Thursday, August 22, 2024

 ಕಥೆ-495

ನಾವು ಮಾಡಿದ ತಪ್ಪಿಗೆ ನಾವೇ ಹೊಣೆಗಾರರು

ಒಂದು ರಾತ್ರಿ ಒಬ್ಬ ಕಳ್ಳ ಹೊಂಚುಹಾಕಿ ಒಂದು ಮನೆಯಲ್ಲಿ ಕಳ್ಳತನ ಮಾಡಲು ಯೋಜನೆ ಹಾಕಿಕೊಂಡಿದ್ದ. ರಾತ್ರಿಯಾದ ಮೇಲೆ, ಮನೆಯ ದೀಪಗಳೆಲ್ಲ ಆರಿದ ಮೇಲೆ ಆತ ನಿಧಾನವಾಗಿ ಮನೆಯ ಗೋಡೆಯನ್ನೇರಿ ಕಿಟಕಿಯಿಂದ ಒಳಗೆ ಹೋಗಲು ಪ್ರಯತ್ನಿಸಿದ. ಅವನು ಕಿಟಕಿಯ ಚೌಕಟ್ಟನ್ನು ಹಿಡಿದುಕೊಂಡು ಅದರ ಬಾಗಿಲುಗಳನ್ನು ಒಳಗೆ ತಳ್ಳಲು ನೋಡಿದಾಗ ಆ ಚೌಕಟ್ಟೇ ಸಡಿಲವಾಗಿ ಕಳಚಿಕೊಂಡಿತು. ಆಗ ಕಳ್ಳ ಬಿಚ್ಚಿಬಿದ್ದ ಚೌಕಟ್ಟಿನೊಡನೆ ನೆಲದ ಮೇಲೆ ಧೂಪ್ಪನೇ ಬಿದ್ದ.

ಅವನ ಬಲಗಾಲು ಮುರಿಯಿತು. ಮರುದಿನ ಆತ ರಾಜನ ಕಡೆಗೆ ದೂರು ಒಯ್ದ. ‘ಮಹಾಸ್ವಾಮಿ, ಕಳ್ಳತನ ನನ್ನ ಹೊಟ್ಟೆ ಹೊರೆಯುವ ಉದ್ಯೋಗ. ಆದರೆ ಈ ಮನೆಯ ಕಿಟಕಿಯ ಚೌಕಟ್ಟನ್ನು ಮಾಡಿದ ಬಡಗಿ ಸರಿಯಾಗಿ ಕೆಲಸ ಮಾಡಿದ್ದರೆ ನನ್ನ ಕಾಲು ಮುರಿಯುತ್ತಿರಲಿಲ್ಲ. ಆದ್ದರಿಂದ ಅವನಿಗೆ ಶಿಕ್ಷೆ ನೀಡಿ ನನಗೆ ನ್ಯಾಯ ಒದಗಿಸಬೇಕು’. ರಾಜ ಬಡಗಿಯನ್ನು ಕರೆಸಿ ಕೇಳಿದ. ಅದಕ್ಕೆ ಆತ, ‘ಪ್ರಭೂ, ಇದು ನನ್ನ ತಪ್ಪಲ್ಲ. ನಾನು ಚೌಕಟ್ಟನ್ನು ಸರಿಯಾಗಿಯೇ ಮಾಡಿದ್ದೆ. ಆದರೆ, ಗಾರೆಯವನು ಅದನ್ನು ಕೂಡ್ರಿ­ಸುವಾಗ ಸರಿಯಾಗಿ ಗಾರೆ ಹಾಕಿ ಭದ್ರಪಡಿಸಿಲ್ಲ. ಆದ್ದರಿಂದ ಶಿಕ್ಷೆಯಾಗಬೇಕಾದರೆ ಅದು ಗಾರೆಯವನಿಗೆ ಆಗಬೇಕು’ ಎಂದ. ರಾಜನಿಗೆ ಸರಿ ಎನ್ನಿಸಿತು.

