Saturday, August 10, 2024

 ಕಥೆ-483

ಸಾಧನೆಗೆ ಸಾವಿರ ದಾರಿ


ಯಶಸ್ಸು ಪಡೆಯಲು ನನಗೆ 17 ವರ್ಷ ಮತ್ತು 114 ದಿನಗಳು ಬೇಕಾಯಿತು ಎಂದು ವಿಶ್ವ ಪ್ರಸಿದ್ಧ ಅರ್ಜೆಂಟೇನ ಫುಟ್ಬಾಲ್ ಆಟಗಾರ ಲಿಯಾನ್‌ ಮೆಸ್ಸಿ ಹೇಳಿದ್ದಾನೆ. ಆದರೆ, ಈಗಿನ ಯುವ ತಲೆಮಾರಿನ ಕೆಲವರು ಕೆಲವೊಂದು ಸೋಲು ಕಂಡಾಗಲೇ ಹಿಂಜರಿಯುತ್ತಾರೆ. ಈ ಜಗತ್ತಿನಲ್ಲಿ ಯಶಸ್ಸು ಪಡೆದ ವ್ಯಕ್ತಿಗಳನ್ನೊಮ್ಮೆ ನೋಡಿ. ಯಾರೂ ಒಂದೇ ರಾತ್ರಿ ಕಳೆದು ಬೆಳಗಾಗುವಾಗ ಯಶಸ್ಸು ಪಡೆದಿರುವುದಲ್ಲ. ಅವರ ಯಶಸ್ಸಿನ ಹಿಂದೆ ನೂರಾರು ವೈಫಲ್ಯಗಳ ಕತೆ ಇರುತ್ತದೆ. ಸೋಲಿನಿಂದ ಕಂಗೆಟ್ಟವರು ಯಶಸ್ಸಿನತ್ತ ಸಾಗಲು ಹಿಂಜರಿಯಬಾರದು. ಥಾಮಸ್‌ ಅಲ್ವ ಎಡಿಸನ್‌

ಇವರ ಕತೆಯನ್ನು ನೀವು ಈಗಾಗಲೇ ಕೇಳಿರಬಹುದು. ಆದರೂ, ಸೋಲಿಗೆ ಹೆದರಬಾರದು ಎನ್ನುವುದಕ್ಕೆ ಸದಾ ನನಪಾಗೋ ವ್ಯಕ್ತಿ ಇವರು. ಬಲ್ಬ್‌ ಕಂಡು ಹಿಡಿದು ಜಗತ್ತಿಗೆ ಹೊಸ ಬೆಳಕು ನೀಡಿದ ವ್ಯಕ್ತಿ. ಇವರು ಒಂದು ಬಲ್ಬ್‌ ಕಂಡುಹಿಡಿಯುವ ಮೊದಲು 1000ಕ್ಕೂ ಹೆಚ್ಚು ಬಾರಿ ವೈಫಲ್ಯ ಕಂಡಿದ್ದಾರೆ.

ಥಾಮಸ್‌ ಎಡಿಸನ್‌ ವಿದ್ಯಾರ್ಥಿಯಾಗಿದ್ದಾಗ ಶಾಲೆಯಲ್ಲಿ ಪ್ರತಿನಿತ್ಯ ದೂರು. ಇವನ ಟೀಚರ್‌ ಇವನ ಅಮ್ಮನಲ್ಲಿ ಹೇಳುತ್ತಿದ್ದರಂತೆ, "ನಿಮ್ಮ ಮಗ ಓದುವುದರಲ್ಲಿ ಚುರುಕಿಲ್ಲ. ಈತ ಯಶಸ್ಸು ಪಡೆಯುವುದು ಸಾಧ್ಯವಿಲ್ಲ" ಎಂದು. ಈತನ ಮಿದುಳು ತುಂಬಾ ಸ್ಲೋ, ಈತನಿಗೆ ಬೋಧನೆ ಮಾಡುವುದು ವ್ಯರ್ಥ ಎಂದು ಹೇಳುತ್ತಿದ್ದರು. ಆದರೆ, ಹಲವು ಶತಮಾನಗಳ ಕಾಲ ನೆನಪಿಟ್ಟುಕೊಳ್ಳುವಂತಹ ಅನ್ವೇಷಣೆಯನ್ನು ಇದೇ ಥಾಮಸ್‌ ಎಡಿಸನ್‌ ಮಾಡಿರೋದು ಈಗ ಇತಿಹಾಸ. ಸಾವಿರ ಬಾರಿ ಬಲ್ಬ್‌ ಕಂಡುಹಿಡಿಯಲು ಸೋತರೂ ಇವರು ಹಿಂಜರಿಯಲಿಲ್ಲ. ಯಶಸ್ಸು ಪಡೆಯಲು ಬಯಸುವವರು ಇದನ್ನು ನೆನಪಿಟ್ಟುಕೊಳ್ಳಿ. ಕನಸು ಕಂಡು ಏಕೆ ಎಂದು ಮಲಗಬಾರದು,ಈ ಕನಸು ನನ್ನಿಂದ ನನಸಾಗಬಾರದೇಕೆ ಎಂದು ಏಳಬೇಕು, ಕನಸು ಮತ್ತು ನನಸುಗಳು ನಮ್ಮ ಕೈಯಲ್ಲಿವೆ

ಸಾಧನೆಗೆ ಸಾವಿರ ದಾರಿ..

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು