ಕಥೆ-473
ಕಪ್ಪು ಚುಕ್ಕೆ
ಮೇಷ್ಟ್ರು ಇದ್ದಕ್ಕಿದ್ದಂತೆ ಪರೀಕ್ಷೆ ಇಟ್ಟು ಎಲ್ಲಾ ಮಕ್ಕಳಿಗು ಒಂದೊಂದು ಬಿಳಿಹಾಳೆಗಳನ್ನು ಕೊಟ್ಟರು. ಆ ಬಿಳಿ ಹಾಳೆಯಲ್ಲಿ ಏನು ಕಾಣಿಸುತ್ತದೆಯೋ ಅದೇ ವಿಷಯದ ಬಗ್ಗೆ ಬರೆಯುವಂತೆ ಹೇಳಿದರು. ಪ್ರತಿಯೊಬ್ಬರ ಹಾಳೆಯ ಮೇಲೂ ಒಂದೊಂದು ಸಣ್ಣ ಚುಕ್ಕೆ ಇತ್ತು. ಒಬ್ಬೊಬ್ಬರೂ ಒಂದೊಂದು ರೀತಿಯಲ್ಲಿ ಆ ಚುಕ್ಕೆಯ ಬಗ್ಗೆ ತಮ್ಮ ತಮ್ಮ ಮನಸ್ಸಿಗೆ ಬಂದಂತೆ ಬರೆದರು.
ಪರೀಕ್ಷೆ ಮುಗಿದ ನಂತರ ಎಲ್ಲರ ಹಾಳೆಗಳನ್ನು ನೋಡಿದ ಮೇಷ್ಟ್ರು ಒಂದು ಪ್ರಶ್ನೆ ಕೇಳಿದರು.
ಹಾಳೆಯು ಸಂಪೂರ್ಣ ಸ್ವಚ್ಛ ಬಿಳಿ ಬಣ್ಣದಿಂದ ಕೂಡಿದ್ದರೂ ಆ ಸಣ್ಣ ಕಪ್ಪು ಚುಕ್ಕೆಯನ್ನೇ ಏಕೆ ಆರಿಸಿಕೊಂಡಿರಿ ? ಮಕ್ಕಳೆಲ್ಲಾ ಮೌನ . . . .
ಏಕೆಂದರೆ ಈ ಪ್ರಪಂಚವೇ ಹಾಗೆ
ನಿನ್ನಲ್ಲಿ ಎಷ್ಟೇ ಒಳ್ಳೆಯತನವಿದ್ದರೂ ಗುರುತಿಸುವುದಿಲ್ಲ. ಬದಲಾಗಿ ಒಂದು ಸಣ್ಣ ತಪ್ಪು ಹುಡುಕಿ ಅದಕ್ಕೆ ಬಣ್ಣ ಹಚ್ಚಿ ಬಿಂಬಿಸುತ್ತದೆ.