ಗಾರೆಯವನನ್ನು ಕರೆದು ‘ನಿನಗೆ ಯಾಕೆ ಶಿಕ್ಷೆ ನೀಡಬಾರದು’ ಎಂದು ಸಮಜಾಯಿಷಿ ಕೇಳಿದ. ಆತ ಗಾಬರಿಯಾಗಿ ತನ್ನ ವಾದವನ್ನು ಮಂಡಿಸಿದ. ‘ಮಹಾರಾಜ, ದಯವಿಟ್ಟು ನನ್ನ ಮಾತು ಕೇಳಿ. ನಾನು ಸಂಪೂರ್ಣ ನಿರಪರಾಧಿ. ನಾನು ಕಿಟಕಿಯ ಚೌಕಟ್ಟನ್ನು ಕೂಡ್ರಿಸು­ವಾಗ ರಸ್ತೆಯಲ್ಲಿ ಒಬ್ಬ ಅತ್ಯಂತ ಸುಂದರ­ವಾದ ಸೀರೆ ಉಟ್ಟ ತರುಣಿ ನಿಂತಿದ್ದಳು. ಆಕೆಯನ್ನು ನೋಡುತ್ತ ಮೈಮರೆತು ಚೌಕಟ್ಟನ್ನು ಸರಿಯಾಗಿ ಕೂಡ್ರಿಸಲಿಲ್ಲ’. ರಾಜನಿಗೆ ಅದೂ ಸರಿಯೇ ಎನ್ನಿಸಿತು. ಆ ತರುಣಿ­ಯನ್ನು ಹುಡುಕಿಸಿ ಕರೆಸಿದರು.

ಈ ಮನುಷ್ಯ ಕಾಲು ಮುರಿದುಕೊಂಡದ್ದಕ್ಕೆ ಜವಾಬ್ದಾರಿ ನೀನೇ ಎಂದು ಆಪಾದನೆ ಮಾಡಿದಾಗ ಆಕೆ ಅಳುತ್ತ, ‘ಸ್ವಾಮಿ, ತಪ್ಪು ನನ್ನದು ಅಲ್ಲವೇ ಅಲ್ಲ. ನನ್ನ ಗಂಡ ತಂದು­ಕೊಟ್ಟ ಹೊಸ ಬಣ್ಣಬಣ್ಣದ ಸೀರೆಯನ್ನು ಅಂದು ಉಟ್ಟುಕೊಂಡಿದ್ದರಿಂದ ನಾನು ಚೆನ್ನಾಗಿ ಕಂಡಿರಬೇಕು. ಯಾಕೆಂದರೆ ನನ್ನನ್ನು ಯಾರೂ ಸಾಮಾನ್ಯವಾಗಿ ಗಮನಿಸುವುದೇ ಇಲ್ಲ. ಇದೆಲ್ಲ ಸೀರೆಯದೇ ತಪ್ಪು. ಅದನ್ನು ತಂದುಕೊಟ್ಟ ಗಂಡನ ತಪ್ಪು ಎಂದಳು. ‘ನಿನ್ನ ಗಂಡ ಸೀರೆಯನ್ನು ತಂದದ್ದು ಎಲ್ಲಿಂದ?’ ಕೇಳಿದ ರಾಜ.

ಆಕೆ, ‘ನನಗೆ ತಿಳಿಯದು ಸ್ವಾಮಿ. ಆತ ವೃತ್ತಿಯಿಂದ ಕಳ್ಳನಾಗಿದ್ದರಿಂದ ಎಲ್ಲಿಂದ ತಂದ ಎನ್ನುವುದನ್ನು ಅವನೇ ಹೇಳಬೇಕು’ ಎಂದಳು. ‘ಅವನನ್ನು ಹಿಡಿದು ತನ್ನಿ’ ಎಂದು ರಾಜ ಆಜ್ಞೆ ಮಾಡಿದ. ಸೈನಿಕರು ಬಹಳ ದೂರ ಹೋಗಬೇಕಿರಲಿಲ್ಲ. ಎರಡೇ ನಿಮಿಷದಲ್ಲಿ ಕುಂಟುತ್ತಿದ್ದ ಕಳ್ಳನನ್ನು ಎಳೆದು ತಂದರು. ಅವನೇ ಕಿಟಕಿಯ ಚೌಕಟ್ಟನ್ನು ಹಿಡಿದುಕೊಂಡು ಕೆಳಗೆ ಬಿದ್ದು ದೂರು ತಂದವನು.

ರಾಜ ಹೇಳಿದ, ‘ನಿನ್ನ ಕಾಲು ಮುರಿ­ಯಲು ನೀನೇ ಕಾರಣ. ನಿನಗೆ ಕಾಲು ಮುರಿದದ್ದಷ್ಟೇ ಶಿಕ್ಷೆಯಲ್ಲ. ಮತ್ತೊಬ್ಬರ ಮನೆಯ ಕಿಟಕಿಯನ್ನು ಹಾಳುಮಾಡಿದ್ದಕ್ಕೆ ಮತ್ತು ಯಾರದೋ ಮನೆಯ ಸೀರೆ ಕದ್ದದ್ದಕ್ಕೆ ನಾಲ್ಕು ತಿಂಗಳು ಜೈಲು ಶಿಕ್ಷೆ ನಿನಗೆ’ ಎಂದು ಹೇಳಿ ಜೈಲಿಗೆ ತಳ್ಳಿದ. ನಾವು ನಮ್ಮ ತಪ್ಪಿಗೆ ಯಾರನ್ನೋ ಹೊಣೆ ಮಾಡಲು ನೋಡುತ್ತೇವೆ. ಆದರೆ ಅದು ನಮ್ಮನ್ನೇ ಸುತ್ತಿಕೊಳ್ಳುತ್ತದೆ. ನಕ್ಷಾಬಂದ್ ಹೇಳುತ್ತಾನೆ. ‘ನಾವು ಮಾಡಿದ ತಪ್ಪಿಗೆ ನಾವೇ ಹೊಣೆಗಾರರು. ನಾವು ಎಷ್ಟೇ ತಪ್ಪಿಸಿಕೊಳ್ಳಲು ನೋಡಿದರೂ ಅದು ಸುತ್ತಿ, ಸುತ್ತಿ ಕೊನೆಗೆ ಅದು ನಮ್ಮನ್ನೇ ಶೂಲ­ಕ್ಕೇ­ರಿಸುತ್ತದೆ’. ನಾವು ಕಲಿಯಬಹುದಾದ ಬಹುದೊಡ್ಡ ಪಾಠ ಇದು. ಕೃಪೆ: ನೆಟ್.

ನಮ್ಮ ಶಾಲೆ ನಮ್ಮ ಹೆಮ್ಮೆ

SYB

1 / 14
Caption Text
2 / 14
Leaders of our Nation & Future Leaders
3 / 14
March fast and Salute to our Village leaders
4 / 14
ವಿಜ್ಞಾನದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಸಿಹಿ ಸಂಭ್ರಮ
5 / 14
2018-19 ರ 10ನೇ ತರಗತಿ ಬ್ಯಾಚ್
6 / 14
ನಮ್ಮ ಶಾಲೆಯಲ್ಲಿ ರಮೇಶ ಬಲ್ಲಿದ್
7 / 14
ವಿಜ್ಞಾನ ಚಿತ್ರಗಳೊಂದಿಗೆ 2018ರ ಸ್ವಾತಂತ್ರೋತ್ಸವ
8 / 14
ಪುಸ್ತಕ ಪ್ರೇಮ
9 / 14
ಗಣರಾಜ್ಯೋತ್ಸವ
10 / 14
ಶಾಲೆಯಲ್ಲಿ ಯೋಗ ಶಿಬಿರ
11 / 14
ಹಸಿರು ಪಡೆ
12 / 14
ತಮಿಳುನಾಡಿನ ಚೆನ್ನೈ ನಲ್ಲಿ ದ.ಭಾರತ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ನಮ್ಮ ಶಾಲೆ
13 / 14
ಹಳೆ ವಿದ್ಯಾರ್ಥಿಗಳ ಹಸಿರು ಪಡೆಯ ಶ್ರಮಯೇವ ಜಯತೆ
14 / 14
ಹಳೆ ಬೇರು ಹೊಸ ಚಿಗುರು