Sunday, July 14, 2024

 ಕಥೆ-456

ಕಾರ್ಯ-ಕಾರಣ ಸಿದ್ಧಾಂತ

ಭಾರತೀಯ ಸಂಪ್ರದಾಯದಲ್ಲಿ ಕಾರ್ಯ-­­ಕಾರಣ ಸಿದ್ಧಾಂತ ಎಂಬು­ದೊಂದಿದೆ. ಅದರ ಪ್ರಕಾರ, ಯಾವುದೇ ಕಾರ್ಯವಾಗಿದ್ದರೆ ಅದಕ್ಕೊಂದು ಕಾರಣ­ವಿರ­ಲೇಬೇಕು. ನೀವು ದಿನಾಲು ಬೆಳಿಗ್ಗೆ ಎದ್ದು ಮನೆಯ ಬಾಗಿಲು ತೆರೆಯುವು­ದಕ್ಕಿಂತ ಮೊದಲು ಮನೆಯ ಅಂಗಳ­ದಲ್ಲಿ ವರ್ತಮಾನ ಪತ್ರಿಕೆ ಬಿದ್ದಿದ್ದರೆ, ಅದನ್ನು ಯಾರೋ ಹಾಕಿರಲೇಬೇಕು. ಪೇಪರ್ ಹಾಕುವವರು ನಮಗೆ ಕಂಡಿಲ್ಲ.

ಪೇಪರ್ ಇರುವುದರಿಂದ ಯಾರೋ ಹಾಕಿರುವುದು ಅವಶ್ಯಕ. ಇದೇ ಕಾರ್ಯ-ಕಾರಣ ಸಿದ್ಧಾಂತ. ಇದು ತೀರ ಸರಳೀಕೃತ ವಿಶ್ಲೇಷಣೆ. ಆದರೆ, ಕೆಲವೊಂದು ಬಾರಿ ಕಾರಣ-ವನ್ನು ತಪ್ಪಾಗಿ ಭಾವಿಸಿ ಕೆಲಸ ನಡೆದಿರುವುದೂ ಉಂಟು. ಇಂಗ್ಲೆಂಡಿನ ಸ್ಕಾಟ್ಲೆಂಡ್‌ನ ಉತ್ತರಭಾಗದಲ್ಲಿ ಹೆಬ್ರೈಡ್ ಎಂಬ ಸಾಲು ಸಾಲು ದ್ವೀಪಗಳಿವೆ. ಕೆಲವು ದಶಕಗಳ ಹಿಂದೆ ಅಲ್ಲಿಯ ನಿವಾಸಿಗಳಿಗೆ ಒಂದು ದೊಡ್ಡ ಸಮಸ್ಯೆ-ಯಾಗಿತ್ತು. ಅದು ಈಗಲೂ ಇದೆಯೆಂದು ಕೆಲವರು ಹೇಳುತ್ತಾರೆ. ಅಲ್ಲಿಯ ಜನರ ತಲೆಯಲ್ಲಿ ಹೇನುಗಳು ವಿಪರೀತವಾಗಿ ಇರುತ್ತಿದ್ದವು. ಏನೇನು ಪ್ರಯತ್ನ ಮಾಡಿದರೂ ಅವುಗಳ ಕಾಟದಿಂದ ಮುಕ್ತಿ ದೊರೆಯುತ್ತಿರಲಿಲ್ಲ.

ಆದರೆ, ಯಾವುದೋ ಕಾರಣಕ್ಕೆ ತಲೆ­ಯಲ್ಲಿಯ ಹೇನುಗಳು ಮಾಯ-ವಾದೊ­ಡನೆ ಆ ವ್ಯಕ್ತಿಗೆ ವಿಪರೀತ ಜ್ವರ ಬಂದು ಆರೋಗ್ಯ ಹದಗೆಡುತ್ತಿತ್ತು. ಅದಕ್ಕೆ ಅವರು ಆಗ ತಲೆಯಲ್ಲಿ ಹೇನುಗಳನ್ನು ತಂದು ಹಾಕಿಕೊಳ್ಳುತ್ತಿದ್ದರು. ಎರಡು ಮೂರು ದಿನಗಳ ಪ್ರಯತ್ನದ ನಂತರ ಅವು ವ್ಯಕ್ತಿಯ ತಲೆಯಲ್ಲಿ ನೆಲೆಯೂ­ರುತ್ತಿದ್ದವು. ಅವು ನೆಲೆ ನಿಂತೊಡನೆ ಜ್ವರ ಕಡಿಮೆಯಾಗಿ ಆರೋಗ್ಯ ಸುಧಾರಿ­ಸುತ್ತಿತ್ತು. ಇದು ಹೇಗೆ ಸಾಧ್ಯ ಎಂಬುದು ವೈದ್ಯರಿಗೂ ಬಹಳ ಕಾಲ ತಿಳಿಯಲಿಲ್ಲ. ಆದರೆ, ಇದರ ಮರ್ಮವನ್ನು ಒಬ್ಬ ಕೀಟಶಾಸ್ತ್ರಜ್ಞ ಕಂಡು ಹಿಡಿದ. ಜನ ತಿಳಿದುಕೊಂಡಂತೆ ಹೇನು ತಲೆಯಲ್ಲಿ ಇಲ್ಲದಿದ್ದಾಗ ಜ್ವರ ಬರುತ್ತಿರಲಿಲ್ಲ­ವೆಂದಲ್ಲ. ಜ್ವರ ಬಂದಾಗ ಹೇನುಗಳು ಉದುರಿಹೋಗುತ್ತಿದ್ದವು. ತಲೆಯಲ್ಲಿ ಬೆಚ್ಚಗೆ ಸೇರಿಕೊಂಡಿದ್ದ ಹೇನುಗಳು ವ್ಯಕ್ತಿಗೆ ಜ್ವರ ಬಂದಾಗ ತಲೆ ಬಿಸಿಯಾಗಿ ಅಲ್ಲಿ ಇರಲಾರದೆ ಹೊರಟು­ಹೋಗು­ತ್ತಿದ್ದವು. ಜ್ವರ ಕಡಿಮೆ­ಯಾದೊ­ಡನೆ ಮತ್ತೆ ಸೇರಿಕೊಳ್ಳುತ್ತಿದ್ದವು.

