್ತಾ ನೆನಪುಗಳನ್ನು ಮೆಲುಕಾಡಿದರು. ನಿಧಾನವಾಗಿ ಊಟ ಮಾಡಿದರೂ, ನಾಲ್ಕನೇ ಗೆಳೆಯ ಬರಲಿಲ್ಲ. ಸಮಯ ಆಗಿತ್ತು ಹೋಗಲಿ ಅವನಿಗೆ ಬರಲು ಆಗಲಿಲ್ಲ. ನಾವು ಹೊರಡೋಣ ಎಂದು ಬಿಲ್ ಪೇ ಮಾಡಲು ಹೋದರು. ಆದರೆ ಹೋಟೆಲ್ ಮ್ಯಾನೇಜರ್ ನೀವು ಬಿಲ್ ಕಟ್ಟಬೇಕಾಗಿಲ್ಲ ಆನ್ಲೈನ್ ಪೇಮೆಂಟ್ ಆಗಿದೆ ಎಂದರು.


ಮೂವರು ಗೆಳೆಯರು ಆಶ್ಚರ್ಯ ಚಿಕಿತರಾಗಿ ಪಾಪ ಬರಲು ಆಗದಿದ್ದರೂ ಬಿಲ್ಲನ್ನು ಕಟ್ಟಿದ್ದಾನೆ ಎಂದುಕೊಂಡರು. ಮೂವರು ಗೆಳೆಯರು ಹೋಟೆಲ್ ನಿಂದ ಹೊರಗೆ ಬಂದರು. ಎದುರು ಗಡೆಯಿಂದ ಒಂದು ಕಾರು ಬಂದು ಅವರ ಮುಂದೆ ನಿಂತಿತು. ಅದು ಕಮಿಷನರ್ ಕಾರ್ ಆಗಿತ್ತು. ಡೋರ್ ಓಪನ್ ಆಗಿ ಒಬ್ಬ ಹ್ಯಾಂಡ್ ಸಮ್ ಯುವಕ ಇಳಿದುಬಂದವನೇ ಅಲ್ಲಿ ನಿಂತಿದ್ದ ಮೂವರು ಗೆಳೆಯರಿಗೆ ನಮಸ್ಕರಿಸಿ. ಎಲ್ಲರೂ ಹೇಗಿದ್ದೀರಿ ಅಂಕಲ್, ನಾನು ನಿಮ್ಮ ನಾಲ್ಕನೇ ಗೆಳೆಯನ ಮಗ ಇಲ್ಲಿ ಕಮಿಷನರ್ ಆಗಿದ್ದೇನೆ. ಎಂದು ತನ್ನನ್ನು ಪರಿಚಯಿಸಿಕೊಂಡ. ನಮ್ಮ ತಂದೆ ಮೇಷ್ಟ್ರಾಗಿದ್ದರು. ಕೆಲವು ದಿನಗಳಿಂದ ಅವರಿಗೆ ಹುಷಾರು ತಪ್ಪಿ ಬರಲು ಆಗಲಿಲ್ಲ. ನಮ್ಮನ್ನೆಲ್ಲ ಬಹಳ ಕಷ್ಟಪಟ್ಟು ಬೆಳೆಸಿ, ಒಳ್ಳೆಯ ಎಜುಕೇಶನ್ ಕೊಡಿಸಿದರು. ಅವರ ಆಶೀರ್ವಾದದಿಂದ ನಾನಿಂದು ಉನ್ನತ ಹುದ್ದೆಯಲ್ಲಿದ್ದೇನೆ 

ನನ್ನ ತಂದೆ ಎರಡು ತಿಂಗಳ ಹಿಂದೆ ನನಗೊಂದು ಮಾತು ಹೇಳಿದ್ದರು. ಬರಲಿರುವ ಹೊಸ ವರ್ಷ ಜನವರಿ ಒಂದನೇ ತಾರೀಕು. ನಾನು ನನ್ನ ಬಾಲ್ಯದ ಗೆಳೆಯರು

ಇಂಥ ಹೋಟೆಲ್ ನಲ್ಲಿ ಸೇರುತ್ತೇವೆ. ಕೊನೆಗೆ ಯಾರು ಬರುತ್ತಾರೋ ಅವರೇ ಅಂದಿನ ಬಿಲ್ ಕಟ್ಟಬೇಕು ಎಂದು ಮಾತಾಡಿಕೊಂಡಿದ್ದೆವು. ಆದರೆ ನನಗಿರುವ ಕಾಯಿಲೆ ನೋಡಿದರೆ ಅಲ್ಲೀ ತನಕ ಬದುಕುವ ವಿಶ್ವಾಸ ಇಲ್ಲ. ಜನವರಿ ಒಂದನೇ ತಾರೀಕು ಆ ಹೋಟೆಲಿಗೆ ಬರುತ್ತಾರೆ. ಅವರೆಲ್ಲರ ಊಟ ಮುಗಿದ ಮೇಲೆ ಹೋಗಬೇಕು. ಮೊದಲೇ ನೀನು ಹೋಗಿ ನಾನು ಸತ್ತಿರುವ ವಿಚಾರ ಹೇಳಿದರೆ, ಅವರ ಸಂತೋಷವೆಲ್ಲ ನೀರ ಮೇಲಿನ ಗುಳ್ಳೆಯಾಗುತ್ತದೆ. ಅಂದಿನ ಬಿಲ್ಲನ್ನು ನೀನೇ ಕಟ್ಟಬೇಕು. ನಾನು ಅವರಿಗೆ ಕೊಟ್ಟ ಮಾತನ್ನು ಉಳಿಸಿ ಒಳ್ಳೆಯ ಸ್ನೇಹಿತನಾಗುವೆ. ನನ್ನ ಮಗ ನೀನು ಅದನ್ನು ಉಳಿಸಿದಂತಾಗುತ್ತದೆ ಎಂದಿದ್ದರು ಇಷ್ಟು ಹೇಳಿ ದುಃಖ ತಾಳದೆ ಅವನು ಸುಮ್ಮನಾದ. ಅವನ ಮಾತು ಕೇಳಿ, ಗೆಳೆಯರ ಕಣ್ಣೀರ ಕಟ್ಟೆ ಒಡೆಯಿತು. ಮೂವರೂ ಯುವಕನನ್ನು ತಬ್ಬಿಕೊಂಡರು. ಸ್ವಲ್ಪ ಹೊತ್ತಾದ ಮೇಲೆ ಅವನಿಗೆ ಆಶೀರ್ವದಿಸಿ ಕಳಿಸಿದರು. 


ಎದೆಯ ತುಂಬಾ ದುಃಖದ ಭಾರ ಹೊತ್ತು ಮೂರು ಗೆಳೆಯರು ಒಂದು ನಿರ್ಧಾರ ಮಾಡಿದರು. ನಾವು ಒಂದೆಡೆ ಸೇರಲು 40 ವರ್ಷ ಕಾಯಬಾರದಾಗಿತ್ತು. ಸಮಸ್ಯೆಗಳು ಎಷ್ಟೇ ಇರಲಿ ವರ್ಷದೊಳಗೆ ಒಂದು ಸಲ ಸೇರಬೇಕು. ನಾವು ಮೊದಲೇ ಈ ಕೆಲಸ ಮಾಡಿದ್ದರೆ, ನಮ್ಮನ್ನು ಅಗಲಿದ ಗೆಳೆಯನಿಗೆ ಇಷ್ಟು ಕಷ್ಟ ಬರುತ್ತಿರಲಿಲ್ಲ. ನಾವು ಮೂವರು ಅವನಿಗೆ ಸಹಾಯ ಮಾಡುತ್ತಿದ್ದೆವು. ಬಹಳ ಕಷ್ಟದಲ್ಲಿ ಸತ್ತ.

ಇನ್ನು ಹೀಗಾಗಬಾರದು ಇದು ನಮ್ಮ ಗೆಳೆತನದ ಸಾಕ್ಷಿಯಾಗಲಿ. 


*ತಿಳಿದುಕೊಳ್ಳಬೇಕಾದುದು,* *ನಮ್ಮ ಕೆಲಸ, ಜವಾಬ್ದಾರಿ,* *ಮನೆ, ಮಕ್ಕಳು ಮದುವೆ, ಎನ್ನುವ ಜಂಜಾಟದಲ್ಲಿ ಕಳೆದುಬಿಡುತ್ತೇವೆ. ಕಾಲ ಹಿಂದೆ ಬರುವುದಿಲ್ಲ.* *ಸಮಯದ ಅಭಾವ ಎಂದುಕೊಳ್ಳುತ್ತಲೇ,ನಮ್ಮ ಕುಟುಂಬದವರನ್ನು, ಆತ್ಮೀಯ ಗೆಳೆಯರು, ಹಿತೈಷಿಗಳನ್ನು ನೋಡಲು ಹೋಗುವುದಿಲ್ಲ. ಮುಂದೆ ಹೋದಂತೆ ಆ ಸಮಯ ಸ್ವಲ್ಪ ಸ್ವಲ್ಪವೇ ದೂರ ಮಾಡುತ್ತದೆ. ಮನಸ್ಸು ಮಾಡಿ ನಮ್ಮವರನ್ನು ನೋಡಿ ಬರಬೇಕು. ಕಷ್ಟ ಸುಖದಲ್ಲಿ ಸ್ವಲ್ಪವಾದರೂ ಜೊತೆಯಾಗಬೇಕು. ಬದುಕಿಗೊಂದು ಅರ್ಥ ಸಿಗುತ್ತದೆ. ಇದಕ್ಕಾಗಿ ಸಮಯ ಕೊಡದಿದ್ದರೆ, ಸಂಬಂಧ ಉಳಿಯುವುದಿಲ್ಲ ಪಶುಗಳಿಗೂ, ಮನುಷ್ಯನಿಗೂ ವ್ಯತ್ಯಾಸವೇ ಇರುವುದಿಲ್ಲ.*

ಬಾಳೊಂದು ಭಾವಗೀತೆ ಆನಂದ ತುಂಬಿದ ಕವಿತೆ

ಬಡವ ಬಲ್ಲಿದ ಭೇದವಿಲ್ಲದ ಭೂಲೋಕ ಸ್ವರ್ಗವಿದಂತೆ!!

👍💐💐💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು