ಕಥೆ467
ನೋವಿಗೆ ಸ್ಪಂದನೆ
ಒಂದು ಸಾರಿ RETIRED . I A S. OFFICER ಕೋಟಿಗಟ್ಟಲೆ ಹಣ ಖರ್ಚು ಮಾಡಿ HIGHLY SOPHISTICATED ಮನೆಯನ್ನು ಕಟ್ಟಿಸುತ್ತಾನೆ..
ಯಾರೋ ಒಬ್ಬರು ಆ ಆಫೀಸರ್ ಗೆ ಹೇಳುತ್ತಾರೆ .."ಸಾರ್ ನಿಮ್ಮ ಮನೆಗೆ ವಾಸ್ತು ದೋಷ ನಿವಾರಣೆಗೆ ..ನೀವು
ಒಂದು ಗೀಜಗನ ಗೂಡನ್ನು..ENTRANCE ನಲ್ಲಿ ನೇತು ಹಾಕಿದರೆ ..ನಿಮ್ಮ ಎಲ್ಲಾ ವಾಸ್ತು ದೋಷಗಳು ನಿವಾರಣೆ ಆಗುತ್ತವೆ ..
ಆ ಆಫೀಸರ್ ಕೂಡಲೇ ಸ್ವಲ್ಪ ದೂರ ಇರುವ ಕಾಡಿಗೆ..
ಕಾರಿನಲ್ಲಿ ಹೋಗುತ್ತಾನೆ..
ಸ್ವಲ್ಪ ದೂರದಲ್ಲಿ...ಒಂದು ಮರ..ಕೆಳಗೆ ದೊಡ್ಡ ಕೆರೆ..
ಆ ಮರದಲ್ಲಿ..ಹತ್ತಾರು ಗೀಜಗನ ಗೂಡುಗಳು..ಆ ಆಫೀಸರ್ ಗೆ ತುಂಬಾ ಸಂತೋಷವಾಗುತ್ತದೆ..
ಆ ಗೂಡುಗಳನ್ನು ಕಿತ್ತಲಿಕ್ಕೆ..(.ಕೀಳಲು.) ಹುಡುಗರನ್ನು ಹುಡುಕುತ್ತಾನೆ ..
ಸ್ವಲ್ಪ ದೂರದಲ್ಲಿ..ಒಬ್ಬ ೧೨..(TWELVE) ವರ್ಷದ ಹುಡುಗ ದನಗಳನ್ನು ಕಾಯುತ್ತ ಇರುತ್ತಾನೆ ..
ಆ ಆಫೀಸರ್..ಆ ಹುಡುಗನನ್ನು ಕರೆದು ನಾಲ್ಕು ಗೂಡುಗಳನ್ನು..ಕಿತ್ತು ಕೊಡು ಅಂತ ಕೇಳುತ್ತಾನೆ ..
ಆ ಹುಡುಗ ಹೇಳುತ್ತಾನೆ ..."..ಸಾರ್..ನೀವೇನೂ ..ಕಿತ್ತು ಅನ್ನುತ್ತೀರಿ...ಗೂಡನ್ನು ಕಿತ್ತಿದ ಮೇಲೆ ತಾಯಿ ಹಕ್ಕಿ ಬಂದು ತನ್ನ ಗೂಡನ್ನು ಹುಡುಕುತ್ತದೆ...ಗೂಡನ್ನು ಕಾಣದೇ ಕಂಗಾಲಾಗಿ ..ಚೀರುತ್ತಾ...ಚೀರುತ್ತಾ..ಮರದ ಸುತ್ತಲೂ ಹಾರುತ್ತದೆ ..
ಅದರ ಆಕ್ರಂದನ ..ಮರಿಗಳನ್ನು ಕಳೆದುಕೊಂಡ ನೋವು..ಅದು ವಿಲಿ ವಿಲಿ ಒದ್ದಾಡುವ ಸ್ಥಿತಿ ಯನ್ನು ನನ್ನ ಕೈಯಲ್ಲಿ ನೋಡವುದಕ್ಕೆ ಆಗುವುದಿಲ್ಲ ..ಸಾರ್..
ಸಾರ್ ..ನಾನು ಅಂತಹ ಪಾಪದ ಕೆಲಸ ಮಾಡುವುದಿಲ್ಲ ."
ಆ ಆಫೀಸರ್ ..ಆ ಹುಡುಗನಿಗೆ ಹಣ ಕೊಡಲು ಮುಂದೆ ಹೋಗುತ್ತಾನೆ...ಕನಿಷ್ಟ. ..ಒಂದಾದರು ಗೂಡನ್ನು ಕೊಡಲು ಕೇಳಿಕೊಳ್ಳುತ್ತಾನೆ ...
ಆದರೂ ..ಆ ಹುಡುಗ ಒಪ್ಪುವುದಿಲ್ಲ ..
ಆ ಆಫೀಸರ್ ಕೇಳುತ್ತಾನೆ .." ಏನು ಓದಿಕೊಂಡಿದ್ದೀಯ..?
ಶಾಲೆಗೆ ಹೋಗುತ್ತಿದ್ದೀಯಾ..?"
ಆ ಹುಡುಗ, " ಇಲ್ಲ ..ಸಾರ್ ನಾನು ಶಾಲೆಗೆ ಹೋಗಿಲ್ಲ.."
ಆ RETIRED. I A S. OFFICER. .ತನಗೆ ತಾನೆ ಪ್ರಶ್ನೆ ಹಾಕಿಕೊಳ್ಳುತ್ತಾರೆ ...
ಏನೂ ಓದದೇ ಪಕ್ಷಿಗಳ ನೋವು ..ನಲಿವು ಗಳ ಬಗ್ಗೆ ತಿಳಿದು ಕೊಂಡಿರುವ ..ಆ ಹುಡುಗ
ವಿದ್ಯಾವಂತನೋ..?
ದೊಡ್ಡ. IAS ಪದವಿ ಪಡೆದು ೩೨ ವರ್ಷ. ..ಸೇವೆ ಸಲ್ಲಿಸಿ
ಆ ಪಕ್ಷಿಗಳ ನೋವಿಗೆ...ಸ್ಪಂದಿಸದ...ತಿಳುವಳಿಕೆ ಇಲ್ಲದೆ
ಆ ಗೂಡುಗಳನ್ನು ಕಿತ್ತಲು ಮುಂದಾದ
ನಾನು ವಿದ್ಯಾವಂತನೋ..? ಕೃಪೆ.: ರಂಗೋಪ ದತ್ತತ್ರೇಯ