ಇಂಥದೇ ತಪ್ಪು ಕಲ್ಪನೆಗಳು ನಮ್ಮ ಬದುಕಿನಲ್ಲಿ ಸೇರಿಹೋಗಿವೆ. ಉದಾಹರ­ಣೆಗೆ ದಿನನಿತ್ಯ ಜಾಹೀರಾತನ್ನು ನೋಡು­ತ್ತೇವೆ. ದಟ್ಟವಾದ, ಉದ್ದವಾದ ಕೂದಲಿಗೆ ಈ xyz ಶಾಂಪೂ ಕಾರಣ. ಈ ಜಾಹೀರಾತಿನಲ್ಲಿ ಅತ್ಯಂತ ದಟ್ಟವಾದ, ಉದ್ದ ಕೂದಲು ಇದ್ದ ಹುಡುಗಿಯ ಅಥವಾ ಮಹಿಳೆಯ ಚಿತ್ರ­ವಿರು­ತ್ತದೆ. ಜಾಹೀರಾತು ನೋಡಿದವರು ತಮ್ಮ ಕೂದಲೂ ಅದರಂತೆಯೇ ಆದಿತೆಂದುಕೊಂಡು ಹಣಕೊಟ್ಟು ಕೊಂಡು ಕೂದಲಿನೊಂದಿಗೆ ಹಣವನ್ನು ಕಳೆದುಕೊಳ್ಳುತ್ತೇವೆ. ಶಾಂಪೂ ಕಂಪನಿ­ಯವರು ದಟ್ಟವಾದ, ಉದ್ದ ಕೂದಲು ಇದ್ದ ಹುಡುಗಿಯನ್ನು ಹುಡುಕಿ, ಆಕೆಯ ಚಿತ್ರವನ್ನು ಶಾಂಪೂ ಬಾಟಲಿಯೊಂದಿಗೆ ಮುದ್ರಿಸುತ್ತಾರೆ.

ಶಾಂಪೂವಿನಿಂದ ಅವರ ಕೂದಲು ಸಮೃದ್ಧವಾಗಲಿಲ್ಲ, ಬದಲಾಗಿ ಅವರ ಕೂದಲಿನಿಂದ ಶಾಂಪೂ ತಯಾರಿ­ಸಿದ ಕಂಪನಿ ಸಮೃದ್ಧವಾಯಿತು. ಇನ್ನೊಂದು ಅಂಥದೇ ಸಂಶೋಧನೆ! ಯಾರ ಮನೆಯಲ್ಲಿ ಪುಸ್ತಕಗಳು ಸಾಕಷ್ಟು ಪ್ರಮಾಣದಲ್ಲಿವೆಯೋ ಆ ಮನೆಯ ಮಕ್ಕಳು ಶಿಕ್ಷಣದಲ್ಲಿ ಪ್ರಗತಿ ಪಡೆಯುತ್ತಾರೆ. ಪುಸ್ತಕಗಳ ರಾಶಿ ಮಕ್ಕಳನ್ನು ಬುದ್ಧಿವಂತರಾಗಿ ಮಾಡಲಿಲ್ಲ. ಅಷ್ಟು ಪುಸ್ತಕಗಳನ್ನು ಮನೆಯಲ್ಲಿ ಇಟ್ಟುಕೊಂಡ ಪಾಲಕರಿಗೆ ಶಿಕ್ಷಣದ ಮಹತ್ವ ತಿಳಿದಿದೆ. ಅವರು ಮಕ್ಕಳ ಜೊತೆಗೇ ಕುಳಿತುಕೊಂಡು ಓದುವಂತೆ ಮಾಡುತ್ತಾರೆ. ಆದ್ದರಿಂದ ಯಾವುದಾ­ದರೂ ಇದೇ ರೀತಿ ಕಾರ್ಯ ಕಾರಣ ಸಂಬಂಧದಂತೆ ತೋರಿದರೆ ಸ್ವಲ್ಪ ಆಳವಾಗಿ ವಿಚಾರಮಾಡಿ ಪರೀಕ್ಷಿಸೋಣ. ಅವು ಬೇರೆಯಾಗಿಯೇ ಇರುವ ಸಾಧ್ಯತೆ ಇದೆ. ಹೇನು ಹಾಗೂ ಜ್ವರಗಳಂತೆ. ಕೃಪೆ : ನೆಟ್

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು