ಕಥೆ-493
ಬದಲಾವಣೆ
ಯೆನ್ ಗುರು ಕಡಲ ತೀರದಲ್ಲಿ ನಡೆದುಕೊಂಡು ಹೋಗುತ್ತಿರುತ್ತಾರೆ. ಆಗೊಮ್ಮೆ ಈಗೊಮ್ಮೆ ಅಲೆಗಳು ಕಡಲ ತೀರವನ್ನು ಮುತ್ತಿಕ್ಕಿ ಹಿಂದಕ್ಕೆ ಸರಿಯುತ್ತದೆ. ಆಗ ನೂರಾರು ನಕ್ಷತ್ರ ಮೀನುಗಳು ಅಲೆಗಳೊಂದಿಗೆ ತೇಲಿ ಬಂದು ದಡದಲ್ಲೇ ಉಳಿದುಕೊಳ್ಳುತ್ತವೆ.
ಸೂರ್ಯನ ಪ್ರಖರ ಕಿರಣಕ್ಕೆ ವಿಲವಿಲನೆ ಒದ್ದಾಡುತ್ತಿರುತ್ತವೆ. ಅದನ್ನು ಕಂಡ ಯೆನ್ ಮೀನುಗಳನ್ನು ಎತ್ತಿ ಸಮುದ್ರಕ್ಕೆ ಎಸೆಯುತ್ತಾರೆ.
ಯೆನ್ ಮೀನುಗಳನ್ನು ಮತ್ತೆ ಮತ್ತೆ ಸಮುದ್ರಕ್ಕೆ ಎಸೆಯುತ್ತಿದ್ದುದನ್ನು ಮೀನುಗಾರನೊಬ್ಬ ನೋಡುತ್ತಾನೆ. ಮೀನುಗಾರ ಅವನ ಬಳಿ ಬಂದು, "ಹೀಗೇಕೆ ಮಾಡುತ್ತಿದ್ದೀಯಾ? ಪ್ರತಿಸಲ ಅಲೆಗಳು ಬಂದಾಗ ಈ ರೀತಿ ಮೀನುಗಳು ದಡದಲ್ಲಿ ಬಂದು ಬೀಳುತ್ತವೆ. ಅವೆಲ್ಲವನ್ನೂ ನಿನ್ನಿಂದ ನೀರಿಗೆಸೆದು ಬದುಕುವಂತೆ ಮಾಡುವುದಕ್ಕೆ ಸಾಧ್ಯವಿದೆಯಾ? ಎಂದು ಪ್ರಶ್ನಿಸುತ್ತಾನೆ. ಈ ರೀತಿ ಪ್ರಯತ್ನ ಮಾಡುವುದರಿಂದ ಏನು ಬದಲಾವಣೆ ಆಗುವುದಿಲ್ಲ" ಎನ್ನುತ್ತಾನೆ ಮೀನುಗಾರ.
"ಆಗುವುದು ಬಿಡುವುದು ಎರಡನೆಯದು, ನಮ್ಮ ಪ್ರಯತ್ನವನ್ನು ಮುಂದುವರಿಸೋಣ. ಅದರಿಂದ ಬದಲಾವಣೆ ಆಗೇ ಆಗುತ್ತದೆ" ಎನ್ನುತ್ತಾ ಯೆನ್ ಮತ್ತೊಂದು ಮೀನನ್ನು ನೀರಿಗೆಸೆಯುತ್ತಾರೆ.
ಒಳ್ಳೆಯ ಕೆಲಸ ಮಾಡುವುದಕ್ಕೆ ಯಾವತ್ತೂ ಹಿಂಜರಿಯಬಾರದು.
ಆಧಾರ : ವಿ ಕೆ ಭೋದಿವೃಕ್ಷ