Friday, August 2, 2024

 ಕಥೆ-475

ಒಂದು ಸಂಜೆ ಹೊತ್ತು .....


ಒಬ್ಬ ವ್ಯಕ್ತಿ ತನ್ನ ವಯಸ್ಸಾದ ತಾಯಿಯನ್ನು ಕರೆದು ಕೊಂಡು ಒಂದು ರೆಸ್ಟೋರೆಂಟಿಗೆ ಹೋದ.


ಆ ತಾಯಿಗೆ ವಯಸ್ಸಾಗಿತ್ತು ಮತ್ತು ಅವರು ತುಂಬಾ ಅಶಕ್ತರಾಗಿದ್ದರು. ಸರ್ವರ್ ಬಂದ, ಆರ್ಡರ್ ಕೊಟ್ಟು ಊಟ ಬಂದಿದ್ದೂ ಆಯಿತು.


ಊಟ ಮಾಡುತ್ತಿರುವಾಗ ಅಮ್ಮ ಬಟ್ಟಲಿನ ಸಾಂಬಾರನ್ನೆಲ್ಲಾ ಮೈ ಮೇಲೆ ಚೆಲ್ಲಿಕೊಂಡು ಬಿಟ್ಟರು. ಬಟ್ಟಲು ದೊಡ್ಡ ಸದ್ದು ಮಾಡಿತು.


ಆ ರೆಸ್ಟೋರೆಂಟಿನಲ್ಲಿದ್ದ ಅಷ್ಟೂ ಜನ ಅವರತ್ತ ನೋಡ ತೊಡಗಿದರು. ಒಂಥರಾ ವಿಚಿತ್ರ ಮುಖಭಾವವಿತ್ತು ಎಲ್ಲರಲ್ಲಿ.


ಆದರೆ ಮಗ ಮಾತ್ರ ಏನೂ ಹೇಳಲಿಲ್ಲ. ಆರಾಮಾಗಿದ್ದ. ನಗುನಗುತ್ತಾ ಅಮ್ಮನನ್ನು ಎಬ್ಬಿಸಿ ವಾಶ್ ರೂಮಿಗೆ

ಕರೆದುಕೊಂಡು ಹೋದ. ಏನೂ ಬೇಸರಿಸಿಕೊಳ್ಳದೆ ಮೈಮೇಲೆ ಬಿದ್ದ ಸಾಂಬಾರನ್ನು ಒದ್ದೆ ಬಟ್ಟೆಯಿಂದ ಒರೆಸಿ ಸ್ವತ್ಛಗೊಳಿಸಿದ. ಅಮ್ಮನ ಕೈತೊಳೆದ. ಕನ್ನಡಕವನ್ನು ಮತ್ತೆ ಸರಿಯಾಗಿಟ್ಟ. ಸೀರೆಯನ್ನು ಸರಿಪಡಿಸಿದ.


ಆಮೇಲೆ ನಿಧಾನಕ್ಕೆ ಅಮ್ಮನನ್ನು ಹೊರಗೆ ಕರೆದು ಕೊಂಡು ಬಂದ. ಅವರಿಬ್ಬರು ಹೊರಗೆ ಬರುವಾಗ ಇಡೀ ರೆಸ್ಟೋರೆಂಟಿನಲ್ಲಿದ್ದ ಜನ ಅವರನ್ನೇ ನೋಡುತ್ತಿದ್ದರು.


ಸೂಜಿ ಬಿದ್ದರೂ ಕೇಳಿಸುವಷ್ಟು ಮೌನ. ಅವರೆಲ್ಲರಿಗೂ ಅಚ್ಚರಿ. ಅಷ್ಟು ಅವಮಾನವಾದರೂ ಒಬ್ಬ ವ್ಯಕ್ತಿ ಹೇಗೆ ತಡೆದುಕೊಳ್ಳಲು ಸಾಧ್ಯ?

ಮಗ ಊಟ ಮುಗಿಸಿ ಬಿಲ್ ಪಾವತಿಸಿ ಅಮ್ಮನನ್ನು ಕರೆದುಕೊಂಡು ಹೊರಡಲು ಸಿದ್ಧನಾದ.


ಅವನು ಬಾಗಿಲಾಚೆ ಹೋಗಬೇಕು ಅನ್ನುವಷ್ಟರಲ್ಲಿ ಒಬ್ಬ ಅಜ್ಜ ಅವನನ್ನು ನಿಲ್ಲಿಸಿದ. "ನೀನು ಏನನ್ನೋ ಇಲ್ಲಿ ಬಿಟ್ಟು ಹೊರಟಿದ್ದೀಯಲ್ಲ?'


ಮಗನಿಗೆ ಆಶ್ಚರ್ಯವಾಯಿತು. "ಇಲ್ಲ ಸರ್, ಏನೂ ಬಿಟ್ಟಿಲ್ಲ.' ಅಜ್ಜ ಉತ್ತರಿಸಿದ.. "ಇಲ್ಲ. ನೀನು ಇಲ್ಲಿ ಎಲ್ಲಾ ಮಕ್ಕಳಿಗೆ ಒಂದು ಪಾಠವನ್ನು ಬಿಟ್ಟು ಹೋಗುತ್ತಿದ್ದೀಯಾ ಮತ್ತು ಎಲ್ಲಾ

ತಾಯಂದಿರಿಗೆ ಬದುಕಲ್ಲಿ ನಂಬಿಕೆ ಹುಟ್ಟಿಸಿ ಹೋಗುತ್ತಿದ್ದೀಯಾ.


ರೆಸ್ಟೋರೆಂಟು ಮೌನವಾಗಿತ್ತು.

🙏💐💐💐

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು